ಬೆಳಕ ಹೊತ್ತಿಸಿ ಕೊಳಕ ತೊಲಗಿಸಿ
ಪುಳಕಗೊಳ್ಳವ ಈ ದಿನ
ಮತ್ತೆ ಬಂದಿದೆ ಬೆಳಕ ತಂದಿದೆ
ಹೊಸತು ಹೊಸೆಯುವ ಪ್ರತಿಕ್ಷಣ
ಪ್ರೀತಿ ಹಂಚಲು ಭೀತಿ ಏತಕೆ ?
ನೀತಿ ಬದುಕಿಗೆ ಚೇತನ
ಕೂಡಿ ಬಾಳುತ ಬದುಕ ಬೆಳಗಿಸಿ
ಗೆಲುವ ಮನಸದೇ ನೂತನ
ಬೇಧಭಾವವ ಮೆಟ್ಟಿ ನಿಲ್ಲುತ
ಸಮತೆ ಮೂಡಲಿ ಬಾಳ್ವೆಗೆ
ತೊಟ್ಟಿಲಾಗುವ ಬೆಳೆಸಿ ಬೆಳೆಯುವ
ಜನರ ಕನಸಿನ ಕೂಸಿಗೆ
" ದೀಪಾವಳಿ ಎಲ್ಲರಲ್ಲಿ ಹೊಸತನ ತುಂಬಿ ಬದುಕು ಬೆಳಗಿಸಲಿ"
ದೀಪಾವಳಿಯ ಶುಭಾಶಯಗಳೊಂದಿಗೆ
ಭಾಗ್ವತ










ಪ್ರತಿಕ್ರಿಯೆಗಳು
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಕೇವಲ ಸಾಲಾಗಿ ಮನೆಯ ಮು೦ದೆ ಹಣತೆಗಳನ್ನು ಬೆಳಗಿಸಿದರೆ ಸಾಲದು.. ಹಣತೆಯನ್ನು ನಮ್ಮಲ್ಲಿ ಆವಾಹಿಸಿಕೊಳ್ಳಬೇಕು.. ಆ ಬೆಳಕೆ೦ಬ ಅಗ್ನಿ ನಮ್ಮಲ್ಲಿನ ಆಸೆಗಳನ್ನು ಸುಡಬೇಕು... ತನ್ಮೂಲಕ ಆತ್ಮತೃಪ್ತಿಯನ್ನು ಸಾಧಿಸಿಕೊ೦ಡು...ಅ೦ತರ೦ಗದ ಕತ್ತಲೆಯನ್ನು ನೀಗಿಸಿಕೊಳ್ಳಬೇಕು ಅಲ್ಲವೇ ಮಾಸ್ತರರೇ..
ದೀಪಾವಳಿಯಲ್ಲೊ೦ದು ಸರ್ವಸಮತೆಯತ್ತ ಮುಖ ಮಾಡುವ ಕವನ ಇಷ್ಟವಾಯಿತು.. ದೀಪಾವಳಿ ನಿಮಗೂ ಸ೦ತಸ ನೀಡಲೆ೦ಬುದು ಈ ಶಿಷ್ಯನ ಹಾರೈಕೆ ಮಾಸ್ತರರೇ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ನಾವಡರೆ ನಮಸ್ಕಾರಗಳು,
ಸಂಪದದಲ್ಲಿ ತಮ್ಮ ಪುನರ್ ಭೇಟಿ ನಿಜಕ್ಕೂ ತುಂಬ ಸಂತಸ ನೀಡಿತು.ಸಂಪದದ ವಿಷಯದಲ್ಲಿ ನೀವೇ ಗುರು ನಾನು ಶಿಷ್ಯ
.ಗುರುವಿನ ಶುಭಹಾರೈಕೆಯನ್ನು ಸದಾ ಬಯಸುವೆ. ನಿಮ್ಮ ಪ್ರೀತಿ ಪೂರ್ವಕ ಮೆಚ್ಚುಗೆಗೆ ಧನ್ಯವಾದಗಳು. ತಮಗೆ ಹಾಗೂ ಕುಟುಂಬಕ್ಕೆ ದೀಪಾವಳಿಯ ಶುಭಾಶಯಗಳು.
ತಮ್ಮವ
ಭಾಗ್ವತ
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಭಾಗ್ವತರೆ,
ನಿಮ್ಮ ಹಾರೈಕೆ ನಮ್ಮದೂ ಸಹ.
ಆದರೆ....
>>> ಬೆಳಕ ಹೊತ್ತಿಸಿ ಕೊಳಕ ತೊಲಗಿಸಿ ಪುಳಕಗೊಳ್ಳವ ಈ ದಿನ
-ಪಟಾಕಿ ಹೊತ್ತಿಸಿ ಕೊಳಕ ತುಂಬಿಸಿ ಪುಳಕಗೊಳ್ಳುತ್ತಿದ್ದಾರೆ ಈ ಜನ :(
ಕವನ ಚೆನ್ನಾಗಿದೆ.
-ಗಣೇಶ.
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಗಣೇಶರವರೆ,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ನೀವಿತ್ತ ಸಾಲುಗಳಿಗೂ ಕೂಡ : )
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಭಾಗ್ವತರೆ,
<<ತೊಟ್ಟಿಲಾಗುವ ಬೆಳೆಸಿ ಬೆಳೆಯುವ
ಜನರ ಕನಸಿನ ಕೂಸಿಗೆ>> ನನಗೆ ಮುದ ನೀಡಿದ ಸಾಲುಗಳು. ದೀಪಾವಳಿಯ ಅರ್ಥವನ್ನು ಬಿಂಬಿಸುವ ಒಳ್ಳೆಯ ಕವನಕ್ಕೆ ಅಭಿನಂದನೆಗಳು.
ಗಣೇಶರಿಗಾಗಿ ಈ ಕೆಳಗಿನ ಸಾಲುಗಳು,
ಬೀಡಿ ಹೊತ್ತಿಸಿ ಕೊಳಕ ಸಾಗಿಸುತ್ತಾರೆ B.D.A. ಜನ,
ಇದು ನಡೆಯುವುದು ಹಬ್ಬವಾದ ಮೂರನೆಯ ದಿನ,
ಅದರ ಬಗ್ಗೆ Don't worry ಮಾಡ್ಕೋಬೇಡಿ ಗಣೇ"ಸನ್ನ"
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಶ್ರೀಧರವರೆ,
ನಿಮ್ಮ ಮೆಚ್ಚುಗೆಗೆ ಪ್ರೋತ್ಸಾಹಕ್ಕೆ ಧನ್ಯವಾದಗಳು.
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಕವನ ಸು0ದರವಾಗಿ ಮೂಡಿ ಬ0ದಿದೆ ಭಾಗ್ವತರೆ:)
ದೀಪಾವಳಿ ಹಬ್ಬದ ಶುಭಕಾಮನೆಗಳು ನಿಮಗೆ ಮತ್ತು ಮನೆಯವರಿಗೆಲ್ಲರಿಗು
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಸುಮಂಗಲಾರವರೆ,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಈ ದಿಪಾವಳಿಗೆ ಸುಂದರ ಕವನವಿತ್ತು ಎಲ್ಲರಿಗೂ ಶುಭ ಕೋರಿದ್ದಿರಿ,
ವಂದನೆಗಳು
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ರಮೇಶ ಕಾಮತ್ ರವರೆ,
ಹಿರಿಯರಾದ ತಮ್ಮ ಪ್ರೋತ್ಸಾಹಕ್ಕೆ ಮೆಚ್ಚುಗೆಗೆ ಧನ್ಯವಾದಗಳು.
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ನಾರಾಯಣ ಭಾಗ್ವತರೇ
ದೀಪಾವಳಿಯ ಹಾರ್ಧಿಕ ಶುಭಾಶಯಗಳು.
ಕವನ ಸು0ದರವಾಗಿ ಮೂಡಿಬ0ದಿದೆ
ನೀಳಾ
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ನೀಳಾರವರೆ,
ನಿಮ್ಮ ಮೆಚ್ಚುಗೆಗೆ ಪ್ರೋತ್ಸಾಹಕ್ಕೆ ಧನ್ಯವಾದಗಳು.
ತಮಗೆ ದೀಪಾವಳಿಯ ಶುಭಾಶಯಗಳು.
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
"ಬೆಳಕ ಹೊತ್ತಿಸಿ ಕೊಳಕ ತೊಲಗಿಸಿ"
" ನೀತಿ ಬದುಕಿಗೆ ಚೇತನ"
"ಸಮತೆ ಮೂಡಲಿ ಬಾಳ್ವೆಗೆ"
ಸು0ದರ ಕಾವ್ಯ..........................!!!ಅಭಿನ0ದನೆಗಳು ಸಾರ್.
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಶ್ರೀನಿವಾಸರವರೆ,
ನಿಮ್ಮ ಪ್ರೋತ್ಸಾಹ, ಮೆಚ್ಚುಗೆಗೆ ನಮನಗಳು.
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ನಿಮ್ಮ ಸುಂದರ ಕವಿತೆಗೊಂದು ನನ್ನ ಪುಟ್ಟ ಕವನ
***
ಕತ್ತಲ ಸೋಲಿಸುವ ಹಟ ನನ್ನದಲ್ಲ
ಬೆಳಕಿರಬೇಕಾದರೆ ಕತ್ತಲೂ ಇರಬೇಕು
ಯಾವುದೋ ನಿಯಂತ್ರಿಸುವ
ನಿಯಮ - ಕತ್ತಲು, ಹಗಲು
ತೊಲಗಿಸಲಾರೆ ಕತ್ತಲನ್ನು
ಬೆಳಕು ಹಚ್ಚುವ ಮೂಲಕ
ಆದರೂ ಹಚ್ಚಬೇಕಿಂದು ಹಣತೆಯೊಂದನು
ಜೀವನಕಿದುವೇ ಪ್ರೇರಕ!!!
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಸಂತೋಷರವರೆ,
ನಿಮ್ಮ ಮೆಚ್ಚುಗೆಗೆ ಪ್ರೋತ್ಸಾಹಕ್ಕೆ ಧನ್ಯವಾದಗಳು.
ನಿಮ್ಮ ಈ ಪುಟ್ಟ ಕವನವೂ ಹೃದಯ ತಟ್ಟಿತು. ಅಭಿನಂದನೆಗಳು
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ನಾರಾಯಣ ಭಾಗ್ವತರೆ ತಮಗೆ ದೀಪಾವಳಿಯ ಶುಭಾಶಯಗಳು. ಬೆಳಕ ಹೊತ್ತಿಸಿ ಪುಳಕಗೊಳ್ಳುವ ದೀಪಾವಳಿ ಕವನ ಚೆನ್ನಾಗಿದೆ.
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಪದ್ಮರವರೆ,
ನಿಮ್ಮ ಮೆಚ್ಚುಗೆಯ ಆಶಿರ್ವಾದಕ್ಕೆ ಧನ್ಯವಾದಗಳು.
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಬ್ಹಾಗ್ವತರೆ
ಕವನ ಚೆನ್ನಾಗಿದೆ
ನಿಮಗು ಸಹ ಹಬ್ಬದ ಶುಭಾಶಯಗಳೊಂದಿಗೆ
ಪಾರ್ಥಸಾರಥಿ
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಪಾರ್ಥಸಾರಥಿಯವರೆ,
ನಿಮ್ಮ ಮೆಚ್ಚುಗೆಗೆ , ಪ್ರೋತ್ಸಾಹಕ್ಕೆ ಧನ್ಯವಾದಗಳು.
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ದೀಪ ಹಚ್ಚಿ ಬೆಳಕ ಹ೦ಚುವ ಹಬ್ಬದ ಸ೦ದರ್ಭಕ್ಕೆ ಸು೦ದರ ಕವನ ಭಾಗ್ವತರೆ, ಸಮಸ್ತ ಸ೦ಪದಿಗರಿಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಮಂಜುನಾಥರವರೆ,
ನಿಮ್ಮ ಮೆಚ್ಚುಗೆಗೆ ಪ್ರೋತ್ಸಾಹಕ್ಕೆ ಧನ್ಯವಾದಗಳು.