18
June
2013

ಬಲೆಗೆ ಬಿದ್ದಾಗ...

July 8, 2012 - 11:59pm
ಗಣೇಶ

ಎರಡು ತಿಂಗಳ ಹಿಂದಿನ ಘಟನೆ..

ರಾತ್ರಿ ಹನ್ನೆರಡು ಗಂಟೆಯ ಸಮಯ. ಸಂಪದ ಓದುವುದರಲ್ಲಿ ಮಗ್ನನಾಗಿದ್ದೆ. ಸಣ್ಣಗೆ.. ಶಬ್ದ ಕೇಳಿಸಿತು. ಗಮನಕ್ಕೆ ಬಂದರೂ ಓದು ಮುಂದುವರೆಸಿದೆ. ಪುನಃ ಶಬ್ದವಾಯಿತು. (ಭಯಾನಕ ಶಬ್ದವಾಗಿರುತ್ತಿದ್ದರೆ ಹೋಗಿ ಹಾಸಿಗೆಯೊಳಗೆ ಸೇರಿಕೊಳ್ಳುತ್ತಿದ್ದೆ. :) ಹೆಂಡತಿಯನ್ನು ಎಬ್ಬಿಸಿ ಅದೇನದು ಶಬ್ದ ನೋಡು ಎಂದು ಹೇಳುತ್ತಿದ್ದೆ.) ಸಣ್ಣ ಶಬ್ದವಾದುದರಿಂದ ಶಬ್ದದ ಮೂಲ ಹುಡುಕಿಕೊಂಡು ಹೋದೆ..ಕಂಡದ್ದು ಸಣ್ಣ ಕೀಟ!

ಜೇಡರ ಬಲೆಯಲ್ಲಿ ಸಿಕ್ಕಿ ಒದ್ದಾಡುತ್ತಾ ಶಬ್ದ ಮಾಡುತ್ತಿತ್ತು. ಜೇಡ ಅದನ್ನು ತಿರುಗಿಸಿ, ತಿರುಗಿಸಿ ತನ್ನ ಬಲೆಯಲ್ಲಿ ಸುತ್ತುತ್ತಿತ್ತು.

ರಾತ್ರಿ ಸೆಖೆ ಎಂದು ಕಿಟಕಿ ತೆರೆದಿಟ್ಟದ್ದರಿಂದ, ಲೈಟ್ ಬೆಳಕಿಗೆ, ಕೀಟ ರೂಮೊಳಗೆ ಬಂದಿರಬಹುದು. ಚಿಕ್ಕ ಜೇಡಕ್ಕೆ ಅನಿರೀಕ್ಷಿತ ಮಿಡ್ನೈಟ್ ಭೋಜನ ಎಂದು ಯೋಚಿಸಿ ಪುನಃ ಬಂದು ಸಂಪದದಲ್ಲಿ ಮುಳುಗಿದೆ.

ಆದರೆ ಆ ಕೀಟ ಆಗಾಗ ಶಬ್ದ ಮಾಡುತ್ತಲೇ ಇತ್ತು. ಅಸಹಾಯಕ ಸ್ಥಿತಿಯಲ್ಲಿರುವ ಕೀಟ "ಹೆಲ್ಪ್ ಹೆಲ್ಪ್" ಎಂದು ಮೊರೆ ಇಟ್ಟಾಗ, ಇಷ್ಟು ದೊಡ್ಡ ದೇಹ ಇಟ್ಟುಕೊಂಡು ರಕ್ಷಿಸದೇ ಇರುವುದು ತಪ್ಪಲ್ವಾ, ಎಂದು ಆಲೋಚಿಸಿ, ಮೇಜಿನ ಮೇಲೆ ಇದ್ದ TOI ಪೇಪರನ್ನು ರೌಂಡಾಗಿ ಸುತ್ತಿ, ಜೇಡರ ಬಲೆಯಿಂದ ಕೀಟವನ್ನು ಬಿಡಿಸಿ ಬಂದೆ. 

ಸ್ವಲ್ಪ ಸಮಯದ ನಂತರ ಪುನಃ ಅದೇ ಶಬ್ದ!

ನೋಡಿದರೆ........ಜೇಡರ ಬಲೆಯಿಂದ ನಾನದನ್ನು ಬಿಡಿಸಿದರೂ, ಜೇಡ ಅದಕ್ಕೆ ಸುತ್ತಿದ ಬಲೆಯಿಂದ ಬಿಡಿಸಲಾಗದೇ ಒದ್ದಾಡುತ್ತಿತ್ತು. ಈಗೇನು ಮಾಡವುದು? ಇಷ್ಟು ಸಣ್ಣ ಕೀಟವನ್ನು ಜೇಡ ಸುತ್ತಿದ ಬಲೆಯಿಂದ ಬಿಡಿಸುವುದು ಹೇಗೆ?

ಮೊಬೈಲಲ್ಲಿ ಅದರ ಫೋಟೋ ತೆಗೆದೆ. ಆ ಫೋಟೋವನ್ನು ಇಮೇಜ್ ಎಡಿಟರ್‌ಗೆ ಹೋಗಿ, ದೊಡ್ಡದು ಮಾಡುತ್ತಾ ಹೋದೆ. ದೊಡ್ಡದಾದ ಚಿತ್ರದಲ್ಲಿ, ಜೇಡರ ಬಲೆಯನ್ನು ಎಲ್ಲಿಂದ ಬಿಡಿಸಿದರೆ ಕೀಟದ ರೆಕ್ಕೆಗೆ ಹಾನಿಯಾಗುವುದಿಲ್ಲ ಎಂದು ನೋಡಿಕೊಂಡೆ. ಕಸಬರಿಕೆಯ ಕಡ್ಡಿಯೊಂದನ್ನು ಸಣ್ಣದಾಗಿ ನಾಲ್ಕು ಸೀಳು ಮಾಡಿ, ಅದರಿಂದ ಬಿಡಿಸುತ್ತಿದ್ದೆ. ಫೋಟೋ ತೆಗೆಯುವುದು, ಎನ್ಲಾರ್ಜ್ ಮಾಡುವುದು,ಬಲೆ ಬಿಡಿಸುವುದು..ಆ ಕೀಟವೂ ಪ್ರಯತ್ನಿಸುತ್ತಿತ್ತು. ನಡು ನಡುವೆ ಬಲ ಹಾಕಿ ಜಂಪ್ ಮಾಡುತ್ತಿತ್ತು. ಒಂದು ಸುತ್ತು ಕುತ್ತಿಗೆಗೆ ಸುತ್ತಿದ್ದರೆ ಸಾಕಿತ್ತು..ಈ ಜೇಡ ನೋಡಿದರೆ "ದ್ರೌಪದಿಯ ಸೀರೆ" ತರಹ ಸುತ್ತಿದ್ದೇ ಸುತ್ತಿದ್ದು.... :)

ಹೆಲ್ಪ್ ಎಂದು ಕ್ಷಣ ಕ್ಷಣವೂ ಮೊರೆಯಿಟ್ಟ ಕೀಟ, ಕೊನೆಗೆ ಒಂದು ಫೋಟೋಗೆ ಪೋಸ್ ಸಹ ಕೊಡದೆ ಹಾರಿ ಹೋಯಿತು.

-ಗಣೇಶ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by makara on

ಗಣೇಶ್..ಜಿ,
ಒಳ್ಳೆಯ ಮಾಹಿತಿಯುಕ್ತ ಲೇಖನ. ಆದರೆ, ನೀವು ಮಾಡಿದ ಕೆಲಸ ಒಳ್ಳೆಯದೋ ಕೆಟ್ಟದ್ದೋ ಅನ್ನುವ ವಿಚಾರದಲ್ಲಿ ಧರ್ಮಸಂಕಟಕ್ಕೆ ಬಿದ್ದಿದ್ದೇನೆ. ಕೀಟವನ್ನು ರಕ್ಷಿಸಿದ ಕೆಲಸವೇನೋ ಒಳ್ಳೆಯದೇ ಆದರೆ ಜೇಡದ ಸಹಜವಾದ ಆಹಾರವನ್ನು ಕಿತ್ತುಕೊಂಡದ್ದು ಎಷ್ಟು ಸರಿ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

>>>ನೀವು ಮಾಡಿದ ಕೆಲಸ ಒಳ್ಳೆಯದೋ ಕೆಟ್ಟದ್ದೋ ಅನ್ನುವ ವಿಚಾರದಲ್ಲಿ ಧರ್ಮಸಂಕಟಕ್ಕೆ ಬಿದ್ದಿದ್ದೇನೆ.
- ಧರ್ಮವಿರುವುದೇ (ನಾವಿರುವುದೇ) ಸಂಕಟ ಪಡಿಸಲು.. ಅಲ್ಲ..ಪರಿಹರಿಸಲು. :)
ಜೇಡ ತಿಂಗಳಾನುಗಟ್ಟಲೆ ಉಪವಾಸವಿರಬಲ್ಲುದು -
http://www.sampada.n...
ಆದರೆ ಕೀಟದ ಆರ್ತನಾದ ಕೇಳಿ ಸುಮ್ಮನಿರುವುದು ಸರಿಯಲ್ಲ ಎಂದು ಪಾರ್ಥಸಾರಥಿಯವರು ಬೋಧಿಸಿರುವರು.
ಗಣೇಶರು ಮಾಡಿದ್ದು ಸರಿ.
-ಅಂ.ಭಂ.ಸ್ವಾಮಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

:) :) :)
ನೀರಲ್ಲಿ ಮುಳುಗಿದ್ದಾಗ ಯಾರಾದ್ರು ಕಾಪಾಡಿದ ಮೇಲೆ ಪೋಸ್ ಕೊಡೋಕಾಗತ್ತ ಗಣೇಶಣ್ಣ!!!!??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ವಾಹ್ ಚಿಕ್ಕು..ಎಂತಹ ಉದಾಹರಣೆ ಕೊಟ್ಟಿರಿ. ಸೂಪರ್.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಶ್ರೀಧರ್ ರವರಂತೆ >>ನೀವು ಮಾಡಿದ ಕೆಲಸ ಒಳ್ಳೆಯದೋ ಕೆಟ್ಟದ್ದೋ ಅನ್ನುವ ವಿಚಾರದಲ್ಲಿ ಧರ್ಮಸಂಕಟಕ್ಕೆ ಬಿದ್ದಿದ್ದೇನೆ. ಕೀಟವನ್ನು ರಕ್ಷಿಸಿದ ಕೆಲಸವೇನೋ ಒಳ್ಳೆಯದೇ ಆದರೆ ಜೇಡದ ಸಹಜವಾದ ಆಹಾರವನ್ನು ಕಿತ್ತುಕೊಂಡದ್ದು ಎಷ್ಟು ಸರಿ?"<< ನನಗೂ ಇದೇ ಪ್ರಶ್ನೆ ಮನದಲ್ಲಿ ಮೂಡಿದೆ.
ಆದರೂ ಆ ಕೀಟದ್ದು "ಗ್ರೇಟ್ ಎಸ್ಕೇಪ್ " (ನಿಮ್ಮ ಸಹಾಯದಿಂದ)
....ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಈ ಶ್ರೀಧರ್‌ಜಿ ಎಲ್ಲರನ್ನೂ ಧರ್ಮಸಂಕಟಕ್ಕೆ ಬೀಳಿಸುತ್ತಿದ್ದಾರೆ. :)
ಹೇಗೆ ಹೇಳಲಿ, ಇಲ್ಲಿಂದ ಬಿಡಿಸಿಕೊಂಡು ಹೋದ ಕೀಟ ಇನ್ನೊಂದು ತೀರಾ ಹಸಿದಿರುವ ಜೇಡನ ಬಲೆಗೆ ಬಿದ್ದಿರಬಹುದು. ನಾನು ಆ ಜೇಡಕ್ಕೆ ಸಹಾಯ ಮಾಡಿದಂತೆ ಆಗಲಿಲ್ಲವೆ. ಅಲ್ಲಿಗೆ ಕೀಟವನ್ನು ಬಿಡಿಸಿದ ಪುಣ್ಯವೂ..ಹಸಿದ ಜೇಡಕ್ಕೆ ಆಹಾರ ಒದಗಿಸಿದ ಪುಣ್ಯವೂ ಲಭಿಸಿತು. :)
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಕೀಟದ ಆರ್ತನಾದ ಕೇಳಿ ಅದನ್ನು ಬಲೆಯಿಂದ ಬಿಡಿಸಿದ ಪುಣ್ಯವು
ಹಸಿವಿನಿಂದ ಕಂಗೆಟ್ಟು ಆರ್ತನಾದ ಕೂಡ ಮಾಡಲಾರೆದೆ ಇದ್ದ ಜೇಡದ ಅಹಾರ ಕಸಿದ ಪಾಪವು
ಯಾವುದು ಹೆಚ್ಚು ತೂಕವೊ ತಿಳಿಯದು, ಅದೆಲ್ಲ ಚಿಂತಿಸದೆ
ಆ ಕಾಲಕ್ಕೆ ಮನಸಿಗೆ ಸರಿ ಎಂದು ತೋಚಿದ ನಿಮ್ಮ ಕ್ರಿಯೆಯೆ ಉತ್ತಮ ಎಂದು ನನ್ನ ಅಭಿಮತ.
ಇರಲಿ
ಅದೇಕೊ ನನ್ನ ಹಿಂದಿನ ಅನುಭವ ಒಂದನ್ನು ಹೇಳ ಬೇಕಿನಿಸಿದೆ
ಗಣೇಶರೆ
ಒಮ್ಮೆ ಬೆಳಗಿನ ವಾಕಿಂಗನಲ್ಲಿ ಮಾರ್ಗ ಬದಲಿಸಿದ್ದೆ,
ಅಲ್ಲಿ ಮಾಂಸದ ಅಂಗಡಿಯ ಮುಂದೆ ಹಾದು ಹೋಗುತ್ತಿದ್ದೆ
ಹೊರಗೆ ಕಟ್ಟಿದ ಕುರಿಯನ್ನು ಹಗ್ಗ ಬಿಚ್ಚಿ ಒಳಗೆ ಎಳೆದು ಒಯ್ಯುತ್ತಿದ್ದ,
ಆ ಪ್ರಾಣಿಗಳಿಗೆ ಅದು ಹೇಗೆ ತಿಳಿಯುತ್ತದೆಯು ತಿಳಿಯದು ತನ್ನ ಕುತ್ತಿಗೆ ಕತ್ತರಿಸುವನೆಂದು,
ಅದು ಹಿಂದೆ ಜಗ್ಗುತ್ತ ಆರ್ತನಾದ ಮಾಡುತ್ತಿತ್ತು, ಅದು ಕೂಗುತ್ತಿದ್ದ ದ್ವನಿ ನನ್ನ ಹ್ಱುದಯಕ್ಕೆ ಇಳಿದು ಅದೇನೊ
ವೇದನೆ ಕೊಡುತ್ತಿತ್ತು, ಆದರೆ ಅಲ್ಲಿ ನಾನು ಅಸಹಾಯಕ. ಅದು ವ್ಯಾಪಾರದ ಜಾಗ ಅಹಿಂಸೆಯ ಬೋದನೆಗೆ ಸ್ಥಳವಿಲ್ಲ
ಏನು ಮಾಡಲು ತೋಚದೆ ಬಂದೆ
ಮನೆಗೆ ಬಂದರು ಆ ದಿನವೆಲ್ಲ ಅದೇನೊ ಬಲಿಯಾದ ಆ ಪ್ರಾಣಿಯ ಬದುಕಿಗಾಗಿ ಕೂಗು ಕರಳು ಕತ್ತರಿಸುತ್ತಿತ್ತು
ಹಾಗೆ ನೋಡಿದಾಗ ಕೀಟವನ್ನು ಉಳಿಸಿದ ನಿಮ್ಮ ಕ್ಱುತಿಯೆ ಶ್ರೇಷ್ಟ
ಜೇಡವು ಮತ್ತೊಂದು ಕೀಟವನ್ನು ಹೊಂಚಿಕೊಳ್ಳುತ್ತದೆ ಬಿಡಿ

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಪಾರ್ಥಸಾರಥಿಯವರೆ,
>>ಮನೆಗೆ ಬಂದರು ಆ ದಿನವೆಲ್ಲ ಅದೇನೊ ಬಲಿಯಾದ ಆ ಪ್ರಾಣಿಯ ಬದುಕಿಗಾಗಿ ಕೂಗು ಕರಳು ಕತ್ತರಿಸುತ್ತಿತ್ತು
- ನಾನು ಲವ್‌ಬರ್ಡ್ಸ್ ಸಾಕುತ್ತಿದ್ದಾಗ, ಹಕ್ಕಿಗಳಿಗಾಗಿ+ ಗೂಡಿಗಾಗಿ ಶಿವಾಜಿ ನಗರದ ಬಳಿಯ ಒಂದು ಏರಿಯಾಕ್ಕೆ ಹೋಗುತ್ತಿದ್ದೆ. ಆಲ್ಲಿ ಲೈನಾಲೈನು ಇರುವುದೇ ಮಾಂಸದ ಅಂಗಡಿಗಳು. ಸಂಕಟವಾಗುತ್ತಿತ್ತು. ಆದರೇನು ಮಾಡುವುದು.. ಜತೆಗಿರುವ ಮಗಳಿಗೆ ಸಮಾಧಾನ ಹೇಳುತ್ತಿದ್ದೆ-"ನಮಗೆ ಟೊಮೆಟೋ ಇದ್ದ ಹಾಗೇ ಅವರಿಗೆ ಅದು ಆಹಾರ."ಎಂದು.
ನನ್ನ ಮುಂದಿನ ಬ್ಲಾಗ್-"ಪ್ರಾಣಿ ಬಲಿ". ತಿಂಬಟ್ ಸ್ವಾಮಿಗಳು ಬರೆಯಬೇಕೆಂದಿದ್ದದ್ದನ್ನು ತಿದ್ದಿ ನಾನು ಬರೆಯುವೆ..ಮುಂದಿನ ಒಂದೆರಡು ವಾರದಲ್ಲಿ..
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ಅದರ ಕೆಲಸ ಅದು ಮಾಡಿತ್ತು. ನಿಮ್ಮ ಕೆಲಸ ನೀವು ಮಾಡಿರುವಿರಿ. ಆಹಾರ ತಪ್ಪಿಸಿದ್ದು ಪಾಪ, ಕೀಟದ ಪ್ರಾಣ ಉಳಿಸಿದ್ದು ಪುಣ್ಯ!! :))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಕವಿನಾಗರಾಜರೆ,
>>ಅದರ ಕೆಲಸ ಅದು ಮಾಡಿತ್ತು. ನಿಮ್ಮ ಕೆಲಸ ನೀವು ಮಾಡಿರುವಿರಿ- ಆಹಾರ ತಪ್ಪಿಸಿದ್ದು;
ಪಾಪ, ಕೀಟದ ಪ್ರಾಣ ಉಳಿಸಿದ್ದು ಪುಣ್ಯ!! :))
ಕವಿನಾಗರಾಜರಿಗೆ ನನ್ನಿ,
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ಪಾಪ- ಪುಣ್ಯ ಮು೦ತಾದ ಕಡೆ ಗಮನ ಕೊಡದೆ ಆತ್ಮದ ಕರೆಯತ್ತ ಓಗೊಡಬೇಕು! ಈ ಥಿಯರಿಯನ್ನು ಒಪ್ಪಿಕೊಳ್ಳುವುದಾದರೆ, ನಿಮ್ಮಾತ್ಮ ಕೀಟವನ್ನು ಜೇಡರ ಬಲೆಯಿ೦ದ ಬಿಡಿಸು ಎ೦ದ ಕೂಡಲೇ ನೀವು ಆ ಕೆಲಸ ಮಾಡಿದ್ದೀರಿ!
ಅದೃಷ್ಟ ಕೀಟದ ಪರವಾಗಿ ಇತ್ತು ! ದುರದೃಷ್ಟವಶಾತ್ ನೀವು ಮೊಬೈಲ್ ನಲ್ಲಿ ಫೋಟೋ ತೆಗೆದು-ಅದನ್ನು ಎನ್ಲಾರ್ಜ್-ರೆಡ್ಯೂಸ್ ಮಾಡುತ್ತಾ.. ಮಾಡುತ್ತಾ.. ....... ಸಮಸ್ಯೆಯ ಆಳಕ್ಕೆ ಹೋಗುವಷ್ಟರಲ್ಲಿಯೇ ಕೀಟವೇನಾದರೂ ತನ್ನ ಇಹಲೋಕ ಪ್ರಯಾಣವನ್ನು ಮುಗಿಸಿಬಿಟ್ಟಿದ್ದರೆ!
ಆನಿಟ್ಟಿನಲ್ಲಿ ನಿಮ್ಮ ಕಾರ್ಯ ಶ್ಲಾಘನೀಯ..ಗಣೇಶಣ್ಣ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shreekar on

ಮುಂದಣ ಜನುಮ ಬಲೆ ಹಾಸುವ ಹಸಿದ ಜೇಡನಾಗಿಯೋ ?

ಅಥವಾ

ಜೇಡನ ಆಹಾರ ಕಸಿದ ಪಾಪಕ್ಕಾಗಿ ಕೀಟಜನ್ಮ ಪಡೆದು ಜೇಡನ ಹೊಟ್ಟೆ ಸೇರುವುದೋ?

:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಶ್ರೀಕರ್,
ಮುಂದಿನ ಜನ್ಮದಲ್ಲಿ ರಾಜಕಾರಣಿಯಾಗಬೇಕೆಂದಿದ್ದೆ. ಛೇ..ಹೋಗಲಿ.
ಎರಡು ಚಾಯ್ಸ್ ಇದೆ ಅಲ್ವಾ.. "ಹಸಿದಿರುವ" ಜೇಡ. ಬೇ..ಡ.
**************
ನಿಮ್ಮಿಂದ ಹೊಸ ಜಾಗದ ಬಗ್ಗೆ, ದ.ಕನ್ನಡದ ಬಗ್ಗೆ ..ಲೇಖನ ನಿರೀಕ್ಷಿಸಿದ್ದೆ. ಏನೂ ಬರೆದಿಲ್ಲಾ...?
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shreekar on

>>> ಮುಂದಿನ ಜನ್ಮದಲ್ಲಿ ರಾಜಕಾರಣಿಯಾಗಬೇಕೆಂದಿದ್ದೆ<<<<

ರಾಜಕಾರಣಿಯಾಗಲು ಮೊದಲು Scoundrel ಆಗಿ ಅರ್ಹತೆ ಪಡೆಯ‌ಬೇಕು.

ಮುಂದಿನ ಜನುಮದಲ್ಲಿ ಬಾರ್ನ್ ಸ್ಕೌಂಡ್ರಲ್ ಆಗಿ ಹುಟ್ಟಬೇಕೆಂದೆ?

:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

:)
ಶ್ರೀಕರ್,
ಈಗ ಎಷ್ಟೇ ಪ್ರಯತ್ನ ಪಟ್ಟರೂ ಆ ಅರ್ಹತೆ ಸಿಗದು. ಹುಟ್ಟಿನಿಂದಲೇ (ಅವ)ಗುಣಗಳನ್ನು ಬೆಳಸಿಕೊಂಡರೆ ಸಾಧ್ಯ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ನಾವಡರೆ,
>>ನೀವು ಮೊಬೈಲ್ ನಲ್ಲಿ ಫೋಟೋ ತೆಗೆದು-ಅದನ್ನು ಎನ್ಲಾರ್ಜ್-ರೆಡ್ಯೂಸ್ ಮಾಡುತ್ತಾ.. ಮಾಡುತ್ತಾ.. .......
-ಅದಕ್ಕೆ ಜಾಸ್ತಿ ಸಮಯ ಬೇಕಾಗುವುದಿಲ್ಲ. ಒಂದು ಮಾತ್ರ ಹೇಳುತ್ತೇನೆ-
ಬಲೆ ಬಿಡಿಸಲು ಮಾತ್ರ ಹೋಗಬಾರದು. ಬಗ್ಗಿ ಬಗ್ಗಿ ಸೊಂಟ ಸೋಬಾನವಾಗುವುದು. :)
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Soumya Bhat on

ಗಣೇಶರವರೆ ಸೂಪರ್ ಆಗಿ ಬರೆದಿದ್ದೀರಿ. ಜೇಡ ಬಲೆಯನ್ನು ದ್ರೌಪದಿ ಸೀರೆ ಸುತ್ತಿದಂತೆ ಸುತ್ತಿದ್ದೇ ಸುತ್ತಿದ್ದು ಅಂತ ಬರೆದ ಸಾಲು ಓದಿ ನಕ್ಕಿದ್ದೇ ನಕ್ಕಿದ್ದು.
>ಸೌಮ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಧನ್ಯವಾದ ಸೌಮ್ಯ ಅವರೆ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

"ಆ ಫೋಟೋವನ್ನು ಇಮೇಜ್ ಎಡಿಟರ್‌ಗೆ ಹೋಗಿ, ದೊಡ್ಡದು ಮಾಡುತ್ತಾ ಹೋದೆ. ದೊಡ್ಡದಾದ ಚಿತ್ರದಲ್ಲಿ, ಜೇಡರ ಬಲೆಯನ್ನು ಎಲ್ಲಿಂದ ಬಿಡಿಸಿದರೆ ಕೀಟದ ರೆಕ್ಕೆಗೆ ಹಾನಿಯಾಗುವುದಿಲ್ಲ ಎಂದು ನೋಡಿಕೊಂಡೆ. ಕಸಬರಿಕೆಯ ಕಡ್ಡಿಯೊಂದನ್ನು ಸಣ್ಣದಾಗಿ ನಾಲ್ಕು ಸೀಳು ಮಾಡಿ, ಅದರಿಂದ ಬಿಡಿಸುತ್ತಿದ್ದೆ. ಫೋಟೋ ತೆಗೆಯುವುದು, ಎನ್ಲಾರ್ಜ್ ಮಾಡುವುದು,ಬಲೆ ಬಿಡಿಸುವುದು..ಆ ಕೀಟವೂ ಪ್ರಯತ್ನಿಸುತ್ತಿತ್ತು. ನಡು ನಡುವೆ ಬಲ ಹಾಕಿ ಜಂಪ್ ಮಾಡುತ್ತಿತ್ತು. ಒಂದು ಸುತ್ತು ಕುತ್ತಿಗೆಗೆ ಸುತ್ತಿದ್ದರೆ ಸಾಕಿತ್ತು..ಈ ಜೇಡ ನೋಡಿದರೆ "ದ್ರೌಪದಿಯ ಸೀರೆ" ತರಹ ಸುತ್ತಿದ್ದೇ ಸುತ್ತಿದ್ದು.... :)

ಹೆಲ್ಪ್ ಎಂದು ಕ್ಷಣ ಕ್ಷಣವೂ ಮೊರೆಯಿಟ್ಟ ಕೀಟ, ಕೊನೆಗೆ ಒಂದು ಫೋಟೋಗೆ ಪೋಸ್ ಸಹ ಕೊಡದೆ ಹಾರಿ ಹೋಯಿತು.
"

:())))

ಗಣೆಶ್ ಅಣ್ನ ..... ಸುಕ್ಛ್ಮ ವಿಶ್ಯಗಳನ್ನು ನಿವ್ ಗಮನಿಸುವ ಪರಿ ಅನನ್ನ್ಯ .... ಅದೆ ನಿಮ್ಮ ವಿಶೆಶತೆ...

ಕೇಟ ಉಳಿಸುವ ಭರದಲ್ಲಿ ನಿವ್ ಜೆಡ ದ ಆಹರ ತಪ್ಪಿಸಿ ಅದಕ್ಕೆ ಎಕಾದಶಿ ಮಾಡಿದಿರಿ...!!

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

>>ಅದಕ್ಕೆ ಎಕಾದಶಿ ಮಾಡಿದಿರಿ
ಲಂಘನಂ ಪರಮೌಷಧಂ:) ಅದರ ಆರೋಗ್ಯಕ್ಕಾಗಿ.
ನನ್ನಿ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Prakash Narasimhaiya on

ಗಣೇಶರೆ ,
ಜೇಡ ತನ್ನ ಧರ್ಮ ಪಾಲಿಸಿದೆ . ಕೀಟ ತನ್ನ ಧರ್ಮ ಪಾಲಿಸಿದೆ . ನೀವು ಮನುಷ್ಯ ಧರ್ಮ ಪಾಲಿಸಿದ್ದಿರಿ . ಅವರವರ ಧರ್ಮ ಅವರವರಿಗೆ ದೊಡ್ಡದು ಅಲ್ಲವೇ ? ಇಲ್ಲಿ ಪಾಪ ಪುಣ್ಯಗಳ ಪ್ರಶ್ನೆ ಇಲ್ಲ .
ಪ್ರಕಾಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhalle on

<<ಹಾರಿ ಹೋಯಿತು>>
ನೀವು ಕೀಟೋಲ್ಲಂಘನ ಮಾಡಿಸಿದ್ದಕ್ಕೆ ಆಗಿದ್ದು ಜೇಡೋಲ್ಲಂಘನ ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

:) :) ನೀವು ಕೀಟೋಲ್ಲಂಘನ ಮಾಡಿಸಿದ್ದಕ್ಕೆ ಆಗಿದ್ದು ಜೇಡೋಲ್ಲಂಘನ ...
ವ್ಹಾ ಭಲ್ಲೇಜಿ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhalle on

ತೆಪ್ಪು ಮಾಡಿಬಿಟ್ರೀ ಗಣೇಶ್ ಜಿ ... ತೆಪ್ಪು ಮಾಡಿಬಿಟ್ರೀ
ಈಗ ನಿಮಗೆ ಬ್ಲ್ಯಾಕ್ ಕ‌ಮಾಂಡೋಸ್ ಅಗತ್ಯ ಇದೆ ... ನಿಮ್ಮ ಸ್ಪೈಡರ್ ಮ್ಯಾನ್ ಸುಮ್ಕೆ ಬಿಡಾಕಿಲ್ಲ :‍)))

-ಭಲ್ಲೇಜಿ,
ಕಮಾಂಡೋಸ್ಗಳಿಂದ ಹಿಡಿದು ಹೋಮ್‌ಗಾರ್ಡ್ಸ್‌ವರೆಗೆ ಎಲ್ಲರೂ ರಾಜಕಾರಣಿಗಳ ರಕ್ಷಣೆಗೆ ನಿಂತಿರುವಾಗ ನನಗೆಲ್ಲಿಯ ರಕ್ಷಣೆ? :(
ಸಪ್ತಗಿರಿವಾಸಿ,
ಪಾರ್ಥಸಾರಥಿಯವರೆ,
ನನ್ನನ್ನು ನೋಡಬೇಕೆಂದಿದ್ದೀರಲ್ಲಾ..............................
ಇನ್ನು........................
ಥ್ರಿ ಡೈಮೆನ್ಷನ್‌ನಲ್ಲಿ ಚಿತ್ರಮಂದಿರದಲ್ಲಿ ನೋಡಿ..
" spiderman Vs amazing ganeshann....."
ಎಲ್ಲಾ ಸ್ಪೈಡರ್ ಮಾನ್ ಚಿತ್ರದಂತೆ ಈ ಚಿತ್ರದ ಕೊನೆ ಇರುವುದಿಲ್ಲ.. different!
..
(ಇಷ್ಟಕ್ಕೆ ನಿಲ್ಲಿಸಿದರೆ ರಾಮೋ ಅವರು ಕ್ಲೈಮ್ಯಾಕ್ಸ್ ಸೀನ್ ಏನ್ರೀ ಅಂತ ಫೋನ್ ಮಾಡಿ ವಿಚಾರಿಸುತ್ತಿರುತ್ತಾರೆ- ಅದಕ್ಕೆ ಈಗಲೇ ಸ್ವಲ್ಪ ಕ್ಲೂ ಕೊಡುವೆ-
ಗೋಡೆಯಲ್ಲಿ ಒಂದೇ ಒಂದು ಜೇಡ ಕಂಡರೂ, ಕಸಬರಿಕೆಯಿಂದ ಹೊಡೆದು ಸಾಯಿಸದೇ ಬಿಡಳು ನನ್ನಾಕೆ. ಅದಕ್ಕಾಗಿಯೇ ರಾತ್ರಿ ಆಕೆ ನಿದ್ರಿಸಿದ ನಂತರವೇ, ನಮ್ಮ ಮನೆಯಲ್ಲಿ ಸ್ಪೈಡರ್ ಬಲೆ ಕಟ್ಟುವುದು..ನಾನೂ ವೆಬ್ ಹೊಕ್ಕುವುದು. :( )
-ಗಣೇಶ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

"" spiderman Vs amazing ganeshann....."
ಎಲ್ಲಾ ಸ್ಪೈಡರ್ ಮಾನ್ ಚಿತ್ರದಂತೆ ಈ ಚಿತ್ರದ ಕೊನೆ ಇರುವುದಿಲ್ಲ.. different!
.."

ಗಣೇಶ್ ಅಣ್ಣ ..... ಹಾಗಿದ್ದರೆ ನಾವ್ ಖ0ಡಿತ ನೊಡುವೆವು....

(ಆ ಛಿತ್ರದ ಪೊಸ್ತರ್ ಗಮನಿಸಿರುವಿರ? ಅದು ನೊಡಿದ ಮೆಲೆ ನನಗು ಅನ್ನಿಸಿದೆ... ನಿವ್ ..!!

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

:)
" Vs" ನಡುವೆ ಹಾಕಿ, ಮುಂದಿನ ಭಾಗ ಎಂದು ಬರೆಯಿರಿ. ನಿಮ್ಮ ಶೀರ್ಷಿಕೆ ನೋಡಿ ಸಂಪದಿಗರು ಯಾರೂ "ಸ್ಪೈಡರ್ ಮ್ಯಾನ್" ಚಿತ್ರ ನೋಡಲು ಹೋಗಲಿಕ್ಕಿಲ್ಲ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

:()))

"" Vs" ನಡುವೆ ಹಾಕಿ, ಮುಂದಿನ ಭಾಗ ಎಂದು ಬರೆಯಿರಿ. ನಿಮ್ಮ ಶೀರ್ಷಿಕೆ ನೋಡಿ ಸಂಪದಿಗರು ಯಾರೂ "ಸ್ಪೈಡರ್ ಮ್ಯಾನ್" ಚಿತ್ರ ನೋಡಲು ಹೋಗಲಿಕ್ಕಿಲ್ಲ.
-ಗಣೇಶ."

ಅಯ್ಯೊ ನಮ್ಮ ಗಣೆ ಶ್ ಅಣ್ನ ಅಲ್ಲಿ ಇರ್ವಾಗ ಯಾರೆನೆ ಅನ್ದ್ರೋ ನಾವ್ ಹೊಗೊದು ನೊಡೊದು ಖಾತ್ರಿ.....

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

>>>ನಮ್ಮ ಗಣೆ ಶ್ ಅಣ್ನ ಅಲ್ಲಿ ಇರ್ವಾಗ ಯಾರೆನೆ ಅನ್ದ್ರೋ ನಾವ್ ಹೊಗೊದು ನೊಡೊದು ಖಾತ್ರಿ.....
- ತುಂಬಾಆಆ ಧನ್ಯವಾದಗಳು ಸಪ್ತಗಿರಿವಾಸಿಯವರೆ-ನಿಮ್ಮ ಅಭಿಮಾನಕ್ಕೆ.
ಶೂಟಿಂಗ್‌ಗೆ ಲೊಕೇಶನ್ ಹುಡುಕಲು ಇಂದಿನಿಂದ ೩ ದಿನ ಕರಾವಳಿ ತೀರಕ್ಕೆ ಹೋಗಲಿದ್ದೇನೆ. ( ಈ ಸಲ ಇನ್ನೂ ಜಾಗ್ರತೆ ಡ್ರೈವಿಂಗ್ ಮಾಡುವೆ :) ) ನಾಲ್ಕು ದಿನ ರಜೆ ಸ್ಯಾಂಕ್ಷನ್ ಮಾಡಬೇಕಾಗಿ ಕೋರಿಕೆ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಆಗಲಿ ಗಣೆಶ್ ಆಣ್ಣ ...

ನನಗೆ ಅನ್ನಿಸುತ್ತೆ ಅನ್ದಿನನ್ತೆ(ಆಗೊಮ್ಮೆ ನಿವ್ ಗೊಕರ್ಣ ಬೀಛ್ ಛಿತ್ರ ಹಾಕಿದ್ದ ನೆನಪು) ಮತ್ತೊಮ್ಮೆ ಅಲ್ಲಿಯ ಸುನ್ದರ ಛಿತ್ರಗಳನ್ನು ಇಲ್ಲಿ ಹಾಕುವಿರಿ..

ನಿಮ್ಮ ಪ್ರಯಾಣ ಸುಖಕರ ಮತ್ತು ಶುಭಕರವಾಗಿರಲಿ..

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by RAMAMOHANA on

amazing ganeshann....." ಅವರೆ ಯಂಗಾನಾ ಮಾಡಿ ಈ ಸರ್ತಿ ಆ ಬೀಚಲ್ಲಿ ಗಣೇಶ್ ಜಿ ಪಟ ಹಿಡ್ಕಂಬನ್ನಿ ಸಾ, ಅಂಗೆ ಸಂಪದದಾಗೆ ಹಾಕ್ಬುಡುವ ಏನಂತೀರ...?
ರಾಮೋ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by basho aras on

ಚೆನ್ನಾಗಿದೆ ನಿಮ್ಮ ಸಾಹಸ. ಜೇಡನ ಆಹಾರ ಕಿತ್ತುಕೊಂಡು ಪಾಪ ಮಾಡಿದಿರಿ ಮತ್ತು ಕೀಟಕ್ಕೆ ಜೀವ ಕೊಟ್ಟು ಪುಣ್ಯ ಮಾಡಿದಿರಿ ಆದ್ದರಿಂದ ಉಪೇಂದ್ರ ಹೇಳಿದಂದೆ ನಿಮಗೆ ಸ್ವರ್ಗ ನರಕ ಎರಡರಲ್ಲೂ ಸೀಟ್ ಕಾಯ್ದಿರಿಸಲಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

:)
ಶೋಭಾ ಅವರೆ,
>>>ನಿಮಗೆ ಸ್ವರ್ಗ ನರಕ ಎರಡರಲ್ಲೂ ಸೀಟ್ ಕಾಯ್ದಿರಿಸಲಾಗಿದೆ.
-ಅಲ್ಲಿ ಹೋದರೆ ಇಲ್ಲಿ ಒಂದು ಸೀಟು ಖಾಲಿ, ಇಲ್ಲಿದ್ದರೆ ಅಲ್ಲಿಯ ಸೀಟು ಖಾಲಿ ಎಂದು ತಪ್ಪಿ ಜೋರಾಗಿ ಹೇಳಿಬಿಟ್ಟೆ! ಅದನ್ನೇ...ಟಿ.ವಿ.ಯವರು ಬ್ರೇಕಿಂಗ್ ನ್ಯೂಸ್ ಮಾಡಬೇಕೆ..ಈಗ..... :)
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by pisumathu on

ಲೇಖನ ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಶ್ರೀಪತಿಯವರಿಗೆ ಧನ್ಯವಾದಗಳು.
-ಗಣೇಶ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಸಕತ್ ಗಣೇ 'ಸಣ್ಣ' , ಅರ್ಧ ರಾತ್ರಿಯಲ್ಲಿ ಬರೆದು ಹಾಕಿರುವ ಸಾಹಸಗಾಥೆ ತುಂಬಾ ಚೆನ್ನಾಗಿದೆ. ಆದರು ಜೇಡ೦ಗೆ ಅನ್ಯಾಯ ಮಾಡ್ಬಿಟ್ರಿ!! :‍)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಮಂಜಣ್ಣ,
ನೀವೂ ಜೇಡಂ ಪಾರ್ಟಿನಾ? :(
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.