19
June
2013

ಬದನೇಕಾಯಿಯ ಘರಿಮೆ! - ಜಮನಾದ ಜೋಕುಗಳು - ೧೧

August 3, 2012 - 10:13pm
makara
        ಒಂದಾನೊಂದು ಊರು, ಆ ಊರಿಗೊಬ್ಬ ರಾಜ. ರಾಜನೆಂದ ಮೇಲೆ ಹೊಗಳು ಭಟರು ಇರಲೇ ಬೇಕಲ್ಲವೇ? ಹೊಸದಾಗಿ ಬಂದ ಬಾಣಸಿಗನೊಬ್ಬ ಬದನೇಕಾಯಿಂದ ವಿಶೇಷವಾದ್ದೊಂದು ಖಾದ್ಯವನ್ನು ತಯಾರಿಸಿದ. ಅದು ರಾಜನಿಗೆ ಬಹಳ ಮೆಚ್ಚುಗೆಯಾಯಿತು. ರಾಜ ಆ ಬದನೆ ಕಾಯಿಯ ಖಾದ್ಯದ ಬಗ್ಗೆ ತನ್ನ ಆಸ್ಥಾನದಲ್ಲಿಯೂ ವರ್ಣಿಸಲಾರಂಭಿಸಿದ. ಇಷ್ಟು ಹೇಳಿದ ಮೇಲೆ ಸುಮ್ಮನಿರುತ್ತಾರೆಯೆ ಹೊಗಳು ಭಟ್ಟರು. ಅವರೂ ಬದನೆಯ ಬಗ್ಗೆ ತಮ್ಮ ಪ್ರಶಂಸೆಯನ್ನು ಹೇಳಲಾರಂಭಿಸಿದರು, "ಹೌದು ಮಹಾಸ್ವಾಮಿ ಈ ಬದನೇಕಾಯಿ ಎಂಬ ತರಕಾರಿ ಬ್ರಹ್ಮನಿಗೂ ಬಹಳ ಪ್ರಿಯವಾದದ್ದು, ಅದಕ್ಕೇ! ಬ್ರಹ್ಮ ಅದರ ತಲೆಯ ಮೇಲೊಂದು ಕಿರೀಟವಿಟ್ಟಿದ್ದಾನೆ".  ರಾಜ ಆ ತರಕಾರಿಯನ್ನು ಬಹಳ ಚೆನ್ನಾಗಿದೆಯೆಂದು ಹೊಟ್ಟೆ ಬಿರಿಯುವಷ್ಟು ತಿಂದಿದ್ದ, ಹಾಗಾಗಿ ಸಹಜವಾಗಿಯೇ, ಸಂಜೆಯ ಹೊತ್ತಿಗೆ ರಾಜನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತು, ಆಗ ರಾಜ ಅದೇ ಬದನೇಕಾಯಿಯ ಬಗ್ಗೆ ಹಿಡಿ ಹಿಡಿ ಶಾಪ ಹಾಕಲಾರಂಭಿಸಿದ. ಆಗ ಈ ಭಟ್ಟಂಗಿಗಳು ಪುನಃ ತಮ್ಮ ವರಾತ ಷುರು ಹಚ್ಚಿಕೊಂಡರು, "ಮಹಾಸ್ವಾಮಿ, ಈ ತರಕಾರಿಯನ್ನು ಕಂಡರೆ ಬ್ರಹ್ಮನಿಗೂ ಇಷ್ಟವಿಲ್ಲ, ಅದಕ್ಕೇ ಅದರ ತಲೆಯ ಮೇಲೆ ಮುಳ್ಳನ್ನಿರಿಸಿದ್ದಾನೆ!". 
 
(ವಿ.ಸೂಃಈಗಿನ ಬದನೆಕಾಯಿಗಳಿಗೆ ಮುಳ್ಳೇ ಇರುವುದಿಲ್ಲ, ಆಗ ಬದನೇಕಾಯಿಗಳಿಗೆ ಖಚಿತವಾಗಿ ಮುಳ್ಳುಗಳಿರುತ್ತಿದ್ದವು, ಹಾಗಾಗಿ ಈಗಲೂ ಹಲವಾರು ಪ್ರಾಂತಗಳಲ್ಲಿ ಬದನೆಯನ್ನು ಮುಳ್ಳುಗಾಯಿಯೆಂದೇ ಕರೆಯುತ್ತಾರೆ)
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by partha1059 on

ಹೌದು ಇಂತವರನ್ನು ಭಟ್ಟಂಗಿಗಳು ಅಂತಲೂ ಕರೆಯುತ್ತಾರೆ ಸಮಯಕ್ಕೆ ತಕ್ಕಂತೆ ಬದಲಾಗುತ್ತ ಇರುವ ಇವರು ಕೆಲವೊಮ್ಮೆ ಚಮಚಾಗಳು ಅಂತಲು ಕರೆಯಲ್ಪಡುತ್ತಾರೆ,
ಕತೆಯಂತು ಚೆನ್ನಾಗಿದೆ

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ನಿಮ್ಮ ಮಾತು ನಿಜ ಪಾರ್ಥಸಾರಥಿಗಳೆ, ಇಂತಹವರ ಸಂತತಿ ಇಂದು ಬಹಳಷ್ಟಿದೆ. ಅವರನ್ನೇ ಕೆಲವೊಮ್ಮೆ, ಛತ್ರಿಗಳು, ಪಾಕಡಾ, ಚಾಲೂ, ಬಲ್ ನನ್ಮಗ ಮುಂತಾದ ಹೆಸರುಗಳಿಂದ ಇಂದಿನ ಜಮಾನದಲ್ಲಿ ಕರೆಯುತ್ತೇವೆ.

ಈ ಕಥೆಯನ್ನು ಬಹುಶ: ನಾನು 70ರ ದಶಕದಲ್ಲಿ ಕಸ್ತೂರಿ ಮಾಸ ಪತ್ರಿಕೆಯಲ್ಲಿ ಓದಿದ ನೆನಪು ಮತ್ತು ಇದನ್ನು ಬರೆದವರು ಪ. ರಾಮಕ್ರುಷ್ಣ ಶಾಸ್ತ್ರಿ ಇರಬಹುದೆಂದುಕೊಳ್ಳುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಶ್ರೀಧರ್ ಜಿ....
ಸಚಿನ್ ಜಾಹೀರಾತು ಒಂದರಲ್ಲಿ ನನ್ ಶಕ್ತಿ ರಹಸ್ಯ - ಬೋರ್ನ್ ವಿಟಾ ಅಂದ ಹಾಗೆ ನೆನಪು..(ಜಾಹೀರಾತು ರಗಳೆ ಕಾರಣ ನಾ ಟೀವಿ ನೋಡೋದೇ ಇಲ್ಲ.. ಹಾಗೆಯೇ ಈ ಜಗತ್ತಿನಲ್ಲಿ ಟೀವಿ ಇದ್ದು ಕೇಬಲ್ ಇಲ್ಲದ- (ವೈರ್ -ವೈರ್ ಲೆಸ್ ಯಾವುದೂ ಇಲ್ಲದ ) ಮನೆ ನಮ್ಮದು ಅನ್ಸುತ್ತೆ..! ಟೀವಿ ಗೆ ಕಮ್ಪ್ಯುಟರ್ ಸಂಪರ್ಕ ಕೊಟ್ಟಿರುವೆವು..
ಈಗ ಈ ಪೀಠಿಕೆಗೆ ಕಾರಣ - ನೀವು ಬಹು ಸಕ್ರಿಯರಾಗಿ ಒಂದರ ಹಿಂದೆ ಒಂದು ಸಖತ್ ಬರಹ ಸೇರಿಸುತಿರುವುದು...!!
ಅಂದ್ ಹಾಗೆ ನಾವ್ ಮೀಟ್ ಆಗಿ ೨ ತಿಂಗಳು ಕಳೆಯಿತು....!

ಈ ಭಟ್ಟಂಗಿಗಳು- ಚಮಚಾಗಳು- ಬಗ್ಗೆ ಬಹು ಹಿಂದೆ ಯಾರೋ ಒಬ್ಬರು ಕನ್ನಡದ ಕವಿವರ್ಯರು ಈ ರೀತಿ ಬರೆದ ಹಾಗೆ ಮತ್ತು ನಾ ಓದಿದ ಹಾಗೆ ನೆನಪು

ಹೌದು ಅಂದ್ರೆ ಹೌದು ಅನ್ನುವರು- ಹೌದಪ್ಪಗಳು
ಅಲ್ಲ ಅಂದ್ರೆ ಅಲ್ಲ ಎನ್ನುವರು- ಅಲ್ಲಪ್ಪಗಳು -ಇಲ್ಲಪ್ಪಗಳು

ನನಗೆ ಅನ್ನಿಸುವ ಹಾಗೆ ಈ ತರಹದವರು ಈಗ ಜಾಸ್ತಿ ರಾಜಕೀಯ ನಾಯಕರ ಹಿಂದೆ ಇರುವರು..... (ಇತ್ತೀಚೆ ಅವರಲ್ಲಿ ಹಲವರು- ನಮ್ ರಾಜ್ಯದಲ್ಲಿ ೩-೪ ಬಣದಲ್ಲಿ ಕೆಲವೇ ಸೆಕೆಂಡುಗಳ ಅಂತರದಲ್ಲಿ ಕಾಣಿಸಿಕೊಂಡಿದ್ದರು ..!!)

ಮುಳ್ಳು ಬದನೆ ಕಾಯಿ ಈಗಲೂ ಸಿಗುವುದು-
ಬೆಳೆಯುವರು
ನಾಟಿ ಮುಳ್ಳು ಬದನೆ ತಿಂದವರಿಗೆ ಗೊತ್ತು ಅದರ ರುಚ್ಹೀ....ಈಗಲೂ ಕೆಲವು ಜನ ಆ ತಳಿಯನ್ನು ಕಾಪಾಡುತ್ತಿರ್ವರು.. ಅಂತವರ ಸಂಖ್ಯೆ ಹೆಚ್ಚ್ಹಲಿ..

ಹೈಬ್ರಿಡ್ ಬಂದು ನಾಟಿ ಗೆ ಕುತ್ತು ಬಂತು...

ನಾಟಿ ಮುಳ್ಳು ಬದನೆ ಕಿತ್ತಲು ಹೋಗಿ ಕೈಗೆ ಮುಳ್ಳು ಚುಚ್ಚಿಸಿಕೊಂಡದ್ದು ಇನ್ನು ಮೊನ್ನೆ ಮೊನ್ನೆ ಹಾಗೆ ನೆನಪಿದೆ..

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಸಪ್ತಗಿರಿಗಳೆ,
ನಿಮ್ಮ ಪ್ರತಿಕ್ರಿಯೆಗೆ ಮತ್ತು ಬದನೆಕಾಯಿ ಇನ್ನೂ ಮುಳ್ಳು ರೂಪದಲ್ಲಿ ಅಲ್ಲಲ್ಲಿ ಇರುವ ವಿಶೇಷ ಸಮಾಚಾರ ತಿಳಿಸಿದ್ದಕ್ಕೆ ಧನ್ಯವಾದಗಳು. ಮುಂಚೆಯೇ ಪ್ರತಿಕ್ರಿಯೆಯೊಂದರಲ್ಲಿ ತಿಳಿಸಿದ್ದಂತೆ ಈಗ ಸಧ್ಯ ಹೆಚ್ಚು ಬಿಡುವಾಗಿದ್ದೇನೆ; ಅದನ್ನು ಈ ರೀತಿ ಸಂಪದಿಗರೊಂದಿಗೆ ವಿಚಾರ ವಿನಿಮಯ ಮಾಡೊಕೊಂಡು ಸದ್ವಿನಿಯೋಗ ಮಾಡಿಕೊಳ್ಳೋಣವೆಂದಿದ್ದೇನೆ. ಶುಭರಾತ್ರಿ ಅಲ್ಲಲ್ಲಾ ಶುಭದಿನ ಏಕೆಂದರೆ ನಿಮಗೆ ಹಾಗೂ ಗಣೇಶ್.ಜಿಯವರಿಗೆ ದಿನ ಪ್ರಾರಂಭವಾಗುವುದು ಈಗಿನಿಂದಲೇ ಅಲ್ಲವೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

:) :) :)
ನಮ್ಮಲ್ಲಿ ಮುಳುಗಾಯಿ ಅಂತೀವಿ, ನೀವು ಹೇಳಿದ ಮೇಲೆ ತಿಳಿಯಿತು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಕಡೇ ಪಕ್ಷ ಮಲೆನಾಡ ಸೀಮೆಯಲ್ಲಾದರೂ ಮುಳುಗಾಯಿಗೆ ಮುಳ್ಳಿರುತ್ತವೆ ಅಂದು ಕೊಂಡರೆ ಅಲ್ಲಿಯೂ ಮುಳ್ಳಿಲ್ಲದ ಮುಳುಗಾಯಿಗಳೆ :((
ಹೋಗಲಿ ಬಿಡಿ, ಕಾಲಾಯ ತಸ್ಮೈ ನಮ: .

ಜೋಕನ್ನು ಓದಿ ಆನಂದಿಸಿದ್ದಕ್ಕೆ ನನಗೂ ಸಂತೋಷವಾಯಿತು, ಚಿಕ್ಕೂ :))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.