September 20, 2011 - 10:14am
ಕಣ್ಣು, ನಾಸಿಕ, ಜಿಹ್ವೆ, ತೊಗಲು, ಕರ್ಣಗಳು
ಪಂಚೇಂದ್ರಿಯಗಳಿವು ಹುಚ್ಚು ತುರಗಗಳಂತೆ
ಮನಸ ಸೆಳೆದೊಯ್ಯುವುದು ತನ್ನಿಚ್ಛೆಯಂತೆ
ಸಾಧನೆಯ ಹಾದಿಯಲಿ ಇದುವೆ ಮುಳುವಂತೆ
ಇಂದ್ರಿಯಗಳ ಬಯಕೆಯದು ಅಲೆಗಳೋಪಾದಿ
ಮನವನಿರಿಸು ಅದರೆದುರು ಬಂಡೆಯ ತೆರದಿ
ಇಂದ್ರಿಯಗಳ ಇರಿಸಲೊಳಿತು ಮನಸಿನಾದೀನ
ಮನಸಿನ ಬಯಕೆಗಳಿಗೆ ಹಾಕು ನೀ ಕಡಿವಾಣ
ಸಂಯಮದಿ ಸನ್ಮಾರ್ಗದಲಿ ನಡೆದು ನೀ ಉತ್ತಮನೆನಿಸು
ಬಿಡದೆ ಸಲಹುವನು ಶ್ರೀ ನರಸಿಂಹ ನಂಬಿದರೆ ಮನಸು
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಪಂಚೇಂದ್ರಿಯಗಳ ಮಾಯೆ (ಶ್ರೀ ನರಸಿಂಹ 8)
+1
ಉ: ಪಂಚೇಂದ್ರಿಯಗಳ ಮಾಯೆ (ಶ್ರೀ ನರಸಿಂಹ 8)
ಧನ್ಯವಾದಗಳು ಚೇತನ್ ರವರೇ
ಉ: ಪಂಚೇಂದ್ರಿಯಗಳ ಮಾಯೆ (ಶ್ರೀ ನರಸಿಂಹ 8)
ಇಂದ್ರಿಯಗಳ ಬಯಕೆಯದು ಅಲೆಗಳೋಪಾದಿ
ಮನವನಿರಿಸು ಅದರೆದುರು ಬಂಡೆಯ ತೆರದಿ
....
ಉತ್ತಮವಾದ ಸಾಲುಗಳು
ಪಾರ್ಥಸಾರಥಿ
ಉ: ಪಂಚೇಂದ್ರಿಯಗಳ ಮಾಯೆ (ಶ್ರೀ ನರಸಿಂಹ 8)
ಧನ್ಯವಾದಗಳು
ಉ: ಪಂಚೇಂದ್ರಿಯಗಳ ಮಾಯೆ (ಶ್ರೀ ನರಸಿಂಹ 8)
+1 :-)
ಉ: ಪಂಚೇಂದ್ರಿಯಗಳ ಮಾಯೆ (ಶ್ರೀ ನರಸಿಂಹ 8)
ಧನ್ಯವಾದಗಳು ಮಂಜುನಾಥ್ ರವರೇ
ಉ: ಪಂಚೇಂದ್ರಿಯಗಳ ಮಾಯೆ (ಶ್ರೀ ನರಸಿಂಹ 8)
ಅರ್ಥಪೂರ್ಣ ಸಾಲುಗಳು . ಒ೦ದೆರಡು ಕಡೆ ಮುದ್ರಾರಾಕ್ಷಸನ ಹಾವಳಿ ಇರುವ೦ತಿದೆ.
(ತುರುಗ) ತುರಗ
(ಸಾದನೆ) ಸಾಧನೆ
(ತನ್ನಿಚ್ಚೆ) ತನ್ನಿಚ್ಛೆ
ಕವನದ ಗುಣಮಟ್ಟದ ಮು೦ದೆ ಇವೆಲ್ಲ ನಗಣ್ಯ.
ಉ: ಪಂಚೇಂದ್ರಿಯಗಳ ಮಾಯೆ (ಶ್ರೀ ನರಸಿಂಹ 8)
ಪ್ರತಿಕ್ರಿಯೆಗೆ ಧನ್ಯವಾದಗಳು (ಮುದ್ರಾರಾಕ್ಷಸನ ಹಾವಳಿಯನ್ನು ಸರಿಪಡಿಸಿದೆ)
ಉ: ಪಂಚೇಂದ್ರಿಯಗಳ ಮಾಯೆ (ಶ್ರೀ ನರಸಿಂಹ 8)
ಚೆನ್ನಾಗಿದೆ.
ಸಾಲುಗಳನ್ನೋದುವಾಗ ನೆನಪಾದ ಡೀ ವೀ ಜಿಯವರ ಕಗ್ಗ
ಮನವನಾಳ್ವುದು ಹಠದ ಮಗುವನಾಳುವ ನಯದೆ
ಇನಿತಿನಿತು ಸವಿಯುಣಿಸು ಸವಿಗಥೆಗಳಿಂದ I
ಅನುಕೂಲಿಸದು ಬರಿಯ ಕೂಗು ಬಡಿತೆಗಳನದು
ಇನಿತಿತ್ತು ಮರೆಸಿನಿತ ಮಂಕು ತಿಂಮ II
-ಧನ್ಯವಾದಗಳು
-ರಾಮಮೋಹನ
ಉ: ಪಂಚೇಂದ್ರಿಯಗಳ ಮಾಯೆ (ಶ್ರೀ ನರಸಿಂಹ 8)
ಧನ್ಯವಾದಗಳು, ಮನಸನ್ನ ಮಗುವಿಗೆ ಹೋಲಿಸಿ ಬರೆಯಬೆಕೆಂದು ಪ್ರಾಂಬಿಸಿದೆ ಆದರೆ ಪದಗಳು ಈ ರೀತಿ ಹೊರಹೊಮ್ಮಿತು
ಉ: ಪಂಚೇಂದ್ರಿಯಗಳ ಮಾಯೆ (ಶ್ರೀ ನರಸಿಂಹ 8)
ಚೆನ್ನಾಗಿ ಮೂಡಿಬಂದಿದೆ, ಸತೀಶರೇ. ಮನಸು, ಬುದ್ಧಿಗಳಿಗೆ ಕಡಿವಾಣ ಹಾಕಬೇಕಾದ 'ಒಡೆಯ' ಒಳಗೇ ಇಹನು!
ಉ: ಪಂಚೇಂದ್ರಿಯಗಳ ಮಾಯೆ (ಶ್ರೀ ನರಸಿಂಹ 8)
ಧನ್ಯವಾದಗಳು ನಾಗರಾಜ್ ರವರೇ.
ಉ: ಪಂಚೇಂದ್ರಿಯಗಳ ಮಾಯೆ (ಶ್ರೀ ನರಸಿಂಹ 8)
ತು0ಬಾ ಸು0ದರವಾದ ಕವಿತೆ, ಈಗಿನ ಯುವಜನತೆಯು ಅಳವಡಿಸಿಕೊಳ್ಳಬೇಕಾದುದೆ ಸರ್. : )
ಉ: ಪಂಚೇಂದ್ರಿಯಗಳ ಮಾಯೆ (ಶ್ರೀ ನರಸಿಂಹ 8)
ಒ0ದ್ ಮಾತು ಸರ್ ನಿಮ್ಮ ಹೆಸರಿಗಳವಡಿಸಿದ ಚಿತ್ರ ಯಾವ ದೇವತೆಯದು? ತು0ಬಾ ಅದ್ಭುತವಾಗಿದೆ, ನೋಡತಿದ್ರೆ ಹಾಗೆ ನೋಡತಾನೆ ಇರ್ಬೇಕು ಅನ್ಸುತ್ತೆ.
ಉ: ಪಂಚೇಂದ್ರಿಯಗಳ ಮಾಯೆ (ಶ್ರೀ ನರಸಿಂಹ 8)
" ಮಹಿಷಾಸುರ ಮರ್ಧಿನಿ ಅಮ್ಮನವರು (ಮಸಿಯಮ್ಮ) " ಅಂತ ಮೇಡಮ್ ನಮ್ಮ ಹಳ್ಳಿಯಾದ ದೊಡ್ಡ ನಾರವಂಗಲ ಇಲ್ಲಿನ ಗ್ರಾಮ ದೇವತೆ ನನ್ನ ಆರಾಧ್ಯ ದೈವ.
ಉ: ಪಂಚೇಂದ್ರಿಯಗಳ ಮಾಯೆ (ಶ್ರೀ ನರಸಿಂಹ 8)
ಒಮ್ಮೆಯಾದರು ದರುಶನ ಮಾಡಲೇಬೇಕು ಹಾಗಾದ್ರೆ. ತಿಳಿಸಿದ್ದಕ್ಕೆ ತಮಗೆ ತು0ಬಾ ಧನ್ಯವಾದಗಳು ಸತೀಶ್ ರವರೆ.
ಉ: ಪಂಚೇಂದ್ರಿಯಗಳ ಮಾಯೆ (ಶ್ರೀ ನರಸಿಂಹ 8)
ಖಂಡಿತ ಬನ್ನಿ ಹಾಗೆ ಕವಿತೆ ಮೆಚ್ಚಿಗೆಗೆ ಧನ್ಯವಾದಗಳು ಸುಮಂಗಲ ಅವರೇ