24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಪ್ರತಿಸ್ಮೃತಿ

August 17, 2012 - 5:51pm
Krishna Kulkarni

 ಪ್ರತಿಸ್ಮೃತಿ:

ವೇದವ್ಯಾಸರು ಧರ್ಮರಾಜನಿಗೆ ದ್ವೈತವನದಲ್ಲಿ "ಪ್ರತಿಸ್ಮೃತಿಯನ್ನು" ಬೋಧಿಸಿದ್ದರಂತೆ.

ಪ್ರತಿಸ್ಮೃತಿ ಎಂದರೆ- ಇದರಿಂದ ಮನುಶ್ಯ ದೂರಪ್ರವಾಸವನ್ನು ಅತಿ ಕಡಿಮೆ ಅವಧಿಯಲ್ಲಿ ಕ್ರಮಿಸುವದಾಗಿತ್ತಂತೆ. 

ಇದನ್ನು ಅರ್ಜುನನಿಗೂ ಹೇಳಿದ್ದರಂತೆ - ಮತ್ತು ಇದನ್ನು ಉಪಯೋಗಿಸಿಕೊಂಡು ದೇವಲೋಕಕ್ಕೆ ಹೋಗಲೂ ಹೇಳಿದ್ದರಂತೆ.

ಈಗ ಅದರ ಮಾಹಿತಿ ಸಿಕ್ಕರೆ ಎಷ್ಟು ಒಳ್ಳೆಯದಲ್ಲವೇ?

 

ಕೃಷ್ಣ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by makara on

ಕುಲಕರ್ಣಿ ಸರ್,
ಈ ರೀತಿಯ ವಿಷಯವನ್ನು ನಾನು ಚಾಣಕ್ಯ ಚಂದ್ರಗುಪ್ತರ ಕತೆಯನ್ನೊಳಗೊಂಡ ಮುದ್ರಾಮಂಜೂಷದ ಕನ್ನಡ ಅವತರಿಣಿಕೆಯಲ್ಲಿ ಓದಿದ ನೆನಪು. ಅಥವಾ ಈ ವಿಷಯವನ್ನು ಚಾಣಕ್ಯ ತನ್ನ ಅರ್ಥಶಾಸ್ತ್ರದಲ್ಲಿ ಪ್ರಸ್ತಾವಿಸಿರುವಂತೆ ನೆನಪು. ನನ್ನ ಬಳಿ ಆ ಎರಡೂ ಪುಸ್ತಕಗಳು ಇಲ್ಲ :((. ಇರಲಿ, ಪ್ರತಿಸ್ಮೃತಿ ಎನ್ನುವ ಹೊಸ ವಿಷಯವನ್ನು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Krishna Kulkarni on

ಶ್ರೀಧರ್ ಅವರಿಗೆ

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಓದುವುದು ಟಿಪ್ಪಣಿಮಾಡುವುದು ನನ್ನ ಅಭ್ಯಾಸ. ಬಹುಷಃ ತಂದೆಯಿಂದ ಬಂದ ಬಳುವಳಿ.
6-8 ವರ್ಷಕ್ಕೆ ಮನೆಯಲ್ಲಿ ಸಂಸ್ಕೃತ, ಮರಾಠಿ, ಕನ್ನಡದ ಚಿಂತನೆಗಳನ್ನು ಕೇಳಿ ಓದುತ್ತ ಬೆಳೆದವನು ನಾನು.
ಆಗಾಗ ಇಂಥ ವಿಷಯಗಳು ಓದಿದಾಗ ವಿಸ್ಮಯಗೊಳ್ಳುತ್ತೇನೆ ಮತ್ತು ಯಾರೊಂದಿಗಾದರೂ ಹಂಚಿಕೊಳ್ಳಬಯಸುತ್ತೇನೆ.

ನಿಮ್ಮಂಥವರು ಸಿಕ್ಕುವುದೇ ಅಪರೂಪ.

ನಿಮಗೆ ಪಂಢರಿನಾಥಾಚಾರ್ಯ ಗಲಗಲಿ ಯವರು ಬಹುಷಃ ಗೊತ್ತಿರಬೇಕು ಅನ್ನಿಸುತ್ತದೆ.
ನಾನು ಅವರ ಕಟ್ಟಾ ಅಭಿಮಾನಿ, ಅವರ ಸಾಹಿತ್ಯವನ್ನು ಒಂದೆಡೆ ತರುವ ಬಯಕೆ ಇದೆ.
ಅದೊಂದು ವಿಶ್ವವಿದ್ಯಾಲಯ- ಅದಕ್ಕೆ ಸಂಬಂಧಿಸಿದವರಾದಾರು ನಿಮ್ಮ ಲಿಸ್ಟಿನಲ್ಲಿದ್ದರೆ ದಯವಿಟ್ಟು ತಿಳಿಸಿ.

ಕೃಷ್ಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

http://www.google.co...

ಕುಲಕರ್ಣಿಗಳೆ,
ಗೂಗಲ್ ಸರ್ಚ್ ಇಂಜಿನ್ನಿನಲ್ಲಿ ನೋಡಿದಾಗ ಪಂಡಿತ ಗಲಗಲಿಯವರ ಬಗ್ಗೆ ತಿಳಿಸುವ ಮೇಲಿನ ಬರಹ ದೊರೆಯಿತು. ನಿಮ್ಮ ದೆಸೆಯಿಂದ ಅಂತಹ ಮಹನೀಯರ ಬಗ್ಗೆ ತಿಳಿಯುವಂತಾಯಿತು. ಅವರದೇ ಆದ ವೆಬ್ ಸೈಟ್ ಕೂಡಾ ಇದೆ. ಅದರ ಕೊಂಡಿ ಕೂಡಾ ನಿಮಗೆ ಮೇಲಿನ ಬರಹದಲ್ಲಿ ದೊರೆಯುತ್ತದೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Krishna Kulkarni on

ಶ್ರೀಧರ್ ಅವರೆ,

ಈ ಕೊಂಡಿ ನನಗೆ ಗೊತ್ತಿದೆ. ಇದು ಅಷ್ಟು ಸಂಪೂರ್ಣ ಮತ್ತು ಸಮಗ್ರವಾಗಿಲ್ಲ ಎಂದು ನನ್ನ ಅಭಿಮತ. ಅವರ ಸಮಗ್ರ ಕೃತಿಗಳು ಓದಲು ತಿಳಿದುಕೊಳ್ಳಲು, ಅಭ್ಯಸಿಸಲು ಈ ಕೊಂಡಿಯಲ್ಲಿ ಉಪಾಯಗಳಿಲ್ಲ.

ಅವರ ಭಾಷೆ, ಅವರ ಜ್ಞಾನ, ಅವರ ಶಬ್ದಗಳ ರಸೋತ್ಪತ್ತಿ ಅವರ ಸಂಸ್ಕೃತದ ಪಾಂಡಿತ್ಯದೊಂದಿಗೆ ಕನ್ನಡಿಕರಿಸಿದ ಸರಳತೆ, ಇವೆಲ್ಲ ಓದುಗರಿಗೆ ಲಭ್ಯವಾಗ ಬೇಕು. ಅವರ ಜ್ಞಾನ ಸಾಮ್ರಾಜ್ಯದಲ್ಲಿ ಇನ್ನೂ ಅನೇಕ ಬರಹಗಳು ಬಹುಷಃ ಪ್ರಕಟಗೊಂಡಿರಲಿಕ್ಕೂ ಇಲ್ಲ. ಅವರ ಒಂದು ಕನ್ನಡ ಸಾಲು ನೋಡಿ -

" ನಲ್ಲೆಯ ಗಲ್ಲಕೆ ಪುಲ್ಲ ಗುಲಾಬಿಯ ಗುಲ್ಲನು ನಾಚಿಕೆ ತಂದಿತ್ತು |
ಸಂಜೆಯ ಛವಿ ಗುಲಗಂಜಿಯ ಸಿರಿಮುಖ ಕುಂಕುಮ ಕರಡಿಕೆಯಾಗಿತ್ತು |"

ಯಾಕೋ ಗೊತ್ತಿಲ್ಲ ಇವೆಲ್ಲ ನಮ್ಮ ಮುಂದಿನ ಪೀಳಿಗೆಗೆ ದೊರಕುವಂತಾಗಬೇಕು ಅನ್ನಿಸುತ್ತದೆ. ಇದು ಒಬ್ಬರಿಂದಾಗುವ ಕೆಲಸವಲ್ಲ.

ಅದಕ್ಕೆ ಹೇಳಿದೆ- ಅವರೊಂದು ವಿಶ್ವವಿದ್ಯಾಲಯ !

ಕೃಷ್ಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಒಳ್ಳೆಯ ಮಾಹಿತಿಗೆ ಧನ್ಯವಾದಗಳು ಶ್ರೀ ಶಂಕರಾಚಾರ್ಯರು ಮನೋವೇಗದಲ್ಲಿ ಸಂಚರಿಸುತ್ತಿದ್ದರು ಎಂದು ಓದಿದ ನೆನಪು
>>ಈಗ ಅದರ ಮಾಹಿತಿ ಸಿಕ್ಕರೆ ಎಷ್ಟು ಒಳ್ಳೆಯದಲ್ಲವೇ?<<
ಈಗ ಈ ಮಾಹಿತಿ ದೊರೆತರೆ ಅದರಿಂದ ಕೆಡುಕುಗಳೆ ಜಾಸ್ತಿ
ಧನ್ಯವಾದಗಳೊಂದಿಗೆ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Krishna Kulkarni on

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,
ಬೆಂಕಿಯನ್ನು ಎರಡೂ ರೀತಿಯಲ್ಲಿ ಉಪಯೋಗಿಸಬಹುದು, ಅದು ಉಪಯೋಗಿಸುವವರ ದೃಷ್ಟಿಯನ್ನು ಅವಲಂಬಿಸಿರುತ್ತದೆ.
ಈಗಲೂ ಅಣು ವಿಜ್ಞಾನದ ಬಗ್ಗೆ ಇದೇ ರೀತಿ ಚರ್ಚೆಗಳು ನಡೆಯುತ್ತಿರುತ್ತವೆ. ಆದರೆ ಇಂದಿಗೂ ಮಾನವೀಯ ಗುಣಗಳುಳ್ಳ ಜನರು ಲಭ್ಯವಿದ್ದಾರೆ. ಅಬ್ದುಲ್ ಕಲಾಂರನ್ನೇ ನೋಡಿ.

ಕೃಷ್ಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.