19
June
2013

ಪ್ಯಾರೀ ಪಿಜ್ಜಾ..

September 9, 2012 - 7:41pm
ಗಣೇಶ

ಬೆಳಗ್ಗಿನ ಉಪಹಾರಕ್ಕೆ ಮಾಡಿದ "ಸೆಟ್ ದೋಸೆ"ಯ ಹಿಟ್ಟು ಉಳಿದಿದ್ದರೆ ಸಂಜೆಗೆ "ದೋಸೆ ಪಿಜ್ಜಾ" ಮಾಡುವುದು ಹೇಗೆ ಎಂದು ಹೇಳುವೆ. ಪಿಜ್ಜಾ ಬೇಸ್, ಓವನ್ ಏನೂ ಬೇಕಾಗಿಲ್ಲ!

ಮಾಡುವ ವಿಧಾನ :

ಮೊದಲಿಗೆ ಉಳಿದ ಸೆಟ್ ದೋಸೆ ಹಿಟ್ಟಿಗೆ, ಸ್ವಲ್ಪ ಚಿರೋಟಿ ರವೆ, ಸ್ವಲ್ಪ ಮೈದಾಹಿಟ್ಟು, ಚಿಟಿಕೆ ಉಪ್ಪು ಸೇರಿಸಿ ಇಡಿ.

ಇನ್ನೊಂದು ಕಡೆ ಕ್ಯಾಪ್ಸಿಕಮ್ ಮತ್ತು ಈರುಳ್ಳಿ ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ.

ಟೊಮೆಟೊ ಸಾಸ್‌ಗೆ ಸ್ವಲ್ಪ ಕಾಳುಮೆಣಸು ಪುಡಿ ಮಾಡಿ ಹಾಕಿ, ಸ್ವಲ್ಪ ನೀರು ಬೆರೆಸಿ ಕಲಸಿ ಇಟ್ಟುಕೊಳ್ಳಿ.

ಈಗ ಕಲಸಿಟ್ಟ ಹಿಟ್ಟನ್ನು ಕಾವಲಿಗೆ ದಪ್ಪಗೆ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ.

ಅರ್ಧ ಬೆಂದ ಮೇಲೆ, ಅದರ ಮೇಲೆ ಸಾಸ್ ಮಿಶ್ರಣವನ್ನು ಹರಡಿ.

ಅದರ ಮೇಲೆ ಮೊದಲೇ ಕತ್ತರಿಸಿ ಇಟ್ಟಿರುವ ಈರುಳ್ಳಿ, ಕ್ಯಾಪ್ಸಿಕಮ್‌ನ್ನು ಹರಡಿ ಹಾಕಿ.

ಅದರ ಮೇಲೆ ಚೀಸನ್ನು ತುರಿದು ಹಾಕಿ(ಸ್ಲೈಸ್ ಆಗಿದ್ದರೆ ಹಾಗೇ ಹರಡಿ).

ಕಾವಲಿಗೆ ಮುಚ್ಚಿ, ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಬೇಯಿಸಿ.

ಚೀಸ್ ಕರಗಿದ ಮೇಲೆ ತೆಗೆದು ಕಟ್ ಮಾಡಿ ಸರ್ವ್ ಮಾಡಿ.

ಸೂಪರ್ ಆಗಿರುವುದು. ಮಕ್ಕಳು ಇದನ್ನು ತಿಂದರೆ, ಪಿಜ್ಜಾ ಹಟ್/ದರ್ಶಿನಿ/ಚಾಟ್ ಕಾರ್ನರ್ ಕಡೆ ತಿರುಗಿಯೂ ನೋಡುವುದಿಲ್ಲ..ಬೆಟ್!

(ಈ ದಿನ ನನ್ನ ಹೆಂಡತಿಯ ಬರ್ತ್ ಡೇಗೆ ಸ್ಪೆಷಲ್ ಆಗಿ ಮಾಡಿದ್ದು.. )

ಹಾಗೇ ಒಂದು ಪಿಜ್ಜಾ ಹಾಡು ಸಹ ಕೇಳಿ-

http://www.youtube.com/watch?v=Se9lySMlfRw

ಗಣೇಶ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by makara on

ಗಣೇಶ್..ಜಿ, ಪಿಜ್ಜಾ ಹಾಡನ್ನೇನೋ ಲಿಂಕು ಮೂಲಕ ಕೇಳಿ ಸಂತೋಷ ಪಟ್ಟಿವಿ. ನೀವು ಮಾಡಿದ ಪಿಜ್ಜಾ ತಿನ್ನೋ ಕಾಲ ಯಾವಾಗ ಬರುತ್ತೋ? (ರೆಸಿಪಿ ನೋಡಿ ಅದರಂತೆ ಮಾಡಿಕೊಳ್ಳಿ ಅನ್ನಬೇಡಿ). ಇರಲಿ ಬಿಡಿ, ನಿಮ್ಮ ಶ್ರೀಮತಿಯವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಧನ್ಯವಾದಗಳು ಶ್ರೀಧರ್‌ಜಿ-ನನ್ನದೂ ಹಾಗೂ ನನ್ನ ಶ್ರೀಮತಿಯವರದ್ದೂ ಸಹ.
>>ನೀವು ಮಾಡಿದ ಪಿಜ್ಜಾ ತಿನ್ನೋ ಕಾಲ ಯಾವಾಗ ಬರುತ್ತೋ? (ರೆಸಿಪಿ ನೋಡಿ ಅದರಂತೆ ಮಾಡಿಕೊಳ್ಳಿ ಅನ್ನಬೇಡಿ).
-ನೀವೆಲ್ಲಾ ಪಿಜ್ಜಾ ಮಾಡಿ ನಿಮ್ಮ ನಿಮ್ಮ ಶ್ರೀಮತಿಯವರನ್ನು ಸಂತೋಷಪಡಿಸಿ ಎಂದು ರೆಸಿಪಿ ಹೇಳಿಕೊಟ್ಟರೆ..ನಾನು ಮಾಡಿದ ಪಿಜ್ಜಾ ಕೇಳುತ್ತಿದ್ದೀರಲ್ಲಾ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopaljsr on

ಪಿಜ್ಜಾ ಸೂಪರ್ ... ನಿಮಗೂ ಹಾಗೂ ನಿಮ್ಮ ಶ್ರೀಮತಿಯವರಿಗೂ ಹುಟ್ಟು ಹಬ್ಬದ ಶುಭಾಶಯಗಳು.....

<<ನನ್ನದೂ ಹಾಗೂ ನನ್ನ ಶ್ರೀಮತಿಯವರದ್ದೂ ಸಹ.>>
ಒಂದು clue ಕೊಟ್ಟ ಹಾಗಿದೆ :--)))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

>>ಒಂದು clue ಕೊಟ್ಟ ಹಾಗಿದೆ :--)))
ನಿನ್ನೆ ಬಸ್ ಸ್ಟ್ಯಾಂಡ್ ನಲ್ಲಿ ಬಸ್‌ಗಾಗಿ ಕಾಯುತ್ತಿರುವವರ ಬಳಿ " ಅಕ್ಕಾ, ನಿಮ್ಮ ಡೇಟ್ ಆಫ್ ಬರ್ತ್ ಸೆಪ್ಟೆಂಬರ್ ಒಂಬತ್ತಾ ?" ಎಂದು ಸಗಿ ಕೇಳುತ್ತಿದ್ದರೆಂದು ವರದಿ ಸಿಕ್ಕಿದೆ. :)
ಗೋಪಾಲ್‌ಜಿಗೆ ಧನ್ಯವಾದಗಳು.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopaljsr on

:-))))))))))))))))))))))))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

+1 ಜೀ( ಗುರುಗಳ ಪ್ರತಿಕ್ರಿಯೆಗೆ..!!

ನಿಮ್ಮ ಶ್ರೀಮತಿ ಯಾನೆ ನಮ್ಮ ಅತ್ತಿಗೆಗೆ ಹುಟ್ಟು ಹಬ್ಬದ ಶುಭಾಶಯಗಳು.....(ಈಗ ಆ ದಿನವೂ ಬದಲಾಯ್ತು!!)..

ನಿಮ್ಮ ಪಿಜ್ಜಾ ಚ್ಹಿತ್ರ ನೋಡಿ ಬಾಯ್ ನೀರೂರುತಿದೆ..!!
ನೀವ್ ಬರೀ ಚ್ಹೀತ್ರ ಹಾಕಿ ಬಾಯ್ ನೀರೂರಿಸೋದೆ ಜಾಸ್ತಿ ಆಯ್ತು..:(((

ನಮ್ಗೆ ನೀರು ಅಸ್ಟೇನ?????

ನೀವು ಪಾಕ ಪ್ರವೀಣರು ಅಂತ ಅವತ್ತೆ ಗೊತ್ತಿತ್ತು..!!
ಒಳಿತಾಗ್ಲಿ..

>>> ಶುಭ ಮಧ್ಯ ರಾತ್ರಿ ಗಣೇಶ್ ಅಣ್ನ..(ನಮ್ಮ ನಿಮ್ಮ ಭೇಟಿ ಬಹು ದಿನಗಳ ನಂತರ..)

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಸಪ್ತಗಿರಿವಾಸಿಯವರೆ,
>>>ನಿಮ್ಮ ಶ್ರೀಮತಿ ಯಾನೆ ನಮ್ಮ ಅತ್ತಿಗೆಗೆ ಹುಟ್ಟು ಹಬ್ಬದ ಶುಭಾಶಯಗಳು.....
-ಅತ್ತಿಗೆ ಮತ್ತು ನನ್ನ ಧನ್ಯವಾದಗಳು.

>>>ನೀವ್ ಬರೀ ಚ್ಹೀತ್ರ ಹಾಕಿ ....
-ಅದು ಹೇಗೆ ಮಾಡುವುದು ಎಂದೂ ಹೇಳಿದ್ದೇನಲ್ಲಾ..
ಮಾಡಿ, ತಿಂದು ಹೇಗಾಗಿದೆ ಎಂದು ಹೇಳಿ. ಬ್ಯಾಚುಲರ್ ಲೈಫ್ ಅಡುಗೆ ಕಲಿಯಲು/ಮಾಡಲು ಒಳ್ಳೆಯ ಕಾಲ. :)
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಗಣೇಶರೆ

ನಿಮ್ಮ ಪಿಜ್ಜಾ ಮಾಡುವ ವಿಧಾನ ಚೆನ್ನಾಗಿದೆ

ಮುಂದಿನ ಕ್ಯಾಂಪ್ ನಲ್ಲಿ ಹೇಳಿ ಕೊಡುವಿರಂತೆ

. ನಿಮ್ಮ ಶ್ರೀಮತಿಯವರಿಗೆ ನನ್ನ ಶುಭಾಷಯಗಳನ್ನು ತಿಳಿಸಿ .

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಪಾರ್ಥಸಾರಥಿಯವರೆ,
ನನ್ನ ಹಾಗು ನನ್ನ ಶ್ರೀಮತಿಯ ಧನ್ಯವಾದಗಳು.
>>>ಮುಂದಿನ ಕ್ಯಾಂಪ್ ನಲ್ಲಿ ಹೇಳಿ ಕೊಡುವಿರಂತೆ..
-ಕ್ಯಾಂಪ್ ಮಾಡುವವರೂ ನೀವೇ...ತಪ್ಪಿಸುವವರೂ ನೀವೆ.. ನಾನು ನಿಮಿತ್ತ ಮಾತ್ರ :)
ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Jayanth Ramachar on

ಗಣೇಶಣ್ಣ ಪ್ರತಿ ಬಾರಿ ಹೊಸ ತಿನಿಸೊ೦ದರ ಚಿತ್ರಗಳನ್ನು ತೋರಿಸಿ ನಮ್ಮ ಬಾಯಲ್ಲಿ ನೀರೂರುವ೦ತೆ ಮಾಡುತ್ತೀರ. ಯಾವಾಗ ಪ್ರತ್ಯಕ್ಷವಾಗಿ ಇದನ್ನೆಲ್ಲ ತಿನ್ನಿಸುವಿರಿ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

-ಪ್ರತ್ಯಕ್ಷವಾದಾಗ ತಿನ್ನಿಸುವೆ :)
ಮೆಚ್ಚಿ ಪ್ರತಿಕ್ರಿಯಿಸಿದ ಜಯಂತ್‌ಗೆ ಧನ್ಯವಾದಗಳು.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shreekar on

ಗಂಡಿನ ಹ್ರದಯಕ್ಕೆ ಹೆಣ್ಣಿಗೆ ದಾರಿ ಅವನ ಹೊಟ್ಟೆಯ ಸಂತ್ರಪ್ತಿಯಿಂದ ಎನ್ನುವುದು ಹಳೆಯ ಮಾತಾಯಿತು.
ಮನದನ್ನೆಯನ್ನು ರಮಿಸಲು ನಳಪಾಕ ಮಾಡುವ ಶ್ರೀಮಾನ್ ರನ್ನು ಪಡೆದ ನಿಮ್ಮ ಶ್ರೀಮತಿಯವರೇ ಧನ್ಯರು!

ನಿಮ್ಮ ಸಂತತಿ ಸಾವಿರವಾಗಲಿ!
:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

:)
ಶ್ರೀಕರ್,
ನಿಮ್ಮ ಹಾರೈಕೆಗೆ ಧನ್ಯವಾದಗಳು.
>>...ನಿಮ್ಮ ಶ್ರೀಮತಿಯವರೇ ಧನ್ಯರು!
ಮದುವೆಯಾದಾಗ ಆಕೆಗೆ "ಉಪ್ಪಿಟ್ಟು" ಮಾಡಲೂ ಸಹ ಬರುತ್ತಿರಲಿಲ್ಲ. ನಾನೇ ಕಲಿಸಿಕೊಟ್ಟದ್ದು:) ನಂತರ ಆಕೆಯೇ ನನಗೆ ಅಡುಗೆ ವಿಷಯದಲ್ಲಿ ಗುರು. :)
ಗಂಡಾಗಲೀ ಹೆಣ್ಣಾಗಲೀ ಬಾಲ್ಯದಿಂದಲೇ ತಾಯಿಯ ಬಳಿ ಅಡುಗೆ ಕಲಿಯಬೇಕು. ಅದೂ ವಿಜ್ಞಾನ, ಕಲೆ..
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ನಾನು ಮೊದ್ಲು ಚಿತ್ರ ನೋಡಿ ಆಮ್ಲೆಟ್ಗೆ ರೆಡಿಯಾಗಿದ್ದಾರೆ ಗಣೇಶಣ್ಣ ಅಂತ ಅಂದ್ಕೊಂಡೆ, ಆದ್ರೆ ಆಮೇಲೆ ಗಣೇಶಣ್ಣ ಶುದ್ಧ ಸಸ್ಯಾಹಾರಿ ಹಾಗಾಗಿ ಅಲ್ಲ ಅಂತ ಮುಂದೆ ಹೋದ್ರೆ ಹಿಂಗೆ ವಿಸ್ಯ!!
ನಿಮ್ಮ ಮನೆಯವ್ರು ಬಾರೀ ಲಕ್ಕಿ!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shreekar on

ಗಣೇಶಣ್ಣಾ,

ನಿಮ್ಮ ಪಿಜ್ಜಾ ಪುಟವನ್ನು ನಮ್ಮ ಮಾಲತಿಯಮ್ಮನವರಿಗೆ ಕಳಿಸಿದಾಗ ಅವರು ಹೊಗಳಿದ್ದು ಹೀಗೆ ‍ -‍
" too good...novel idea can try this out this evening. Have all the ingredients...it says log in/register to comment...wanted to commend him for this great idea on the occasion of his wife's b'day..:-))))))) "

ಮಾಲ‌ತಿಯ‌ಮ್ಮನ‌ವ‌ರ‌ ಬ್ಲಾಗ್ ನೋಡ‌ಬೇಕಾದ‌ರೆ ಇಲ್ಲಿ ಹೋಗಿ
http://malathisanchi...

ಅಲ್ಲಿನ "ಗರಮಾ ಗರಂ ಪೆಪ್ಪರ್ ರಸಂ" ಕೂಡಾ ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಶ್ರೀಕರ್,
ಮಾಲತಿಯಮ್ಮನವರಿಗೆ ತುಂಬಾ ತುಂಬಾ ಧನ್ಯವಾದಗಳು.
ಹಾಗೇ ಕೊಂಡಿಕೊಟ್ಟದ್ದಕ್ಕೆ ತಮಗೂ ಧನ್ಯವಾದಗಳು.
>>>"ಗರಮಾ ಗರಂ ಪೆಪ್ಪರ್ ರಸಂ" ಚಿತ್ರಗಳು, ಬರಹ, ಹಾಸ್ಯ ಎಲ್ಲವೂ ಸೂಪರ್.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಚೇತನ್,
ಹೆಸರು ಕಾಳು, ಉದ್ದು ಹಾಕಿ ದೋಸೆ ಮಾಡಿದರೆ-ಆಮ್ಲೆಟ್‌ಗಿಂತ ಚೆನ್ನಾಗಿರುತ್ತದೆ.
>>>ನಿಮ್ಮ ಮನೆಯವ್ರು ಬಾರೀ ಲಕ್ಕಿ!!
..ಅವ್ರು ಲಕ್ಕಿ..ಏನು ಮಾಡಿದರೂ ನಾನು ಹೊಗಳುತ್ತೇನೆ. ನಾನು ಮಾತ್ರ ಅವಲಕ್ಕಿ- " ಈರುಳ್ಳಿ ಮತ್ತು ಕ್ಯಾಪ್ಸಿಕಮ್ ಸರಿಯಾಗಿ ಹರಡಿಲ್ಲ. ಮೂಲೆಯಲ್ಲಿ ದೋಸೆ ಕಾಣುತ್ತಿದೆ.....":(
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by smurthygr on

ಲೇಖನವೂ ಪಿಟ್ಝಾ ಹಾಡೂ ಸಖತ್!. (ಹಾಡು ಎಲ್ಲರಿಗೂ ಅರ್ಥ ಆಗಿದೆ ಅಂದುಕೊಂಡಿದ್ದೇನೆ!)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

>>ಹಾಡು ಎಲ್ಲರಿಗೂ ಅರ್ಥ ಆಗಿದೆ ಅಂದುಕೊಂಡಿದ್ದೇನೆ!
:) :)
ಶ್ರೀನಿವಾಸ್ ಮೂರ್ತಿಯವರೆ,
ಪಿಟ್ಝಾ ಬಗ್ಗೆ ಲೇಖನ ಸಂಪದಿಗರು ಯಾರಾದರೂ ಬರೆದಿದ್ದರೆ ರಿಪೀಟ್ ಆಗುವುದು ಬೇಡ ಎಂದು, ಗೂಗ್‌ಲ್ ಹುಡುಕುವಾಗ ಈ ಹಾಡು ಸಿಕ್ಕಿತು. ೨-೩ ಸಲ ಕೇಳಿ ಖುಷಿಪಟ್ಟೆ. ನಿಮಗೂ ಕೇಳಿಸೋಣ ಎಂದು ಹಾಕಿದೆ.
ಧನ್ಯವಾದ.
-ಗಣೇಶ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ಆತ್ಮೀಯ ಗಣೇಶರೇ, ಸಿಹಿ-ಕಹಿ ಚಂದ್ರುಗೆ ಒಬ್ಬ ಪ್ರಬಲ ಪ್ರತಿಸ್ಪರ್ಧಿ!!
ನಿಮ್ಮ ಶ್ರೀಮತಿ ಅದೃಷ್ಟವಂತರು. ಅವರಿಗೂ ಶುಭಾಶಯಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Prakash Narasimhaiya on

ಆತ್ಮೀಯ ಗಣೇಶರವರೆ,
ಚನ್ನಾಗಿದೆ ಎಂದು ಹೇಳಲು ತಿನ್ನಬೇಕಾಗುತ್ತದೆ ..................... ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಪ್ರಕಾಶ್ ನರಸಿಂಹಯ್ಯ ಅವರೆ,
>>ಚನ್ನಾಗಿದೆ ಎಂದು ಹೇಳಲು ತಿನ್ನಬೇಕಾಗುತ್ತದೆ..
-ಪರವಾಗಿಲ್ಲ. ಮಾಡಿ, ತಿಂದು ನಂತರವೇ ಹೇಳಿ. ನಾನು ಕಾಯುತ್ತೇನೆ. :)
ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

>>>ಸಿಹಿ-ಕಹಿ ಚಂದ್ರುಗೆ ಒಬ್ಬ ಪ್ರಬಲ ಪ್ರತಿಸ್ಪರ್ಧಿ!!
:) :)
-ಗಾತ್ರದಲ್ಲಿ ಅಷ್ಟೇ.
ಶ್ರೀಮತಿ ಹಾಗೂ ನನ್ನ ಧನ್ಯವಾದಗಳು ತಮಗೆ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nkumar on

ಚೆನ್ನಾಗಿದೆ. ನಾನು ಪಿಜ್ಜಾ ಪ್ರೇಮಿ ಅಲ್ಲ ಆದರೆ ಮನೆಯಲ್ಲಿ ಮಾಡಿರುವುದರಿಂದ ಕೊಂಚ ಆಸೆ ಆಗ್ತಾ ಇದೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on

ಒಳ್ಳೆಯ ರೆಸಿಪಿ‍...ಅಜ್ಜಾ‍‍....ಪಿಜ್ಜಾ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

>>ಅಜ್ಜಾ‍‍....ಪಿಜ್ಜಾ :)
-ಪಿಜ್ಜಾ (ಮುತ್ತಜ್ಜನನ್ನ ಮಂಗ್ಳೂರಿಗರು ಕರೆಯುವುದು) ಎಂದು pizzaವನ್ನು ಬರೆಯುವಾಗ ಯಾರಾದರೂ ತಮಾಶೆ ಮಾಡುವರು ಅಂದುಕೊಂಡಿದ್ದೆ. :)
ರೆಸಿಪಿ+ ಪಿಜ್ಜಾ ಮೆಚ್ಚಿದ ಅಶೋಕ್ ಅವರಿಗೆ ಧನ್ಯವಾದಗಳು.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ನಂದಕುಮಾರ,
ತೂಕ ಕ್ಯಾಲೊರಿ ಅದೂ ಇದೂ ಯೋಚನೆ ಮಾಡದೇ "ಪ್ಯಾರೀ ಪಿಜ್ಜಾ" ಮನೆಯವರಲ್ಲಿ ಹೇಳಿ ಮಾಡಿಸಿ ತಿನ್ನಿ..:)
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhalle on

ಪ್ಯಾರ್ಗೇ ಆಗ್ಬುಟ್ಟೈತೆ
ನಮ್ದೂಕೆ ಪ್ಯಾರ್ಗೇ ಆಗ್ಬುಟ್ಟೈತೆ

ಸಾರು‍ಅನ್ನ ಸೇರುತ್ತಿಲ್ಲ ನಮ್ದೂಕೆ
ಉಪ್ಪಿಟ್ಟಂತು ಇಳೀತಿಲ್ಲ ನಮ್ದೂಕೆ

ಪ್ಯಾರ್ಗೇ ಆಗ್ಬುಟ್ಟೈತೆ
ನಮ್ದೂಕೆ ಪ್ಯಾರ್ಗೇ ಆಗ್ಬುಟ್ಟೈತೆ

<<ಚೀಸ್ ಕರಗಿದ ಮೇಲೆ ತೆಗೆದು ಕಟ್ ಮಾಡಿ ಸರ್ವ್ ಮಾಡಿ>>
ನ‌ಂತರ ನೀವು ತಿಂದ ಚೀಸ್ ಕರಗಿಸಿಕೊಳ್ಳಲು ಗಣೇಶ್'ಜಿ ಹೇಳಿರುವ ಹಾಡನ್ನು ಹಾಡಿಕೊಂಡೂ ಹಾಗೇ ಸುತ್ತಾಡಿಬನ್ನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಪ್ಯಾರ್ಗೇ ಆಗ್ಬುಟ್ಟೈತೆ
ನಮ್ದೂಕೆ ಪ್ಯಾರ್ಗೇ ಆಗ್ಬುಟ್ಟೈತೆ
ಸಾರು‍ಅನ್ನ ಸೇರುತ್ತಿಲ್ಲ ನಮ್ದೂಕೆ
ಉಪ್ಪಿಟ್ಟಂತು ಇಳೀತಿಲ್ಲ ನಮ್ದೂಕೆ

ಪ್ಯಾರ್ಗೇ ಆಗ್ಬುಟ್ಟೈತೆ
ನಮ್ದೂಕೆ ಪ್ಯಾರ್ಗೇ ಆಗ್ಬುಟ್ಟೈತೆ
ವಾಹ್ ಸೂಪರ್ ಭಲ್ಲೇಜಿ... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by saraswathichandrasmo on
ನಿಮ್ಮ ಶ್ರೀಮತಿಯವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿ. ಹುಟ್ಟಿದ‌ ಹಬ್ಬಕ್ಕೆ ಮಾತ್ರನ‌ ನಳಪಾಕ‌.? ಬೇರೆ ದಿನಗಳು ಹೊಸರುಚಿ ಪ್ರಯೋಗ‌ ನಡೆಯುತ್ತಾ ಇರುತ್ತ‌ ಹೇಗೆ. ನನಗೆ ಹಾಗು ಯಜಮಾನರಿಗೆ ಪಿಜ್ಜಾ ಸೇರೊಲ್ಲ‌. ಮಗಳಿಗೆ ಮಾಡಿ ಕೊಡೋಣ‌ ಎನ್ನಲಿಕ್ಕೆ ಅವಳೇ ಚೆನ್ನಾಗಿ ಮಾಡುತ್ತಾಳೆ.ನೋಡಲಿಕ್ಕೆ ಪಿಜ್ಜಾ ಚೆನ್ನಾಗಿತ್ತು. ರುಚಿ ಹೇಗಿತ್ತು ಅನ್ನುವುದನ್ನು ನಿಮ್ಮ‌ ಶ್ರೀಮತಿಯವರೇ ಹೇಳಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on
>>>ರುಚಿ ಹೇಗಿತ್ತು ಅನ್ನುವುದನ್ನು ನಿಮ್ಮ‌ ಶ್ರೀಮತಿಯವರೇ ಹೇಳಬೇಕು. -ಈ ತಿಂಗಳ ೯ನೇ ತಾರೀಕು, ಪುನಃ ನನ್ನ ಬರ್ತ್ಡೇ ಮಾಡೋಣವಾ ಅಂತ ಕೇಳುತ್ತಿದ್ದಳು! ಧನ್ಯವಾದಗಳು. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.