23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಬೆಂಗ್ಳೂರು ಟ್ರಾಫಿಕ್ ಹಾಡು

May 8, 2012 - 5:02pm
RAMAMOHANA

ಸೂಚನೆ:
ಪರಮಾತ್ಮ ಚಿತ್ರದ ``ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ`` ಧಾಟಿಯಲ್ಲಿ ಹೇಳಿ ಕೊಳ್ಳುವುದು.

ಬೆಂಗ್ಳೂರು ರಸ್ತೇಲಿ ಡ್ರೈವಿಂಗ್ ಮಾಡ್ವಾಗ ಬಾಳಾನೆ ಹುಷಾರ್ ಕಣ್ರೀ....
ಯ್ನಾ........... ಯ್ನಾ..........
ಅತ್ಲಿಂದ ಇತ್ಲಿಂದ ಹಿಂದ್ಲಿಂದ ಮುಂದ್ಲಿಂದ ಗುದ್ಗೊಂಡು ಹೋಗ್ಬಿಡ್ತರೀ.....
ಯ್ನಾ........... ಯ್ನಾ..........
ಆಟೋದ ಆರ್ಭಟ ಕಾಮನ್ ಎಲ್ಲೆಲ್ಲು...
ಬೀಟಿಎಸ್ ನುಗ್ಗಾಟ ರಸ್ತೇಲಿ ಮಾಮೂಲು....

ಕಣ್ಣಂತು ರಸ್ತೆ ಮೇಲೆ ಇದ್ದೇ ಇರ್ಲಿ.
ಯಾವ್ದಕ್ಕು ಅಡ್ರೆಸ್ಸು ಜೇಬಲಿರ್ಲಿ...
ಯ್ನಾ........... ಯ್ನಾ..........

ಅತ್ಲಿಂದ ಇತ್ಲಿಂದ ಹಿಂದ್ಲಿಂದ ಮುಂದ್ಲಿಂದ ಗುದ್ಗೊಂಡು ಹೋಗ್ಬಿಡ್ತರೀ.....
ಯ್ನಾ........... ಯ್ನಾ..........
ಬೆಂಗ್ಳೂರು ರಸ್ತೇಲಿ ಡ್ರೈವಿಂಗ್ ಮಾಡ್ವಾಗ ಬಾಳಾನೆ ಹುಷಾರ್ ಕಣ್ರೀ....
ಯ್ನಾ........... ಯ್ನಾ..........



ಔಟರ್ರು ರಿಂಗ್ ರೋಡು, ಇನ್ನರ್ರು ಮೈನ್ ರೋಡು,
ಎಲ್ಲೆಲ್ಲು ನೀನೋಡು, ಊರ್ತುಂಬ ಓಡಾಡು
ರೋಡ್ಜಾಮು ಇಲ್ಲೂ, ಟ್ರಾಫ಼ಿಕ್ ಜಾಮ್ ಅಲ್ಲೂ.
ಸಿಗ್ನಲ್ಲು ರೆಡ್ಡಿದ್ರು ಹಿಂದ್ಲಿಂದ ಹಾರನ್ನು,
ಓಡ್ತಿದ್ರು ನಿಲ್ಸಿದ್ರು ಸುಮ್ಸುಮ್ನೆ ಹಾರನ್ನು
ಪೀಪೀಪಿ ಪೀಪಿ...ಪಿಪಿಪೀಪಿ ಪೀಪಿ...
ಹ್ಯಾ................
ನಡ್ಯೋಕ್ಕೆ ಫ಼ುಟ್ ಪಾತೆ ಇಲ್ಲ ಕಣ್ರೀ.....
ಊರ್ತುಂಬ  ನೋ ಪಾರ್ಕಿಂಗ್ ಬೋರ್ಡುಂಟುರೀ....

ಬೆಂಗ್ಳೂರು ರಸ್ತೇಲಿ......


ಹೆಲ್ಮೆಟ್ಟು ಹಾಕೋದು ತಲೆಗೆ ಸರಿ,
ಕೈಗದುವೆ ಹಾಕಿದ್ರೆ ಯಾವ್ ಸೇಫ಼್ಟಿರಿ,
ಬೇಡ್ರಪ್ಪೊ ಕೇಳ್ರಿ, ತಲೆಗಾಕಿ ಕಟ್ರಿ.
ಸೀಟ್ ಬೆಲ್ಟು ಕಟ್ದಿದ್ರೆ ಫ಼ೈನ್ ಹಾಕ್ತರಿ,
ಸ್ಯಾಟಿ ಲೈಟು ಪಿಚ್ಚರ್ರು ಹಿಡ್ಕಂತರ್ರಿ.....
ಪೋಲೀಸ್ದು ಟಾರ್ಗೆಟ್, ಪೋಲೀಸ್ದು ಟಾರ್ಗೆಟ್
ಹ್ಯಾ........ಯ್ನಾ....
ಹ್ಯಂಗಾರ ಮುನ್ನುಗ್ಗಿ ಮನೆ ಸೇರ್ಕಳಿ...
ಆಗ್ದಿದ್ರೆ ನಿಂತಲ್ಲೆ ತಲೆ ಕೆರ್ಕಳಿ...
ಯ್ನಾ.....ಯ್ನಾ......


ಬೆಂಗ್ಳೂರು ರಸ್ತೇಲಿ ಡ್ರೈವಿಂಗ್ ಮಾಡ್ವಾಗ ಬಾಳಾನೆ ಹುಷಾರ್ ಕಣ್ರೀ...
ಯ್ನಾ.....ಯ್ನಾ......
ಬಾಕೀ ಸಮಾಚಾರ ಬ್ರೇಕ್ ಬಾದ್ ಅಂತಾರೆ.. ಅಂಭಂಬ್ರ ಸ್ವಾಮಿ ಕಣ್ರಿ...

ಕ್ಲಿಷ್ಟ ಪದದ ಅರ್ಥ: `ಅಂಭಂಬ್ರ ಸ್ವಾಮಿ` ಅರ್ಥಾತ್ ಅಂಡಾಂಡ ಭಂಡ ಬ್ರಮ್ಹಾಂಡ ಸ್ವಾಮಿ.

-ರಾಮಮೋಹನ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by mnsrao on

<ಯಾವ್ದಕ್ಕು ಅಡ್ರೆಸ್ಸು ಜೇಬಲಿರ್ಲಿ.>
ಯಾವ್ದಕ್ಕೂ ಇದು ಬೇಷ್ ಅದ್ವೈಸ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by RAMAMOHANA on

ಸಧ್ಯದ ಪರಿಸ್ಥಿತಿ ಹಾಗಿದೆ ಸಾರ್, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಎಮೆನೆಸ್ ರಾವ್ ಅವರೆ
ರಾಮಮೋಹನ‌

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhalle on

<< ಯಾವ್ದಕ್ಕು ಅಡ್ರೆಸ್ಸು ಜೇಬಲಿರ್ಲಿ...>>>> ಸೂಪ‌ರ್ :‍)))))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by RAMAMOHANA on

ದ‌ನ್ಯವಾದಗಳು ಭಲ್ಲೇ ಜಿ.
ರಾಮಮೋಹನ‌

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ರಾಮ ಮೋಹನ್ ಅವ್ರೆ-

ಬೆಂಗಳೂರ ಟ್ರಾಫಿಕ್ ಸಮಸ್ಯೆ ಬಗ್ಗೆ ಹಾಸ್ಯವಾಗಿ ಚೆನ್ನಾಗಿ ಬರೆದಿರುವಿರಿ...

ನೀವ್ ಹೇಳಿದ್ದು ನಿಜ ಕೇವಲ ಪೊಲೀಸರ್ ಭಯಕ್ಕಾಗಿ ಹೆಲ್ಮೆಟ್ ಕೈನಲಿ ಹಿಡಿದು
ಸಾಗುವವರಿಗೆ ಏನನ್ನಬೇಕು?

ಇನ್ನೊಂದು- ಅಡ್ಡ್ರೆಸ್ಸು ಜೇಬಲ್ಲಿರಲಿ,
ಅದೂ ಸಹಾ ಅತ್ಯವಶ್ಯ...!!

ಶುಭವಾಗಲಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by RAMAMOHANA on

>>ನೀವ್ ಹೇಳಿದ್ದು ನಿಜ ಕೇವಲ ಪೊಲೀಸರ್ ಭಯಕ್ಕಾಗಿ ಹೆಲ್ಮೆಟ್ ಕೈನಲಿ ಹಿಡಿದು
ಸಾಗುವವರಿಗೆ ಏನನ್ನಬೇಕು?<<
ರಸ್ತೆಯಲ್ಲಿ ಸಾಗುವಾಗ ಬಹಳಷ್ಟು ಜನ ಶಿರಸ್ತ್ರಾಣವನ್ನು ಕೈಗೆ ಹಾಕಿ ಕೊಂಡು ಹೋಗುವುದನ್ನು ನೋಡಿ ಹೀಗೆ ಅನ್ನಿಸಿತು. ಕಾನೂನು ಇರೋದು ಅದನ್ನು ತಲೆಗೆ ಹಾಕಬೇಕು ಅಂತ ಆದರೆ ಇವರು ಕೈಗೆ ಹಾಕ್ತಾರಲ್ಲ, ಹೇಗೆ..?
ಜೊತೆಗೆ ಆಗಾಗ್ಗೆ ಸರ್ಕಲ್ ಹತ್ರ ಬಂದಾಗ ತಲೆ ಮೇಲೆ ಹೋಗುತ್ತೆ, ಮತ್ತೆ ಕೈಗೆ ವಾಪಸ್ಸು ಬರುತ್ತೆ. ಪ್ರಾ.ಚೀ....ನ...ತಿ, ಸ......ಅ... ಮಾಡಿದ ಹಾಗೆ.
ದನ್ಯವಾದಗಳು ಸಪ್ತಗಿರಿ ಅವರೆ.
ರಾಮಮೋಹನ‌

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

:) :) :)
ರಾಮಮೋಹನರೆ,
ಕವನ ಸೂಪರ್ ಆಗಿದೆ.
>>>ಅತ್ಲಿಂದ ಇತ್ಲಿಂದ ಹಿಂದ್ಲಿಂದ ಮುಂದ್ಲಿಂದ ಗುದ್ಗೊಂಡು ಹೋಗ್ಬಿಡ್ತರೀ.....
ಯ್ನಾ........... ಯ್ನಾ..........
- ಚಲೋ ಮಲ್ಲೇಶ್ವರ ಟೈಮಲ್ಲಿ ನಿಮ್ಮ ಕಾರಿಗೆ ಹಿಂದ್ಲಿಂದ ಮುಂದ್ಲಿಂದ ಗುದ್ದಿ ಸ್ಟಾರ್ಟ್ ಆಗುತ್ತಿತ್ತು. ಈಗ ಅತ್ಲಿಂದ ಇತ್ಲಿಂದಲೂ ಗುದ್ದುವುದರಿಂದ ಸ್ಟಾರ್ಟಿಂಗ್ ಟ್ರಬಲ್ಲೇ ಇರಲಿಕ್ಕಿಲ್ಲ. :)
>>>ಸಿಗ್ನಲ್ಲು ರೆಡ್ಡಿದ್ರು ಹಿಂದ್ಲಿಂದ ಹಾರನ್ನು,
ಓಡ್ತಿದ್ರು ನಿಲ್ಸಿದ್ರು ಸುಮ್ಸುಮ್ನೆ ಹಾರನ್ನು
ಪೀಪೀಪಿ ಪೀಪಿ...ಪಿಪಿಪೀಪಿ ಪೀಪಿ...
-ಅದು ನಮ್ಮದೇ ಸ್ಕೂಟರ್ರು ರೀ.. ಹಾರನ್ ಸ್ವಿಚ್ಚೇ ಇಲ್ಲಾ. ಅದರ ಪಾಡಿಗೆ ಅದು ಹಾಡುತ್ತಾ ಇರುತ್ತದೆ. :)
ಬ್ರೇಕ್ ಕೆ ಬಾದ್:-
ನಮ್ದೂ ಒಂದು ಹಾಡು :
ಧಾಟಿ :
"ಅಂಡಾಂಡ ಸ್ವಾಮಿ" ಚಿತ್ರದ "ತಿಂಬಟ್ಟು ಸ್ವಾಮೀಗೆ ಜಾಮೂನು ತಿನ್ಸೋಣರೀ" ರಾಗದಲ್ಲಿ..

ಪರ್ಕೂಟ್ ಸ್ಕೂಟರ್ ರೋಡಲ್ಲಿ ಬರುವಾಗ
ಪೂರ್ತಿ ರಸ್ತೇನೆ ಬಿಡ್ತಾರೆ ರೀ............
ರಟಟಕ್ಕ ಟಕಟಕ್ಕ ರಟಟಕ್ಕ ಟಕ್ಕ..
ಟ್ರಾಫಿಕ್ಕು ಪೋಲೀಸು ಕಂಬಾದ ಮೇಲೇರಿ
ಸಿಗ್ನಲ್ಲೇ ಬದ್ಲಾಯ್ಸಿತಾನೆರೀ..
ರಟಟಕ್ಕ ಟಕಟಕ್ಕ ರಟಟಕ್ಕ ಟಕ್ಕ..
-ಅಂಭಂಬ್ರ ಸ್ವಾಮಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಪರ್ಕೂಟ್ ಸ್ಕೂಟರ್ ರೋಡಲ್ಲಿ ಬರುವಾಗ

...

ಟ್ರಾಫಿಕ್ಕು ಪೋಲೀಸು ಕಂಬಾದ ಮೇಲೇರಿ
ಸಿಗ್ನಲ್ಲೇ ಬದ್ಲಾಯ್ಸಿತಾನೆರೀ..

:()))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಟ್ರಾಫಿಕ್ಕು ಪೋಲೀಸು ಕಂಬಾದ ಮೇಲೇರಿ
ಸಿಗ್ನಲ್ಲೇ ಬದ್ಲಾಯ್ಸಿತಾನೆರೀ..

:()))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by RAMAMOHANA on

>>ರಟಟಕ್ಕ ಟಕಟಕ್ಕ ರಟಟಕ್ಕ ಟಕ್ಕ..<<
ಬಿಜಿಎಂ ರಿದಂ ಸೊಗಸಾಗಿದೆ ಗಣೇಶ್ ಜಿ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
‍ರಾಮಮೋಹನ‌

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಸ್ವಾಮಿ ರಾಮಮೋಹನ್ ಸಾರ್, ನಿಮ್ಮ ಬೆಂಗಳೂರು ಎಷ್ಟೋ ವಾಸಿ. ಹೈದರಾಬಾದಿನಲ್ಲಿ ಒನ್‍ವೇ ಇದ್ದರೂ ಕೂಡ ಎದರುಗಡೆಯಿಂದ ವಾಹನಗಳು ಬರುತ್ತವೆ, ಎಡಗಡೆಯಿಂದ ಕೂಡ ವಾಹನಗಳನ್ನು ಓವರ್‍ಟೇಕ್ ಮಾಡುತ್ತಾರೆ, ಹಿಂದೆ ಮುಂದೆ ನೋಡದೆ ಗಾಡಿಯನ್ನು ರಿವರ್ಸ್ ತೆಗೆದುಕೊಳ್ಳುತ್ತಾರೆ; ಸಿಗ್ನಲ್ಲಿನಲ್ಲಿ ಕೆಂಪು ದೀಪ ಕಾಣಿಸಿದಾಗ ವಾಹನವನ್ನು ನಿಲ್ಲಿಸಲೇಬೇಕೆಂಬ ನಿಯಮವನ್ನು ಕಡ್ಡಾಯವಾಗಿ ಪಾಲಿಸಲೇಬೇಕೆಂಬುದೂ ಇಲ್ಲಾ! ಇವೆಲ್ಲಾ ನೋಡಿದ ಮೇಲೆ ನಮ್ಮ ಸ್ನೇಹಿತರ ಬಳಗದಲ್ಲಿ ಪ್ರಚಲಿತವಿರುವ ಒಂದು ಜೋಕೇನೆಂದರೆ, ಇನ್ನು ಮೇಲೆ ಎಲ್ಲಾ ದೊಡ್ಡ ವೆಹಿಕಲ್ಲುಗಳ ಟೈರನ್ನು ಹತ್ತು ಅಡಿ ದೊಡ್ಡವಾಗಿ ಇರಿಸುತ್ತಾರಂತೆ; ಇದರಿಂದಾಗಿ ವಾಹನಗಳ ಕೆಳಗೇ ಸ್ಕೂಟರ್ ಮತ್ತು ಆಟೋ ಸವಾರರು ತೂರಿ ಹೋಗಲು ಅನುಕೂಲ ಆಗುತ್ತದೆ ಮತ್ತು ಅವು ಎಲ್ಲಿಯಾದರೂ ರಸ್ತೆಗೆ ಅಡ್ಡವಾಗಿ ನಿಂತಾಗ/ಸಿಗ್ನಲ್ಲಿನಲ್ಲಿ ನಿಂತಾಗ ಅದರ ಕೆಳಗಡೆಯಿಂದ ತೂರಿ ಹೋಗಲು ಅನುಕೂಲ ಆಗುತ್ತದೆ. ಮತ್ತು ಇನ್ನೊಂದು ವಿಚಾರ ಇಲ್ಲಿ ನಾಲ್ಕು ದಿವಸ ಹೆಲ್ಮೆಟ್ ಕಡ್ಡಾಯ ಅಂತಾರೆ ಮತ್ತೆ ನಾಲ್ಕು ದಿವಸ ಅದರ ಬಗ್ಗೆ ಯಾರೂ ಕೇಳೋರೆ ಇರೋಲ್ಲ. ಆದ್ದರಿಂದ ನೀವು ಏನೇ ಅನ್ನಿ ಬೆಂಗಳೂರು ನೂರಕ್ಕೆ ನೂರು ಉತ್ತಮ. ಈ ಅಭಿಪ್ರಾಯ ನನ್ನ ಅನೇಕ ಕಕ್ಷಿದಾರರದು ಕೂಡಾ.

ಒಂದು ಕ್ಷಣ ನಮ್ಮೆಲ್ಲರನ್ನೂ ನಗಿಸುವಂತೆ ಮಾಡಿದ ಒಳ್ಳೆಯ ಕವನಕ್ಕೆ ಅಭಿನಂದನೆಗಳು :))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by RAMAMOHANA on

ಓ..ಹೋ... ಹೈದರಾಬಾದ್ ನಲ್ಲಿ ಹೀಗೂ ಊಂಟಾ..?
ಯಾವುದಕ್ಕೂ ನೀವು ಒಮ್ಮೆ ಅಂಭಂಬ್ರ ಸ್ವಾಮಿಗಳನ್ನು ಅಲ್ಲಿಗೆ ಅವರ ಪರ್ಕೂಟ್ ಸ್ಕೂಟರ್ ಸಮೇತ ಕರೆಸಿಕೊಳ್ಳುವುದು ಸಮಸ್ಯೆಗೆ ಪರಿಹಾರ ಒದಗಿಸ ಬಹುದೆನಿಸುತ್ತದೆ.
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ರಾಮಮೋಹನ‌

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಪ್ರಶಾಂತ ಎಂ.ಸಿ. on

ಚೆನ್ನಾಗಿದೆ ಸರ್. ಪೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದೀನಿ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

:) :) :)
ಚೆನ್ನಾಗಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by RAMAMOHANA on

ದನ್ಯವಾದಗಳು ಪ್ರಶಾಂತ್ ಮತ್ತು ಚೇತನ್ ಅವರಿಗೆ.
ರಾಮಮೋಹನ‌

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.