ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › ಪ್ರಶಾಂತ ಎಂ.ಸಿ. ರವರ ಬ್ಲಾಗ್

ಅ, ಆ, ಇ, ಈ....

ಭಾವನೆಗಳ ಬೆನ್ನೇರಿ...

ಒಳ್ಳೆಯ ಹುಡುಗಿ ಶಿಲ್ಪಶ್ರೀ ಇನ್ನಿಲ್ಲದೆ ಹೋದಳು

September 13, 2008 - 3:39pm — ಪ್ರಶಾಂತ ಎಂ.ಸಿ.
Shilpashree-2-2.jpg

ಆ ಹೆಣ್ಣುಮಗುವಿನ ಹೆಸರು ಶಿಲ್ಪಶ್ರೀ. ಮಗುವೇ ಆಕೆ. ಇನ್ನು ಹೆಸರಿಗೆ ಅನ್ವರ್ಥ ಅವಳು. ಆಕೆಯ ಗುಣ, ನಡೆ ನುಡಿ, ಸಂಸ್ಕಾರ...ಎಲ್ಲದರಲ್ಲು ಶಿಲ್ಪದಂತ ಸುಂದರ ಕೆತ್ತನೆಯಿತ್ತು.

ಆಕೆ ನಮ್ಮ ಸ್ನೇಹಿತೆ. ನಮ್ಮ ಸುವರ್ಣ ನ್ಯೂಸ್‌ ಚಾನೆಲ್‌ನ ನನ್ನ ಸಹೋದ್ಯೋಗಿಳೆಲ್ಲರ ನೆಚ್ಚಿನ ಶಿಷ್ಯೆ. ಅವಳ ಬರಹ, ನಮ್ಮೆಲ್ಲರಿಗೆ ಅವಳ ವ್ಯಕ್ತಿತ್ವವನ್ನು ಆ ಮೂಲಕ, ಆಕೆಯ ಗೆಳೆತನವನ್ನು ನಮಗೆ ನೀಡಿತ್ತು. ಕಳೆದ ೫-೬ ತಿಂಗಳಿಂದಲೂ ನಮಗೆ ಆಕೆ ಪರಿಚಯ. ಫೋನ್‌ ಮೂಲಕ ಆಗಿದ್ದಾಂಗೆ ಆರಂಭವಾದ ಸ್ನೇಹ ಹಾಲಿನಂತಿತ್ತು. ಇದಕ್ಕಿದ್ದಂತೆ ಶುಕ್ರವಾರ ರಾತ್ರಿ(೦೬-೦೯-೦೮) ನಮ್ಮ ಸರ್‌ ಶಿವಸ್ವಾಮಿ ಫೋನ್ ಮಾಡಿ, ಹೀಗೀಗ್ಗೆ ಎಂದರು. ಎಚ್ಚೆತ್ತ ನನಗೆ ರಾತ್ರಿ ಪೂರ ನಿದ್ದೆಯಿಲ್ಲ. ಬಹುಶ ಸುದ್ದಿ ತಿಳಿದ ನನ್ನ ಎಲ್ಲ ಗೆಳೆಯರದ್ದೂ ಇದೇ ಸ್ಥಿತಿ. ಒಂದು ರೀತಿ ತಳಮಳ. ಸುದ್ದಿ ಸುಳ್ಳಾಗಲಿ ಎಂಬ ಹಂಬಲ. ಅದೇ ಜಾಡಿನಲ್ಲಿ ಬೆಳಗು ಕಂಡ ನಾನು, ಪೇಪರ್‍ ಮೊರೆ ಹೋದೆ.

ಸುದ್ದಿ ನಿಜವೇ ಆಗಿದ್ದರೆ ಬಂದಿರುತ್ತೆ, ಆ ಮೂಲಕ ಸುದ್ದಿ ಸುಳ್ಳಾಗಿರಲಿ ಎಂಬ ಹಪ ಹಪಿಕೆ ನನ್ನದಾಗಿತ್ತು. ಆದರೆ, ಕಣ್ಣು ಹಾಯಿಸಿದ್ದೇ ತಡ ಕಣ್ಣಿಗೆ ಬಿದ್ದ ಸುದ್ದಿ ಕಂಡು ದುಃಖ ಕಟ್ಟೆ ಒಡೆಯಿತು. ಅದೇಕೋ ಒಬ್ಬ ಹತ್ತಿರದ ಸಂಬಂಧಿ ಕಳೆದುಕೊಂಡ ನೋವು. ದುಃಖ. ಹತಾಷೆ. " ಇಷ್ಟೇನಾ....ಇಷ್ಟೇನಾ ನಮ್ಮ ಜೀವನಾ....." ಎಂಬ ಒಂದೆರಡು ಪದಗಳಷ್ಟೇ,,,ಬಿಟ್ಟರೇ ಬೇರೇನು ಕಾಣದಂತಾಗಿತ್ತು. ಅಷ್ಟ್ರಲ್ಲಿ ಸರ್‌, ಬೇಗ ಬಾ. ಬೌರಿಂಗ್ ಆಸ್ಪತ್ರೆಗೆ ಹೋಗೋಣ" ಅಂದ್ರು. ತಕ್ಷಣವೇ ಆಫೀಸ್‌ಗೆ ದಾಂಗುಡಿಯಿಟ್ಟೆ. ಕೂಡಲೇ ಆಸ್ಪತ್ರೆಗೆ ನಾನು, ಪ್ರವೀಣ, ನಮ್ಮ ಶಿವಸ್ವಾಮಿ ಸರ್‌ ಹೋದೆವು. ಅಲ್ಲಿದ್ದ ಶಿಲ್ಪಳ ಕೆಲ ಗೆಳೆಯ-ಗೆಳತಿಯರ ದುಃಖದ ದೇಹ ಹೊತ್ತು ತೂಗಾಡುತ್ತಿದ್ದರು. ಮತ್ತೆ ಮೂರು ದೇಹಗಳು ಆ ಗುಂಪು ಸೇರಿದೆವು. ಪೊಲೀಸರ ಪೆನ್ನು ಮಾಹಿತಿ ಸಂಗ್ರಹಿಸುತ್ತಿತ್ತು. ಕಪ್ಪು ಅಕ್ಷರಗಳು, ಬಿಳಿ ಕಾಗದದ ರೂಪ ಕೆಡಿಸುತ್ತಿದ್ದವು. ನಿತ್ಯ ಅದೇ ಕಪ್ಪು ಅಕ್ಷರಗಳೊಂದಿಗೆ ಒಡನಾಡುವ ನಮಗೆ, ಅದೇಕೋ ಶುಕ್ರವಾರದಂದು ಅಶುಭದ ಪ್ರತಿಮೆಗಳಂತೆ ಅಚ್ಚೊತ್ತುತ್ತಿದ್ದ ಅಕ್ಷರಗಳು ಶಿಲ್ಪಳೆಂಬ ಹೆಣ್ಣುಮಗುವಿನ ಬದುಕಿನ ಅಂತ್ಯವನ್ನು ಬರೆಯುತ್ತಿದ್ದವು. ಅಲ್ಲಿಯವರೆಗೂ ನಿಜವಾಗಿ ನಮ್ಮ ದುಃಖದ ಕಟ್ಟೆ ಒಡೆದಿರಲಿಲ್ಲ. ಪೊಲೀಸರ ಮಹಜರಿಗೆ ಸಹಿ ಹಾಕಿ ನಾನು ಮತ್ತು ಗೆಳೆಯರು ಶವಾಗಾರದ ಒಳ ಹೊಕ್ಕುತ್ತಿದ್ದಂತೆ, ಕಣ್ಣೀರ ಕೋಡಿ ಹೊಡೆಯಿತು.

ಇನ್ನೂ ಶಿಲ್ಪಶ್ರೀಯ ಅಪ್ಪ ಅಮ್ಮ ಬಂದಿರಲಿಲ್ಲ. ಆದರೆ ಆಕೆ ಒಂದು ತಿಂಗಳಿಂದ ಕೆಲಸ ಮಾಡುತ್ತಿದ್ದ " ದಿ ಸಂಡೇ ಇಂಡಿಯನ್‌ " ಪತ್ರಿಕೆಯ ಸಹೋದ್ಯೋಗಿ ಬಳಗ ಅಲ್ಲಿತ್ತು. ಪತ್ರಿಕೆಯ ಎಡಿಟರ್‍ ಸತೀಶ್‌ ಚಪ್ಪರಿಕೆ, ಶಿಲ್ಪಳ ಗೆಳತಿಯರು ಆಕೆಯೊಂದಿಗೆ ಕಳೆದ ಕಡೆಯ ಕ್ಷಣಗಳನ್ನು ಮೆಲುಕುತ್ತಿದ್ದರು. ಛೇ...ಇಷ್ಟೇನಾ....ಇಷ್ಟೇನಾ...ಬದುಕು...ಇದೇ ಮಾತು ನನ್ನಂತೆ, ಎಲ್ಲರಲ್ಲಿ. ೩ ತಿಂಗಳು ನಮ್ಮೊಂದಿಗೆ ಕಳೆದ ಆ ಸ್ನೇಹಿತೆಯ ಸಾವು ನಿಜಕ್ಕೂ ನಮ್ಮೆಲ್ಲರಿಗೂ ಬರ ಸಿಡಿಲೇ ಆಗಿತ್ತು. ಅವರಪ್ಪ ಅಮ್ಮ ಬರುತ್ತಿದ್ದಂತೆ, ಬೌರಿಂಗ್ ಆಸ್ಪತ್ರೆಯ ಆ ಸ್ಥಳ ದುಃಖದ ಸೌಧದಂತೆ. ಅಲ್ಲಿದ್ದ ನಾವೆಲ್ಲಾ ಜೀವಂತ ಶವಗಳಂತೆ ಕಾಣುತ್ತಿದ್ದೆವು. ನಿಜಕ್ಕೂ ಅದು ಮರೆಯಲಾಗದ ಕಾರ್ಕೋಟಕ ಕಹಿ ನೆನಪು. ಅವರಮ್ಮನ ಆ ಹೆಪ್ಪುಗಟ್ಟಿದ ಶೋಕ, ಅವರಪ್ಪರ ಅಸಹಾಯಕ ನೋಟ, ಬಡಕಲು ದೇಹ, ಉಸಿರೆಳೆದುಕೊಳ್ಳಲೂ ಆಗದ ಸ್ಥಿತಿ ಕಂದು, ಈ ತಾಯಿ ಅದ್ಹೇಗೆ ಅತ್ತೀತು. ಅದ್ಹೇಗೆ ಮಗುವನ್ನು ಕಳೆದುಕೊಂಡ ದುಃಖವನ್ನು ಸಹಿಸಿಕೊಂಡೀತು. ಅಂತಾಯಿತ್ತು ನನ್ನ ಮನಸು.

ಅವರಮ್ಮ, "ನೀವೇನಾ ನನ್ಮಗಳು ಇಂಟರ್‍ ಷಿಪ್ ಮಾಡಿದ ಸುವರ್ಣನ್ಯೂಸ್ ಚಾನೆಲ್‌ನವರು" ಅನ್ನೋವಾಗ "ಹೌದು" ಅಂತ ಉತ್ತರ ಕೊಡಲಿಕ್ಕೂ ನಮ್ಮ ಕಣ್ಣು ತೆರೆದುಕೊಳ್ಳಲಿಲ್ಲ. ಹಾಗೆ, ಕಣ್ಣಿರ ಮೂಲ ಸೆಲೆ ಎಂಬತ್ತಿತ್ತು ಆ ತಾಯಿಯ ಕಣ್ಣುಗಳು. ಆ ಕ್ಷಣ ಒಬ್ಬ ಸ್ನೇಹಿತೆ, ಸೋದರಿ, ಒಂದು ಮಗುವಿನ ಹೃದಯ ಬಡಿತ ನಿಂತಿತ್ತು. ಅಷ್ಟೇ, ಆದರೆ ಆಕೆಯ ಮುದ್ದು ಮುದ್ದು ಮಾತು, ತಂಗಿಯಂತ ನಡೆವಳಿಕೆ, "ಸರ್‌.ಸರ್‌". ಎನ್ನುತ್ತಿದ್ದ ಶಿಲ್ಪಳ ಮಾತುಗಳು ನಮ್ಮೆಲ್ಲರ ಸ್ಮೃತಿ ಪಟಲದಲ್ಲಿ ಅನುರಣಿಸುತ್ತಿತ್ತು. ಅಚ್ಚೊತ್ತಿತ್ತು. ಇದೊಂದು ಸ್ನೇಹಿತರ ದುರಂತ ಕ್ಷಣ. ಕರಾಳ ನೆನಪು.

- ಎಂ.ಸಿ. ಪ್ರಶಾಂತ್

  • ಪತ್ರಕರ್ತೆ
  • ಶಿಲ್ಪಶ್ರೀ
  • ಸಹೋದ್ಯೋಗಿ
~.~
  • ಪ್ರಶಾಂತ ಎಂ.ಸಿ. ರವರ ಬ್ಲಾಗ್
  • Login or register to post comments
  • 322 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 14, 2008 - 11:42am — yebbram

ಉ: ಒಳ್ಳೆಯ ಹುಡುಗಿ ಶಿಲ್ಪಶ್ರೀ ಇನ್ನಿಲ್ಲದೆ ಹೋದಳು

yebbram's picture

ಮೊನ್ನೆ ಎಲ್ಲೊ ಪೇಪರ್ನಲ್ಲಿ ಸುದ್ದಿ ಓದಿದ್ದೆ. ಆಗಲೇ ಒಂಥರಾ ಬೇಜಾರಾಗಿತ್ತು. ಆಕ್ಸಿಡೆಂಟ್ ಅಂಥಾ ದುರ್ಘಟನೆಗಳಲ್ಲಿ ಯಾರೇ ಮಡಿದರು ತುಂಬ ದುಃಖ ಆಗುತ್ತೆ. ಅದರಲ್ಲೂ ಚಿಕ್ಕ ವಯಸ್ಸಿನವರು, ಇನ್ನೂ ಬಾಳಿ ಬದುಕ ಬೇಕಾದವರು ಹೋದರಂತೂ ಕರಳು ಕಿವುಚಿ ಬಂದಂತಾಗುತ್ತದೆ. ವೈಯಕ್ತಿವಾಗಿ ಪರಿಚಯವಿಲ್ಲದ ನಮ್ಮಂಥವರಿಗೆ ಈ ಥರಾ ಅನ್ನಿಸುವಾಗ, ಇನ್ನು ಆಕೆಯ ಹತ್ತಿರದವರಿಗೆ, ತಂದೆ ತಾಯಿಗಳಿಗೆ ಇನ್ನೆಷ್ಟು ದುಃಖ ಆಗಿರಬೇಡ? ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ. ತಂದೆ ತಾಯಿ ಬಂಧು ಮಿತ್ರರಿಗೆ ದುಃಖ ಭರಿಸುವ ಶಕ್ತಿ ಆ ಪರಮಾತ್ಮ ಕೊಡಲಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮತ್ತದೇ ಬೇಸರ...ಅದೇ ಸಂಜೆ...
  • ವಿದೇಶದಲ್ಲಿನ ವಾಸ ಹೆತ್ತವರಿಂದ ಹಾಗೂ ಬಂದು ಮಿತ್ರರಿಂದ ದೂರವಿರೋ ವನವಾಸ!!
  • ಬಸುರಿಯ ಮಗು ಮಾಯ... !
  • ಒಳ್ಳೆಯ ಸುದ್ದಿ
  • ಶಿಲ್ಪಾ ಮಾತಾಡು ಪ್ಲೀಸ್..!
Syndicate content

ಲೇಖಕರು

ಪ್ರಶಾಂತ ಎಂ.ಸಿ.'s picture

ಪೂರ್ಣ ಹೆಸರು
ಪ್ರಶಾಂತ ಎಂ.ಸಿ.

ಪರಿಚಯ

ವೃತ್ತಿಯಿಂದ ಪತ್ರಕರ್ತ. ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ಕೆಲಸ. ಹಾಡುವುದು, ಓದುವುದು ಮತ್ತು ಬರೆಯುವುದು ಇಷ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚಂದ್ರ ಚೆಲ್ಲುವ ಬೆಳದಿಂಗಳು
  • ನಗುವ ನಯನ, ಮಧುರ ಮೌನ
  • ವೈಕುಂಠ ಏಕಾದಶಿ
  • ಜೀವ ಉಳಿಸಿದ ಬೋಸ್ ಹೆಡ್ ಫೋನ್ !!
  • ಸ್ನೇಹಮಿಲನ ಹಾಜರಾತಿ
  • ಒಲವಿಲ್ಲದೆ
  • ** ಹರೆಯದ ಹೊರೆ **
  • ವಿಶ್ವದ ಅತ್ಯಂತ ಬಲಿಷ್ಠ ಬಾಲಿಕೆ : ವಾರ್ಯಾ ಅಕುಲೋವಾ
  • ಓದಿದ್ದು ಕೇಳಿದ್ದು ನೋಡಿದ್ದು-134 ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!
  • ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • rasikathe
    ಉ: ನಗುವ ನಯನ, ಮಧುರ ಮೌನ
    January 8, 2009 - 1:12am
  • rasikathe
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 12:26am
  • bhasip
    ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
    January 7, 2009 - 11:54pm
  • bhasip
    ಉ: ನಾವು ಅದೆಷ್ಟು ಬಡವರು!
    January 7, 2009 - 11:49pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:41pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:17pm
  • Nagaraj.G
    ಉ: ನಾವು ಅದೆಷ್ಟು ಬಡವರು!
    January 7, 2009 - 11:12pm
  • ಗಣೇಶ
    ಉ: ನಗುವ ನಯನ, ಮಧುರ ಮೌನ
    January 7, 2009 - 11:08pm
  • ಗಣೇಶ
    ಉ: ವೈಕುಂಠ ಏಕಾದಶಿ
    January 7, 2009 - 10:57pm
  • Nagaraj.G
    ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??
    January 7, 2009 - 10:49pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 256 ಅತಿಥಿಗಳು ಆನ್ಲೈನ್ ಇರುವರು.


ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಡೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator