ಈಗಿನಂತೆ 3 ಸದಸ್ಯರು ಮತ್ತು 144 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೨
anilkumar's picture
ಎಚ್.ಎ. ಅನಿಲ್ ಕುಮಾರ್
22
Aug
2010
ಬ್ಲಾಗ್ ಬರಹ

(೧೬೬) ಗುರ್ತಿನ ಚೀಟಿ ಇಲ್ಲದ ನೀವು ಅಸ್ತಿತ್ವದಲ್ಲೇ ಇಲ್ಲ! ನೀವು ನೀವಾಗಿರಬೇಕಿದ್ದರೆ ನಿಮಗೊಂದು ಹೆಸರು ಇರಲೇಬೇಕು: ಒಬ್ಬ ನೆಂಟ, ಒಬ್ಬ ನಾಗರೀಕ, ಚಾಲಕ, ಕೆಲಸಗಾರ,...

ಪ್ರತಿಕ್ರಿಯೆಗಳು: 3
ಹಿಟ್ಸ್ : 732
ಧರ್ಮ ಮತ್ತು ಸಮರ - ಒಂದು ಅಲೋಚನೆ.
supreethjburji's picture
23
Jun
2006
ಬ್ಲಾಗ್ ಬರಹ


ಅಮೆರಿಕಾ ಹಾಗು ಭಯೋತ್ಪಾದಕ ಸಂಘಟನೆ ತಾಲಿಬಾನ್ ನಡುವಣ ಕದನ ಅಂತಿಮ ಹಂತದಲ್ಲಿದ್ದು , ವಿಶ್ವ ಸಂಸ್ಥೆ ಹಾಗು ಇತರ ರಾಷ್ಟ್ರಗಳ ಸಭೆಯ ಪರಿಣಾಮವಗಿ ತಾಲಿಬಾನ್ ತದನಂತರದ...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,238
ಪಾಲೀಶ್ ಮಾಡಿದ ಅಕ್ಕಿ "ಆಸಿಡ್" ಮಯ.
Satyaprakash.H.K.'s picture
ಸತ್ಯಪ್ರಕಾಶ್ ಹೆಚ್ ಕೆ
19
Apr
2006
ಬ್ಲಾಗ್ ಬರಹ
ಆರೋಗ್ಯಸತ್ಯ ಪ್ರಕೃತಿ ಕೇಂದ್ರ ಪಾಲೀಶ್ ಮಾಡಿದ ಅಕ್ಕಿ "ಆಸಿಡ್" ಮಯ. ಪ್ರಕೃತಿ ನಮಗೆಲ್ಲ ಜನ್ಮ ಕೊಟ್ಟಿರುವುದು ನಮಗೆಲ್ಲಾ ತಿಳಿದೇ ಇದೆ. ಪ್ರಕೃತಿ ನಮಗೆ ಏನೇನು ಆಹಾರಗಳನ್ನು...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,565
ಮಾನ್ಯ ಡಾ ಎಚ್ ಎಸ್ ವಿ ಯವರ ಅಭ್ಯಾಸ ೪ ೧೧.೦೭.೨೦೧೦
gopinatha's picture
ಬೆಳ್ಳಾಲ ಗೋಪೀನಾಥ ರಾವ್
11
Jul
2010
ಪುಟ

ಈ ಸಾರಿಯ ಅಭ್ಯಾಸ ೪ ನಮ್ಮ ಸ್ನೇಹಿತ ಶ್ರೀ ಸುರೇಶ ಶಂಕರ ನಾರಾಯಣ ಅವರ ಮನೆ "ಧಾತ್ರಿ"ಯಲ್ಲಿ, ಬೆಳಗಿನ ಪುಷ್ಕಳ ತಿಂಡಿಯಾದ ಮೇಲೆ ಅವರ ಸುಂದರ ಸುಸಜ್ಜಿತ ಕೆಳಮಹಡಿಯಲ್ಲಿ ಅಭ್ಯಾಸದ...

ಪ್ರತಿಕ್ರಿಯೆಗಳು: 23
ಹಿಟ್ಸ್ : 1,378
ರಾಜ ಮುತ್ತಿನ ನೆನಪಲ್ಲೊಂದು ಸ್ವಗತ
modmani's picture
ಮೊದ್ಮಣಿ
24
Apr
2010
ಬ್ಲಾಗ್ ಬರಹ

ರಾಜಣ್ಣ, ರಾಜಕುಮಾರ್, ಮುತ್ತುರಾಜ್, ಅಣ್ಣಾವ್ರು

ಯಾರೆಂದು ಗೊತ್ತಾಯಿತಲ್ಲ.  ಇವರ ಬಗ್ಗೆ  ಚತುಷ್ಕೋಟಿ ಕನ್ನಡಿಗರು ಇನ್ನೊಬ್ಬರ ಬಳಿ ಹೇಳಬೇಕಾದುದೇನೂ...

ಪ್ರತಿಕ್ರಿಯೆಗಳು: 14
ಹಿಟ್ಸ್ : 1,133
ಭೂರಮೆಯು ಬಸಿರಾಗಿ
thesalimath's picture
ಶ್ರೀಹರ್ಷ ಸಾಲಿಮಠ
11
Nov
2009
ಬ್ಲಾಗ್ ಬರಹ

ಭೂರಮೆಯನು ಆ ಬಾನು
ಸರಸಾಟಕೆ ತಾ ಕರೆವ.
ಭೋರ್ಗರಿಸಿ ಆರ್ಭಟಿಸಿ
ಪ್ರೀತಿಯ ಸೋನೆಯಗರೆವ.

ಭೂದೇವಿ ನಾಚಿ ಕೆಂಪಾಗಿ
ನದಿತೊರೆಗಳಲಿ ಮೇಲುಕ್ಕಿ
...

ಪ್ರತಿಕ್ರಿಯೆಗಳು: 2
ಹಿಟ್ಸ್ : 935
ಮರೆಯಲಾರದ ಹಳೆಯ ಕತೆಗಳು: ೫
hamsanandi's picture
ಹಂಸಾನಂದಿ
28
May
2011
ಬ್ಲಾಗ್ ಬರಹ

ಹಿಂದೆಲ್ಲ, ನನಗೆ ಬಸ್ ಅಥವಾ ರೈಲು ಪ್ರಯಾಣ ಅಂದರೆ, ಒಂದು ತರಹ ಖುಷಿ ಆಗ್ತಿತ್ತು. ಯಾಕಂದ್ರೆ, ದಾರಿಯಲ್ಲಿ ಕುಳಿತುಕೊಂಡು ಯಾವ್ದಾದ್ರೂ ಪುಸ್ತಕ ಓದಬಹುದಲ್ಲ ಅಂತ. ರೈಲು...

ಪ್ರತಿಕ್ರಿಯೆಗಳು: 20
ಹಿಟ್ಸ್ : 1,157
ಕೊಂಕಣಿಗಳು ಮತ್ತು ಸಂಘನಿಷ್ಟೆ
gurubaliga's picture
ಗುರು ಬಾಳಿಗ
16
Jun
2009
ಪುಟ

ದಕ್ಷಿಣ ಕನ್ನಡದಲ್ಲಿ ಕಳೆದ ಎರಡು ವರ್ಷಗಳಿಂದ ಆಗುತ್ತಿರುವ ಸಾಮಾಜಿಕ, ರಾಜಕೀಯ ಮತ್ತು ಕೋಮು ಸಂಬಂಧಿ ಸ್ಥಿತ್ಯಂತರಗಳ ಹಿನ್ನೆಲೆಯಾಗಿ ಪತ್ರಿಕೆಗಳಲ್ಲಿ, ವೆಬ್ಸೈಟುಗಳಲ್ಲಿ...

ಪ್ರತಿಕ್ರಿಯೆಗಳು: 22
ಹಿಟ್ಸ್ : 2,141
ಒಲವೆಂಬ ಹೊತ್ತಿಗೆ
naasomeswara's picture
ನಾ.ಸೋಮೇಶ್ವರ
23
Apr
2010
ಬ್ಲಾಗ್ ಬರಹ

ಒಲವೆಂಬ ಹೊತ್ತಿಗೆ 

ಒಲವೆಂಬ ಹೊತ್ತಿಗೆಯ ಓದ ಬಯಸುತ ನೀನು

ಬೆಲೆ ಎಷ್ಟು...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,104
ಅನುಕರಣೆ ಹಾದಿಯಲ್ಲಿ ನಿಮ್ಮತನ ಅಳಿಯದಿರಲಿ
addoor's picture
ಅಡ್ಡೂರು ಕೃಷ್ಣ ರಾವ್
23
Jan
2012
ಲೇಖನ

ಮೋಹನ್ ಎರಡು ತಿಂಗಳ ಮುಂಚೆ ಬ್ಯಾಂಕ್ ಸಾಲ ಪಡೆದು ಬೇಕರಿಯೊಂದನ್ನು ಆರಂಭಿಸಿದ್ದ. ವ್ಯಾಪಾರ ಆಗಿನ್ನೂ ಕುದುರುತ್ತಿತ್ತು. ಅಷ್ಟರಲ್ಲಿ ಪಕ್ಕದ ಮನೆಯವರ ಕೆಂಪು ಮಾರುತಿ ಕಾರು ಕಣ್...

ಪ್ರತಿಕ್ರಿಯೆಗಳು: 2
ಹಿಟ್ಸ್ : 208

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಭಾನುವಾರ- ಪುಟ್ತಿಯ ಒಂದು ಪ್ರಶ್ನೆ-ನನ್ ಪಜೀತಿ :((

ಭಾನುವಾರ- ಪುಟ್ತಿಯ ಒಂದು ಪ್ರಶ್ನೆ-ನನ್ ಪಜೀತಿ :((

ಭಾನುವಾರ- ಪುಟ್ತಿಯ ಒಂದು ಪ್ರಶ್ನೆ-ನನ್ ಪಜೀತಿ :((

 

 

 

 

 

 ಭಾನುವಾರವಾದ್ದರಿಂದ ಮಾಡಲು 'ಏನೂ' ಕೆಲ್ಸವಿಲ್ಲದೇ, ತಡವಾಗೇ ಎದ್ದು, ಬೆಳಗಿನ ನಿತ್ಯ ಕರ್ಮ!! ಮುಗ್ಸಿ,
ಟೀ ಕುಡೀತ -ದಿನ ಪತ್ರಿಕೆ ಹಿಡಿದು ಓದುತ್ತಾ ಮನೆ ಮುಂದಿನ ಲಾನಿನಲ್ಲಿ ಆರಾಮಗೆ ಕುಳಿತಿದ್ದೆ, 

ಚಿದಂಬರಂ 'ಬೀಸೊ ದೊನ್ನೆಯಿಂದ ಪಾರು!!,

ಬರಿ ಗೈನಲ್ಲಿ ಬಂದ  ಎಡ್ಡೀ,

ನಾನೇ ಪೂರ್ಣ ಅವಧಿಗೆ ಮುಖ್ಯಮಂತ್ರಿ :ಸದಾನಂದ ಗೌಡ,

ಇತ್ಯಾದಿ ಸುದ್ಧಿಗಳ್....

ಇನ್ನೂ

ಈಗೀಗ 'ಮಾಮೂಲಾಗಿರೋ' ಸುದ್ಧಿಗಳು 

ಕೊಲೆ-
ದರೋಡೆ-
...ರ, 
ಸರಗಲ್ಳತನ, :))

ಪಪ್ಪ-ಪಪ್ಪ 
 ತಲೆ ಕೊಂಚ ತಿರುಗಿಸಿ ನೋಡಿದರೆ ಅಲ್ಲಿ ನಿಂತೀರ್ವಲ್, 
ವಿಜೇತ-ನಮ್ಮ ಮಗಳು...
ಬ ಪುಟ್ಟಿ- ಹಲ್ಲುಜ್ಜಿ, ಟೀ ಕುಡಿದಾಯ್ತೋ? ಎನ್ನಲು, 
ಪಪ್ಪ ನಾ ಅಗಲೆ ಬೆಳಗ್ಗೆಯೇ ಎದ್ದು ಹಲ್ಲುಜಿ- ಸ್ನಾನ ಮಾಡಿ, ತಿಂಡಿ ತಿಂದು ಆಯ್ತು,
ನೀವೇ ಲೇಟು ಅನ್ನಬೇಕೆ:))
 
ಹ್ಚಿ ಹ್ಚಿ ಅಂತ -ನಾ
 
ಸ್ಸರಿ ಸ್ಸರಿ, ಬ್ಯಾ ಇಲ್ಲಿ ಕೂತ್ಕೋ,
ನಿನ್ನ ಇವತ್ತಿನ ಹೋಮ್ ವರ್ಕ್ ಏನು?
ಎಸ್ಟು 'ಕ್ವಿಂಟಾಲ್' ಹೋಮ್ ವರ್ಕ್ ಕೊಟ್ಟಿದ್ದಾರೆ ?ಅನ್ನಲು

ಜಾಸ್ತಿ ಇಲ್ಲ ಪಪ್ಪ,

ಒಂದೇ 'ವಿಷ್ಯದ' ಬಗ್ಗೆ ನನಗೆ ಬರೆಯ ಹೇಳಿದ್ದರೆ, ಅದು -'ಹೆಸರು' ಅಂತ

ಏನು?
ಹೆಸರ?
ಹೆಸರು ಬಗ್ಗೆ ಏನು ಬರೆಯೋದು? ಅನ್ನಲು
ಪಪ್ಪ ಈಗ ನೋಡು ನನ್ನ ಹೆಸ್ರು ವಿಜೇತ, ಅದ್ಕೆ ಅರ್ಥ ಏನು?
ವಿಜೇತ ಅಂದ್ರೆ ವಿನ್ನರ್, ಗೆದ್ದವರು, ಅಂತ ಅರ್ಥ ಪುಟ್ಟಿ..
 
ಹಾಗೆ ಸೋತವರಿಗೆ 'ಲೂಸರ್' ಅಂತಾರಲ್ಲ, 
ಹ್ಹಾ!! ಹೌದು ಪುಟ್ಟಿ
ಪಪ್ಪ ನಂಗೆ ವಿಜೇತ ಅಂತಾನೆ ಏಕೆ ಹೆಸ್ರು ಇಕ್ಕಿದ್ದು?
ಬೇರೆ ಯಾವ ಹೆಸರನ್ನ ಯಾಕೆ ಇರಿಸಲಿಲ್ಲ ?
ನಾ ಏನು ಹೇಳೋದು? ಅಂತ ಕೊಂಚ ಹೊತ್ತು ಚಿಂತಿಸುತ್ತಾ ಕುಳಿತೆ...
ಯಾಕ್ ಪಪ್ಪ, ಮರ್‍ತು ಬಿಟ್ರಾ?
 
ನಾ ಮಮ್ಮೀನೆ ಕೇಳ್ತೀನಿ, ಅಂದವಳೇ ಮನೆ ಹೊಳ ಹೋದಳು,
ಸಧ್ಯ ನಾ ಬಚಾವ್, ಅಂತ ನಿಟ್ಟುಸಿರು ಬಿಟ್ಟು ಕೂತೆ ,
ಮತ್ತೆ ಯಥಾ ಪ್ರಕಾರ ಪೇಪರ್‌ನಲ್ಲಿ ಕಣ್ಣು ನೆಟ್ಟು!!...


ಮಮ್ಮೀ-ಮಮ್ಮೀ 
ನಾ 'ಹೆಸ್ರು' ಬಗ್ಗೆ ಒಂದು ಹೋಮ್ ವರ್ಕ್ ಬರೀಬೇಕು


ಅದ್ಕೆ?



ಮತ್ತೆ ಅದ್ಕೆ ನಾ 'ನನ್' ಬಗ್ಗೆನೆ ಬರೆಯೋಣ ಅಂತ , 
ನಂಗೆ ನೀವು ವಿಜೇತ ಅಂತಾನೆ ಹೆಸ್ರು ಯಾಕೆ ಇಟ್ರೀ?
 
ನೋಡು ಸಧ್ಯ ನಾ ಫುಲ್ಲ್ ಬಿಜಿ ,
ಆಮೇಲೆ ನಿಂಗೆ ಹೇಲ್ವೆ ಸ್ಸರೀನ?
ಇಲ್ಲ ಮಮ್ಮೀ ನಂಗೆ ಈಗ್ಲೆ ಹೇಳ್‌ಬೇಕು, ನಾ ಪಕ್ಕದ್ ಮನೆ 'ಶಾರಿ', ಆ ಕುರಿತು ಬರೆಯೋದ್ರೋಲಗ್ದೇ  ನಾನೇ ಮೊದ್ಲು  ಬರೀಬೇಕು ಅದ್ಕೆ...
 
ಒಹೋ!
ಹಾಗೋ?...

ಅಲ್ಲಿ ಹೊರಗಡೆ ಹೋಗು ಅಲ್ಲಿ ನಿಮ್ಮ್ ಪಪ್ಪ, 'ಏನೂ' ಕೆಲ್ಸಾ ಇಲ್ದೇ ಕೂತವ್ರೇ ,

ಅವರ್ನೆ ಕೇಳು,

ಕೇಳ್ದೆ ಮಮ್ಮೀ, ಆವ್ರು -ಮಮ್ಮೀನೆ ಕೇಳು ಅಂತ ಕಲ್ಸಿದ್ರು:))

ಒಹೋ -ಹಾಗೋ?

ನೋಡು ನಾ ನಿಮ್ಮ ಪಪ್ಪಾಂಗೆ  ಆಗಲೇ ಅವತ್ತೇ ಹೇಳಿದ್ದೆ
 ಗೀತಾ
ಸೀತ
ಸಾವಿತ್ರಿ
ಶರ್ಮಿಳಾ
ಪರಿಮಳ
ನೀಳವೇಣಿ
ರಮ್ಯ
ಭವ್ಯ
ರಾಗ
ಸುಧಾ
ಶಾಂತಿ
ಸ್ವರ
ಮಧುರ
ನೂತನ
ದಿವ್ಯ
ಸೌಮ್ಯ 
ಶಾರಧ
ಸುನೀತ
ಶ್ರೀದೇವಿ
 ವಾಣಿ................................
 
 
 ಆದರೆ ನಿಮ್ಮ ಪಪ್ಪ ನಾ ಹೇಳಿದ್ದಕ್ಕೆಲ್ಲಾ 'ಕೊಂಕು' ತೆಗೆದು
 
ಅದು ಚೆನ್ನಾಗಿಲ್ಲ,
ಇದು ಚೆನ್ನಾಗಿಲ್ಲ
ಅಂತ ಹೇಳಿ ನಿಂಗೆ 'ವಿಜೇತ' ಅಂತ ಹೆಸ್ರು ಇಕ್ಕಿದ್ರೂ ಅದ್ಕೆ...
ಮಮ್ಮೀ -ಅದ್ಕೆ ಏನು?
ಅವ್ರೆ ಅಲ್ವಾ ಆ ಹೆಸ್ರು ಆಯ್ಕೆ ಮಾಡಿದ್ದು, ಅದ್ಕೆ ಅವರ್ನೆ ಹೋಗಿ ಕೇಳು, ಅದ್ರ ಅರ್ಥ ಏನು? ಯಾಕೆ ಅದೇ ಹೆಸ್ರೂ ಅಂತ!!



ಅಯ್ಯೋ!!
ಪಪ್ಪನೂ- ಹೇಳೋಲ್ಲ- ಮಮ್ಮೀನೋ ಹೇಳೋಲ್ಲ,
ನಾ ಎನ್ ಬರೆಯೋದು?
ಮತ್ತೆ ಮರಳಿ ನನ್ ಹತ್ತಿರ ಬಂದು

ಪಪ್ಪ-ಪಪ್ಪ
ಏನಮ್ಮಾ?
ಮಮ್ಮೀನು ಹೇಳ್ತಾ ಇಲ್ಲ,
ಅವ್ರಿಗಾ ಫುಲ್ಲ್ ಬಿಜಿ ಅಂತೆ, ಅದ್ಕೆ ನೀವೇ ಹೇಳ್ಬೇಕಂತೆ!!
ಮನದಲ್ಲೇ ನನ್ ಬೇಟರ್ ಹಾಫ್ ಗೆ  ಶಪಿಸುತ್ತಾ:)) ಕೊನೆಗೂ ನನ್ನ ತಲೆಗೆ ಪುಟ್ಟಿ ಯ ಪ್ರಶ್ನೆ ಹುಳು ಬಿಟ್ಟೆಯ?

ಆರಾಮಾಗಿ ಭಾನುವಾರವನ್ಣ ಎಂಜಾಯ್ ಮಾಡಿದ್ರೆ ಇವ್ಲೂ........

ಛೇ- ಛೇ!!

ಪುಟ್ಟಿ ಅದ್ಕೆ ಯಾಕೆ ಚಿಂತೆ?

ಕಂಪ್ಯೂಟರ್ ಓಪನ್ ಮಾಡು, ಅಲ್ಲಿ 'ಗೂಗಲ್' ಅಂತ ಇದೆಯಲ್ಲಾ, ಅಲ್ಲಿ ವಿಜೇತ ಅಂತ ಟೈಪ್ ಮಾಡು ವಿಜೇತ ಮೀನಿಂಗ್ ಅಂತ ಹಾಕು, ಸಿಕ್ತ?

 ಓಕೇ, 
ಇಲ್ವಾ?

ವಿನ್ನರ್ ಅಂತ ಮೀನಿಂಗ್ ಹುಡುಕು  

ಆಗ ಸಿಕ್ಕಿದ್ರಲ್ಲಿ ಹೆಚ್ಚು ಸೂಟ್ ಆಗೋದ್ನಾ ಬರಿ ಅಸ್ಟೆ, -ಪ್ರಾಬ್ಲಮ್ ಸಾಲ್ವ್!!


ಪಪ್ಪ ಶೇಂ ಶೇಂ !
ಯಾಕೆ ಪುಟ್ಟಿ? 
ಹಾಗೆಲ್ಲಾ ಅನ್ನಬಾರದು 

ಅದ್ರಲ್ ಶೇಂ ಶೇಂ ಅನ್ನೋಕೆ ಏನಿದೆ?

ನೀವು ಹೇಳಿ ಅಂದ್ರೆ ನಂಗೆ 'ಗೂಗಲ್' ನಲ್ಲಿ ಹುಡುಕು ಅಂತೀರಲ್ಲ,
ನಿಮಗಿಂತ ಆ 'ಗಣೇಶ್ ಮತ್ತು ಶ್ರೀಕರ್' ಅಂಕಲ್ಲೇ  ಬೆಟ್ರ,
ಎಸ್ಟೋ ವಿಚಾರದ್ ಬಗ್ಗೆ ಬರೀತಾರೆ  ಲಿಂಕೂ ಕೊಡ್ತಾರೆ!!

ನಾ ನನಗೆ ತೋಚಿದ್ದೆ ಬರೀತೀನಿ.. ..  ಬೈ ಅಂತ ಮನೆ  ಹೊಳ  ಹೋದಳು...
 
ನಾ ಪೇಚ್ ಆದೇ:((
 
ಅದೊಮ್ಮೆ ಪ್ರತಿಯೊಂದನ್ನು 'ನಾವೇ' ಯೋಚಿಸಿ ನಮಗೆ 'ಸ್ಸರಿ' ಅನ್ನಿಸಿದ್ದು,
ಬರೀಬೇಕು,
ಹೇಳಬೇಕು,
ಹಾಗೆ ಹೀಗೆ ಅಂತೆಲ್ಲಾ 'ಸ್ವಂತಿಕೆ' ಬಗ್ಗೆ ಪುಟ್ಟಿ ಗೆ  'ಹೀತೋಪದೇಶ' ಮಾಡಿದ್ದೇನಲ್ -ನಾ,
ಅದ್ಕೆ ಅವಳು ನಾ 'ಗೂಗಲ್ 'ನಲ್ಲಿ ಹುಡುಕಿ ಬರಿ ಅಂದಾಗ,
ನಾ  ಬೇರೆವ್ರು  ಹೇಳಿದ್ದನ್ನ-
ಬರೆದದ್ದನ್ನ ಕಾಪಿ ಮಾಡ್‌ಬೇಕಾ?
ಅಂತ  'ಶೇಂ -ಶೇಂ' ಅಂತ ಹೋಗಿದ್ದು!!

--------------------------------------------------------

 ವಿಜೇತ ಅಂತಾನೆ ಏಕೆ ಹೆಸ್ರು ಇಕ್ಕಿದ್ದು?
---------------------------------------------------------

ನನ್ನ ನೆನಪು ಹತ್ತು ವರ್ಷ ಹಿಂದಕ್ಕೆ ಸಾಗಿತು....

 

ನಾ ಕಾಲೇಜಲ್ಲಿ ಓದುವಾಗ ಒಂದು ಹುಡುಗಿಯನ್ನ ಪ್ರೀತಿಸಿದ್ದು, ಹೆಚ್ಚಿನ ವಿಧ್ಯಾಭ್ಯಾಸಕ್ಕೆ ಅಂತ ಅವಳು ನಾ ಬೇರೆ ಬೇರೆ ಊರುಗಳಿಗೆ ಹೋಗಿದ್ದು,

ಆಮೇಲೆ ಮನೆವ್ರ ಒತ್ತಾಯಕ್ಕೆ ಕಟ್ಟು ಬಿದ್ದು ಅವಳು ಬೇರೆ ಯಾರ್‍ನೋ ಮದುವೆಯಾಗಿದ್ದೂ,

ಆಮೇಲೆ ನಾ ಮನೆವ್ರು ನೋಡಿದ ನಾನೂ ಮೆಚ್ಚಿದ 'ನನ್ನವಳನ್ನ' ಮದುವೆ  ಆಗಿದ್ದು,

ಆ ಕಾಲೇಜು ಹುಡುಗಿ ನೆಂಪಲ್ಳಿ ಹುಟ್ಟಿದ ಮಗಳಿಗೆ ವಿಜೇತ ಅಂತ ಹೆಸ್ರು ಇಟ್ಟದ್ದು ,

ಪುಟ್ಟಿ ಗೆ ಏನು ಹೆಸ್ರು ಇಡುವುದು?

ಅಂತ ತಲೆ ವಿಪರೀತ  
 ಕೆಡಿಸ್ಕೊಂಡು, ಅವರಿವರು ಹೇಳಿದ್ದು-
ಪೇಪರ್-
ಬೋರ್ಡು-
ಇಂಟರ್‌ನೆಟ್
ಎಲ್ಲವನ್ನೂ ಹುಡುಕಾಡಿ ನನ್ನವಳು ಹೇಳಿದ ಯಾವೊಂದು ಹೆಸರುಗಳಿಗೂ ನಾ 'ಕೊಂಕು' ತೆಗೆದು ಅದ್ಕೆ 'ಅಪಾರ್ಥ' ಇದೆ ಅಂತೆಲ್ಲಾ ಹೇಳಿ ಕೊನೆಗೆ ಅವಳನ್ನ ಒಪ್ಪಿಸಿ 'ವಿಜೇತ' ಅಂತ ಹೆಸ್ರು ಇಕ್ಕಿದ್ದು ಎಲ್ಲವೂ ನೆನಪೀಗ್ ಬಂತು...
ಆದ್ರೆ ಇದನ್ನೆಲ್ಲ ಪುಟ್ಟಿ ಗೆ ಹೇಳೋಕ್ ಆಗುತ್ತೆಯೇ?
ಅಲ್ದೇ ಹೇಳಿದ್ರೂ ಏನು ಅರ್ಥ ಆದೀತು?
 
ಹಾಗೆಯೇ ತಲೆಯಲ್ಲಿ ಅದೊಮ್ಮೆ  ನಾ ಪೆಪರ್ ಒಂದರಲ್ಲಿ ಓದಿದ ಈ ವಿಚಾರ ನೆನಪೀಗ್ ಬಂತು
 
ಪ್ರೇಯಸಿ  ನಮಗೆ ನೆನಪಾಗಿ ಉಳಿಯುವುದು ನಮ್ಮ ಪಾಸ್ವರ್ಡ್ ಆಗಿ!......... ಅಂತ :)))

---------------------------------------------------------------------------------------
ವಿ-ಸೂ: ಇದು ಜಸ್ಟ್ ಕಾಲ್ಪನಿಕ ಬರಹ, ಪಾತ್ರಗಳೂ -ಸನ್ನಿವೇಶಗಳೂ- ಎಲ್ಲವೂ...
 

 

 
 
 

 

Average: 2.5 (2 votes)
131 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
partha1059's picture
05
Feb
2012
9:30

ಉ: ಭಾನುವಾರ- ಪುಟ್ತಿಯ ಒಂದು ಪ್ರಶ್ನೆ-ನನ್ ಪಜೀತಿ :((

>>> ಪ್ರೇಯಸಿ ನಮಗೆ ನೆನಪಾಗಿ ಉಳಿಯುವುದು ನಮ್ಮ ಪಾಸ್ವರ್ಡ್ ಆಗಿ!......... ಅಂತ :)))

ಸರಿ ಸರಿ ವಿಜೇತ ಆಯ್ತು ಬಿಡಿ

ಈಗ ಸಂಪದಕ್ಕೆ ನಿಮ್ಮ ಇನ್ನೊಂದು ಪಾಸ್ ವರ್ಡ್ ಇದೆಯಲ್ಲ ಅದು ಏನು ಹೇಳಿ ?

ಪಾರ್ಥಸಾರಥಿ

ಗಣೇಶ's picture
06
Feb
2012
12:24

ಉ: ಭಾನುವಾರ- ಪುಟ್ತಿಯ ಒಂದು ಪ್ರಶ್ನೆ-ನನ್ ಪಜೀತಿ :((

>>>ಈಗ ಸಂಪದಕ್ಕೆ ನಿಮ್ಮ ಇನ್ನೊಂದು ಪಾಸ್ ವರ್ಡ್ ಇದೆಯಲ್ಲ ಅದು ಏನು ಹೇಳಿ ?
ಪಾರ್ಥಸಾರಥಿ
-ಸಪ್ತಗಿರಿವಾಸಿಯವರ ಪಾಸ್‌ವರ್ಡ್ ಎಲ್ಲರಿಗೂ ಗೊತ್ತಾಯಿತು. :)
**************
ಪುಟ್ಟಿಯ ಪ್ರಶ್ನೆಗೆ ಕತೆಯ ನಾಯಕನ ಪಜೀತಿ ಚೆನ್ನಾಗಿದೆ. :) :)
-ಗಣೇಶ.

venkatb83's picture
06
Feb
2012
2:01

ಉ: ಭಾನುವಾರ- ಪುಟ್ತಿಯ ಒಂದು ಪ್ರಶ್ನೆ-ನನ್ ಪಜೀತಿ :((

ಪ್ರತಿಕ್ರಿಯೆಗೆ
ವಂದನೆಗಳು ಸಾರ್

partha1059's picture
06
Feb
2012
8:21

ಉ: ಭಾನುವಾರ- ಪುಟ್ತಿಯ ಒಂದು ಪ್ರಶ್ನೆ-ನನ್ ಪಜೀತಿ :((

:))
ಗಣೇಶರೆ
‍ನನ್ನ ಹೆಸರಿನ ಹಿಂದೆ ‍ಡಾಶ್ ಟೈಪ್ ಮಾಡಬೇಕಾಗಿತ್ತು ಆದರೆ ಸಂಪದದಲ್ಲಿ ನೇರ ಟೈಪ್ ಮಾಡುವಾಗ ಈಗಲು ಅ ಸೌಲಬ್ಯಗಳೆಲ್ಲ ಕೆಲಸ ಮಾಡುತ್ತಿಲ್ಲ ಅಲ್ಲದೆ ಕೆಲವು ಅಕ್ಷರಗಳು ಉದಾ:ಶ ಮೊದಲ ಅಕ್ಷರವಾಗಿ ಟೈಪ್ ಮಾಡಲಾಗದು. ಆದ್ದರಿಂದ ಹಾಗೆ ಬಿಡುತ್ತಿರುವೆ ನಿಮ್ಮ ಕಣ್ಣಿಗೆ ಅದು ತಮಾಷಿ! ಇರಲಿ,.....ಸಪ್ತಗಿರಿಯವರಿಗೆ ಪಾರ್ಥಸಾರಥಿ ಹೇಗೆ ಪಾಸ್ವರ್ಡ್ ಆಗಲು ಸಾದ್ಯ?
‍.... ಪಾರ್ಥಸಾರಥಿ

venkatb83's picture
06
Feb
2012
2:03

ಉ: ಭಾನುವಾರ- ಪುಟ್ತಿಯ ಒಂದು ಪ್ರಶ್ನೆ-ನನ್ ಪಜೀತಿ :((

ಗಣೇಶ್ ಅಣ್ಣ ತಮ್ಮ ವಿನೋದಾತ್ಮಕ ಪ್ರತಿಕ್ರಿಯೆಗೆ ವಂದನೆಗಳು

ಮತ್ತು

ನನ್ನ ಪಾಸ್ವರ್ಡ್ **************

ಕಂಡು ಹಿಡಿದಿದ್ದಕ್ಕೆ

ತಮಗೆ

ಅಭಿನಂದನೆಗಳು

:((((((((((((

venkatb83's picture
06
Feb
2012
1:51

ಉ: ಭಾನುವಾರ- ಪುಟ್ತಿಯ ಒಂದು ಪ್ರಶ್ನೆ-ನನ್ ಪಜೀತಿ :((

ಗುರುಗಳೆ -
ರಹಸ್ಯ ಒಬ್ಬರಿಗೆ ಗೊತ್ತಿದ್ದರೆ ಮಾತ್ರ ರಹಸ್ಯ ....
ಸೋ ಅದ್ಕೆ ಅದನ್ನ ನಾ ಹೇಳೋಳ್ಲ !!

ಜಸ್ಟ್ ಊಹಿಸಿ

ಅದು 'ನಿಮಗೂ'

ಗೊತ್ತಿದೆ.............

!!!!!!

ಪ್ರತಿಕ್ರಿಯೆಗೆ ವಂದನೆಗಳು................

sathishnasa's picture
06
Feb
2012
11:59

ಉ: ಭಾನುವಾರ- ಪುಟ್ತಿಯ ಒಂದು ಪ್ರಶ್ನೆ-ನನ್ ಪಜೀತಿ :((

ಇನ್ನು ಮುಂದೆ ಮಕ್ಕಳಿಗೆ ಹೆಸರು ಇಡುವಾಗ ಎಲ್ಲ ತಿಳಿದುಕೊಂಡು ನಾಮಕರಣ ಮಾಡಬೇಕು ಚನ್ನಾಗಿದೆ ನಿಮ್ಮ "ಹೆಸರಿನ " ಪ್ರಹಸನ ಸಪ್ತಗಿರಿವಾಸಿಯವರೇ.
....ಸತೀಶ್

venkatb83's picture
06
Feb
2012
1:52

ಉ: ಭಾನುವಾರ- ಪುಟ್ತಿಯ ಒಂದು ಪ್ರಶ್ನೆ-ನನ್ ಪಜೀತಿ :((

ಎಲ್ಲ ತಿಳಿದುಕೊಂಡು ನಾಮಕರಣ ಮಾಡಬೇಕು
---------------------------------------------------------
ನಿಮ್ಮ ಪ್ರತಿಕ್ರಿಯೆ.

ನಗೆ ತರಿಸಿತು........ :
)))೦ ಪ್ರತಿಕ್ರಿಯೆಗೆ
ವಂದನೆಗಳು