September 11, 2012 - 10:47pm
ಬದಲಾವಣೆಯ ಗಾಳಿ
ಬದುಕ ತಿರುವುಗಳ ಹಿಂದೆ ಮರೆಮಾಚಿವೆ ಮುಖಗಳು
ನಾವು ಕಂಡಿರದ ಒಳಮುಖಗಳ ನಿಜ ದರುಶನವಿತ್ತು
ಸಂಬಂಧದ ಸಂಕೋಲೆಗಳ ಸಡಿಲತೆಯ ತಿಳಿಸುತ್ತ
ನವವಾಸ್ತವವ ತೋರಿ, ಸಂಬಂಧದ ಸೂಕ್ಷ್ಮತೆಯನು
ದ್ವಂದ್ವದಲಿ ಸಿಲುಕಿಸಿ, ಮೃದು ಮನದೊಡು ಆಟವಾಡಿದೆ
ಹೊಸ ಚಿಗುರು ಬೆಳೆಯುವ ಪ್ರಕೃತಿಯ ನಿಯಮದಂತೆ
ಮುಂದಿನ ತಿರುವಿನಲ್ಲಿ ಹೊಸ ಸಂಬಂಧಗಳು ಸೇರಿ
ಜೀವನದಿ ಬತ್ತದ ಉತ್ಸಾಹವನ್ನಿತ್ತು, ಇರುವ ಚಿಲುಮೆಯ
ನವೀಕರಿಸುತ್ತ, ಬದುಕಿಗೆ ಹೊಸ ದಿಕ್ಕಿನಲ್ಲಿ ಗಮ್ಯವನಿತ್ತು
ಹೊಸ ಬದಲಾವಣೆಯ ಗಾಳಿಯು ಬೀಸಿದೆ ಜೀವನದಲಿ.
- ತೇಜಸ್ವಿ.ಎ.ಸಿ
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ಬದಲಾವಣೆಯ ಗಾಳಿ
ನಿಮ್ಮ ಉತ್ಸಾಹ ಹೀಗೆ ಮುಂದುವರಿಯಲಿ ...ಎಂದು ಆಶಿಸುತ್ತ ....ಒಳ್ಳೆಯ ಕವನ
ಉ: ಬದಲಾವಣೆಯ ಗಾಳಿ
ಗೋಪಾಲ್ ರವರೇ, ನಿಮ್ಮ ಆಶಯಕ್ಕೆ ಧನ್ಯವಾದಗಳು.
ಉ: ಬದಲಾವಣೆಯ ಗಾಳಿ
ತೇಜಸ್ವಿಯವರೆ,
ಸುಂದರ ಸಾಲುಗಳ ಚೆಂದದ ಕವನ. ಅಭಿನಂದನೆಗಳು
ಉ: ಬದಲಾವಣೆಯ ಗಾಳಿ
ಧನ್ಯವಾದಗಳು ಭಾಗ್ವತರೆ.
ಉ: ಬದಲಾವಣೆಯ ಗಾಳಿ
ತೇಜಸ್ವಿಯವರೆ ಅಪರೂಪ ದರ್ಶನ
ಹಾಗೆ
ಅಪರೂಪದ ಕವನ
ಅಭಿನಂದನೆಗಳು
ಪಾರ್ಥಸಾರಥಿ
ಉ: ಬದಲಾವಣೆಯ ಗಾಳಿ
ಪಾರ್ಥ ಸಾರಥಿಯವರೇ, ಇನ್ನು ಮುಂದೆ ಸಂಪದದಲ್ಲಿ ಸಕ್ರಿಯವಾಗಿರುತ್ತೇನೆ. ಧನ್ಯವಾದಗಳು.
ಉ: ಬದಲಾವಣೆಯ ಗಾಳಿ
ತೇಜಸ್ವಿ ಅವರೇ ಉತ್ತಮ ಕವನದೊ೦ದಿಗೆ ಮರಳಿ ಬ೦ದದ್ದು ಸ೦ತಸ ತ೦ದಿದೆ. ಧನ್ಯವಾದಗಳು
ಉ: ಬದಲಾವಣೆಯ ಗಾಳಿ
ಧನ್ಯವಾದಗಳು ಜಯಂತ್. ಹೀಗೆ ಮುಂದುವರಿಸುತ್ತೇನೆ.
ಉ: ಬದಲಾವಣೆಯ ಗಾಳಿ
<<ಹೊಸ ಬದಲಾವಣೆಯ ಗಾಳಿಯು ಬೀಸಿದೆ ಜೀವನದಲಿ>>
ಶುಭವಾಗಲಿ.
ಉ: ಬದಲಾವಣೆಯ ಗಾಳಿ
ಧನ್ಯವಾದಗಳು ನಾಗರಾಜ್ ರವರೇ.
ಉ: ಬದಲಾವಣೆಯ ಗಾಳಿ
ಬದಲಾವಣೆಯ ಗಾಳಿ ನಿಮ್ಮ ಬದುಕಿನಲ್ಲಿ ನಿರಂತರವಾಗಿ ಬೀಸಲಿ
ಉ: ಬದಲಾವಣೆಯ ಗಾಳಿ
ಧನ್ಯವಾದಗಳು ಹರೀಶ್ ರವರೇ