ಈಗಿನಂತೆ 3 ಸದಸ್ಯರು ಮತ್ತು 131 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ದಯೆ ತೋರು ತಾಯೇ!
benaka's picture
ಬೆನಕ
29
May
2006
ಪುಟ
ದಯೆ ತೋರು ತಾಯೇ! ಮುಚ್ಚಂಜೆಯೇಕೋ ಮಬ್ಬಿರುಳು ಮುಚ್ಚಿ ಬಾನನು ಹೊಗೆಯು ಹಚ್ಚ ಹಸಿರಲು ಬೂದಿಯೆರಚಿ ಎಚ್ಚರಗೊಂಡ ಬೆಂಕಿಬೆಟ್ಟವದಿತ್ತು! ತಟ್ಟಿ ತೂಗುತ ಮಗುವ...
ಪ್ರತಿಕ್ರಿಯೆಗಳು: 7
ಹಿಟ್ಸ್ : 1,472
ಪಶ್ಚಾತ್ತಾಪ
tvsrinivas41's picture
02
Aug
2005
ಪುಟ

ತುಂಡ ಅಂತ ರವಿಯ ಮನೆಯಲ್ಲಿ ಎಲ್ಲರೂ ಅವನನ್ನು ಕರೆಯುತ್ತಿದ್ದರು. ಅದಕ್ಕೊಂದು ಹಿನ್ನೆಲೆ ಇದೆ. ಅವನು ಯಾವಾಗಲೂ ಬೌಲಿಂಗ್ ಮಾಡ್ತಾ ಇರ್ತಿದ್ದ. ಅಂಗಡಿಗೆ ಹೋಗಿ ಏನಾದರೂ...

ಪ್ರತಿಕ್ರಿಯೆಗಳು: 0
ಹಿಟ್ಸ್ : 2,413
ಸುಖ- ದುಃಖ - ಖಲೀಲ್ ಗಿಬ್ರಾನನ ಕಲ್ಪನೆಯಲ್ಲಿ
gnanadev's picture
ಡಾ| ಜ್ಞಾನದೇವ್ ಮೊಳಕಾಲ್ಮುರು
19
May
2010
ಪುಟ

...

ಪ್ರತಿಕ್ರಿಯೆಗಳು: 5
ಹಿಟ್ಸ್ : 892
ಸಿಲೋಟೆಂಬ ಮಾನಿಟರ್ ಒಂದೇ ನಮ್ಮ ’ಬುದ್ಧಿಯ ಸುದ್ಧಿಯ’ ಸಂಗ್ರಹಿಸುವ ಅತ್ಯುತ್ತಮ ಪರಿಕರ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೨೮
anilkumar's picture
ಎಚ್.ಎ. ಅನಿಲ್ ಕುಮಾರ್
12
Aug
2010
ಬ್ಲಾಗ್ ಬರಹ

(೧೪೬) ನಿಮ್ಮ ಬುದ್ಧಿಮತ್ತೆಯನ್ನು ಅಂಗವಿಹೀನವೆಂದು ಪರಿಗಣಿಸದ ಒಂದೇ ಮಾನಿಟರ್ ಎಂದರೆ ಬಳಪದ ಸಿಲೋಟು!

(೧೪೭) ದೆವ್ವದ ಬಗ್ಗೆ ಭಯ ಏಕೆಂದರೆ ನಮಗೆ ಹಣೆಯಬರಹದ ಬಗ್ಗೆ...

ಪ್ರತಿಕ್ರಿಯೆಗಳು: 6
ಹಿಟ್ಸ್ : 705
ಕನ್ನಡಿಗನಾಗಿ ಹೆಮ್ಮೆ...
prakashaka's picture
ಪ್ರಕಾಶ್ ಶೆಟ್ಟಿ ಉಳೆಪಾಡಿ
07
Nov
2005
ಪುಟ
ಕನ್ನಡ ಭಾಷೆಯ ಬಗ್ಗೆ ಸುಮಾರು ೨೦೦೦ ವರ್ಷದ ಇತಿಹಾಸವುಳ್ಳ ಭಾರತದ ಮೂರನೇ ಅತೀ ಪ್ರಾಚೀನ ಭಾಷೆ ಕನ್ನಡ (ಸಂಸ್ಕೃತ ಮತ್ತು ತಮಿಳಿನ ನಂತರದ ಸ್ಥಾನ) ವೈಜ್ಞಾನಿಕವಾಗಿಯೂ...
ಪ್ರತಿಕ್ರಿಯೆಗಳು: 1
ಹಿಟ್ಸ್ : 2,059
ಹುಡುಗರು ಚಿತ್ರ ವಿಮರ್ಶೆ
uniquesupri's picture
ಸುಪ್ರೀತ್.ಕೆ.ಎಸ್
13
May
2011
ಲೇಖನ

ಸಿನೆಮ ಎನ್ನುವುದು ಪಕ್ಕಾ ಮನರಂಜನೆಯ ಸರಕು. ಅದು ಎಲ್ಲಿಂದಾದರೂ ಬರಲಿ, ಯಾವ ಮಾರ್ಗದಲ್ಲಾದರೂ ಸೃಷ್ಟಿಯಾಗಿರಲಿ ನನಗದರ ಗೊಡವೆ ಬೇಡ. ನನಗೆ ಮಜಾ ಬೇಕು...

ಪ್ರತಿಕ್ರಿಯೆಗಳು: 2
ಹಿಟ್ಸ್ : 1,066
ಕನ್ನಡ ಬೇಗರಣ ಕಟ್ಟಳೆಗಳು
ಸಂಗನಗೌಡ's picture
ಸಂಗನಗೌಡ
25
Aug
2006
ಬ್ಲಾಗ್ ಬರಹ

ಈ ಕೆಳಗಿನ ಇಚಾರವನ್ನು, ದಯಮಾಡಿ ಗಮನವಿಟ್ಟು ಓದಿರಿ, ಇದರಲ್ಲಿ ತಪ್ಪು ಕಂಡರೆ, ತಿಳಿಸಿ.

ಕನ್ನಡದ ನಿಜ ಅಕ್ಕರಪಟ್ಟಿ :-

ದನಿಗಳು :- ಅ,ಆ,ಇ,ಈ,ಉ,ಊ,ಎ,ಏ,ಐ,ಒ,ಓ,ಔ,ಅಂ...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,566
ಒಂದು ರೋಗದ ಸಾವಿನ ಸುತ್ತಮುತ್ತ………..
naasomeswara's picture
ನಾ.ಸೋಮೇಶ್ವರ
07
May
2010
ಬ್ಲಾಗ್ ಬರಹ

ಒಂದು ರೋಗದ ಸಾವಿನ ಸುತ್ತಮುತ್ತ………..

ನನ್ನ ಬಾಲ್ಯ ಕಾಲದಲ್ಲಿ ಒಂದು ರೋಗ...

ಪ್ರತಿಕ್ರಿಯೆಗಳು: 14
ಹಿಟ್ಸ್ : 1,078
ನಾಟಿ "ಇಲಾಜು" - ಒಂದು ಪ್ರಬಂಧ
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
30
Dec
2011
ಲೇಖನ

 

ನಾನು ಹೈಸ್ಕೂಲಿನಲ್ಲಿದ್ದಾಗ ಮಣಿಗಂಟಿನ ಉಳುಕು ನೋವಾಗಿತ್ತು. ಫುಟ್ ಬಾಲ್ ಆಡುವಾಗಲೋ...

ಪ್ರತಿಕ್ರಿಯೆಗಳು: 8
ಹಿಟ್ಸ್ : 171
ಕಾಂಪ್ಲೆಕ್ಸ್ friendship
bhalle's picture
ಶ್ರೀನಾಥ್ ಭಲ್ಲೆ
13
Dec
2009
ಪುಟ
iendship’ನಲ್ಲಿ ನಾನಾ ವಿಧ....
ಪ್ರತಿಕ್ರಿಯೆಗಳು: 4
ಹಿಟ್ಸ್ : 1,313

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಬರೆಯಲು ಏನೋ ಬೇಜಾರು

ಬರೆಯಲು ಏನೋ ಬೇಜಾರು

facebook dangerಫೇಸ್ ಬುಕ್ ಆಗಮನದಿಂದ ಬ್ಲಾಗು ಹಾಗೂ ಸಮುದಾಯ ಪೋರ್ಟಲುಗಳಲ್ಲಿ ಚಟುವಟಿಕೆಗಳು ಕಡಿಮೆಯಾಗುತ್ತಿವೆಯಲ್ಲ ಎಂದು ಇತ್ತೀಚೆಗೆ ಗೆಳೆಯರೊಂದಿಗೆ ಮಾತನಾಡುವಾಗ ಕಳವಳ ಪಟ್ಟುಕೊಳ್ಳುತ್ತಿದ್ದೆವು. ಸಂಪದದಲ್ಲಿ ಇತ್ತೀಚೆಗೆ ಹೆಚ್ಚೇನು ಬರೆಯದಿದ್ದ ನಾನು ಯಾಕೆ ಹೀಗೆ ಎಂದು ಕೆಲವು ಕ್ಷಣ ಆಲೋಚನೆಗೆ ಬಿದ್ದೆ.

ಬ್ಲಾಗು ಹಾಗೂ ಸಮುದಾಯ ತಾಣಗಳಲ್ಲಿ ಬರೆಯುತ್ತಿದ್ದವರೆಲ್ಲ ಸಾಹಿತ್ಯಿಕವಾಗಿ ಬೆಳೆಯಬೇಕೆಂಬ, ಗುರುತಿಸಿಕೊಳ್ಳಬೇಕೆಂಬ ಹಂಬಲವನ್ನು  ಹೊಂದಿದ್ದವರೇನಲ್ಲ. ಬರವಣಿಗೆಯ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ವೇದಿಕೆಯಾಗಿ ಬ್ಲಾಗ್ ಹಾಗೂ ಪೋರ್ಟಲುಗಳನ್ನು ಆಶ್ರಯಿಸಿದವರೇನಲ್ಲ. ಬಹುತೇಕರಿಗೆ ತಮ್ಮದೂ ಒಂದು ಬ್ಲಾಗ್ ಮಾಡಿಕೊಳ್ಳಲು ಸಾಧ್ಯ, ಅದರಲ್ಲಿ ಏನನ್ನಾದರೂ ಬರೆಯುವುದಕ್ಕೆ, ಹಾಗೆ ಬರೆದುದಕ್ಕೆ ಹಲವರ ಪ್ರತಿಕ್ರಿಯೆಗಳನ್ನು ಪಡೆಯುವುದಕ್ಕೆ ಸಾಧ್ಯ ಎನ್ನುವ ಕಲ್ಪನೆ ಹುಟ್ಟಿಸಿದ ಪುಳಕವೇ ಸಾಕಿತ್ತು ಆನ್ ಲೈನ್ ಬರೆಯುವುದಕ್ಕೆ. ಹೆಚ್ಚಿನವರು ಹೀಗೆ ಬ್ಲಾಗುಗಳನ್ನು ಪ್ರಾರಂಭಿಸಿದವರು, ಸಮುದಾಯ ಪೋರ್ಟಲುಗಳಲ್ಲಿ ಪಾಲುದಾರರಾದವರು.

ತಮ್ಮ ಕೈಬೆರಳುಗಳ ಮೂಲಕ ಅಂತರಜಾಲದಲ್ಲಿ ಶಾಶ್ವತವಾಗಿ ಸ್ಥಾಪಿತವಾಗುವ ಏನನ್ನೋ ಕಟ್ಟುವ ಪುಳಕವನ್ನು ಅನುಭವಿಸುವ ಹಂಬಲದ ಜೊತೆಗೆ ತಮ್ಮ ದಿನನಿತ್ಯದ ಬದುಕಿನಲ್ಲಿ ನಂಟು ಹೊಂದಿರುವ ಭೌತಿಕ ವ್ಯಕ್ತಿಗಳ ಹಾಗೆ ಅಂತರಜಾಲದಲ್ಲಿನ ವರ್ಚುಯಲ್ ವ್ಯಕ್ತಿಗಳೊಂದಿಗೆ ಒಡನಾಡುವ ಅನುಭವಕ್ಕಾಗಿ ಅನೇಕರು ಬರಹವನ್ನು ವೇದಿಕೆಯಾಗಿಸಿಕೊಂಡರು. ಅಂತರಜಾಲದ ಛಾಯ ವ್ಯಕ್ತಿಗಳನ್ನು ಪರಿಚಯಿಸಿಕೊಳ್ಳುವುದು, ಚರ್ಚಿಸುವುದು, ಗುದ್ದಾಡುವುದು ಹೀಗೆ ಯಾವಾಗ ಬೇಕೆಂದರೆ ಆಗ ಚೈತನ್ಯಶೀಲವಾಗಿಸಿ ನಿಲ್ಲಿಸಬಹುದಾದ ಒಂದು ಛಾಯಾಲೋಕದ ಮೋಡಿಗೆ ಅನೇಕರು ಬರವಣಿಗೆಯ ಹಾದಿಯನ್ನು ಹಿಡಿದರು.

ಟ್ವಿಟರ್ ಪ್ರಾರಂಭವಾಗುವ ಮುನ್ನ ಗೂಗಲ್ ನದೇ ಆದ ಆರ್ಕುಟ್ ಹೆಸರಿನ ಸಾಮಾಜಿಕ ಸಂಪರ್ಕ ತಾಣ ತುಸು ಚಟುವಟಿಕೆಯಿಂದ ಕೂಡಿತ್ತು. ಟ್ವಿಟರ್ ಮೈಕ್ರೋ ಬ್ಲಾಗಿಂಗ್ ಪರಿಚಯಿಸಿತು. ಪುಟಗಟ್ಟಲೆ ಬರೆಯುವ ಅಗತ್ಯವಿಲ್ಲದೆ ಕೇವಲ ನೂರ ನಲವತ್ತು ಅಕ್ಷರಗಳಲ್ಲಿ ಬರಹವನ್ನು ಹರಿಬಿಡಲಿಕ್ಕೆ ಜನರು ಮುಂದಾದರು. ಫೇಸ್ ಬುಕ್ ಬಂದಿತು, ಗೂಗಲ್ ಬಜ್ ಬಂದಿತು, ಈಗ ಗೂಗಲ್ ಪ್ಲಸ್ ಕೂಡ ಬಂದಿದೆ. ಕೆಲವೇ ತಿಂಗಳುಗಳ ಹಿಂದಿನ ಬ್ಲಾಗ್ ಪೋಸ್ಟುಗಳನ್ನು, ಸಂಪದದ ಪುಟಗಳನ್ನು ತೆರೆದು ನೋಡಿದರೆ ಕಮೆಂಟುಗಳದೇ ಒಂದು ವಿಶಿಷ್ಟ ಲೋಕವನ್ನು ಕಾಣಬಹುದಿತ್ತು. ವರ್ಣರಂಜಿತವಾದ ಚರ್ಚೆ, ವಾಗ್ವಾದ, ರಸವತ್ತಾದ ಪೈಪೋಟಿಗಳು ಎಲ್ಲವನ್ನು ಕಮೆಂಟುಗಳಲ್ಲಿ ಗುರುತಿಸಬಹುದಾಗಿತ್ತು.

ಹೊಸ ಅಲೆಯ ತಂತ್ರಜ್ಞಾನದಿಂದ ಅಂತರಜಾಲದಲ್ಲಿ ಬರೆಯುವ ಜನಸಮೂಹ ದಿಕ್ಕುತಪ್ಪಿದ್ದು ನಿಜ. ಫೇಸ್ ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಸಂಪರ್ಕ ತಾಣಗಳು ಹಳೆಯ ತಂತ್ರಜ್ಞಾನವನ್ನೆಲ್ಲ ಸ್ಥಾನ ಪಲ್ಲಟ ಮಾಡುವ ಸವಲತ್ತುಗಳನ್ನೇನು ಹೊಂದಿಲ್ಲ. ಆದರೆ ಅಂತರಜಾಲದಲ್ಲಿ ಒಬ್ಬ ವ್ಯಕ್ತಿ ವ್ಯಯಿಸುವ ಸಮಯದಲ್ಲಿನ ಬಹುಪಾಲನ್ನು ಇವು ತಿಂದುಹಾಕಿಬಿಡುತ್ತವೆ. ಇದೇ ತಂತ್ರವನ್ನು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಪ್ರತಿಸ್ಪರ್ಧಿ ಪತ್ರಿಕಗಳನ್ನು ಹಣಿಯುವುದಕ್ಕೆ ಬಳಸಿದ್ದು. ತಮ್ಮ ಪತ್ರಿಕೆಯ ಜೊತೆಗೆ ತೀರಾ ಲೈಟ್ ಅನ್ನಿಸುವ ಪುಟ ತೆರೆಯುತ್ತ ಹೋಗಲು ಆರಾಮ ಎನ್ನಿಸುವ ಚಿಕ್ಕ ಗಾತ್ರದ ಮಿರರ್ ಆವೃತ್ತಿಯನ್ನು ಉಚಿತವಾಗಿ ಹಂಚಿದರು. ಸುಮ್ಮನೆ ಚಿತ್ರಗಳನ್ನು ನೋಡುತ್ತ ಪುಟ ತಿರುವಿದರೆ ಸಾಕು ಇನ್ನೊಂದು ಪತ್ರಿಕೆ ಓದಲು ಬೇಕಾದ ಸಮಯ, ವ್ಯವಧಾನ ಖರ್ಚಾಗಿ ಹೋಗುತ್ತದೆ! ವಿಪರೀತ ಚಟುವಟಿಕೆಯಿಂದ ಗಿಜಿಗುಟ್ಟುವ ಈ ಸಾಮಾಜಿಕ ಸಂಪರ್ಕ ತಾಣಗಳ ದೆಸೆಯಿಂದ ಬ್ಲಾಗು, ಸಮುದಾಯ ಪೋರ್ಟಲುಗಳಲ್ಲಿ ತಣ್ಣಗೆ ಸೃಷ್ಟಿಯಾಗುತ್ತಿದ್ದ ಅಕ್ಷರಗಳ ಮಾಲೆಯ ಮೆಲು ಸದ್ದು ಕೇಳದಂತಾಗಿರುವುದು ನಿಜ.

ಅಂತರಜಾಲದ ಸಂದರ್ಭದಲ್ಲಿ ಅಂಚೆ ಕಛೇರಿ, ಪತ್ರಗಳ ಕುರಿತು ನಾನ್ಟಾಲ್ಜಿಕ್ ಆಗುವಂತೆ ಬ್ಲಾಗು ಹಾಗೂ ಸಮುದಾಯಗಳಲ್ಲಿ ಅಕ್ಷರ ಸಂಭ್ರಮದ ಕುರಿತು ನೆನೆಸಿಕೊಳ್ಳುವಂತಾಗಿರುವುದು ದೊಡ್ಡ ಐರನಿ. ಆದರೆ ಈ ಬ್ಲಾಗುಗಳು ಹಾಗೂ ಸಮುದಾಯ ತಾಣಗಳು ಮುದ್ರಿತ ಪುಸ್ತಕ, ಪತ್ರಿಕೆಗಳನ್ನು ಪಳೆಯುಳಿಕೆಗಳಾಗಿಸಿದ ನೆನಪು ಇನ್ನೂ ಹಸಿಯಾಗಿಯೇ ಇದೆ. 

(ಚಿತ್ರ ಕೃಪೆ: http://www.theexecut... )

Average: 4.4 (11 votes)
581 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
partha1059's picture
12
Aug
2011
6:17

ಉ: ಬರೆಯಲು ಏನೋ ಬೇಜಾರು

ನಿಜವೆ
ಈಗೀಗ ಜನರಿಗೆ ದಿನವು ಹೊಸದು ಬೇಕು ಎನ್ನುವುದು ಪಾಶ್ಚಾತ್ಯ ಪ್ರಭಾವವೆ ಸರಿ
ನೀವಂದಂತೆ ಬ್ಲಾಗ್ ಗಳನ್ನು face book ತಿಂದು ಹಾಕುತ್ತಿರುವುದು ನಿಜ
ಹಾಗೆ ನೋಡಿದರೆ
ನಾಟಕ ರಂಗವನ್ನು ಸಿನಿಮಾ
ಮತ್ತೆ ಅದೆ ಸಿನಿಮಾವನ್ನು ಟೀವಿ ಹಾಗು ಸಿರೀಯಲ್ ಗಳು
ನುಂಗಿದ್ದು ಇತಿಹಾಸ
ಈಗ ನೀವಂದಂತೆ ಟೀವಿಗಳನ್ನು
ಮೊಬೈಲ್ , ಕಂಪ್ಯೂಟರ್ ಎಂಬ ದೈತ್ಯರು ನುಂಗಿ ನೊಣೆಯುತ್ತಿವೆ
ಹೀಗೆಯೆ ಇದು ಮುಂದುವೆಯುತ್ತದೆ
ಆದರೆ ತಂತ್ರಜ್ಞಾನದ ಬೆಳವಣಿಗೆಯ ಮೇಲೆ ಮಾನವನಿಗೆ ಹಿಡಿತವು ಇಲ್ಲ
ಮತ್ತು ಇದರ ಕೊನೆ? ಯಾರಿಗು ಗೊತ್ತಿಲ್ಲ.
-ಪಾರ್ಥಸಾರಥಿ

uniquesupri's picture
12
Aug
2011
10:02

ಉ: ಬರೆಯಲು ಏನೋ ಬೇಜಾರು

ಹೌದು ತಂತ್ರಜ್ಞಾನದ ಬೆಳವಣಿಗೆ ಎಲ್ಲಾ ಕ್ಷೇತ್ರಗಳಲ್ಲೂ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಎಲ್ಲಿ ನಡೆಯುತ್ತಿದೆ, ಎಲ್ಲಿಗೆ ನಡೆಯಬೇಕು ಎನ್ನುವ ಅರಿವು/ನಿಯಂತ್ರಣ ಯಾರಿಗೂ ಇದ್ದಂತಿಲ್ಲ.

ಹೇಮ ಪವಾರ್'s picture
12
Aug
2011
3:41

ಉ: ಬರೆಯಲು ಏನೋ ಬೇಜಾರು

ಬೆರಳೆಣಿಕೆಯ ಜನರಷ್ಟೇ ಬ್ಲಾಗ್ ಬರವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ ಆಳವಾದ ವಿಷಯಗಳ ಬಗ್ಗೆ ಬರೆದು ಚರ್ಚಿಸುತ್ತಿದ್ದವರು. ಬ್ಲಾಗ್ ಬರಹಕ್ಕೂ ಅದರದೇ ಆದ ಕುಂದು ಕೊರತೆಗಳಿದ್ದವು,ಒಂದು ಪತ್ರಿಕೆಯ ಮುದ್ರಿತ ಬರಹಕ್ಕಿದ್ದಷ್ಟು ಮೌಲ್ಯ ಬ್ಲಾಗ್ ಬರಹಕ್ಕೆ ಎಂದೂ ಬರದು ಎಂದು ಪತ್ರಿಕಾ ಸಂಪ್ರದಾಯವಾದಿಗಳು ವಾದಿಸಿದ್ದಿದೆ. ಹೀಗಾಗಿ ಬ್ಲಾಗಿಗರೆಲ್ಲ ಫೇಸ್ ಬುಕ್ ಕಡೆ ತಿರುಗಿದರು ಇದರಿಂದ ಬ್ಲಾಗ್ ಬರಹಗಳು ಕಡಿಮೆಯಾಗಿ ಮೌಲ್ಯಯುಕ್ತ ಬರಹಕ್ಕೆ ಧಕ್ಕೆ ಬಂದಿದೆ ಎಂಬ ಅಪವಾದ ಒಪ್ಪುವಂತದ್ದಲ್ಲ ಎನಿಸುತ್ತದೆ.

asuhegde's picture
12
Aug
2011
4:23

ಉ: ಬರೆಯಲು ಏನೋ ಬೇಜಾರು

ಹರಿಯುವ ನೀರಿನಂತೆ...
ಕೆಲವರು ನೀರಿನೊಂದಿಗೇ ಹರಿಯುತ್ತಿರುತ್ತಾರೆ
ಕೆಲವರು ದಡ ಸೇರಿ, ನೆಲೆ ಕಂಡುಕೊಳ್ಳುತ್ತಾರೆ
ಇನ್ನು ಕೆಲವರು ಇನ್ನೆಲ್ಲೋ ಕಳೆದು ಹೋಗುತ್ತಾರೆ
ಕೆಲವೊಮ್ಮೆ ಹೊಸಬರು ನೀರಿಗೆ ಸೇರಿಕೋಳ್ಳುತ್ತಾರೆ
ಯಾವುದೂ ಶಾಶ್ವತವಲ್ಲವೆನ್ನುವಾಗಲೇ ಎಲ್ಲವನ್ನೂ ಕಳೆದುಹೋಗಿದೆ ಎನ್ನಲಾಗುವುದೂ ಇಲ್ಲ!
-ಆಸು ಹೆಗ್ಡೆ

partha1059's picture
12
Aug
2011
6:21

ಉ: ಬರೆಯಲು ಏನೋ ಬೇಜಾರು

ನೀವು ಹೇಳಿರುವುದು ಸಂಪದಕ್ಕು ಸರಿಹೊಂದುತ್ತದೆ,
ಅಥವ ಎಲ್ಲದಕ್ಕು...... :)
-ಪಾರ್ಥಸಾರಥಿ

venkatb83's picture
12
Aug
2011
7:16

ಉ: ಬರೆಯಲು ಏನೋ ಬೇಜಾರು

ಸುಪ್ರೀತ್
ನೀವೇಳಿದ್ದು ಸತ್ಯ ,ಆದ್ರೆ ಪೂರ್ತಿ ಅಲ್ಲ.
ಫೇಸ್ ಬುಕ್ ಟ್ವಿ ಟ್ತರ್ ಏನೆಲ್ಲಾ ಬಂದ್ರು ಅಲ್ಲಲ್ಲಿ ಕೆಲವು ಜನ ಇನ್ನು ಬ್ಲಾಗ್ ಬರಹಗಳನ್ನ ಪ್ರಕತಿಸ್ತ್ಲೇ ಇದ್ದಾರೆ.
ಆದ್ರೆ ಸಂಖ್ಹ್ಯೇ ತಗ್ಗಿದೆ ನಿಜ.

ಆದರೂ ಫೇಸ್ ಬುಕ್ ಟ್ವಿ ತ್ತೆರ್ ಗತಿ ಮುಂದಿ ಬಾರೋ ಇನ್ನಿತರಕ್ಕೂ ಆಗದೆ ಇರಲ್ಲ.
ಕಾಲಾಯ ತಸ್ಮೈ ನಮಃ! ಅಲ್ಲ ವೆ?

ನಿಮ್ಮ ಲೇಖನ ಸಂದರ್ಭೋಚಿತವಾಗಿದೆ.