ಈಗಿನಂತೆ 3 ಸದಸ್ಯರು ಮತ್ತು 125 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

Podcastingನ 6ನೇ ಸಂಚಿಕೆ: ಟಿ.ಎನ್. ಸೀತಾರಾಂ ಜತೆ ಸಂದರ್ಶನ
ismail's picture
ismail
25
May
2006
ಪುಟ

ಸಂಪದದ ಗೆಳೆಯರಿಗಾಗಿ ಈ ಬಾರಿ ಕನ್ನಡದ ಜನಪ್ರಿಯ, ಸೃಜನಶೀಲ ನಿರ್ದೇಶಕ ಟಿ ಎನ್ ಸೀತಾರಾಂರವರ ಸಂದರ್ಶನ. ರಂಗಭೂಮಿ ಹಿನ್ನೆಲೆಯಿಂದ ಬಂದ ಸ್ಪಷ್ಟ ರಾಜಕೀಯ ನಿಲುವುಗಳನ್ನು ಹೊಂದಿರುವ...

ಪ್ರತಿಕ್ರಿಯೆಗಳು: 13
ಹಿಟ್ಸ್ : 12,934
ಕುವೆಂಪುರವರ ಒಂದು ಪ್ರಬಂಧ - ಬೇಟೆಗಾರರು ಕಬ್ಬಿಗರಾದ ಪ್ರಸಂಗ
hpn's picture
ಹರಿ ಪ್ರಸಾದ್ ನಾಡಿಗ್
20
Sep
2006
ಪುಟ
ಕಾಡಿನಲ್ಲಿ ಒಂದು ರಾತ್ರಿ ಕಳೆಯುವ ಸೌಭಾಗ್ಯ ದೊರೆತರೆ ಆ ಅನುಭವವನ್ನು ಹೇಗೆ ಹಂಚಿಕೊಳ್ಳುತ್ತೀರಿ? ಅಲ್ಲಿ ನೀವು ಅನುಭವಿಸಿದ ಪ್ರಕೃತಿಯ ಸಿರಿ, ಮನದ ವಿಕೃತಿ, ಭಯ, ಇವೆಲ್ಲವನ್ನೂ ಹೇಗೆ...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,828
ಕೋಲಾಹಲ
kesari's picture
28
Dec
2006
ಬ್ಲಾಗ್ ಬರಹ

"ಈ ಹೊಸ ವರ್ಷದ ಬರುವಿಕೆಯನ್ನು ತಂಪು ಪಾನೀಯ ಕುಡಿಯದೆ ಆಚರಿಸಿ"

ಕೋಲಾದಂತಹ ತಂಪು ಪಾನೀಯಗಳನ್ನು ಕುಡಿಯದಿರಲು ಕಾರಣಗಳು-


* ಕಾರ್ಬೋನೇಟೆಡ್ ತಂಪು...

ಪ್ರತಿಕ್ರಿಯೆಗಳು: 0
ಹಿಟ್ಸ್ : 1,283
ಆ ಇನ್ನೊಬ್ಬ ಹೆಂಗಸು
uniquesupri's picture
ಸುಪ್ರೀತ್.ಕೆ.ಎಸ್
13
May
2010
ಪುಟ

( ಶೆರ್ ವುಡ್ ಆಂಡರ್ಸನ್ ರ `The other woman' ಕತೆಯ ಭಾವಾನುವಾದ)

``ನಾನು ನನ್ನ...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,292
ಎನ್. ನರಸಿಂಹಯ್ಯ ಇನ್ನಿಲ್ಲ
Narayana's picture
Narayana
01
Jan
2012
ಬ್ಲಾಗ್ ಬರಹ

ಪತ್ತೇದಾರಿ ಕಾದಂಬರಿಕಾರ ಎನ್. ನರಸಿಂಹಯ್ಯ ಇನ್ನಿಲ್ಲ. ಅಂತ ಟಿವಿಯಲ್ಲಿ ನೋಡಿದೊಡನೆಯೇ ಮನಸ್ಸು ಹಿಂದೆ ಓಡಿತು.

ನಮ್ಮೂರಲ್ಲಿ ಒಂದು ಲೈಬ್ರರಿ ಇತ್ತು. ಒಂದು...

ಪ್ರತಿಕ್ರಿಯೆಗಳು: 9
ಹಿಟ್ಸ್ : 180
ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ
nagarathnavinayakajoshi's picture
nagarathna vinayaka joshi
14
Mar
2011
ಲೇಖನ

ವಿಶ್ವಾವಸೋಸ್ತು ಬೃಹತೀ

ತುಂಬುರೋಸ್ತು ಕಲಾವತೀ 
ಮಹತೀ ನಾರದಸ್ಯ ಸ್ಯಾತ್
ಸರಸ್ವತ್ಯಾಸ್ತು ಕಚ್ಛಪೀ
 
...
ಪ್ರತಿಕ್ರಿಯೆಗಳು: 12
ಹಿಟ್ಸ್ : 552
ಉತ್ತರ ಕರ್ನಾಟಕದಲ್ಲಿ ಕನ್ನಡ-೪
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
21
Jul
2006
ಬ್ಲಾಗ್ ಬರಹ
....ಇದಕ್ಕೆ ಕಾರಣಗಳನ್ನು ಶ್ರೀ ದ. ರಾ. ಬೇಂದ್ರೆಯವರು ಹೀಗೆ ಕೊಡುತ್ತಾರೆ . "ಎಷ್ಟೋ ದಿವಸಗಳಿಂದ ರಾಜಾಶ್ರಯವನ್ನು ಕಳೆದುಕೊಂಡು ತೊಳಲುತ್ತಿರುವ ಕರ್ನಾಟಕವು ಇಂಗ್ಲೀಷರ...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,636
ಕಾಡಿಲ್ಲದ ನಾಡಲ್ಲಿ ಹುಲಿ ಬಂದಿತ್ತು
suresh nadig's picture
ಸುರೇಶ್ ನಾಡಿಗ್
05
May
2011
ಲೇಖನ

ದಟ್ಟವಾದ ಕಾಡು ಇದ್ದ ಶಿಕಾರಿಪುರ ಮಾತ್ರವಲ್ಲದೆ ಅರೆ ಮಲೆನಾಡಾದ ಶಿವಮೊಗ್ಗ, ಇದೀಗ ಬಟ್ಟ ಬಯಲಾಗುತ್ತಿದೆ. ಬಯಲುಸೀಮೆಯ ಉಷ್ಣಾಂಶ ಶಿವಮೊಗ್ಗ ಜಿಲ್ಲೆಗೂ ತಲುಪಿದೆ. ಒಂದೆಡೆ...

ಪ್ರತಿಕ್ರಿಯೆಗಳು: 16
ಹಿಟ್ಸ್ : 700
ಕಾಯಕ ಯೋಗಿ ಹುಲಿಕೆರೆಯ ಎಂ.ಷಡಕ್ಷರಿ
siddharam's picture
ಸಿದ್ಧರಾಮ ಹಿರೇಮಠ
19
Nov
2009
ಪುಟ

ವಯಸ್ಸಿರುವಾಗ ವೃತ್ತಿಯನ್ನು ಕೈಗೊಂಡು ಕಾಯಕ ನಡೆಸುವುದು ಸಾಮಾನ್ಯ ಸಂಗತಿ. ವಯಸ್ಸಾದ ನಂತರ ಮೊದಲಿನ ಉತ್ಸಾಹ ಕಳೆದುಕೊಳ್ಳುವುದು, ನಿವೃತ್ತಿಯಾದ ನಂತರವಂತೂ ಜೀವನ ನಶ್ವರ...

ಪ್ರತಿಕ್ರಿಯೆಗಳು: 1
ಹಿಟ್ಸ್ : 884
ಹಿಮಗಿರಿಯ ಮಡಿಲಲ್ಲಿ..................
vedarama2011's picture
ಇಂದುಮತಿ ರಾಮಮೂರ್ತಿ
14
Apr
2011
ಬ್ಲಾಗ್ ಬರಹ

ಮನಸ್ಸಿನ ತುಂಬಾ ಹಿಮಗಿರಿಯನ್ನು ಕಾಣುವಾಸೆಯಿಂದ ಅಂದು ಮೊದಲಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡುವವರಿದ್ದೆವು. "ಡಮ್ ಡಮ್" ವಿಮಾನ ನಿಲ್ದಾಣದಿಂದ "ಬಾಗ್ ಡೊದ್ರಾ" ಕ್ಕೆ...

ಪ್ರತಿಕ್ರಿಯೆಗಳು: 5
ಹಿಟ್ಸ್ : 478

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಪಾಪ...........ತ್ಯಾಂಪ!!!!!

ಪಾಪ...........ತ್ಯಾಂಪ!!!!!

 

 

 

ಪಾಪ...........ತ್ಯಾಂಪ!!!!!


1.  ಸಂಶಯ 

ಓಹ್ ಮಿಸೆಸ್ ಥಾಂಪ್!!
"ಅಗೋ ಬಂದಳು ಮಿಸೆಸ್ ಕಲ್ಲೂರಾಮ್" ತ್ಯಾಂಪಿಗೆಂದ ತ್ಯಾಂಪ.
ಅವನಿಗೆ ಅವಳನ್ನು ಕಂಡರೆ ... ಅಗೋದೇ ಇಲ್ಲ, ಆದರೇನು ಮಾಡುವುದು!!
ತ್ಯಾಂಪನ ಬಾಸ್ ನ ಹೆಂಡತಿ ಅವಳು... ಅಲ್ಲಾ ಅವ...ರು.!!!!!!.........ಹೊಟ್ಟೆ ಪಾಡು.
"ಅಲ್ಲ ಮೇಡಮ್..... ತ್ಯಾಂಪ!!" ಸರಿಪಡಿಸಿದಳು ತ್ಯಾಂಪಿ.
ಮಿಸೆಸ್ ಕಲ್ಲೂರಾಮ್ ನನ್ನು ಕಂಡಮ್ ಮಾಡೋ ಚಾನ್ಸ್ ಎಲ್ಲಿದ್ದರೂ ಬಿಡಲ್ಲ ಅವಳು.
ಆ ಒಂದು ವಿಷಯದಲ್ಲಿ ತ್ಯಾಂಪಿಯನ್ನ ತುಂಬಾ ಮೆಚ್ಚಿಕೊಳ್ತಾನೆ ತ್ಯಾಂಪ. ಆದರೆ ಕಲ್ಲೂರಾಮ್ ಇದಿರಿಗೆ  ಅಲ್ಲ!!!
"ನಾನೂ ಅದೇ ಹೇಳಿದ್ದು ಮಿಸೆಸ್ ಥ್ಯಾಂಪ್"  ಮಿಸೆಸ್ ಕಲ್ಲೂ.
"ಮತ್ತೆ ಏನು ಈಕಡೆ..? " ತ್ಯಾಂಪಿ
"ನಾನೂ ನನ್ನ ಟಿಗ್ರಿಸ್ ಹಾಗೇ ವಾಕಿಂಗ್ ಹೋಗುತ್ತಿದ್ದೆವು, .
ಕಾರಣವಿಲ್ಲದೆ ಈ ಕಡೆ ಬರುವ ಅಸಾಮಿ ಸುತರಾಮ್ ಅಲ್ಲ ಅದು ಇಬ್ಬರಿಗೂ ಗೊತ್ತಿದೆ.
."..ನಿಮ್ಮ ಮನೆಕಡೆ ಬಂದೆವು.ಯು ನೋ, ಮೊನ್ನೆ ಮೊನ್ನೆ ನನ್ನ ಹಬ್ಬೀ...............?!!"
"ಅದ್ಯಾರು ನಿಮ್ಮ ಅಮ್ಮನಾ..?" ತ್ಯಾಂಪ ಕೇಳಿದ.
"ನೋ ಮಿಶ್ಟರ್ ಥಾಂಪ್, ಯು ಆರ್ ಜೋಕಿಂಗ್ ......... ನನ್ನ ಹಸ್ಬೆಂಡ್!!  ಅವರು  ಗಿಲಿ ಗೆ ಹೊಗಿದ್ದರು"
"ಏನದು ಗಿಲಿಗಿಲಿ......... ಟಿಗ್ರಿಸ್ ನ ಆಟಿಕೆನಾ..? "ತ್ಯಾಂಪನಿಗೆ ನಿಜವಾಗಿಯೂ ಗೊತ್ತಿಲ್ಲ.
"ಅರೇ ನಿಮಗೆ ಗಿಲಿ ಗೊತ್ತಿಲ್ವಾ..?" ಇನ್ನು ನೀವು ಬದುಕಿರೋದೇ ವ್ಯರ್ಥ ಅನ್ನೋ ಹಾಗೆ ನೋಡಿದಳು ತ್ಯಾಂಪನನ್ನ.
"ಅದು ಒಳ್ಳೆಯ ವಜ್ರಗಳ ಅಂಗಡಿ, ನೀವು ನೋಡಲಿಲ್ಲ ಅಂತ ಕಾಣ್ಸತ್ತೆ, ನೋಡಿ ನನ್ನ ಬೆರಳಲ್ಲಿ ಇದೆಯಲ್ಲಾ ಇದೇ ಉಂಗುರ........". ಪುನಃ ಕೈಯೆತ್ತಿ ಬೆರಳು ತೋರಿಸಿದಳು....
ಹೋ ಅದಕ್ಕೇನಾ ಇವಳು ಆಗಿನಿಂದ ಆ ಕೈ ಬೆರಳು ಮಾತ್ರ ತೋರಿಸ್ತಾ ಇದ್ದದ್ದು..... ಆಗಲೇ ಅಂದ್ಕಂಡೆ.. !!
ಇದನ್ನ  ಗಟ್ಟಿಯಾಗಿ ಹೇಳೋ ಹಾಗಿಲ್ಲ.. ತ್ಯಾಂಪ!!  ನಾಳೆ ಆಫೀಸಿಗೆ ಹೋಗೋದು ಬ್ಯಾಡವಾ..??.
""ನನ್ನ......... ಅವ.....ರು ತೆಗೆದದ್ದು, ನನ್ನಗೆ ಗಿಫ್ಟ್ ಕೊಡೊದಂದ್ರೆ ಅವರಿಗೆ ಸ್ವಲ್ಪವೂ ಬೇಸರವೇ ಇಲ್ಲ ಗೊತ್ತಾ..? "
ತ್ಯಾಂಪ ದೇವರಲ್ಲಿ ಬೇಡಿಕೊಳ್ಳುತ್ತಿದ್ದ ಈ ಪ್ರಶ್ನೆ ಬಾರದಿರಲಿ ಅಂತ ಆದರೆ ಈ ಬಾರಿ ಅವನನ್ನು  ದೇವರೂ ಕಾಪಾಡಲಿಲ್ಲ.
"ಎಷ್ಟಾಯ್ತು?... "
ಪ್ರಶ್ನೆ ಈಗ ಬಂದದ್ದು ತ್ಯಾಂಪಿಯಿಂದ.ಅದು ನಿರೀಕ್ಷಿತವಲ್ಲ.
"ಬರೇ ಒಂದೂವರೆ ಮಿಸೆಸ್ ಥಾಂಪ್!!"
"ಏನೂ ಒಂದೂವರೆ ಸಾವಿರವಾ..?" ಪಾಪ..........ಬಡಪಾಯಿ ತ್ಯಾಂಪ  ಆಶಾವಾದಿ .
"ನೋ ನೋನೋ ನೋನೊ    ...... ಜೋಕ್ ಮಿಷ್ಟರ್ ಥ್ಯಾಂಪ್!!  ನೋಡಿ ಮಿಸೆಸ್ ತ್ಯಾಂಫ್ ನಿಮ್ಮ ಹಬ್ಬೀ ತುಂಬಾ ತಮಾಷೆ ಮಾಡ್ತಾರೆ ಯು ನೋ ಅದಕ್ಕೇ  ಐ ಲೈಕ್ ಹಿಮ್!!
ಅಲ್ಲ ಅಲ್ಲ ಇದು ಒಂದೂವರೆ ಲಾಖ್!! ಲಕ್ಷ.!!!!
"ಮುಚ್ಚಿಕೊಳ್ಳೆ ಬಾಯಿ " ಇದೇ ಚಾನ್ಸ್ ಅಂತ ತ್ಯಾಂಪ ಮೆಲ್ಲಗೆ ಅವಳ ಕಿವಿಯಲ್ಲಿ ಮಾತ್ರ ಕೇಳಿಸುವಂತೆ ಹೇಳಿದ." ಸೊಳ್ಳೆ ನೊಣ ಎಲ್ಲಾ........ನುಗ್ಗಿಯಾವು!!"
 ಬಿತ್ತೂ ಬಾಂಬು,
ಹೌದೂ, ನೀವು ನಿಮ್ಮ ಮಿಸೆಸ್ ಗೆ ಇಂತದ್ದೆಲ್ಲಾ ಕೊಡಿಸೋಲ್ವಾ ಮಿಸ್ಟರ್ ಥ್ಯಾಂಪ್? ಈ ಸಾರಿಯ ನಿಮ್ಮ ಬರ್ಡೆ ಗಿಫ್ಟ್ ಏನಿತ್ತು..?
"ನನಗೆ ಒಂದು ಅರೊ ಷರ್ಟ್ ಮತ್ತೆ ಬೆಲ್ಟ್ " ತ್ಯಾಂಪ ನೆಂದ
"ನಿಮ್ಮದಲ್ಲಾ ಮಿ. ಥ್ಯಾಂಪ್ ನಿಮ್ಮ ಮಿಸೆಸ್ ನ ಕೇಳಿದ್ದು ನಾನು" ಮಿಸೆಸ್ ಕಲ್ಲೂರಾಮ್ ಪಕ್ಕಾ ಜಿಗಣೆಯೇ.
ಈ ಸಾರಿ....................... ಸಾರಿ ತಂದಿದ್ದರು.  ತ್ಯಾಂಪಿ.
ನೋ ಮಿ ತ್ಯಾಂಫ್ ನಿಮಗೆ ಚೊಯ್ಸ್ ಮಾಡಲು ಬರುವುದಿಲ್ಲ!! ನನ್ನ ಹಬ್ಬಿ ನೋಡಿ ಎಷ್ಟು ಚೆನ್ನಾಗಿರೋ ಗಿಫ್ಟ್ ತರ್ತಾರೆ!೧
ಈ ಸಾರಿ ನಾನು ಹುಟ್ಟು ಹಬ್ಬ ಬಂದಾಗ ಅವರಿಗೇ ಹೇಳ್ತೇನೆ.... ತ್ಯಾಂಪಿ ನಿನಗೆ ತೊಂದರೆಯಿಲ್ಲವಲ್ಲಾ..??
ಅರೆರೇ ಮಿ ಥ್ಯಾಂಫ್ ನಾನು ಹೇಳಿದ್ದು ನಿಮಗೆ.... ನೀವು ನಿಮ್ಮ ಸ್ಪೌಸ್ ಗೆ ತರಬೇಕಲ್ಲಾ ಅದಕ್ಕೇ ಹೇಳಿದ್ದು.
ಬೇಡ ನಮ್ಮ ಮನೆಯಲ್ಲಿ ಗ್ಯಾಸ್ ಇದೆ ಸ್ಟೌ ಬೇಡ..
ಹ ಹಹ್ಹ ಮತ್ತೆ ಜೋಕ್ ಮಾಡ್ತಾರೆ ....ಇರಲಿ,   ಸಾರೀ... ಓಹ್ ನೋ ಮಿಶ್ಟರ್ ಥ್ಯಾಂಪ್,
ನಿಮಗೆ ಮದುವೆಯಾಗಿ ಎಷ್ಟು ವರ್ಷ ಆಯ್ತು..?
ಥ್ಯಾಂಪಿ ಜತೆಗಾ..... ಸುಮಾರು ಹತ್ತು ವರ್ಷ ಅಲ್ಲವಾ..?
"ಅಲ್ಲಲ್ಲ ಬರೇ ಎಂಟು ಅಷ್ಟೇ"   ತಿದ್ದಿದಳು ತ್ಯಾಂಪಿ
ಅಂತಹಾ ಡಿಫರೆನ್ಸ್ ಏನೂ ಇಲ್ಲ ಬಿಡಿ
ಈ ಸಾರಿ ನಾನು ಹೇಳ್ತೇನೆ ಅವರು ನಿಮಗೆ ಒಳ್ಳೆಯ ಗಿಫ್ಟ್ ತಂದು ಕೊಡ್ತಾರೆ ಗ್ಯಾರಂಟೀ..? ಶ್ಯೂರ್ ಮಿಶ್ಟರ್ ಥ್ಯಾಂಫ್..?
ಎ..............................ಸ್   ಮೇಡಮ್" ಮತ್ತೇನು ಹೇಳಿಯಾನು ಪಾಪ.
"ಅಂದ ಹಾಗೆ ಥ್ಯಾಂಫ್ ..ಮೊನ್ನೆ.... ........ ಬೇಡ ಬಿಡಿ."
ಏನು ಮೇಡಮ್ ಹೇಳಿ?      ಮೊನ್ನೆ ಎನು..        ?   ಬ್ಯಾಡವಿತ್ತು ತ್ಯಾಂಪನಿಗೆ ಕೋಲು ಕೊಟ್ಟು...................!!!!!!!!!!!
ಎಲ್ಲಿಗೋ ಹೋಗ್ತಾ ಇದ್ದರಲ್ಲಾ............?
ಎ...........ಎ ಲ್ಲಿ ಮೇಡಮ್.................?
ಅದೇ ಅಡಿಗಾಸ್ ...........ಹತ್ತಿರ ನೀವು......... ನಿಮ್ಮ ಮಿಸೆಸ್ ಥ್ಯಾಂಪ್, ಅವರು ಹಸಿರು ಚೂಡಿದಾರ್ನಲ್ಲಿದ್ದರಲ್ಲಾ...........
.............................
ಮಿ .ಥ್ಯಾಂಪನಿಗೆ ಇಲ್ಲಿಯೇ ಭೂಮಿ ಬಾಯ್ ಬಿಡಬಾರದೇ ಅನ್ನಿಸಿತ್ತು

ನೋ...... ನೋ ಮಡಮ್...... ನಾನು.....?!!??

"ಎಸ್!!  ಮಿ ಥ್ಯಾಂಪ್ ನಾನು ಟಿಗ್ರಿಸ್ ನಿಮಗೆ ಟಾ ಟಾ ಕೂಡ ಹೇಳಿದ್ದೆವು, .........ಅಲ್ವಾ ಟಿಗ್ರಿಸ್..?   ಓ. ಕೆ      ಮಿಸೆಸ್ ಥ್ಯಂಫ್ ನನ್ನ ಕೆಲ್ಸ ಆಯ್ತು .....ನಾನಿನ್ನು ಬರ್ತೀನಿ.. ಬಾಯ್"
...........................................................................
ಹೌದು...........ಇನ್ನುಳಿದ ಕೆಲಸ..............??? ಮಿಸೆಸ್  ತ್ಯಾಂಪೀದು. 

ಕಲ್ಲೂರಾಮ್ ಥ್ಯಂಪ್ ಅಂದದ್ದೂ ಸಹಾ ಕೇಳುವ ಸ್ಥಿತಿಯಲ್ಲಿಲ್ಲ ತ್ಯಾಂಪಿ

"ಈಗ ಹೇಳ್ರಿ.................ಯಾರ್ರೀ ಅದು ಹಸಿರು ಚೂಡಿದಾರ..???"

ಮೊನ್ನೆ ಯಾ............. ವಾಗ ??,
ಓಹ್  ....ಹೌದು... ಮೊನ್ನೆ ರವಿವಾರ ಅಲ್ವಾ, ನಾನು ಇಡೀ ದಿನ ಮನೆಯಲ್ಲೇ ಇದ್ದೆನಲ್ಲೆ,
ನಿನ್ನ ಜತೆ ತ್ಯಾಂಪಿ ನಿನ್ಮೇಲೆ ನಂಗೆ ಮನಸೈತೆ ಅಂತ ಹಾಡು ಬೇರೆ ಹಾಡ್ತಾ ಇದ್ದೆನಲ್ಲಾ, ನಾನು ಬಟ್ಟೆ ಒಗೆದು ಕೊಡ್ತಾ ಇದ್ದೆ ನೀವು ಅವನ್ನ ಒಣ ಹಾಕಿದ್ದೆಯಲ್ಲಾ, ಅದಾದ ಮೇಲೆ ಅಡುಗೆ ಮಾಡಲು ನಾನೇ ನಿನಗೆ ಸಹಾಯ ಮಾಡಿದ್ದೆ....... ಅಲ್ವಾ     ನೆನಪಾಯ್ತಾ... ಅವಳನ್ನು ಯೋಚಿಸಲೂ ಬಿಡ ಬಾರದು ಈಗ........
"ತಡೀರ್ರೀ ನನಗೆ ಯೋಚನೆ ಮಾಡಲು ಬಿಡಿ"   ತ್ಯಾಂಪಿಯ ಯೋಚನೆಗೆ ತುದಿಗಾಲಿಲ್ಲ.
"ಇತ್ತೀಚೆಗೆ ನಿನಗೆ ಮರೆವು ಜಾಸ್ತಿ ಆಯ್ತು ನೋಡು...." ಪುನಃ ತ್ಯಾಂಪ ಅವಳನ್ನು  ಟ್ರಾಕ್ ಬಿ ಯಲ್ಲಿ ತಳ್ಳೋ ಯೋಚಹನೆಯಲ್ಲಿದ್ದ.
"ಹಾಗಂತೀರಾ, ತಡೀರಿ ಆ ನಿಮ್ ಮಿಟುಕಲಾಡಿ ಹೇಳಿದ್ದು ೯ ನೇ ತಾರಿಖ್ ಅಲ್ವಾ, ಅಂದರೆ ಹತ್ತು ರವಿವಾರ, ಅಂದರೆ ಒಂಭತ್ತು ಶನಿವಾರ................"?????????
................................................................
"ಹೌದು ಅಂಕಲ್ !!  ಆದರೆ ಶನಿವಾರ ನೀವು ಇಡೀ ದಿನ ಆಫೀಸಲ್ಲೇ ಇದ್ದೆ ಅಂದ್ರಲ್ಲಾ..?"
 ಇನ್ನೊಂದು ಬಾಂಬ್ ಈ ಸಾರಿ ಅದು ಒಸಾಮಾನಿಂದ.
ಸತ್ಯಾ ನಾಶ್!!!!!!!!!!

(ಮುನ್ದುವರಿಯುವುದು)

No votes yet
80 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
ಗಣೇಶ's picture
02
Mar
2012
11:26

ಉ: ಪಾಪ...........ತ್ಯಾಂಪ!!!!!

ಥತ್..ಸತ್ಯಾನಾಶ್...
ಒಳ್ಳೆ ಫೈಟ್ ಸಮಯಕ್ಕೇ ಇಂಟರ್ವಲ್ ಹಾಕಿದಿರಲ್ಲಾ.. :)
-ಗಣೇಶ.

gopinatha's picture
05
Mar
2012
9:52

ಉ: ಪಾಪ...........ತ್ಯಾಂಪ!!!!!

ಪಾಪ...........ತ್ಯಾಂಪ!!!!!

gopinatha's picture
05
Mar
2012
9:49

ಉ: ಪಾಪ...........ತ್ಯಾಂಪ!!!!!

ಗಣೇಶರೇ
ಅಲ್ಲ ತ್ಯಾಂಪನ ತಪ್ಪಿಗೆ ಸ್ವಲ್ಪ ದಿನ ಆದ್ರು ಬೇಕಲ್ಲ
ಮಾರಾಯರೇ
ಅದೇ ಆಗಿದ್ದು ಈಗ‌

RAMAMOHANA's picture
03
Mar
2012
1:10

ಉ: ಪಾಪ...........ತ್ಯಾಂಪ!!!!!

start...... camera rolling sir.
Sound ....... running sir,
Action..... Action..... I said action...

ಓ... ಸಾಹಿತ್ಯ ಸಿದ್ದವಾಗಿಲ್ವಾ.......? ತೊಂದ್ರೆ ಇಲ್ಲ, ಕಾಯ್ತಿವಿ ಗೋಪಿನಾಥ‌ ರಾಯ್ರೆ.
ಆದ್ರೆ ನೀವು ತೋರಿಸಿರುವ ಬಾವಿ ಚಿತ್ರಕ್ಕೂ..... ಕಥೆಗೂ ಏನು ಸಂಬಂಧ ಅಂತ...?
ಇರ್ಲಿ ಕ್ಲೈಮಾಕ್ಸ್ ನೋಡೋಣ....!!!???

ರಾಮಮೋಹನ.

kavinagaraj's picture
04
Mar
2012
11:12

ಉ: ಪಾಪ...........ತ್ಯಾಂಪ!!!!!

ಬಾವಿಗೆ ಬಿದ್ದ ತ್ಯಾಂಪ ಅಂತ ಆ ಚಿತ್ರ ಹಾಕಿರಬೇಕು!!!!!!!!!!

gopinatha's picture
05
Mar
2012
9:51

ಉ: ಪಾಪ...........ತ್ಯಾಂಪ!!!!!

ಅಂತಹಾ ಹೆಂಡತಿಗಿಂತ ಬಾವಿಯೇ ಲೇಸು ಅಂದ್ಕೊಂಡಿರಬೇಕೇನೋ

gopinatha's picture
05
Mar
2012
9:50

ಉ: ಪಾಪ...........ತ್ಯಾಂಪ!!!!!

ಪಾರ್ಥರೇ
ತ್ಯಾಂಪನಿಗೂ ಬಾವಿಗೂ ಅವಿನಾಬಾವ ಸಂಭಂಧ ಇದೆ
ಅದಕ್ಕೇ ಪಾಪ.....