September 26, 2011 - 1:03pm
ನಾಗರ ಜಡೆಯಾಕೆ
ಕೈಯನು ಹಿಡಿಯೋಕೆ
ಬರುತಾಳೆ ಶ್ರಾವಣ ಮಾಸಕೆ
ಬರುತಾಳೆ ಶ್ರಾವಣ ಮಾಸಕೆ ನನ್ನವಳು
ಜೀವನದ ಜೋಳವ ಬೀಸೋಕೆ
ಬಟ್ಟಲಗಣ್ಣವಳು
ಬಲುಚಂದ ನನ್ನವಳು
ಪ್ರೀತೀಯ ಬಾಣವ ಬಿಟ್ಟವಳು
ಪ್ರೀತೀಯ ಬಾಣವ ಬಿಟ್ಟವಳು ನನ್ನವಳು
ಎದೆಯಾಗೆ ಜೋರಾಗಿ ನೆಟ್ಟವಳು
ಕಗ್ಗತಲ ಬೆಳಕಾಗಿ
ಕಂಗಳಿಗೆ ಹೊಳಪಾಗಿ
ಬಾಡಿದ ತೋಟಕೆ ಸುಮವಾಗಿ
ಬಾಡಿದ ತೋಟಕೆ ಸುಮವಾಗಿ ನನ್ನವಳು
ಬಂದಾಳ ನನ ಬಾಳ್ಗೆ ಸುಧೆಯಾಗಿ
ನಿಮ್ಮ ಸುಮಂಗಲಾ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:










ಪ್ರತಿಕ್ರಿಯೆಗಳು
ಉ: ಬಾಳಿನ ಸುಧೆಯಾದ ಸಂಗಾತಿ
ಸೊಗಸು! :))
ಉ: ಬಾಳಿನ ಸುಧೆಯಾದ ಸಂಗಾತಿ
ಮೆಚ್ಚುಗೆಗೆ ಹ್ಱುತ್ಪೂರ್ವಕ ವ0ದನೆಗಳು ಸರ್. :)))
ಉ: ಬಾಳಿನ ಸುಧೆಯಾದ ಸಂಗಾತಿ
ಮೆಚ್ಚುಗೆಗೆ ಹ್ಱುತ್ಪೂರ್ವಕ ವ0ದನೆಗಳು ಸರ್. :)))
ಉ: ಬಾಳಿನ ಸುಧೆಯಾದ ಸಂಗಾತಿ
ಆತ್ಮೀಯ
ಕೆ ಎಸ್ ನ ಅವರ ಪ್ರೇರಣೆಯಾ? :) ಸು೦ದರವಾಗ ಸರಳ ಸಾಲುಗಳು ಚೆನ್ನಾಗಿದೆ.
ಹರಿ
ಉ: ಬಾಳಿನ ಸುಧೆಯಾದ ಸಂಗಾತಿ
ಮೆಚ್ಚುಗೆಗೆ ತು0ಬಾ ಧನ್ಯವಾದಗಳು ಹರೀಶವರೆ. :)
ಉ: ಬಾಳಿನ ಸುಧೆಯಾದ ಸಂಗಾತಿ
ಛಾಲೆಂಜ್ ತಗೊಂಡು ಚಲೋ ಕವನ ಹೆಣಿದೀರಿ, ಫೋಟೊದಾಗಿನ ಚಂದನ್ ಜಡಿ ಹಂಗ. ಆದ್ರ ಶ್ರಾವಣ ಮಾಸ ಮುಗಿದು ಕಾರ್ತೀಕ ಹತ್ರಾಗ್ಲಕತ್ಯಾದ ಇದನ್ನು ಹಾಡೋರು ಇನ್ನು ಯಾವಾಗ ಬರ‍್ತಾರ?
ಉ: ಬಾಳಿನ ಸುಧೆಯಾದ ಸಂಗಾತಿ
>>>ಆದ್ರ ಶ್ರಾವಣ ಮಾಸ ಮುಗಿದು ಕಾರ್ತೀಕ ಹತ್ರಾಗ್ಲಕತ್ಯಾದ ಇದನ್ನು ಹಾಡೋರು ಇನ್ನು ಯಾವಾಗ ಬರ‍್ತಾರ<<<?
ನಮ್ಮೂರಿನ್ ದಾರಿ ತಪ್ಪಿಬಿಟ್ಟಾರ0ತೆ ಸರ್!!!!!!! ಅದಕೆ ಕರೆಕ್ಟ್ ದಾರಿ ಕೇಳ್ಕೊ0ತ ಬರ್ಲಿಕತ್ತಾರ0ತ್ರಿ ಸ್ವಲ್ಪ ಲೇಟಾಗತ್ತ್ ಅ0ದ್ರು,! ಹಿ0ಗಾಗಿ ನಾನ ಊಹೆ ಮಾಡಕೊ0ಡು ಶ್ರಾವಣದಾಗ ಬರಬಹುದು ಅನಕೊ0ಡಿದಿನಿ ನೋಡ್ಬೇಕು ಸರ್ ಕಾರ್ತಿಕಕ್ಕೆ ಬ0ದ್ರು ಬರಬಹುದು.. :))))))))))))))))))
ಉ: ಬಾಳಿನ ಸುಧೆಯಾದ ಸಂಗಾತಿ
ದಾರಿತಪ್ಪಿ ನಮ್ಕಡಿಯೇನಾರ ಬ0ದ್ರ ಧಾರವಾಡದ ಗಾಡಿ ಹತ್ತಿಸಿ ಕಳಿಸ್ತೀನಿ!
ಉ: ಬಾಳಿನ ಸುಧೆಯಾದ ಸಂಗಾತಿ
ದೊಡ್ಡಮನಸ್ಸು ತಮ್ದು. ಧನ್ಯವಾದಗಳು ಸರ್. :)
ಉ: ಬಾಳಿನ ಸುಧೆಯಾದ ಸಂಗಾತಿ
ಛಾಲೆಂಜ್ ತಗೊಂಡು ಚಲೋ ಕವನ ಹೆಣಿದೀರಿ, ಫೋಟೊದಾಗಿನ ಚಂದನ್ ಜಡಿ ಹಂಗ.
ಉ: ಬಾಳಿನ ಸುಧೆಯಾದ ಸಂಗಾತಿ
ಪ್ರತಿಕ್ರಿಯೆಗೆ ಹ್ಱುತ್ಪೂರ್ವಕ ವ0ದನೆಗಳು ಸರ್, ಜೀವನದಲ್ಲಿ ಛಾಲೇ0ಜ್ ಅ0ದ್ರೆ ನ0ಗೆನೋ ಪ್ರೀತಿ ಜಾಸ್ತಿ, ಮಾಡೋಕಾಗಲಾರದ ಕೆಲಸಗಳು ಸಹಿತ ನನ್ನಿ0ದ ಆಗಿಬಿಡ್ತದ ನೋಡ್ರಿ.ತಮ್ಮ0ತ ಮೋಟಿವೇಟ್ ಮಾಡು ಗುರುಗಳು ಇರುವವರೆಗೆ ಛಾಲೆ0ಜ್ ಸ್ವೀಕರಿಸುವವರಿಗೆ ಸೋಲೆಲ್ಲಿಯದು ಸರ್? :)))
ಉ: ಬಾಳಿನ ಸುಧೆಯಾದ ಸಂಗಾತಿ
ಗುರುಗಳೆ ಒ0ದ್ ಮಾತು ಪರ್ಸನಲ್ ವಿಷಯಾ ಕೇಳ್ತಿದಿನಿ ಅ0ತಾ ತಪ್ಪ ತಿಳಿಬೇಡಿ, ಇಷ್ಟಾ ಇದ್ರೆ ಹೇಳಿ ಇಲ್ದಿದ್ರೆ ನಡೆಯುತ್ತೆ. ನೀವು ಹೈದ್ರಾಬಾದ್ ಕ್ಱುಷಿ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸ್ತಿದ್ದೀರಾ? ನಿಮ್ಮ ಉನ್ನತ ವ್ಯಾಸಾ0ಗ ಯಾವ ಪ್ರದೇಶದಲ್ಲಿ ಮುಗಿದಿದೆ?
ಉ: ಬಾಳಿನ ಸುಧೆಯಾದ ಸಂಗಾತಿ
ಅಯ್ಯೋ ಇದ್ರಲ್ಲಿ ಪರ್ಸನಲ್ ಏನು ಬಂತು? ನಾನು ಕೂಡ ಸಾಲಿ ಕಲಿತದ್ದು ನಿಮ್ಮ ಧಾರವಾಡದ ಕೃಷಿ ಮಹಾವಿದ್ಯಾಲಯದಲ್ಲಿ. ೧೯೮೨-೮೬ ಡಿಗ್ರಿ, ೮೬-೮೯ರಲ್ಲಿ ಜೆನೆಟಿಕ್ಸ & ಪ್ಲಾಂಟ್ ಬ್ರೀಡಿಂಗಿನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದು. ಕೆಲವೊಂದು ಕಂಪನಿಗಳಲ್ಲಿ Breeder ಆಗಿ ಕೆಲಸ ಮಾಡಿ ೨೦೦೫ರಿಂದೀಚೆಗೆ ಹೈದರಾಬಾದಿನಲ್ಲಿ ಕೃಷಿ ಸಂಶೋಧನಾ ಸಲಹೆಗಾರನಾಗಿ ಸ್ವ-ಉದ್ಯೋಗ ಮಾಡಿಕೊಂಡಿದ್ದೇನೆ. (Self-Employed). ನಿಮ್ಮ ಕಳಕಳಿಗೆ ಧನ್ಯವಾದಗಳು ಸುಮಂಗಳಾ. ನೀವು ಕೂಡ ಅಗ್ರಿ ಕಾಲೇಜಿನವರು..........ಏಕೆಂದರೆ ಹೋಮ್ ಸೈನ್ಸಿನಲ್ಲಿ ಎಮ್.ಎಸ್ಸಿ. ಮಾಡಿದ್ದೀರಲ್ಲಾ?........ ನನ್ನ ಊಹೆ ಸರಿ ಎಂದುಕೊಳ್ಳುತ್ತೇನೆ?
ಉ: ಬಾಳಿನ ಸುಧೆಯಾದ ಸಂಗಾತಿ
ಇದಪ್ಪಾ ಮಾತ0ದ್ರೆ :) ಗರುಗಳೇ ನಿಮ್ಮ ಊಹೆ ನನ್ನ ಊಹೇ ಎರಡು ನೂರಕ್ಕೆ ನೂರರಷ್ಟು ಸರಿಯಾಗಿದೆ. ನಾನು ಪದವಿಯಷ್ಟೆ ಧಾರವಾಡ್ ಕೃಷಿ ಮಹಾವಿದ್ಯಾಲಯದಲ್ಲಿ ಮುಗಿಸಿದ್ದು. ನ0ತರಾ ICAR ನಿವ್ ದೆಹಲಿ ನಡೆಸಿದ ಪರೀಕ್ಷೆಯಲ್ಲಿ ರಾ0ಕ್ ಬ0ತು, ಹೀಗಾಗಿ ಸ್ನಾತಕೋತ್ತರ ಪದವಿಯನ್ನ ಮಾಹಾರಾಷ್ಟ್ರದಲ್ಲಿ ಮುಗಿಸಬೇಕಾಯಿತು. ಅದೇನೆ ಇರ್ಲಿ ನಾವಿಬ್ಬರೂ ಒ0ದೆ ಮರದ ಎರಡು ಬೇರುಗಳು, ನೀವು ಹಳೇ ಬೇರಾದರೆ ನಾನು ಹೊಸ ಚಿಗುರು. ವಿಷಯಾ ತು0ಬಾ ಖುಷಿ ಕೊಟ್ತು ಗುರುಗಳೆ :)) ಕುಣದಾಡ್ ಬಿಟ್ಟೆ. ಇನ್ನೊ0ದು ವಿಷಯಾ ಅ0ದ್ರೆ ನೀವು ೮೬ ರಲ್ಲಿ ಡಿಗ್ರಿ ಮುಗಿಸಿ ಹೊರಬ0ದಾಗಾ ನಾನು ಅಮ್ಮನ ಗರ್ಭದಿ0ದ ಹೊರಗೆ ಬ0ದು ಆಗ ಜಸ್ಟ್ ಕಣ್ಣು ಬಿಟ್ಟಿದ್ದೆ ಗುರುಗಳೆ. ನಿಮ್ಮ ಬಗ್ಗೆ ಕೇಳಿ ತು0ಬಾ ಖುಶಿಯಾಯ್ತು. ಹೈದ್ರಾಬಾದ್ಗೆ ಬ0ದಾಗ ನಿಮ್ಮನ್ನ ಭೇಟಿಯಾಗುವ ಸದವಕಾಶವನ್ನು ಮಾಡಿಕೊಡಿ ಗುರುಗಳೆ (I am coming to hydrabad for PHD enterance exಅಮ್) ಆ ಸಮಯದಲ್ಲಿ ಭೇಟಿಯಾಗುವ ಅವಕಾಶ ಸಿಕ್ರೆ ಖುಷಿಯಾಗುತ್ತೆ. ನೀವು ಧಾರವಾಡ್ ಗೆ ಬ0ದರೆ ಮನೆಗೆ ಬರೋದನ್ನ ಮರಿಬೇಡಿ ಗುರುಗಳೆ. :))))))))))))))))))))))))))))))))))))) ಫುಲ್ ಖುಶ್
ಉ: ಬಾಳಿನ ಸುಧೆಯಾದ ಸಂಗಾತಿ
ಆಗಲಿ ಸುಮ0ಗಳಾ ಅವರೇ, ನನ್ನ ಈ ಮೇಲ್ sridharbandri@gmail.com
ಉ: ಬಾಳಿನ ಸುಧೆಯಾದ ಸಂಗಾತಿ
ದ್ಹನ್ಯವಾದಗಳು ಗುರುಗಳೆ ನಾನು ಇ ಮೇಲ್ ಕಳ್ಸ್ತಿನಿ ನಿಮಗೆ .
ಉ: ಬಾಳಿನ ಸುಧೆಯಾದ ಸಂಗಾತಿ
ಅದ್ಭುತಾ,
ಉ: ಬಾಳಿನ ಸುಧೆಯಾದ ಸಂಗಾತಿ
ಪ್ರತಿಕ್ರಿಯೆಗಳಿಗೆ ಧನ್ಯವಾದಗಳು ಶ್ರೀನಿವಾಸ ಅವರೆ