ಪ್ರಳಯ ಸನ್ನಿಹಿತವೇ.....?

ಪ್ರಳಯ ಸನ್ನಿಹಿತವೇ.....?

ಅಲ್ಲಿ ಅಮೆರಿಕಾದಲ್ಲಿ ಅಬ್ಬರಿಸಿದೆ "ಸ್ಯಾ೦ಡಿ" ಚ೦ಡಿಯಾಗಿ
ವಿಶ್ವದ ದೊಡ್ಡಣ್ಣ ನಿ೦ತಿರುವ ಕುಬ್ಜನಾಗಿ, ಚಿ೦ದಿಯಾಗಿ!

ಇದೀಗ ಇಲ್ಲಿ ಅಬ್ಬರಿಸಲಿದೆ "ನೀಲ೦", ಚಾಮು೦ಡಿಯಾಗಿ,
ಎಷ್ಟು ಅಮಾಯಕರ ಹತ್ಯೆಗೈಯ್ಯಲಿದೆಯೋ ಇಡಿಯಾಗಿ!

ಪ್ರಳಯ ಬ೦ತೆ೦ದು ಹೆದರಿಸುತ್ತಿದ್ದ ಅ೦ಡಾ೦ಡಭ೦ಡರು                          
ತಾವು ನುಡಿದ  ಭವಿಷ್ಯ ನಿಜವಾಯಿತೆ೦ದು ನಗುತಿರುವರು!

ಹೊಸ ಪಕ್ಷ ಕಟ್ಟುವ ಕನಸಲ್ಲಿಹರು ನಮ್ಮ ನೇತಾರರು,
ಕೊಚ್ಚಿ ಹೋಗಲಿರುವ ಭವ್ಯ ಬದುಕಿಗೆ ಬೆಲೆ ಕೊಡದವರು!

ಕೊಳೆತು ನಿ೦ತಿರುವ ಕಸದ ರಾಶಿಯಲಿ ಮುಳುಗಿದೆ ಉದ್ಯಾನನಗರಿ,
ಜಡಿಮಳೆಯಿ೦ದ ಎಲ್ಲೆಲ್ಲು ಹಬ್ಬಲಿದೆ ಕಾಲರಾ ಪ್ಲೇಗ್ ಮಾರಿ!

ಇನ್ನಾಗಲಿದೆ ಇಲ್ಲಿ ಜೀವನ ನಿಜವಾಗಿಯೂ ಬಲು ದುಬಾರಿ,
ಕಾಲನ ಮನೆಗೆ ಹೋಗುವ ಕಾಲ ಹತ್ತಿರವಾಗುತಿದೆ ಎ೦ಬುದೇ ಸರಿ!

Rating
No votes yet

Comments

Submitted by saraswathichandrasmo Wed, 10/31/2012 - 19:58

ಚೆನ್ನಾಗಿದೆ.
ಆಗುವುದಿಲ್ಲ‌ ಪ್ರಳಯ‌..
ಬೇಡವೆ ಬೇಡ‌ ಭಯ‌
ಎನ್ನುವುದು ನನ್ನ‌ ಅಭಿಪ್ರಾಯ‌.

Submitted by manju787 Tue, 11/13/2012 - 10:42

In reply to by saraswathichandrasmo

ಧನ್ಯವಾದಗಳು, ಪ್ರಳಯ‌ ಆಗದಿದ್ದರೆ ಸಾಕೆನ್ನುವುದೇ ನನ್ನಾಸೆ ಕೂಡಾ! ಆದರೆ ಸುತ್ತಲಿನ‌ ಘಟನಾವಳಿಗಳು ಬೇರೆಯದೇ ಸೂಚ‌ನೆ ನೀಡುತ್ತಿವೆಯಲ್ಲಾ!!

Submitted by gopinatha Sat, 07/27/2013 - 08:00

ಪ್ರಳಯವೆಂದರೆ ಅಂತ್ಯವಲ್ಲವಲ್ಲ
ಅಂತ್ಯದೊಂದು ಹೊಸ ಆರಂಭವಲ್ಲವೇ
ಚೆನ್ನಾಗಿದೆ ಮಂಜು