ಬೆಸೆಯದ ಬೆಸುಗೆ

ಬೆಸೆಯದ ಬೆಸುಗೆ

ಚಿತ್ರ

ಪ್ರೇಮದ ಸರಿಗೆಯು ಕಡಿದಿರಲು

ಬೆಸೆದರೆ ಮನಕದು ಮೆಚ್ಚುವುದೆ?

ಕಾಯಿಸಿ ಆರಿಸಿ ಇಟ್ಟಿಹ ನೀರದು

ದಾಹದ ಬಾಯಿಗೆ ರುಚಿಸುವುದೆ?

 

ಸಂಸ್ಕೃತ ಮೂಲ (ಮಂಜುನಾಥ ಕವಿಯ ಸಂಸ್ಕೃತ ಗಾಥಾ ಸಪ್ತಶತಿ ೧-೫೩ ):

ಪ್ರೇಮ್ಣೋ ವಿರೋಧಿತಸಂಧಿತಸ್ಯ ಪ್ರತ್ಯಕ್ಷದೃಷ್ಟವ್ಯಲೀಕಸ್ಯ

ಉದಕಸ್ಯೇವ   ತಾಪಿತಶೀತಲಸ್ಯ ವಿರಸೋ ರಸೋ ಭವತಿ

 

ಪ್ರಾಕೃತ ಮೂಲ (ಹಾಲನ ಗಾಹಾ ಸತ್ತಸಯಿ ೧ - ೫೩):

ಪೇಮಸ್ಸ ಚಿರೋಹಿಅಸಂಘಿಅಸ್ಸ ಪಚ್ಚಕ್ಖದಿಟ್ಠವಿಲಿಸಸ್ಸ

ಉಅಅಸ್ಸ ವ ತಾವಿಅಸೀಅಲಸ್ಸ ವಿರಸೋ ರಸೋ ಹೋಇ

 

-ಹಂಸಾನಂದಿ

 

ಕೊ: ಬೆಸುಗೆ ಅನ್ನುವ ಸಿನಿಮಾಗೂ ಈ ಪದ್ಯಕ್ಕೂ ಏನೇನೂ ಸಂಬಂಧವಿಲ್ಲ :-)

 

ಕೊ.ಕೊ: ಮೂಲದಲ್ಲಿ ಇಲ್ಲದ ಕೆಲವು ಪದಗಳು ಅನುವಾದದಲ್ಲಿವೆ. ಮೂಲದಲ್ಲಿ ತುಂಡಾಗುವುದು ಎಂದಿದೆಯೇ ಹೊರತು ತಂತಿಯ ಮಾತಿಲ್ಲ. ಹಾಗೇ ಅಲ್ಲಿ ಇರುವ ಹೇಳಿಕೆ, ಅನುವಾದದಲ್ಲಿ ಪ್ರಶ್ನೆಯಾಗಿ ಬದಲಾಗಿದೆ. ಆದರೆ ಪದ್ಯದ ಭಾವನೆ ಬದಲಾಗಿಲ್ಲ ಎಂದುಕೊಂಡಿದ್ದೇನೆ.

 

ಚಿತ್ರ ಕೃಪೆ: http://theeclecticguitar.files.wordpress.com/2011/09/broken-string-guita...

Rating
No votes yet