23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನ್ಯಾನೋ ಕಥೆ - ೧

November 1, 2011 - 5:24pm
ಸುಧೀ೦ದ್ರ

ಹದಿಹರೆಯದಲಿ ಮದುವೆಯಾಗಿ, ತನ್ನ ದುಡುಕು ಸ್ವಭಾವ, ಸಿಡುಕು ಮಾತಿನಿಂದ ಅತ್ತೆ ಮನೆಯನ್ನು ಎರಡೇ ವರ್ಷಕ್ಕೆ ಬಿಟ್ಟು, ಹಸುಗೂಸನ್ನು ಕೈಲಿ ಹಿಡಿದು ಅಂದು ಬಂದ ಮಗಳನ್ನು, ತಾಯಿ ತನ್ನ ಮನೆಯಲ್ಲಿ ಆಶ್ರಯ ಕೊಟ್ಟು, ಮಗಳಿಗೆ ಮೊಮ್ಮಗನಿಗೆ ಒಂಚೂರು ಕುಂದು ಕೊರತೆ ಬರದಂತೆ ಎಚ್ಚರವಹಿಸಿ ಸಾಕಿ ಸಲುಹಿ, ಸುತ್ತಮುತ್ತಲಿನ ಜನರ ನೂರೆಂಟು ಮಾತಿಗಳಿಗೆ ಬೆಲೆ ಕೊಡದೆ,ಅವರಿಬ್ಬರನ್ನೂ ನೋಡಿಕೊಂಡರು ಆ ತಾಯಿ. ಇದಾಗಿ ಎಂಟು ವರುಷವಾಗಿದೆ. ಮಗಳು ದುಡಿಯುತ್ತಿದ್ದಾಳೆ, ಮೊಮ್ಮಗ ಶಾಲೆ ಸೇರಿದ್ದಾನೆ. ಇಂದಿಗೂ ಅವರಿಗೆ ಊಟ, ತಿಂಡಿಗಳನ್ನು ಸಮಯಕ್ಕೆ ಸರಿಯಾಗಿ ಮಾಡಿ ಬಡಿಸುತ್ತಿದ್ದಾರೆ. ಮಗಳಿಗೆ ಹೀಗಾಯಿತ್ತಲ್ಲಾ ಎಂದು ಸದಾ ದುಃಖಪಡುವ ಆ ತಾಯಿಗೆ ಇಂದು ಮಗಳಂದಿದ್ದು "ಎಲ್ಲಾ ನಿನ್ನಿಂದಲೇ ಆಗಿದ್ದು. ನನ್ನ ಜೀವನ ಸರ್ವನಾಶ ಮಾಡಿದೆ. ನಿನ್ನನ್ನು ಸೆರೆಮನೆಗೆ ಅಟ್ಟುತ್ತೇನೆ".
ಆ ತಾಯಿಯ ಜೀವ ಬಲುಗಟ್ಟಿ. ಇದಕ್ಕಿಂತ ಹೆಚ್ಚೇನು ಹೇಳಲು ಸಾಧ್ಯ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.