23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನಾನು ಸಂಭಾವಿತನಲ್ಲ...ಸ್ವಾಮಿ !

July 4, 2010 - 9:38pm
ಭಾಗ್ವತ

                     ಅವರು......
                     ಕತ್ತು ತಿರುಗಿಸುವ ಫ್ಯಾನಿನಂತೆ !
                     ಹೊರಳಿದ ಕಡೆ ತಂಪು ಗಾಳಿ
 
                      ಬಿಸಿಲೆಡೆಗೆ ಕೊಡೆಹಿಡಿದು
                      ತಿರುಗುವ ಮಂದಿ
                      ಎಲ್ಲ ಸಮಯಕ್ಕೂ ಸಲ್ಲುವ
                      ಚಲಾವಣೆ ನಾಣ್ಯ..!
 
                     ಸುಣ್ಣದ ನೀರನ್ನು ಹಾಲೆಂದರೂ
                     ಬೆಕ್ಕನ್ನು ಹುಲಿಯೆಂದರೂ
                     ಸುಮ್ಮನೆ ಬಾಯ್ಮುಚ್ಚಿ ಗೋಣಲ್ಲಾಡಿಸುವರು.

                      ಬೇಕೆಂದರೊಂದಿಷ್ಟು......
                      ಹೊಗಳಿಕೆಯ ಮಳೆಗರೆದು
                      ಸಾಚಾ ಎನಿಸಿಕೊಳ್ಳುವ ಹಿಕ್ಮತ್ತು.

                     ರಂಗೋಲಿಯಡಿ ಕೂದಲೆಳೆ
                     ಸರಿದಂತೆ....ನಾಜೂಕು ನಡೆ
                      ಮುಖವಾಡದಲ್ಲಿ...
                     ಬೊಗಸೆಯಷ್ಟು..ನಗು !

                     ಆದರೆ ನಾನು ಇದಾವುದ ಕಲಿತಿಲ್ಲ...ಸ್ವಾಮಿ !

                     ಕಂಡದ್ದು ಕಂಡ ಹಾಗೆ ಹೇಳುತ್ತ
                     ಮುಖದ ಮೇಲೆಸೆದಂತೆ
                    ಮಾತಾಡಿ ಬಿಡುತ್ತೇನೆ.

                    ನನಗೆ ಶಬ್ಧಗಳ ಹಾದರ ಗೊತ್ತಿಲ್ಲ.

                    ಅವರೊಡನಿದ್ದೂ  ನಾನು...
                    ಅವರಾಗಲಾರೆ.!
                   ಏಕೆಂದರೆ..........
                   ನಾನು ಸಂಭಾವಿತನಲ್ಲ...ಸ್ವಾಮಿ
 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by manju787 on

ಸಕತ್ ಕಣ್ರೀ ಭಾಗ್ವತರೆ, ನಾನೂ ಅಷ್ಟೇ! <<ನನಗೆ ಶಬ್ಧಗಳ ಹಾದರ ಗೊತ್ತಿಲ್ಲ, ಏಕೆಂದರೆ.......... ನಾನು ಸಂಭಾವಿತನಲ್ಲ...ಸ್ವಾಮಿ>>

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ಮಂಜು ಸರ್ ,
ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shreeshum on

‍<<ಆದರೆ ನಾನು ಇದಾವುದ ಕಲಿತಿಲ್ಲ...ಸ್ವಾಮಿ !>>>

ಕಲಿತರೆ ಸಂಭಾವ್ಯದಲ್ಲಿ ಸಂಭಾವಿತರಾಗಬಹುದಿತ್ತು.!. ಯಂತ ಹೇಳೋದು ,,,,,,,,,,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by pavithrabp on

ಭಾಗ್ವತ ರವ್ರೆ ಹೆಣೆದ ಒ೦ದೊ೦ದು ಸಾಲುಗಳು ತು೦ಬಾ ಚೆನ್ನಾಗಿ ಮೂಡಿ ಬ೦ದಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ಪವಿತ್ರಾ ರವರೆ
ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ಶರ್ಮಾರವರೆ,
ಅದಕ್ಕೇ ನಾನು ಸಂಭಾವಿತನಲ್ಲ.ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by santhosh_87 on

ನಾನೂ ಸಂಭಾವಿತನಲ್ಲ ಸ್ವಾಮಿ... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ಸಂತೋಷರವರೆ ವಂದನೆಗಳು,
ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mannu on

ತುಂಬ ಚೆನ್ನಾಗಿದೆ .
--ಮನು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ಮನುರವರೆ ವಂದನೆಗಳು.
ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಭಾಗ್ವತರೇ
ಸಂಭಾವಿತನ ಹೊಸ ಅರ್ಥ ಚೆನ್ನಾಗಿದೆ
ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ಗೋಪಿನಾಥರವರೆ ವಂದನೆಗಳು.
ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ನೀವು ತಿಳಿಸಿದಂತೆ ಹೀಗೆಯೇ ಇರಿ ಸ್ವಾಮಿ, ಏನನ್ನೂ ವಿಮರ್ಶಿಸದೆ ಒಪ್ಪುವ - ಸಂಭಾವಿತತನ -ಒಳ್ಳೆಯದೂ ಅಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ಕವಿನಾಗರಾಜ್ ರವರಿಗೆ ವಂದನೆಗಳು.
ನಿಮ್ಮ ಪ್ರತಿಕ್ರಿಯೆಗೆ ನಮನಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shafi_udupi on

<<<ಆದರೆ ನಾನು ಇದಾವುದ ಕಲಿತಿಲ್ಲ...ಸ್ವಾಮಿ !>>>

ಕಲಿಯಲು ಸಾಧ್ಯವೂ ಇಲ್ಲ ಸ್ವಾಮಿ!.... ಇಂತಹಾ ಕೆಲವು ವ್ಯಕ್ತಿಗಳನ್ನು ನಾನೂ ಪ್ರತಿದಿನ ಎದುರಿಸುತ್ತಿರುತ್ತೇನೆ... ಅವರಂತೆ "ಹಿಕ್ಮತ್ತು" ಉಪಯೋಗಿಸಿ ಭೇಷ್ ಅನ್ನಿಸಿಕೊಳ್ಳೋಣವೆಂದು ಹಲವು ಬಾರಿ ಅನ್ನಿಸ್ತದೆ. ಆದ್ರೆ ಮನಸ್ಸು ಒಪ್ಪಿದ್ರೆ ತಾನೆ... ಅದನ್ನ ಕಲಿಯಲು ಸಾಧ್ಯವಿಲ್ಲ... ಅದು ಕೆಲವರ ವ್ಯಕ್ತಿತ್ವದಲ್ಲೇ ಶಾಮೀಲಾಗಿದೆ...

ಈ ಕವನ ನನ್ನ ಭಾವನೆಗಳಿಗೆ ಮಾತು ಕೊಟ್ಟಂತಿದೆ. ಧನ್ಯವಾದಗಳು ಭಾಗ್ವತ ಸರ್...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vasanth on

ನಾನು ಸಹ ಸಂಭಾವಿತನಲ್ಲ ಭಾಗ್ವತ ಸರ್, ತುಂಬಾ ಚೆನ್ನಾಗಿದೆ ನಿಮ್ಮ ಕವನ ಧನ್ಯವಾದಗಳು.
ವಸಂತ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

@ ಶಫಿಯವರೆ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.

@ ವಸಂತ್ ರವರೆ ಮೆಚ್ಚಿಕೆಗಾಗಿ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಕಂಡದ್ದು ಕಂಡ
ಹಾಗೆ ಹೇಳುತ್ತ
                     ಮುಖದ ಮೇಲೆಸೆದಂತೆ
                    ಮಾತಾಡಿ ಬಿಡುತ್ತೇನೆ.

                    ನನಗೆ ಶಬ್ಧಗಳ ಹಾದರ ಗೊತ್ತಿಲ್ಲ.

                    ಅವರೊಡನಿದ್ದೂ  ನಾನು...
                    ಅವರಾಗಲಾರೆ.!
                   ಏಕೆಂದರೆ..........

                   ನಾನು ಸಂಭಾವಿತನಲ್ಲ...ಸ್ವಾಮಿ
---------------------------------------------------------------------------------------

ಬಾಗ್ವತರೆ
ಕವನವನ್ನ ಭಲೇ ಸೊಗಸಾಗಿದೆ
ನೇರಾ -ನೇರವಾಗಿ ಬರ್ದಿದೀರ ..
ಹಿಡಿಸಿತು
ಹೊಸ ವರ್ಷದ ಶುಭಾಶಯಗಳು ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ನಾನು ಸಂಭಾವಿತ ಸ್ವಾಮಿ. ಆದರೆ ನೀವು ಹೇಳಿದ ಸಂಭಾವಿತನಲ್ಲ..
ಕವನ ಚೆನ್ನಾಗಿದೆ.
-ಗಣೇಶ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.