June 20, 2012 - 8:03am
ನಿರರ್ಗಳವಾಗಿ ಧುಮ್ಮಿಕ್ಕಿ
ಹರಿಯಬೇಕಿದ್ದ ಭಾವಬಿಂದು,
ಸಿಂಧುವಿನಂತೆ ಬತ್ತಿಹೋಗಿದೆ .
ನವರಸಗಳ ಸುರಿಸಿ
ಸವಿಜೇನಾಗಬೇಕಿದ್ದ ಪ್ರೇಮದೊರತೆ,
ಬಿಸುಟ ಕಬ್ಬಿನ ಜಲ್ಲೆಯಂತೆ ಒಣಗಿಹೋಗಿದೆ.
ಮಲ್ಲಿಗೆಯಂತೆ ಕಂಪು ಸೂಸಿ
ಮನಕೆ ತಂಪೆರೆಯಬೇಕಿದ್ದ ಒಲುಮೆ,
ಪಾಪನಾಶಿನಿ ಗಂಗೆಯಂತೆ, ಗಬ್ಬೆದ್ದು ಹೋಗಿದೆ.
ಇಂಪಾದ ಧ್ವನಿಮಾಧುರ್ಯದೊಡನೆ
ಮುದವೀಯಬೇಕಿದ್ದ ಚಿಲುಮೆ,
ಅದೇ ಶಬ್ದಮಾಲಿನ್ಯದ ನಡುವೆ ಕಳೆದುಹೋಗಿದೆ.
ಹೃದಯವನ್ನು ಘಾಸಿಗೊಳಿಸಿ
ಮೌಲ್ಯಗಳನು ಕಡೆಗಣಿಸಿ,
ಅವರವರ ಬಾಳನೌಕೆ ಮುಂದೆಸಾಗಿದೆ..!!
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಬಾಳನೌಕೆ
ಈಗ ಬದುಕು ಇರುವುದೆ ನೀವು ವರ್ಣಿಸಿರುವ ರೀತಿ
ಉ: ಬಾಳನೌಕೆ
ಹಾಗಾಗ ಬಾರದಿತ್ತು, ಆದರೆ ಆಗ್ತಾ ಇದೆ... !! :(
ಉ: ಬಾಳನೌಕೆ :ರವಿ ಕಿರಣ್ ಅವ್ರೆ-
ಮೌಲ್ಯಗಳನು ಕಡೆಗಣಿಸಿ,
ಅವರವರ ಬಾಳನೌಕೆ ಮುಂದೆಸಾಗಿದೆ..!!
===========================
ರವಿ ಕಿರಣ್ ಅವ್ರೆ-
ಉತ್ತಮ ಬರಹ...
ಶುಭವಾಗಲಿ..
\|/
ಉ: ಬಾಳನೌಕೆ :ರವಿ ಕಿರಣ್ ಅವ್ರೆ-
ಧನ್ಯವಾದಗಳು ಸಪ್ತಗಿರಿಗಳೇ...
ಇದು ವೈಯಕ್ತಿಕ ಅನುಭವದ
@ harishsaniha: