ಬಳಸೆನ್ನ ಕೊರಳ ಒಲವೇ...!
ಬಳಸೆನ್ನ ಕೊರಳ ಒಲವೇ ಇಂಥ ಇರುಳು ಇನ್ನೆಂದಿಗೋ
ಇನ್ನು ಈ ಜನುಮದಲ್ಲಿ ನಮ್ಮ ಭೇಟಿ ಎಂದಿಗೋ
ಬಳಸೆನ್ನ ಕೊರಳ
ನಮಗೀ ಕ್ಷಣವು ದೊರೆತಿದೆ, ನಮ್ಮ ಭಾಗ್ಯದಿಂದಲೇ
ಕಣ್ತುಂಬ ನೋಡು ನನ್ನ ನೀ ಬಲು ಸನಿಹದಿಂದಲೇ
ಮತ್ತೊಮ್ಮೆ ನಿನಗೀ ಭಾಗ್ಯ ಸಿಗುವುದೆಂದಿಗೋ
ಇನ್ನು ಈ ಜನುಮದಲ್ಲಿ ನಮ್ಮ ಭೇಟಿ ಎಂದಿಗೋ
ಬಳಸೆನ್ನ ಕೊರಳ ಒಲವೇ ಇಂಥ ಇರುಳು ಇನ್ನೆಂದಿಗೋ
ಬಾ ಇನ್ನೂ ಸನಿಹ ನಾನು ಬರಲಾರೆ ಪದೇ ಪದೇ
ಈ ಕೊರಳ ಬಳಸಿ ನಿಂದು ನಾನಳುವೆ ಅಳುಕದೇ
ಕಂಗಳಿಂದ ಒಲವ ಧಾರೆ ಹರಿವುದು ಇನ್ನೆಂದಿಗೋ
ಇನ್ನು ಈ ಜನುಮದಲ್ಲಿ ನಮ್ಮ ಭೇಟಿ ಎಂದಿಗೋ
ಬಳಸೆನ್ನ ಕೊರಳ ಒಲವೇ ಇಂಥ ಇರುಳು ಇನ್ನೆಂದಿಗೋ
ಬಳಸೆನ್ನ ಕೊರಳ ಒಲವೇ ಇಂಥ ಇರುಳು ಇನ್ನೆಂದಿಗೋ
ಇನ್ನು ಈ ಜನುಮದಲ್ಲಿ ನಮ್ಮ ಭೇಟಿ ಎಂದಿಗೋ
****
ಇನ್ನೊಂದು ಭಾವಾನುವಾದದ ಪ್ರಯತ್ನ
ಮೂಲ ಗೀತೆ:
ಚಿತ್ರ: ವೋ ಕೌನ್ ಥೀ?
ಗಾಯಕಿ: ಲತಾ ಮಂಗೇಶ್ಕರ್
ಲಗ್ ಜಾ ಗಲೇ ಕೀ ಫಿರ್ ಯಹ್ ಹಸೀನ್ ರಾತ್ ಹೋ ನ ಹೋ
ಶಾಯದ್ ಫಿರ್ ಇಸ್ ಜನಮ್ ಮೆ ಮುಲಾಖಾತ್ ಹೋ ನ ಹೋ
ಲಗ್ ಜಾ ಗಲೇ ಕೀ
ಹಮ್ ಕೋ ಮಿಲೀ ಹೈಂ ಆಜ್ ಯಹ್ ಗಡಿಯಾಂ ನಸೀಬ್ ಸೇ
ಜೀ ಭರ್ ಕೇ ದೇಖ್ ಲೀಜಿಯೇ ಹಮ್ ಕೋ ಖರೀಬ್ ಸೇ
ಫಿರ್ ಆಪ್ ಕೇ ನಸೀಬ್ ಮೆ ಯೆ ಬಾತ್ ಹೋ ನ ಹೋ
ಶಾಯದ್ ಫಿರ್ ಇಸ್ ಜನಮ್ ಮೆ ಮುಲಾಖಾತ್ ಹೋ ನ ಹೋ
ಲಗ್ ಜಾ ಗಲೇ ಕೀ ಫಿರ್ ಯಹ್ ಹಸೀನ್ ರಾತ್ ಹೋ ನ ಹೋ
ಪಾಸ್ ಆಯಿಯೇ ಕೀ ಹಮ್ ನಹೀಂ ಆಯೇಂಗೇ ಬಾರ್ ಬಾರ್
ಬಾಹೇಂ ಗಲೇ ಮೆ ಡಾಲ್ ಕೇ ಹಮ್ ರೋ ಲೇ ಝಾರ್ ಝಾರ್
ಆಂಖೋಂ ಸೆ ಫಿರ್ ಯಹ್ ಪ್ಯಾರ್ ಕೀ ಬರ‍್ಸಾತ್ ಹೋ ನ ಹೋ
ಶಾಯದ್ ಫಿರ್ ಇಸ್ ಜನಮ್ ಮೆ ಮುಲಾಖಾತ್ ಹೋ ನ ಹೋ
ಲಗ್ ಜಾ ಗಲೇ ಕೀ ಫಿರ್ ಯಹ್ ಹಸೀನ್ ರಾತ್ ಹೋ ನ ಹೋ
ಲಗ್ ಜಾ ಗಲೇ ಕೀ ಫಿರ್ ಯಹ್ ಹಸೀನ್ ರಾತ್ ಹೋ ನ ಹೋ
ಶಾಯದ್ ಫಿರ್ ಇಸ್ ಜನಮ್ ಮೆ ಮುಲಾಖಾತ್ ಹೋ ನ ಹೋ
ಲಗ್ ಜಾ ಗಲೇ ಕೀ
ಬಳಸೆನ್ನ ಕೊರಳ ಒಲವೇ...!
September 27, 2011 - 4:39pm
ಸರಣಿ:
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಬಳಸೆನ್ನ ಕೊರಳ ಒಲವೇ...!
ಪ್ರೇಮವೆನ್ನುವುದು ಕೇವಲ ತ್ಯಾಗ, ಬಲಿದಾನ ಎಂದು ಬಿಂಬಿತವಾಗುತ್ತಿದ್ದ ಕಾಲದಲ್ಲಿ, ಪ್ರೀತಿಯ ಕೊನೆಯ ಹೊತ್ತಿನಲ್ಲಿ ಮೂಡುವ ಕಲ್ಪನೆಗಳ ವಿವರಣೆ ಈ ಹಾಡಿನಲ್ಲಿದೆ. ಉತ್ಕಟ ಭಾವನೆಗಳಿಂದ ಮನವನ್ನು ಕಲಕಿ ಬಿಡುವ ಈ ಹಾಡು ಕೇವಲ ಗುನುಗುನಿಸುವ ಹಾಡಾಗದೇ ಯಾವ ಯಾವ ಹೊತ್ತಿನಲ್ಲಿ ಹೇಗೇಗೋ ಮೂಡಿ ಕಾಡುತ್ತದೆ.
ಉ: ಬಳಸೆನ್ನ ಕೊರಳ ಒಲವೇ...!
ಸಂತೋಷ್,
ನಿಜವಾಗಿಯೂ ಮಧುರವಾದ ಹಾಡನ್ನು ಭಾವಾನುವಾದ ಮಾಡುವಂತೆ ಪ್ರೇರೇಪಿಸಿದ ತಮಗೆ ಧನ್ಯವಾದಗಳು.
ಅದರಲ್ಲಿನ ಪದಗಳು ಅರ್ಥವಾಗದೇ ಇದ್ದ ನನ್ನ ಬಾಲ್ಯದ ದಿನಗಳಲ್ಲೇ ಈ ಹಾಡನ್ನು ಇಷ್ಟ ಪಟ್ಟಿದ್ದೆ.
ಅರ್ಥೈಸಿಕೊಳ್ಳಲು ಸಮರ್ಥನಾದ ದಿನಗಳಿಂದೀಚೆಗೆ ಇನ್ನೂ ಆಪ್ತವಾಯ್ತು.
ಸಾರ್ವಜನಿಕ ಸಂಗೀತ ರಸಸಂಜೆ ಕಾರ್ಯಕ್ರಮಗಳಲ್ಲಿ ಲತಾ ಮಂಗೇಶ್ಕರ್ ಅವರು ಈ ಹಾಡನ್ನು ಹಾಡುವಂತೆ, ದಿವಂಗತ ಮುಕೇಶ್ ಅವರು, ಸದಾ ಬೇಡಿಕೆ ಮುಂದಿಡುತ್ತಿದ್ದರು. ಆಕೆ ಆ ಬೇಡಿಕೆಯನ್ನು ಮನ್ನಿಸಿ ಹಾಡುತ್ತಿದ್ದರು ಕೂಡ.
ನನ್ನ ಪಾಲಿಗೆ ಈ ಹಾಡಿನೊಂಡಿಗೆ ಮುಕೇಶ್ ನೆನಪೂ ಶಾಶ್ವತ.
ಆಸು ಹೆಗ್ಡೆ
ಉ: ಬಳಸೆನ್ನ ಕೊರಳ ಒಲವೇ...!
ಸು0ದರವಾಗಿ ಅರ್ಥೈಸಿದ್ದೀರಿ ಸರ್. ಕವನಾ ಚೆನ್ನಾಗಿ ಮೂಡಿ ಬ0ದಿದೆ.