June 23, 2010 - 7:42pm
ಸಾವಿನ ದವಡೆಯಲಿ
ಎಲ್ಲರೂ ಎಲೆ ಅಡಿಕೆ
ಬೇಕಾದಲ್ಲಿ ಬೇಕಾದಂತೆ
ಉಗುಳಲ್ಪಡುವ ರುಧಿರ !
ಬದುಕಿಗೆ ಎಲೆಯಡಿಕೆಯಷ್ಟೂ
ಬೆಲೆಯಿಲ್ಲವೆಂದೆಣಿಸುವ ಸಾವು
ಶುದ್ಧ ಸಮಾಜವಾದಿ....!
ಬದುಕ ಪ್ರೀತಿಸದ ಜೀವದ ಮನೆಗೆ
ಸಾವು ಅತಿಥಿ............
ಕನಸುಗಳ ಮೂಟೆ ಹೊತ್ತು
ಬದುಕಿನ ದಾರಿ ಹುಡುಕುತ್ತಿರುವಾಗಲೇ
ಸಾವು ಪ್ರತ್ಯಕ್ಷ...!
ಸಾವಿನಾಟದಲಿ ನಾವು ಚಿಣಿಕೋಲು
ಅದು ದಾಂಡು ..!
ಹೇ ....ಸಾವೇ ನೀನೇಕೆ ಸಾಯಲಾರೆ ?
- ಭಾಗ್ವತ್
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಸಾವಿನಾಟ....!
ಚೆನ್ನಾಗಿದೆ ಭಾಗ್ವತರೇ
ಸಾವಿನ ಸಾವಿನಾಟ
ಮತ್ತೆ ಅವನೇ ಬರಬೇಕಲ್ಲ ಆಡಲು, ಆಡಿದರೆ
ಬದುಕಿದರಲ್ಲವೇ ತಿಳಿಹೇಳಲು
ಉ: ಸಾವಿನಾಟ....!
ಧನ್ಯವಾದಗಳು ಗೋಪಿನಾಥರವರೆ,
ಉ: ಸಾವಿನ ..ಸಾವಿನಾಟ....!
ಸಾವಿಗೆ ಸಾವಿಲ್ಲ ಸ್ವಾಮಿ....
ಸಾವಿಗೊ೦ದು ಪ್ರಶ್ನೆ ಚೆನ್ನಾಗಿದೆ ಭಾಗವತರೇ.
ನಮಸ್ಕಾರಗಳು.
ಉ: ಸಾವಿನ ..ಸಾವಿನಾಟ....!
ಪ್ರೀತಿಯ ಪ್ರತಿಕ್ರಿಯೆ ನೀಡಿದ ನಾವಡರಿಗೆ ಧನ್ಯವಾದಗಳು.
ಉ: ಸಾವಿನ ..ಸಾವಿನಾಟ....!
ನಿಮ್ಮ ಪ್ರಶ್ನೆ ಅದ್ಭುತವಾಗಿದೆ ಭಾಗ್ವತ್ ರವರೆ >> ಹೇ ....ಸಾವೇ ನೀನೇಕೆ ಸಾಯಲಾರೆ ?<< ಸಾವಿಗು ಒಂದು ಪ್ರಶ್ನೆ ?. ಕವನ ಉತ್ತಮವಾಗಿದೆ ಧನ್ಯವಾಗಳು.
ವಸಂತ್
ಉ: ಸಾವಿನ ..ಸಾವಿನಾಟ....!
ವಸಂತರವರೆ, ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.
ಉ: ಸಾವಿನ ..ಸಾವಿನಾಟ....!
ಭಾಗ್ವತ,
ಅದು ನಿಜ, ಸಾವಿಗೆ ಬರುವುದೇ ಇಲ್ಲ ಸಾವು
ಬದುಕಲರಿಯದೇ ಸತ್ತಂತಿರುತ್ತೇವೆ ನಾವು
ಸಾವು-ಬದುಕಿನ ನಡುವಣದರ್ಥವ
ಹೆಚ್ಚಿಸಬೇಕಾಗಿದೆ ನಾವು- ನೀವು!
- ಆಸು ಹೆಗ್ಡೆ
ಉ: ಸಾವಿನ ..ಸಾವಿನಾಟ....!
ಆಸು ಹೆಗ್ಡೆಯವರೆ, ಧನ್ಯವಾದಗಳು
ನಿಮ್ಮ ಕಾವ್ಯಾತ್ಮಕ ಪ್ರತಿಕ್ರಿಯೆಯಲ್ಲಿಯ
<<ಅದು ನಿಜ, ಸಾವಿಗೆ ಬರುವುದೇ ಇಲ್ಲ ಸಾವು
ಬದುಕಲರಿಯದೇ ಸತ್ತಂತಿರುತ್ತೇವೆ ನಾವು>>
ಈ ಸಾಲುಗಳು ನನ್ನ ಕವನದ ಸಾಲುಗಳಿಗಿಂತ ನನಗೆ ಹೆಚ್ಚು ಖುಷಿ ನೀಡಿತು. ತಮಗೆ ವಂದನೆಗಳು.
ಉ: ಸಾವಿನ ..ಸಾವಿನಾಟ....!
ಸಾವಿರುವ ಮಾನವನ ಲೀಲೆಗಳಿಗೆ ಎಣಿಕೆಯಿಲ್ಲ, ಇನ್ನು ಸಾವಿಲ್ಲದ್ದಿದ್ದರೆ ಅದೆಂತೊ?
ಇರುವ ನಾಲ್ಕು ದಿನದ ಬದುಕಲಿ ಸಾವನು ಸಾಯಿಸಬೇಕು ನಾವು.
ಉ: ಸಾವಿನ ..ಸಾವಿನಾಟ....!
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ದೀಪಕ್ ರವರೆ,
ಉ: ಸಾವಿನ ..ಸಾವಿನಾಟ....!
ಬದುಕ ಪ್ರೀತಿಸದ ಜೀವದ ಮನೆಗೆ
ಸಾವು ಅತಿಥಿ............
ಕನಸುಗಳ ಮೂಟೆ ಹೊತ್ತು
ಬದುಕಿನ ದಾರಿ ಹುಡುಕುತ್ತಿರುವಾಗಲೇ
ಸಾವು ಪ್ರತ್ಯಕ್ಷ...!
ಸಾವಿನಾಟದಲಿ ನಾವು ಚಿಣಿಕೋಲು
ಅದು ದಾಂಡು ..!
ಹೇ ....ಸಾವೇ ನೀನೇಕೆ ಸಾಯಲಾರೆ ?
----------------------------------------------------------------
ಭಾಗ್ವತ್
ಅವ್ರೆ
ನಿಮ್ಮಿ ಕವನ ಅಚಾನಕ್ಕಾಗಿ ನನಗೆ ಓದಲು ಸಿಕ್ಕಿತು..
ನಿಮಂ ಕವನಗಳ ಧಾಟಿ ಗಮನಿಸಿದ ನನಗೆ ಇದು ಒಂದು ವಿಶೇಷ ಕವನ ಅನ್ನಿಸಿತು.,...
ಸಾವಿಗೆ ಸವಾಲು ಹಾಕುವ ನಿಮ್ಮ ಧೈರ್ಯ ಮೆಚ್ಚತಕ್ಕದ್ದೇ...
ಮನಸಿನ ಭಾವನೆಗಳಿಗೆ ನಾವೇ ಅಕ್ಷರ ರೂಪ ತುಂಬಾ ಬೇಕಿಲ್ಲ, ನಿಮ್ಮನ್ತವರೂ ತುಂಬುವರು...
ಹಲವರ ಮನದಾಳದ ಧ್ವನಿಗಳಿಗೆ ನೀವ್ ಅಕ್ಷರ ರೂಪ ಮೂಡಿಸಿರುವಿರಿ..
ನನಗೆ ಇಷ್ಟ ಆಯ್ತು..
ಪ್ರತಿಕ್ರಿಯೆಗಳೂ ಮುದ ನೀಡಿದವು..
ಶುಭವಾಗಲಿ...