ಬ್ರಹ್ಮಾಡರೊಂದಿಗೆ ಬೇಟಿ ‍ - ಬ್ರಹ್ಮಾಂಡರ ಮೇಲೆ ರೇಪ್ ಕೇಸೆ ? ‍

ಬ್ರಹ್ಮಾಡರೊಂದಿಗೆ ಬೇಟಿ ‍ - ಬ್ರಹ್ಮಾಂಡರ ಮೇಲೆ ರೇಪ್ ಕೇಸೆ ? ‍

ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಮೇಲೆ ರೇಪ್ ಕೇಸೆ ?

 

ಮೊದಲಬಾಗ :   http://sampada.net/blog/%E0%B2%AC%E0%B3%8D%E0%B2%B0%E0%B2%B9%E0%B3%8D%E0...

 

[ ಸೆಕ್ಯೂರಿಟಿ ಜೋರಾಗಿ ನಕ್ಕು, ತಕ್ಷಣ ಅಲರ್ಟ್ ಆಗಿ ಎದ್ದುನಿಂತ

’ಸಾರ್ , ಅದು ಭೂಕಂಪವಲ್ಲ, ಸ್ವಾಮೀಜಿಗಳು ದಯಮಾಡಿಸುತ್ತಿದ್ದಾರೆ, ನೀವು ಕೈಮುಗಿದು ಎದ್ದುನಿಲ್ಲಿ’ ಎಂದ .

ಶ್ರೀನಾಥನಿಗೆ ತಾನು ಟೀವಿಯಲ್ಲಿ ನೋಡಿದ ’ಜೂರಾಸಿಕ್ ಪಾರ್ಕ್ ಸಿನಿಮಾ ನೆನಪಾಯಿತು, ಅದರಲ್ಲೂ ಸಹ ದೊಡ್ಡ ಡೈನಾಸರಸ್ ಬರುವ ಮೊದಲು ನೆಲ ಹೀಗೆ ಅದುರಿ, ನಿಂತಿದ್ದ ನೀರಿನ ಕಂಪನ ಕಾಣಿಸುತ್ತಿತ್ತು ]

 

ಶ್ರೀನಾಥ ಎದ್ದುನಿಂತು ಕೈಮುಗಿದುಕೊಂಡರು, ನೋಡುತ್ತಿರುವಂತೆಯೆ , ಭವ್ಯವಾದ ಸ್ವಾಮೀಜಿ ಆಕಾರದೊಂದಿಗೆ  ಶ್ರೀನಾಥರ  ಎದುರಿನಿಂದ ಹಾದು, ಅವರ ಕಡೆ ನೋಡಿ ನಗುತ್ತ, ಒಳಗಡೆ ಹಾದು ಹೋದರು, ಅವರ ಭವ್ಯವಾದ ಆಕಾರವನ್ನು, ಕೇಸರಿ ಬಟ್ಟೆ, ಕೊರಳಿನ ಚಿನ್ನದ ಹೊದಿಕೆ ಸೇರಿಸಿದ ರುದ್ರಾಕ್ಷಿಸರಗಳು,  ಎರಡು ಕೈನ ನಾಲಕ್ಕು ನಾಲಕ್ಕು ಬೆರಳಿಗೂ ಧರಿಸಿದ ಚಿನ್ನದ, ವಜ್ರದ ಉಂಗುರಗಳು. ಕೊರಳಿನ ಚಿನ್ನದ ಸರಗಳು ಎಲ್ಲವನ್ನು ನೋಡುತ್ತ ದಂಗಾಗಿ ನಿಂತರು ಶ್ರೀನಾಥ ,  

 

ಈ ಎಲ್ಲ ವೈಭವಗಳನ್ನು ನೋಡುತ್ತ  ಶ್ರೀನಾಥ ,  ಸ್ವಾಮೀಜಿ ತನ್ನ ಕ್ಲಾಸ್ ಮೇಟ್ ಅನ್ನುವ ವಿಷಯವನ್ನೆ ಮರೆತುಬಿಟ್ಟರು.

 

ಒಂದೆರಡು ನಿಮಿಷ, ಒಳಗಿನಿಂದ ಸ್ವಾಮೀಜಿಯ ಶಿಷ್ಯನೊಬ್ಬ ಓಡಿ ಬಂದ

 

’ಶ್ರೀನಾಥ ಅಂದರೆ ನೀವೇನಾ ?ಸ್ವಾಮೀಜಿ ಕರೆಯುತ್ತಿದ್ದಾರೆ ಒಳಗೆ ಬರಬೇಕಂತೆ ’ ಎಂದ  

 

ಒಳಗೆ ಹೋಗುವಾಗಲು ಕೈಮುಗಿದೇ ಹೋದರು ಶ್ರೀನಾಥ, ಇವನ ಅವಸ್ಥೆಯನ್ನು ನೋಡಿ ನಗುತ್ತ ಸ್ವಾಮೀಜಿಗಳು

‘ಇದೇನೊ ನಿನ್ನ ಅವಸ್ಥೆ , ಅದೇಕೆ ಕೈಮುಗಿದು ನಿಂತಿದ್ದೀ, ಶಾಲೆಯ ದಿನಗಳಲ್ಲಿ ನನ್ನ ತಲೆ ತಲೆ ಮೇಲೆ ಹೊಡೆಯುತ್ತಿದ್ದೆ ಈಗ ಎಲ್ಲ ಮರೆತು ಹೋಯಿತಾ?”

 

ಶ್ರೀನಾಥರು ಎಂದರು

‘ಹಾಗಲ್ಲ ಸ್ವಾಮಿ, ಆ ದಿನಗಳೆ ಬೇರೆ, ಈಗಿನ ದಿನವೇ ಬೇರೆ , ತಾವು  ಎಲ್ಲರೂ ಪೂಜಿಸುವ ಸ್ವಾಮಿ...’

ಎಂದು ತೊದಲುತ್ತ ಏನೇನೊ ಹೇಳಲು ಹೋದರು.

‘ಎಯ್ ನಿಲ್ಸೋ…  , ನೋಡು ಈ ವೇಷವೆಲ್ಲ ಹೊರಗಿನವರಿಗೆ, ಅದು ಬಿಟ್ಟಾಕು , ನೀನು ನನ್ನ ಮೊದಲಿನಂತೆ ಗಣೇಶ ಎಂದೇ ಕರಿ, ಅದೇಕೊ ಸುಮ್ಮನೆ ಹಳೆಯ ದಿನಗಳನ್ನು ನೆನಪಿಸಿಕೊಳ್ಳೋಣ ಅನ್ನಿಸಿತು ನಿನ್ನ ಪೋನ್ ಮಾಡಿದೆ, ನಾನೆ ಬರಬಹುದಿತ್ತು, ನಾನು ಬಂದರೆ ನೀನು ಚಾರ್ಚ್ ಕೊಡಬೇಕಾಗುತ್ತಲ್ಲ ‘ ಎಂದರು ಸ್ವಾಮೀಜಿ

 

ಶ್ರೀನಾಥನಿಗೆ ಸ್ವಲ್ಪ ದೈರ್ಯ ಬಂದಿತು, ಆದರೂ ಪೂರ್ಣ ದೈರ್ಯವಿರದೆ, ಕೇಳಿದರು

 

‘ಹೌದೇ ಅಂದರೆ ತಾವು ಬದಲಾಗಿಲ್ಲವ ಮೊದಲಿನ ಗಣೇಶನ ? ಅದಿರಲಿ ನೀವು ಬಂದರೆ ಅದೇಕೆ ಚಾರ್ಚ್ ಆಗುತ್ತೆ ‘

 

‘ಮತ್ತೆ ನೋಡು ಅದೆಂತದು ಮರ್ಯಾದೆಯಿಂದ ತಾವು ಗೀವು ಅನ್ನೋದು, ನೋಡು ಈ ವೇಷವೆಲ್ಲ ಹೊರಗಿನ ಜನರಿಗೆ ಅಂತ ಹೇಳಲಿಲಲ್ವೆ . ನೀನು ನನ್ನ ಏಕವಚನದಲ್ಲಿ ಮೊದಲಿನಂತೆ, ಗಣೇಶ, ಗಣಿ ಎಂದು ಕರಿ ಪರವಾಗಿಲ್ಲ,  ಚಾರ್ಚ್ ಏಕೆ ಅಂದೆಯ, ನಾನು ಬಂದರೆ ನೀನು ಪಾದಪೂಜೆ ಅದು ಇದು ಅಂತ ಮಾಡಿಸಬೇಕಾಗುತ್ತಪ್ಪ, ಈಗ ನಾನು ಮೊದಲಿನ ಗಣೇಶನಲ್ಲ “ ಅಂದರು ಸ್ವಾಮೀಜಿ ಗಹಗಹಿಸಿ ನಗುತ್ತ.

 

ಶ್ರೀನಾಥ ನಗುತ್ತ

‘ನೀನು ಮೊದಲಿನ ತರಲೇ ಬಿಡಲಿಲ್ಲ ನೋಡು, ಒಂದು ಸಾರಿ ನಾನು ಬದಲಾಗಿಲ್ಲ ಅನ್ನುತ್ತಿ, ಮತ್ತೆ ನಾನು ಮೊದಲಿನ ಗಣೇಶನಲ್ಲ ಅನ್ನುತ್ತಿ , ಅದು ಬಿಡು ಅದೇನಪ್ಪ ಅಷ್ಟೊಂದು ಸೆಕ್ಯೂರಿಟಿ, ಹೆಜ್ಜೆ ಹೆಜ್ಜೆಗೂ ಚೆಕ್ ಮಾಡ್ಟಾರೆ, ನೀನು ಎಲ್ಲಿದ್ದಿ ಅಂತಲೇ ಗೊತ್ತಾಗಲ್ಲ, ಅಷ್ಟೊಂದು ಸಿಕ್ರೇಟ್, ಅದೇನು ಟೆರರಿಷ್ಟ್ ಬಂದು ಅಟ್ಯಾಕ್ ಮಾಡ್ತಾರೆ ಅಂತಲ ಭಯ “

 

ಗಣೇಶರು ಅಂದರು

‘ಅದಲ್ಲಪ್ಪ ನನಗೆ ಟೇರರಿಷ್ಟ್ ಗಳ ಭಯ ಅಲ್ಲಪ್ಪ,. ನನ್ನನ್ನು ಅರೆಷ್ಟ್ ಮಾಡಲು ಈ ಪೋಲಿಸ್, ಸಿ ಐ ಡಿ ಗಳು ಯಾವಾಗೊ ಬರುತ್ತಾರೋ ಗೊತ್ತಾಗಲ್ಲ,  ಅದಕ್ಕೆ ಅವರ ಕಣ್ತಪ್ಪಿಸಿ ಇರಲು, ಹೀಗೆ ಏರ್ಪಾಡು, ನಿನಗೊಂದು ಗುಟ್ಟು ಗೊತ್ತಿರಲಿ, ನನ್ನನ್ನು ಎಲ್ಲರೂ ದೂರದ ತಮಿಳುನಾಡಿನಲ್ಲಿ ಇದ್ದೀನಿ ಅಂದುಕೊಂಡಿದ್ದಾರೆ ‘

ಎನ್ನುತ್ತ ನಗುತ್ತ

ಬೆಚ್ಚಿ ಬಿದ್ದ ಶ್ರೀನಾಥರು,

 

‘ಅದೇನು ನಿನ್ನ ಅರೆಷ್ಟ್ ಮಾಡುವುದೇ ಅದೇನು ತಪ್ಪು ಮಾಡಿದೆ ? “

 

ಬ್ರಹ್ಮಾಂಡರು ನಗುತ್ತ ಅಂದರು ,

 

‘ಇದೇನಯ್ಯ ಜಗತ್ತಿಗೆ ಗೊತ್ತಿದೆ, ನಿನಗೆ ಗೊತ್ತಿಲ್ಲವೆ? , ನನ್ನ ಮೇಲೆ ರೇಪ್ ಕೇಸ್ ಬಂದುಬಿಟ್ಟಿದೆ ಕಣಯ್ಯ, ಅದಕ್ಕೆ ತಲೆ ತಪ್ಪಿಸಿ ಓಡಾಡುತ್ತ ಇದ್ದೀನಿ,  ಈ ಪೋಲಿಸರು ಯಾವಾಗ ಬರುತ್ತಾರೋ ಗೊತ್ತಾಗಲ್ಲ ನೋಡು, ಅದಕ್ಕೆ ನನ್ನ ಎಚ್ಚರದಲ್ಲಿ ನಾನು ಇದ್ದೇನೆ’

 

ಶ್ರೀನಾಥನ ಮುಖ ಗಂಭೀರವಾಯಿತು, ಛೇ ! ಇವನೂ ಇದೇ ಗುಂಪಿಗೆ ಸೇರಿದವನ , ಸನ್ಯಾಸಿಯಾಗಿ ಹೆಣ್ಣು ಅಂದರೆ ಮರ್ಯಾದೆ ಬೇಡವಾ ? ಇಂತಹವರನ್ನು ಮಾತನಾಡಿಸುವುದೇ ತಪ್ಪು ಎಂದುಕೊಂಡು,

 

‘ಏನು ನಿನ್ನ ಮೇಲು ಅದೇ ಕೇಸಾ , ಗೊತ್ತಾಯ್ತು ಬಿಡಯ್ಯ, ನಾನು ಎದ್ದು ಹೋಗುತ್ತೇನೆ ಬಿಡು, ನಿನ್ನ ಸಹವಾಸ ಬೇಡ’  

 

ಎನ್ನುತ್ತ ಎದ್ದು ನಿಂತರು .

 

ಮುಂದಿನ ಬಾಗ

ಬ್ರಹ್ಮಾಂಡರ ಬೇಟಿ -  ಜಯಂತನ ಬಲೆಯಲ್ಲಿ ಬ್ರಹ್ಮಾಂಡರು

 

Rating
No votes yet

Comments

ಗಣೇಶರು ಹಾಗೆಲ್ಲ‌ ತಪ್ಪು ಮಾಡಿ ಸಿಕ್ಕಿಹಾಕಿಕೊಳ್ಳುವರೆ ನಾಗರಾಜ ಸರ್ ?
ನೋಡುತ್ತ‌ ಇರಿ !

ಮುಂದಿನ‌ ಬಾಗದ ಅದರ‌ ಹೆಸರಿನಲ್ಲೆ ಸುಳಿವು ಇದೆ ನೋಡಿ ನಾಗರಾಜ್ ಸರ್ !

ಸ್ವಾಮಿಗಳ ನಾಲ್ಕು ನಾಲ್ಕು ಬೆರಳಿಗೆ ಹಾಕಿದ ಉಂಗುರ ಇತ್ಯಾದಿ ಎಲ್ಲರ ಕಣ್ಣು ಕುಕ್ಕುವುದು,ಸ್ವಾಮಿಗಳ ಜೀವನದ ಕಷ್ಟದ ಅರಿವು ಯಾರಿಗೂ ಆಗೊಲ್ಲ.:( ಅದನ್ನು ಎಳೆ ಎಳೆಯಾಗಿ ಬಿಡಿಸಿ ಜನರಿಗೆ ಅರಿವು ಮೂಡಿಸುತ್ತಿರುವ ಪಾರ್ಥರಿಗೆ ಧನ್ಯವಾದಗಳು.