30
October
2014

ಸಂಪದ - Sampada

'ಹೊಸ ಚಿಗುರು, ಹಳೆ ಬೇರು'

ಪುಟಾಣಿ ಹಕ್ಕಿ ಮರಿಗಳಿಗೆ ಮೊದಲ ಪಾಠ..

November 5, 2012 - 11:58pm
ಗಣೇಶ
4.5

  ಒಂದು ಪುಟ್ಟ ಹಕ್ಕಿ ಸಂಸಾರದ ಕತೆ ಹೇಳುವೆ. ಮೊದಲು ನನಗೆ ಗೊತ್ತಾದದ್ದು ನಮ್ಮ ಬಾತ್‌ರೂಮಿನೊಳಗಿಂದ ಈ ಹಕ್ಕಿಗಳ ಹಾಡು ಕೇಳಿಸಿದಾಗ... ( ಪೇಟೆ ಜೀವನದಲ್ಲಿ ಹಕ್ಕಿ ಹಾಡು ಪರಿಚಯವಿಲ್ಲದವರಿಗಾಗಿ ಕೆಲ ಹಕ್ಕಿಗಳ ಹಾಡು ಇಲ್ಲಿದೆ- http://www.youtube.com/watch?v=rL4Z9d9oObY ). ಹೋಗಿ ನೋಡಿದರೆ ಅವು ಕಾಣಿಸಲಿಲ್ಲ.  ಫ್ಲಾಟ್‌ಗಳ ಸ್ಯಾನಿಟರಿ ಪೈಪ್‌ಗಳು ಹೋಗಲು ಕಟ್ಟಡದ ನಡುವೆ, ಮೇಲಿಂದ ಕೆಳಗಿನವರೆಗೆ ಮೂರಡಿ ಉದ್ದಗಲದ ಸ್ಥಳ ಬಿಟ್ಟಿದ್ದಾರೆ. ಅದರಲ್ಲಿ ನಡುವೆ ಎಲ್ಲೋ ಗೂಡು ಕಟ್ಟಿದ್ದವು. ದಿನವೂ ಅವುಗಳೆರಡರ ನಡುವೆ ಬಿಸಿಬಿಸಿ ಚರ್ಚೆ ನಡೆಯುತ್ತಿತ್ತು. ಈ ಫ್ಲಾಟ್‌ನ ಸುತ್ತಮುತ್ತ ಬೇಕಾದಷ್ಟು ಮರ ಗಿಡ ಪೊದೆಗಳು ಇವೆ. ಆದರೂ ಆ ಹಕ್ಕಿಗಳು ಮುಂದೆ ಹುಟ್ಟುವ ಮರಿಗಳ ಸೇಫ್ಟಿಗಾಗಿ ಈ ಸ್ಥಳವನ್ನೇ ಆಯ್ಕೆ ಮಾಡಿತು.  ಅವು ಭಯ ಬೀಳುವುದು ಬೇಡವೆಂದು ಅವುಗಳ ಫೋಟೋ ತೆಗೆಯಲು ಹೋಗಲಿಲ್ಲ.
 ಸ್ವಲ್ಪ ದಿನದಲ್ಲೇ ಮರಿಗಳ ಸ್ವರವೂ ಕೇಳಿಸುತ್ತಿತ್ತು. ಬೆಳಗ್ಗೆ ಟೆರೆಸ್ ಮೇಲೆ ವಾಕಿಂಗ್ (!) ಮಾಡುವಾಗ ಈ ಹಕ್ಕಿ ಜೋಡಿಯೂ ದೂರದಲ್ಲಿದ್ದು ನನ್ನನ್ನು ಗಮನಿಸುತ್ತಿದ್ದವು.  ನಾನಿರುವಷ್ಟು ಸಮಯ ಅವುಗಳ ಗೂಡಿನ ಕಡೆಗೆ ಹೋಗುತ್ತಿರಲಿಲ್ಲ. ನಾನೂ ಅವುಗಳನ್ನು ಗಮನಿಸದಂತೆ ವಾಕ್ ಮಾಡುತ್ತಿದ್ದೆ.
 ಕಳೆದ ವಾರ ಬೆಳಗ್ಗೆ ನೋಡುತ್ತೇನೆ....ಅವುಗಳು  ತಮ್ಮ ಎರಡು ಮರಿಯನ್ನೂ ಕರಕೊಂಡು ಬಂದಿದ್ದವು. ಕಿಚಪಿಚ ಹಾಡುತ್ತಾ, ಅರೆಬರೆ ಹಾರಾಡುತ್ತಾ ಇದ್ದವು. ನಾನು ಅವುಗಳ ಕಲಿಯುವಿಕೆಗೆ ತೊಂದರೆ ಬೇಡವೆಂದು ದೂರದಲ್ಲಿ ಸುಮ್ಮನಿದ್ದೆ. ಹಾಗೇ ಹಾರುತ್ತಾ ಹಾಡುತ್ತಾ ಅವು ಪಕ್ಕದ ಫ್ಲಾಟ್‌ನ ಮೇಲೆ ಹೋದವು. ಸ್ವಲ್ಪ ಹೊತ್ತಿಗೆ ಎಲ್ಲ ಮೌನ. ಬಟ್ಟೆ ಒಣ ಹಾಕುವ ತಂತಿಯ ಮೇಲೆ ಕುಳಿತಿದ್ದ ಹಕ್ಕಿ ಮರಿಗಳ ಅಕ್ಕ ಪಕ್ಕ ತಂದೆ-ತಾಯಿ ಹಕ್ಕಿಗಳು ಬಂದು ಕುಳಿತವು. ಮೇಲೊಂದು ಹದ್ದು ಸುತ್ತು ಹಾಕಿ, ಸುತ್ತುಹಾಕಿ ಬಂದು ನೇರ ಹಕ್ಕಿಗಳ ಎದುರಿದ್ದ ನೀರಿನ ಟ್ಯಾಂಕಿಯ ಮೇಲೆ ಕುಳಿತಿತು. ನನಗೇ ಒಂದು ಕ್ಷಣ ಉಸಿರು ನಿಂತ ಹಾಗಾಯಿತು. ಇನ್ನು ಆ ತಂದೆ-ತಾಯಿ ಹಕ್ಕಿಗಳಿಗೆ ಹೇಗಾಗಿರಬಹುದು..ಅಷ್ಟೆಲ್ಲಾ ಮುತುವರ್ಜಿ ವಹಿಸಿ, ಸೇಫ್ ಆಗಿ ಸಾಕಿ, ಬೆಳಸಿ, ಈಗ ಹದ್ದಿನ ಬಾಯಿಗೆ ಸಿಗುವುದೇ.... ಈ ಪುಟಾಣಿ ಹಕ್ಕಿಗಳು ಹದ್ದಿನ ಬಾಯಿಗೆ ಯಾವ ಲೆಕ್ಕ? ಏನು ಮಾಡಲಿ..ಹದ್ದನ್ನು ಓಡಿಸಲು ಕೈ ಎತ್ತಿದರೆ, ಈಗ ತಂದೆ-ತಾಯಿಯ ರಕ್ಷಣೆಯಲ್ಲಿರುವ ಹಕ್ಕಿಮರಿಗಳು ಹಾರಿಬಿದ್ದು ಹದ್ದಿನ ಕೈಗೆ ಸಿಕ್ಕಿದರೆ... ಏನೂ ಮಾಡಲು ತೋಚದೆ ಸುಮ್ಮನಿದ್ದೆ. ನಾನಲ್ಲಿದ್ದುದರಿಂದ ಹದ್ದು ಹಕ್ಕಿಮರಿ ಕಡೆ ಹೋಗಿರಲಿಕ್ಕಿಲ್ಲವೆಂದು ಆಲೋಚಿಸಿ ಅಲ್ಲಿಂದ ಕದಲದೇ ನಿಂತೇ ಇದ್ದೆ.
ಆವಾಗಲೇ  ಒಂದು ಕಾಗೆ ಸಹ ಅಲ್ಲಿಗೆ ಬಂತು. ದೇವರೇ..ಇನ್ನು ಹಕ್ಕಿ ಮರಿಗಳ ಕತೆ ಮುಗಿದಂತೆ, ಅಂತ ಬಹಳ ಬೇಸರವಾಯಿತು. ಆದರೆ ನಡೆದದ್ದೇ ಬೇರೆ!
 ಕಾಗೆಯು ಹದ್ದಿಗೆ ಕುಕ್ಕುವಂತೆ ಸಮೀಪ ಹೋಗಿ, ಹದ್ದು ರೆಕ್ಕೆ ಅಗಲಿಸಿದಾಗ ದೂರಹೋಗಿ, ಪುನಃ ಕುಕ್ಕುವಂತೆ ಹತ್ತಿರ ಹೋಗುವುದು,ರೆಕ್ಕೆ ಅಗಲಿಸಿದಾಗ ಹಾರಿ ದೂರಹೋಗುವುದು ಮಾಡುತ್ತಲೇ ಇತ್ತು. ಕೊನೆಗೆ ಹದ್ದು ಸೋತು ಹಾರಿ ಹೋಯಿತು! ಕಾಗೆ ಮತ್ತೂ ಬಿಡದೇ ಅದನ್ನು ಅಟ್ಟಿಸಿಕೊಂಡು ಹೋಯಿತು.. ನನಗೆ ಆಶ್ಚರ್ಯ ಸಂತೋಷ ಎರಡೂ ಆಯಿತು.
 ಬಹುಷಃ ಆ ಕಾಗೆಯು ಸಹ ಈ ಹಕ್ಕಿ ಸಂಸಾರವನ್ನು, ನನ್ನಂತೆ ದೂರದಿಂದಲೇ ಇಷ್ಟುದಿನ ಗಮನಿಸುತ್ತಲೇ ಇತ್ತು ಕಾಣುತ್ತದೆ. ಈಗ ಆಪತ್ತಿನಲ್ಲಿರುವಾಗ ರಕ್ಷಣೆಗೆ ಬಂತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by lpitnal@gmail.com on

ಪ್ರಿಯ ಗಣೇಶ ರವರೇ ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಮ್ಮ ಪಕ್ಷಿ ಪ್ರೇಮ ಹಾಗೂ ತಾಯ ಹೃದಯಕ್ಕೆ ನೂರು ಸಲಾಮ್ . ಲೇಖನದಲ್ಲಿ ವಿವರಿಸಿದ ಆಧಾರದ ಮೇಲೆ ಹೇಳಬಹುದಾದರೆ ಅವುಗಳು ಬುಲ್ ಬುಲ್ ಹಕ್ಕಿಗಳ ಸಂಸಾರವಿರಬಹುದು. ತಲೆಯ ಮೇಲೆ ಸಣ್ಣ ಕಿರೀಟದಂತೆ ಇರುವ ಕಿವಿಗಳ ಸುತ್ತ ಹಾಗೂ ಪುಚ್ಚಗಳ ಕೆಳಗೆ ತಿಳಿಗೆಂಪು ಸಹಿತ ಕಪ್ಪು ಹಕ್ಕಿಗಳು ರೆಡ್ ವೆಂಟೆಡ್ ಹಾಗು ರೆಡ್ ವಿಸ್ಕರ್ಡ್ ಬುಲ್ ಬುಲ್ ಗಳೇ ಇರಬಹುದೇನೊ. ಜನವಸತಿ ಸಮೀಪದಲ್ಲೂ ವಾಸಿಸುತ್ತವೆ. ಪಕ್ಷಿ, ಹಕ್ಕಿಮರಿಗಳ ಕಡೆಗಿನ ಕಾಳಜಿ ಎಲ್ಲರಿಗೂ ಬರಬೇಕಾದ ಅವಶ್ಯಕತೆ ಇದೆ. ಅಮೇರಿಕೆಯಲ್ಲಿ ಪ್ರತಿಶತ 28% ಜನ ಪಕ್ಷಿ ಪ್ರೇಮಿಗಳಿದ್ದರೆ ಭಾರತದಲ್ಲಿ ನಾವು 2% ಇದ್ದೇವೆ. ಸ್ವಾಗತಾರ್ಹ ಲೇಖನ. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Prakash Narasimhaiya on

ಆತ್ಮೀಯ‌ ಗಣೇಶರೇ,
ಲೇಖನ‌ ಮನಕಲಕಿತು. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gunashekara murthy on

ಮೆಚ್ಚುವಂತ‌ ಲೇಖನ‌. ಇಲ್ಲಿ ಒಂದು ಮಾತು ನೀವು ಒಪ್ಪುತ್ತೀರೋ ಬಿಡುತ್ತೀರೊ ನಾನರಿಯೇ. ಅಲ್ಲಿ ಕಾಪಾಡಲು ಬಂದ ಕಾಗೆಯೇ ದೇವರು. ನಮಗೆ ನಮಗಾಗಿ ಯಾರು ಕಾಣುವಂತೆ ಸಹಾಯ‌ ಮಾಡುತ್ತಾರೊ ಅವರೇ ದೇವರು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಗುಣಶೇಖರ ಮೂರ್ತಿಯವರೆ,
ನಾವು "ದೇವರಿಲ್ಲ" ಎಂದು ವಾದಿಸುವಾಗ ಹೀಗೆ "ಕಾಗೆಯೇ ದೇವರು" ಎಂದು ಹೇಳಿ ಸಿಕ್ಕಿಬೀಳಬಾರದು. ವೇದದಲ್ಲೂ ಅದನ್ನೇ ಹೇಳಿದೆ. ಪುರಾಣಗಳಲ್ಲೂ ಕಾಗೆ ಶನಿಯ ವಾಹನ ಎಂದಿದೆ ಎಂದೆಲ್ಲಾ ಹೇಳಿ, ದೇವರು ಕಾಗೆಯ ರೂಪದಲ್ಲಿ ಬಂದು ರಕ್ಷಿಸಿದ ಎಂದೂ ವಾದ ಶುರು ಹಚ್ಚುವರು.
>>>ನಮಗಾಗಿ ಯಾರು ಕಾಣುವಂತೆ ಸಹಾಯ‌ ಮಾಡುತ್ತಾರೊ ಅವರೇ ದೇವರು.
-ಇದು ತುಂಬಾ ದೊಡ್ಡ ತಪ್ಪು. ಮೋಸಗಾರ ಕಾಣುವಂತೆ ಸಹಾಯ ಮಾಡಿದರೆ?
ನನ್ನ ಲೇಖನವನ್ನೂ ಓದಿ ಮೆಚ್ಚಿದ್ದಕ್ಕೆ ತಮಗೆ ತುಂಬಾ ತುಂಬಾ ಧನ್ಯವಾದಗಳು.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gunashekara murthy on

ನದಿ ಗಿಡ‌ ಮರ‌ ಹೀಗೆ ಹಲವನ್ನು ಬೇರೆ ಪ್ರಾಣಿಗಳೇ ಉದಾಹರಣೆ ಕೊಟ್ಟಿದ್ದೀರಿ ಬೇರೆ ನೀವು ಹೇಳಹೊರಟಿರುವುದು ಪ್ರಕ್ಱುತಿಯ‌ ಅವು ನಮಗೆ ಕಾಣದೇ ಸಹಾಯ‌ ಮಾಡುವಂತಹವು ಅವು ತನ್ನ‌ ಕರ್ತವ್ಯವನ್ನೇ ಮಾಡುತ್ತದೆ. ನಿಮಗಾಗಿಯೇ ಅವು ಸಹಾಯ‌ ಮಾಡಲಾರದು. ಆದರೇ ಕಥೆಯಲ್ಲಿ ಬಂದ‌ ಕಾಗೆ ತನ್ನ‌ ಮನಸ್ಸಿನಲ್ಲಿ ನೋವನ್ನು ತುಂಬಿ ಸಹಾಯಕ್ಕ‌ ಮುಂದಾಯಿತು.ಇದೇ ಬೇರೆ ಅದೇ ಬೇರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shreekar on

ಪುಟಾಣಿ ಹಕ್ಕಿ ಮರಿಗಳಿಗೆ ಮೊದಲ ಪಾಠ
ಒಳ್ಳೆಯ ಬರಹ

ಕಾಗೆಯ ಹೀರೊ ಪಾತ್ರ ಚೆನ್ನಾಗಿದೆ.

http://www.cracked.com/article_19042_6-terrifying-ways-crows-are-way-sma...

http://en.wikipedia.org/wiki/Crow

ಇಂತಹ ಬುದ್ಧಿವಂತ ಕಾಗೆ ಒಮ್ಮೆ ತನ್ನ ಅತಿಬುದ್ಧಿವಂತಿಕೆಯನ್ನು ಬಡ ಗುಬ್ಬಕ್ಕನ ಮರಿಗಳನ್ನು ತಿನ್ನುವುದರಲ್ಲಿ ತೋರಿಸ ಹೋಗಿ ನಾಲಗೆ ಸುಟ್ಟುಕೊಂಡ ಅಜ್ಜಿಕತೆ ಕೇಳಿರಬೇಕಲ್ಲ !

http://sampada.net/article/2261

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಶ್ರೀಕರ್ ಅವರೆ,
ನೀವು ಕೊಟ್ಟ ಮೊದಲ ಕೊಂಡಿ ಓದಿ ಆಶ್ಚರ್ಯವಾಯಿತು. ಯಾವುದಕ್ಕೂ ಕಾಗೆಯ ಗೆಳೆತನ ಮಾಡುವುದು ಒಳ್ಳೆಯದೇ.:) ತಮ್ಮ ಪ್ರತಿಕ್ರಿಯೆ ಹಾಗೂ ಕೊಂಡಿಗಳಿಗಾಗಿ ತುಂಬಾ ಧನ್ಯವಾದಗಳು.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಧನ್ಯವಾದಗಳು ಪ್ರಕಾಶ್ ನರಸಿಂಹಯ್ಯನವರಿಗೆ.
-ಗಣೇಶ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಇಟ್ನಾಳರೆ,
ತಾವಂದಂತೆ ಇದು ಬುಲ್‌ಬುಲ್ ಏ ಇರಬಹುದು. ಹೊಟ್ಟೆಯ ಬದಿ ಬೆಳ್ಳಗಿದ್ದು, ತಲೆ ಬೆನ್ನು ಕಪ್ಪಗಿದೆ. ನಾಳೆ ಬೆಳಗ್ಗೆ ಇನ್ನೊಮ್ಮೆ ನೋಡಿ ಖಾತ್ರಿ ಮಾಡಿಕೊಳ್ಳುವೆ. ತಮ್ಮ ವಿವರಣೆಗೆ ತುಂಬಾ ಧನ್ಯವಾದಗಳು.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ದೂರದಿಂದ ತೆಗೆದು(ಮೊಬೈಲಲ್ಲಿ), ಎಡಿಟ್ ಮಾಡಿದ್ದು-

-ಗಣೇಶ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by lpitnal@gmail.com on

ಗಣೇಶರೇ, ಹಕ್ಕಿಗಳಲ್ಲಿ ಅವುಗಳ ಆಕಾರ, ಬಣ್ಣ, ಹಾರುವ ವಿಧ, ಜಿಗಿಯುವ ವಿಧ, ರೆಕ್ಕೆ, ಪುಕ್ಕ, ಬೆನ್ನು, ಹೊಟ್ಟೆ ಮುಖದ ಚುಂಚು, ಹುಬ್ಬು, ತಲೆಯ ಆಕಾರ, ಬಾಲ ಮುಂತಾಗಿ ವಿಶಿಷ್ಟತೆಗಳನ್ನು ನೋಡಿಯೇ ಗುರುತಿಸಲು ಸಾಧ್ಯ. ಈ ಸಂಬಂಧ ಇದು ನಮ್ಮ ಸೌಥ ಇಂಡಿಯಾ ಆದಲ್ಲಿ ಬುಲ್ ಬುಲ್ , ವ್ಯಾಗಟೇಲ್, ಫ್ಲಾಯ್ ಕ್ಯಾಚರ್, ಟೇಲರ್ ಬರ್ಡ್ (ವೀವರ್ ಬರ್ಡ್) ಗಳಲ್ಲಿ ಯಾವುದಾದರೂ ಒಂದು ಎಂದು ಹೇಳಬಹುದು. ಇಷ್ಟು ದೂರದಿಂದ ಎಕ್ಷಪರ್ಟ್ಸ್ ಹೇಳಬಹುದಾದರೂ ನನಗೆ ಸಾಧ್ಯವಾಗದು. ಕ್ಷಮಿಸಿ ಸರ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಇಟ್ನಾಳರೆ,
ನಾವು ಅಂಡಾಂಡ..ಅವತಾರ ತಾಳಿದಾಗ "ಕ್ಷಮೆ",ಆಶೀರ್ವಾದ...ಇತ್ಯಾದಿ ಕೇಳಿ. ಈಗ ಬೇಡ.:)
ಇದು ದೂರದಿಂದ ಮೊಬೈಲಲ್ಲಿ ತೆಗೆದು, ಎನ್‌ಲಾರ್ಜ್ ಮಾಡಿದ್ದು..ಸರಿಯಾಗಿ ಬಂದಿಲ್ಲ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by smurthygr on

ಚಿತ್ರಗಳನ್ನು ಹೇಗೆ ಸೇರಿಸಿದಿರಿ? ನಾನು ಬೇರೆಯ ಒಂದು ಪ್ರತಿಕ್ರಿಯೆಗೆ ಒಂದು ಚಿತ್ರ ಸೇರಿಸಲು ಪ್ರಯತ್ನಿಸಿ ಸೋತುಹೋದೆ. ಸಂಪದದ ಹೊಸರೂಪ ಇನ್ನೂ ಸರಿಯಾಗಿ ತಿಳಿದಿಲ್ಲ.
... ನಾವು "ದೇವರಿಲ್ಲ" ಎಂದು ವಾದಿಸುವಾಗ ... ಇದನ್ನು ಬರೆದವರು ಏನೆಂದಉ ವಾದಿಸಿದರೋ !
... ನೀವು ಒಪ್ಪುತ್ತೀರೋ ಬಿಡುತ್ತೀರೊ ನಾನರಿಯೇ. ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

"ಪಿಕಾಸ"ದಿಂದ..
ಮಾಡಿದೆ.
ನಿಮಗಾಗಿ ಒಂದು ಚಿತ್ರ-
-ಗಣೇಶ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಪಿಕಾಸದಲ್ಲಿ ಫೋಟೋಗಳನ್ನು ಸೇರಿಸಿರುವೆ. ಅಲ್ಲಿಂದ urlನ್ನು ಇಲ್ಲಿ copy ಮಾಡಿದೆ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by smurthygr on

ನನ್ನಿ ..., ನಾನೂ ಒಂದು ಚಿತ್ರ ಸೇರಿಸಿ ನೋಡುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by smurthygr on
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ನಾನು ಚಿತ್ರ ಅ0ಟಿಸಿನೋಡುವೆ ಸರಿಯಾದರೆ ಮತ್ತೊ0ದು

http://1.bp.blogspot.com/_qOV4-O-UQ7Q/SwIeY9BdFxI/AAAAAAAAAJs/JoRve0Xd8v...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಇಬ್ಬರೂ ಎಕ್ಸ್‌ಪರ್ಟ್‌ಗಳೂ ಸೇರಿ ತಮಾಷೆ ಆಡುತ್ತಿದ್ದೀರಾ?:) ಅದರೂ ಇತರ ಹೊಸಬರಿಗೆ ಸಹಾಯವಾಗಲಿ ಅಂತ, ಪುನಃ ಹೇಳುವೆ.

ಎಲ್ಲವೂ ಹತ್ತಿರವಿರಲಿ,ಸ್ಪೇಸ್ ಬಿಡಬೇಡಿ.

ಇಲ್ಲೂ ಬಾಕ್ಸ್ ಬಂದರೆ ಬೈಬೇಡಿ..
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಪುನಃ ಹೇಳುವೆ ಮತ್ತು ಎಲ್ಲವೂ ಹತ್ತಿರವಿರಲಿ ಎಂಬ ಶಬ್ದಗಳ ನಡುವಿನ ಕೊಂಡಿ ಮಾಯವಾಗಿದೆ. ಅದಕ್ಕೆ ಅದನ್ನು ಚಿತ್ರದೊಳಗೆ ಸೇರಿಸಿ ಹಾಕಿರುವೆ. ಈಗಲೂ ಬರದಿದ್ದರೆ ನಾನು ಸೋತೆ-

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by smurthygr on

ನೀವು ಹೇಳಿದಂತೆಯೇ ಮಾಡಿದರೂ, ಚಿತ್ರ ಬರಲಿಲ್ಲ. ಪುನಃ ಪ್ರಯತ್ನಿಸೋಣ ಎಂದರೆ ತಪ್ಪಾದರೆ ಸರಿ ಮಾಡುವ ಆಯ್ಕೆ (edit) ಈಗ ಇಲ್ಲ. ಸುಮ್ಮನೇ ಪ್ರತಿಕ್ರಿಯೆಗಳು ಹೆಚ್ಚಾಗುತ್ತವೆ. (ಸದ್ಯ ಪ್ರಯತ್ನಿಸಿ ವಿಫಲವಾಗಿದ್ದ ಎರಡನ್ನು ಸಂಪದವೇ ತಗೆದುಹಾಕಿದೆ ..!). ಅಂಡಾಂಡ ಭಂಢ ಸ್ವಾಮಿಗಳ ಆಶೀರ್‍ವಾದ ಬೇಕು ಅನ್ಸುತ್ತೆ ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by smurthygr on

ಪಾರ್ಥರು ಹೇಗೋ ಹಾಕಿದ್ದಾರೆ, ಆದರೆ ನಾನು ಪುನಃ ಪ್ರಯತ್ನಿಸಿದ್ದೇ ಬಂತು. ಚಿತ್ರ ಮಾತ್ರ ಬರಲಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by smurthygr on

ಎಲ್ಲೋ ಏನೋ ಸಣ್ಣಪುಟ್ಟ ತಪ್ಪುಗಳಾಗುತ್ತಿವೆ ಎಂದು ತೋರುತ್ತಿದೆ, ಚಿತ್ರ ಮಾತ್ರ ಬರ್ತಾ ಇಲ್ಲ :(. ಮುನ್ನೋಟದ ಸೌಲಭ್ಯವಿಲ್ಲದೇ ಸುಮ್ಮನೇ ಪ್ರಯತ್ನಿಸಿ ತಪ್ಪು ತಪ್ಪು ಪ್ರತಿಕ್ರಿಯೆಗಳನ್ನು ತುಂಬಿಸಲು ಮನಸ್ಸಾಗುತ್ತಿಲ್ಲ ... ಮುನ್ನೋಟದ ಅಥವಾ ಪ್ರತಿಕ್ರಿಯೆಗಳನ್ನು ಬದಲಾಯಿಸುವ ಸೌಲಭ್ಯ ಒದಗಿದರೆ ಮತ್ತೆ ಪ್ರಯತ್ನಿಸುತ್ತೇನೆ, ಅಲ್ಲಿಯವರೆಗೆ ಸುಮ್ಮನಿರುವುದರಿಂದ ಸಂಪದ ಸರ್‍ವರಿನ ಭಾರವಾದರೂ ಕಡಮೆಯಾಗುತ್ತದೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ಎಲ್ಲರೂ/ಎಲ್ಲವೂ ಕೆಟ್ಟವರಾಗಿರುವುದಿಲ್ಲ ಅಂಥಾ ಅಲ್ಲಿಗೆ!!!
ಹಾವು ಮುಂಗಸಿಯ ಕಥೆ ನೆನಪಿಗೆ ಬಂತು ಗಣೇಶಣ್ಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಗಣೇಶರೆ ಈ ರೀತಿ ಪರಸ್ಪರ‌ ಸಹಾಯ‌ ಪ್ರಾಣಿ ಹಾಗು ಪಕ್ಷಿಗಳಲ್ಲಿ ಸಾಮಾನ್ಯ. ನೀವು ಹಲವು ಪ್ರಕರಣ‌ ಓದಿರಬಹುದು , ನೋಡಿರಬಹುದು ವೀಡಿಯೊಗಳಲ್ಲಿ, ಕೆಲವೊಮ್ಮೆ ಪ್ರಾಣ‌ ಕೊಡಲು ಸಿದ್ದವಿರುತ್ತವೆ, ತಮ್ಮ ಸ್ನೇಹ‌ ಪ್ರೀತಿಗಾಗಿ. ಬೇಟೆಗಾರರು ಬ0ದಾಗ‌ ಕಾಡಿನಲ್ಲಿ ಎಚ್ಚರ‌ ಕೊಡುವ‌ ಪಕ್ಷಿಗಳ‌ ಬಗ್ಗೆ ನೋಡಿದ್ದೀರಲ್ಲ ‍ ಕೆಲವು ಅ0ಗ್ಲ ಸಿನಿಮಾಗಳಲ್ಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

>>ಈ ರೀತಿ ಪರಸ್ಪರ‌ ಸಹಾಯ‌ ಪ್ರಾಣಿ ಹಾಗು ಪಕ್ಷಿಗಳಲ್ಲಿ ಸಾಮಾನ್ಯ
-ಪರಸ್ಪರ ಕತ್ತಿ ಮಸೆಯುವುದು ಮಾನವರಲ್ಲಿ ಸಾಮಾನ್ಯ.:)
ಧನ್ಯವಾದಗಳು
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಅಣ್ನಾ ಮತ್ತೆ ನಿಮ್ಮ್ ಕ್ಯಾಮೆರಾ ಹಕ್ಕಿ ಪಕ್ಕಿಗಳತ್ತ ..!

ಮನುಷ್ಯ ಪ್ರಾಣಿಯೆ ಆದ್ರೂ ಬೇರೆ ಪ್ರಾಣಿ ಮತ್ತು ಪಕ್ಷಿಗಳಿಗಿ0ತ‌ ........!!
ಅಣ್ನಾವ್ರೇ ಹಾಡಿಲ್ಲವೆ? ಪ್ರಾಣಿಗಳೇ ಮೇಲು ಮಾನವ‌ ಅದಕ್ಕಿ0ತ‌ ಕೀಳು ಅ0ತ‌..

ಬೆಳಕಿನ‌ ಹಬ್ಬ ದೀಪಾವಳಿಯ‌ ಶ್ಹುಭ‌ ಹಾರೈಕೆಗಳು..

ಒಳಿತಾಗಲಿ.
\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಅವರೆ,
ತಮಗೂ ದೀಪಾವಳಿ ಶುಭಾಶಯಗಳು. ಈಸಲ ಯಾವ "ದೀಪಾವಳಿ ವಿಶೇಷಾಂಕ" ತೆಗೆದುಕೊಳ್ಳಬೇಕು? ನಿಮ್ಮಿಂದ ವಿಮರ್ಶೆಯೇ ಬಂದಿಲ್ಲಾ?
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shreekar on

- ಗಣೇಶಣ್ಣಾ ?

ಕಣ್ಣಿಗೆ ರಾಚುವಂತಹ ಬಣ್ಣಬಣ್ಣದ ಒಳ್ಳೆಯ ಮುದ್ರಣದ ವಿಜಯವಾಣಿ ಖರೀದಿಸಿ ನೋಡಿದರೆ ನಮ್ಮ ಅರಾಜಕಾರಣಿಗಳ ದೀಪಾವಳಿ ಶುಭಾಶಯಗಳ ಜಾಹೀರಾತುಗಳಿಂದ ತುಂಬಿತ್ತು.

ಆದರೂ ಒಬ್ಬಿಬ್ಬ ಖ್ಯಾತನಾಮರ ಹಾಸ್ಯಬರಹಗಳನ್ನು ಓದಿ ಖುಷಿ ಪಟ್ಟೆ.

ಪ್ರಜಾವಾಣಿ, ಉದರವಾಣಿಗಳನ್ನು ಇನ್ನೂ ನೋಡಿಲ್ಲ.

ನಿಮ್ಮ ಪತ್ತೆ ಕೊಟ್ಟರೆ ಓದಿ ಹಳತಾದ ಮೇಲೆ ಕಳಿಸಿ ಕೊಡಬಹುದೇನೋ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

>>>ನಿಮ್ಮ ಪತ್ತೆ ಕೊಟ್ಟರೆ ಓದಿ ಹಳತಾದ ಮೇಲೆ ಕಳಿಸಿ ಕೊಡಬಹುದೇನೋ!
-ಹೇಗೂ ಓದಿಯಾಯಿತಲ್ಲ, ಕಳುಹಿಸಿ ಎಂದು "ಪತ್ತೆ" ಬರೆಯಲು ಹೊರಟೆ...ಆದರೆ ನೀವು "ಓದಿ ಹಳತಾದ ಮೇಲೆ" ಅಂದಿದ್ದೀರಿ..ಅಂದರೆ ಸದ್ಯಕ್ಕೆ ಸಿಗದು. ಮುಂದಿನ ದೀಪಾವಳಿಗೆ "ಕೊಡಬಹುದೇನೋ"!? :)
ವಿಜಯವಾಣಿ ವಿಶೇಷಾಂಕ ಕ್ಯಾನ್ಸಲ್- ಓವರ್ ಟು ಸಪ್ತಗಿರಿವಾಸಿ..
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ನೀವು ಹೀಗೆ ಮಾಡಿ , ನಿಮ್ಮದು ಓದಿಯಾದ‌ ಮೇಲೆ, ಸೀದ‌ ಬನಶ0ಕರಿ ದೇವಾಲಯಕ್ಕೆ ಹೋಗಿ ಅಲ್ಲಿರುವ‌ ಗರುಡಗ0ದದ‌ ಕಟ್ಟೆಯ‌ ಮೇಲೆ ನಿಮ್ಮ ವಿಜಯವಾಣಿಯನ್ನಿಟ್ಟು ಕೈಮುಗಿದು ಹಿ0ದೆ ತಿರುಗಿನೋಡದೆ ಬ0ದು ಬಿಡಿ , ಅವರು ತೆಗೆದುಕೊಳ್ಳುತ್ತಾರೆ
ಹ್ಹಹಹ್ಹ್ಹ್ಹ್ಹ್ಹಹಹಹಹಹ್.....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ನಿಮ್ಮ ಐಡಿಯಾ ಚೆನ್ನಾಗಿದೆ. ಸರಿ. ನೀವು ಓದಿಯಾದ ಮೇಲೆ ನನಗೆ ಕೊಡಿ. :)
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಗಣೇಶ್ ಅಣ್ಣ ನಾ ಇನ್ನು ಯಾವುದೇ ವಿಶೇಷಾಂಕ ಖರೀದಿಸಿಲ್ಲ.(ಮಾರುಕಟ್ಟೆಗೆ ಎಲ್ಲವೂ ಬಂದಿವೆ)..ನಾ ಅಂತೂ ಎಲ್ಲವನ್ನು ಖರೀದಿಸುವೆ. ...ಸಾಧ್ಯವಾದರೆ ಎಲ್ಲದವುಗಳ ಬಗ್ಗೆ ಬರೆವೆ.ನೆನಪಿಸಿದ್ದಕ್ಕೆ ನನ್ನಿ !!

>>>> ನಮ್ಮ ಸಹ ಸಂಪದಿಗ ಶ್ರೀ ನಾಥ್ ಭಲ್ಲೆ ಅವ್ರು ದಟ್ಸ್ ಕನ್ನಡದಲ್ಲಿ ಸುಬ್ಬನ ಬಗ್ಗೆ ಒಂದು ಬರಹ ಬರೆದಿರುವರು (ಸುಬ್ಬ ಅಂತ ಶೀರ್ಷಿಕೆ ನೋಡಿದ ಕೂಡಲೇ ಸಂಶಯ ಬಂತು ಅವ್ರೆ ಬರದಿರಬಹುದ ?ಅಂತ ಅದು ನಿಜವಾಯ್ತು)
ಅದರ ಲಿಂಕ್ ಇಲ್ಲಿದೆ ಎಲ್ರೂ ಓದಿ..
http://kannada.oneindia.in/festivals/diwali/2011/1017-subbu-the-one-and-...

@ ಭಲ್ಲೆ ಅವ್ರೆ ಆ ಬರಹವನ್ನು ನೀವ್ಯಾಕೆ ಇನ್ನು ಸಂಪದದಲ್ಲಿ ಹಾಕಿಲ್ಲ..? ಹಾಕಿ ಪ.. ಎಲ್ರೂ ಓದಲಿ..
ನಿಮಗೂ
*********ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು***********

ಎಲರಿಗೂ ಬೆಳಕಿನ ಹಬ್ಬ **********ದೀಪಾವಳಿಯ ಹಾರ್ದಿಕ ಶುಭಾಶಯಗಳು.****************

ಶುಭವಾಗಲಿ..

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಭಲ್ಲೇಜಿ ಹಾಸ್ಯವನ್ನು ಸಂಪದಿಗರೆಲ್ಲರೂ ಓದಿ ಪ್ರತಿಕ್ರಿಯೆ ಸಹ ಬರೆದಾಗಿದೆ.:) http://sampada.net/%E0%B2%B8%E0%B3%81%E0%B2%AC%E0%B3%8D%E0%B2%AC%E0%B2%A...
ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by drpshashikalakr... on

ಕಾಗೆ ಮನಸ್ಸನ್ನು ಅರಿಯಬಹುದಾಗಿದ್ದರೆ?
ಪ್ರಾಣಿ ಪಕ್ಶಿಗಳಿದ‌ ನಾವು ಕಲಿಯ‌ ಬೇಕಾದದ್ದು ಬಹಳ‌.
ಬರಹ‌ ಚೆನ್ನಾಗಿದೆ. ನಿತ್ಯ‌ ಜೀವನದ‌ ಪಾಟ‌..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಬೇಡ ಡಾಕ್ಟ್ರೆ,
"ಕಣ್ಣು ಬಾಯಿ ಬಿಟ್ಟುಕೊಂಡು ನಿಂತು ನೋಡುತ್ತಿದ್ದಾನೆ. ಈ ಪರಿ ದೇಹ ಇಟ್ಟುಕೊಂಡು ಪುಟಾಣಿ ಪಕ್ಷಿಗೆ ಸಹಾಯ ಮಾಡಲಾಗದವ..ಹೇಡಿ ಮಾನವ.." ಎಂದೆಲ್ಲಾ ಅದು ಮನಸ್ಸಲ್ಲಿ ಅಂದರೆ..:(
ತಮ್ಮ ಮೆಚ್ಚುಗೆಗೆ ಧನ್ಯವಾದಗಳು.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shreekar on

@ಗಣೇಶಣ್ಣ .. ಈ-ಮೇಲ್ ?

ಸ್ಕ್ಯಾನ್ ಮಾಡಿ ನಿಮ್ಮ ಮೇಲ್ ID ಗೆ ಕಳಿಸಲೇ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

IDಈ ದೀಪಾವಳಿ ವಿಶೇಷಾಂಕವನ್ನು ಸ್ಕ್ಯಾನ್ ಮಾಡಿ ಕಳುಹಿಸುವಿರಾ? ಪಾಪ ಪಾರ್ಥರು ದೇವಸ್ಥಾನದ ಕಟ್ಟೆ ಅಡ್ಡದಲ್ಲಿ ಕಾದು ಕುಳಿತಿರುವರಲ್ಲಾ?:)
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಹಾಗೆ ಮಾಡಿ ಗಣೇಶರ ಐಡಿ ಗೆ ಕಳಿಸಿ
ಹಾಗೆ ನಮಗೆ ದೀಪಾವಳಿ ವಿಷೇಶಾ0ಕದ‌ ಹಣದ‌ ಡಿ.ಡಿ ಕಳಿಸಿಬಿಡಿ ಸಾಕು :))

ಹಳೆಯದೊ0ದು ಜೋಕ್ :
ಮದುವೆ ಮನೆಗೆ ಬ0ದ‌ ಅತಿಥಿಗಳಿಗೆ
"ಬನ್ನಿ ಬನ್ನಿ ತಿ0ಡಿ ತೆಗೆದುಕೊಳ್ಳಿ"
ಬ0ದಾತ‌
"ಪರವಾಗಿಲ್ಲ, ನಮ್ಮ ತಿ0ಡಿ ಆಗಿದೆ, ನೀವು ಎನು/ಎಷ್ಟು ತಿ0ಡಿ ಕೊಡುವರಿದ್ದಿರೊ ಅದಕ್ಕೆ ಸಮನಾದ‌ ದುಡ್ಡು ಕೊಟ್ಟುಬಿಡಿ ಸಾಕು"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shreekar on

@ ಪಾರ್ಥ

ಹಣ DD ಮಾಡಿ ಕಳಿಸುವುದೇ?
ಭಾರತದ ಸಿಲಿಕಾನ್ ವ್ಯಾಲ್ಲಿ ಬೆಂಗಳೂರಲ್ಲಿ ಇದ್ದು ಈ ಮಾತೇ ?
ಎಲ್ಲಿದ್ದೀರಿ ಪಾರ್ಥರೆ ನೀವು ?

ಆನ್ಲೈನ್ ಟ್ರಾನ್ಸ್ ಫಅರ್ ಸೌಕರ್ಯ ಮನೆಯಲ್ಲೇ ಇರುವಾಗ DD ಖರೀದಿಸಲು ಬ್ಯಾಂಕು ಹುಡುಕಿಕೊಂಡು ಹೋಗಬೇಕೆ?
ತತ್ ಕ್ಷಣ ನಿಮ್ಮ ಬ್ಯಾಂಕ್ ಹೆಸರು, ಖಾತೆ ಸಂಖ್ಯೆ, ಮತ್ತು ಪಾಸ್ ವರ್ಡ್ ವಿವರಗಳನ್ನು ನನ್ನ ಮೆಯಿಲ್ ID shree420@satyam.com ಗೆ ಕಳಿಸಿಕೊಡಿ.

:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

@ಶ್ರೀಕರ್ ಐಡಿ ಅ0ತ‌ ಬ0ತಲ್ಲ ಪ್ರಾಸಕ್ಕೆ ಡಿಡಿ ಅ0ತ‌ ಹೇಳಿದೆ ಅಷ್ಟೆ. ಅಷ್ಟಕ್ಕು ನೀವು ಹೇಳಿದ್ದ ಮಿಕ್ಕೆಲ್ಲಕ್ಕೆ ನನ್ನ ವಿಳಾಸ‌ ಕೊಡಬೇಕು ಡಿಡಿ ಅ0ದರೆ ಸೇಪ್ ಅಲ್ಲವೆ , ಹಣ ಪಡೆದು ಮಾಯ‌ ಆಗಬಹುದು ಅ೦ತ‌ ಭಾವ‌ ಅಷ್ಟೆ. ಅಲ್ಲದೆ ನೀವಾದರು ನನ್ನ ಬ್ಯಾ0ಕ್ ಖಾತೆ ಪಾಸ್ ವರ್ಡ್ ಎಲ್ಲವನ್ನು ಕಳಿಸಲು ಹೇಳುತ್ತಿರುವ ವಿಳಾಸವೆ ಅನುಮಾನಸ್ಪದವಾಗಿದೆಯಲ್ಲಿ ಅದೆ0ತದೊ 420 ಅ0ತ‌ ಇದೆ ಮದ್ಯದಲ್ಲಿ ಹೇಗೆ ನ0ಬಿ ಬ್ಯಾ0ಕ್ ವಿವರ‌ ಕೊಡುವುದು ? :)))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಪಾರ್ಥರೆ,
partha1059ನಂತೆ shree420 ನಂಬಿಕೆಗೆ ಅರ್ಹ. 1+0+5+9=6 ; 4+2+0=6 ; ನ್ಯುಮರಾಲಜಿ ಪ್ರಕಾರ :) ಇದು sathyam.
ನೀವೂ ಬ್ಯಾಂಕ್ ವಿವರ ನೀಡಿ, ಅವರೂ ಕ್ಯಾಶ್ ಮಾಡಿ ನಿಮಗೂ ಸ್ವಲ್ಪ ಹಣ ಕಳುಹಿಸಲಿ.:)
ದೀಪಾವಳಿ ವಿಶೇಷಾಂಕದ ಗತಿ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shreekar on

@ ಪಾರ್ಥ

>>>> ಹೇಗೆ ನ0ಬಿ ಬ್ಯಾ0ಕ್ ವಿವರ‌ ಕೊಡುವುದು ?

ನಂಬಿ ಕೆಟ್ಟವರಿಲ್ಲವೋ ಎಂದು ನಮ್ಮ ದಾಸವರೇಣ್ಯರು ಹಾಡಿದ್ದಾರಲ್ಲ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಟ್ವಿಟ್ಟರಿನಲ್ಲಿ ಸಂಪದ