~
ಅ, ಆ, ಇ, ಈ....
ಭಾವನೆಗಳ ಬೆನ್ನೇರಿ...
ಗೆಳತಿ ಪತ್ರ
ಹೂಗಳ ಮಧ್ಯೆ ಇತ್ತಾ ಒಂದೊಂದು ಹೆಜ್ಜೆ
ತುಂತುರಿನ ಸ್ಪರ್ಶ ತಾಕಿದ ಘಳಿಗೆ
ಹರಿಯುವ ನೀರು ಪಾದ ತಾಕಿದ ವೇಳೆ
ನಿನ್ನ ನೆನಪೇ ಗೆಳೆಯಾ....ನಿನ್ನ ನೆನಪೇ....
ಕಾಲ ಮುಂದೆ ಹೋಗುತ್ತಿಲ್ಲಾ..?
ಸೂರ್ಯ ಕಣ್ಣಿಗೆ ಕಾಣುತ್ತಿಲ್ಲಾ..?
ಚಂದಿರನ ಕಾಯೋ ತಾಳ್ಮೆ ನನಗಿಲ್ಲಾ..?
ಹಸಿರಿನ ಮೈ ಮುಟ್ಟೋ ಮಳೆ ಹನಿ
ನನ್ನ ಕೈಯಲ್ಲಿಲ್ಲ...
ಮೋಡದಲ್ಲಿರೋ ಅಕಲ್ಮಶ ಪ್ರೀತಿ
ಸಿಗೋ ನಂಬಿಕೆ ನನಗೆ ಗೆಳೆಯಾ.....
ಮಳೆಯ ರಭಸದಲಿ
ಹಕ್ಕಿ ಇಂಚರ ಕೇಳೋ ತಾಳ್ಮೆ
ಟಪ ಟಪ ಸದ್ದಿನ ತಾಳದ ಹಿಂದೆ
ಕಲ್ಯಾಣಿ ರಾಗದ ಗಾನಮಾಲೆಯ ಕವಿತ್ವ
ಕಣ್ಣನ್ನು ಆಕರ್ಷಿಸೋ ನೀಲಿಬಾನು ನನ್ನ ಕೈಗೆ ಸಿಗೊಲ್ಲ..??
ಮೂಡೋ ಸೂರ್ಯ ಸಿಗುತ್ತಾನೆಂಬ ನಂಬಿಕೆ..?
ನನಗೆ ಗೆಳೆಯಾ....
ಮಧುರ ಕನಸು
ಮಧುರ ಕ್ಷಣವಾಗೇ...
ಮಧುರ ಕ್ಷಣ
ಮಧುರ ನೆನಪಾಗಿಸುವ ನಂಬಿಕೆ
ನನದಲ್ಲವೇ....ಗೆಳೆಯಾ....??

- ಪ್ರಶಾಂತ ಎಂ.ಸಿ. ರವರ ಬ್ಲಾಗ್
- Login or register to post comments
- 152 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಗೆಳತಿ ಪತ್ರ
ಭರವಸೆ ಕಳೆದುಕೊಳ್ಳದಿರಲಿ ಪ್ರಶಾಂತ್.
ಹುಡುಕುತ್ತ ಹೋದರೆ, ಒಂದಲ್ಲ ಒಂದಿನ ನಿಮಗೆ ಬೇಕೆನಿಸಿದ್ದು ಸಿಕ್ಕೀತು. ಅಲ್ಲಿಯವರೆಗೆ ಭರವಸೆಯಿಂದಲೇ ಬದುಕಿ.
ಚೆನ್ನಾಗಿದೆ ಕವಿತೆ.
- ಚಾಮರಾಜ ಸವಡಿ
http://chamarajsavadi.blogspot.com