ಈಗಿನಂತೆ 3 ಸದಸ್ಯರು ಮತ್ತು 148 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಉತ್ತರಕರ್ನಾಟಕದಲ್ಲಿ ಕನ್ನಡದ ಕಥೆ -೧
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
15
Jul
2006
ಬ್ಲಾಗ್ ಬರಹ
ಕರ್ನಾಟಕದ ಪಾಲಿಗೆ ೧೯ನೇ ಶತಮಾನದ ಮಧ್ಯಭಾಗ ಮತ್ತು ೨೦ನೇ ಶತಮಾನದ ಪ್ರಾರಂಭವನ್ನು ಸಾಮಾನ್ಯವಾಗಿ ಅಜ್ಞಾತ ಕಾಲಖಂಡ ಎಂದೂ /ಅನುಕರಣ ಯುಗವೆಂದೂ ಹೇಳುತ್ತಾರೆ . ಈ ಮಾತು ಉತ್ತರ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,464
ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ
hamsanandi's picture
ಹಂಸಾನಂದಿ
28
Dec
2011
ಬ್ಲಾಗ್ ಬರಹ

ನೆನ್ನೆ ಮೊನ್ನೆ Death Valley ಯನ್ನು ನೋಡಿ ಬಂದ...

ಪ್ರತಿಕ್ರಿಯೆಗಳು: 6
ಹಿಟ್ಸ್ : 194
ಭಟ್ಟರಿಂದ ಹೊಸ ಪತ್ರಿಕೆ (ಯುಗಾದಿ ಕೊಡುಗೆ)
ಗಣೇಶ's picture
ಗಣೇಶ
01
Apr
2011
ಬ್ಲಾಗ್ ಬರಹ

ಅನೇಕ ದಿನಗಳಿಂದ ನಿರೀಕ್ಷಿಸಿದ್ದ ಗಳಿಗೆ ಕಡೆಗೂ ಕೂಡಿ ಬಂದಿತು!

ಚಾತಕ ಪಕ್ಷಿಯಂತೆ ಬಾಯಾರಿದ್ದ ಓದುಗರಿಗೆ ಸ್ವಾತಿ ಮಳೆ ಹನಿಯಲಿದೆ!

ಪತ್ರಿಕಾ ಲೋಕದಲ್ಲಿ ಸುನಾಮಿ...

ಪ್ರತಿಕ್ರಿಯೆಗಳು: 16
ಹಿಟ್ಸ್ : 910
ವಿಕ್ಷಿಪ್ತ (ಕಥೆ)
partha1059's picture
ಪಾರ್ಥಸಾರಥಿ
06
Dec
2010
ಲೇಖನ

ವಿಕ್ಷಿಪ್ತ

ಬಾನುವಾರವಾದ್ದರಿಂದ ಸ್ವಲ್ಪ ತಡವಾಗಿ ಏಳುವದೆಂದು ರಾತ್ರಿ ಮಲಗುವಾಗಲೆ ನಿರ್ದರಿಸಿದ್ದೆ...

ಪ್ರತಿಕ್ರಿಯೆಗಳು: 29
ಹಿಟ್ಸ್ : 1,154
ಇದೇನಾ ಪತ್ರಿಕೋದ್ಯಮ? - 3
ವಿಶ್ವನಾಥ's picture
ವಿಶ್ವನಾಥ ಎಂ ಬಸವನಾಳಮಠ
27
Jul
2006
ಬ್ಲಾಗ್ ಬರಹ
ಅಭಿವೃದ್ಧಿ ಪತ್ರಿಕೋದ್ಯಮ (ಮುಂದುವರಿದ ಭಾಗ) ನಮ್ಮ ಮಾಧ್ಯಮದಲ್ಲಿನ ವರದಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಇವು ನಗರದ ಗಡಿ ಬಿಟ್ಟು ಆಚೆಗೆ ಹೋಗುತ್ತಿರುವಂತೆ ಕಾಣುವುದಿಲ್ಲ...
ಪ್ರತಿಕ್ರಿಯೆಗಳು: 0
ಹಿಟ್ಸ್ : 2,924
’ಐ ಆರ್ ಎಜ್ಯುಕೇಷನ್’ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೧
anilkumar's picture
ಎಚ್.ಎ. ಅನಿಲ್ ಕುಮಾರ್
28
Jun
2010
ಪುಟ

 

...

ಪ್ರತಿಕ್ರಿಯೆಗಳು: 1
ಹಿಟ್ಸ್ : 877
ಕೊಂಕಣಿಗಳು ಮತ್ತು ಸಂಘನಿಷ್ಟೆ
gurubaliga's picture
ಗುರು ಬಾಳಿಗ
16
Jun
2009
ಪುಟ

ದಕ್ಷಿಣ ಕನ್ನಡದಲ್ಲಿ ಕಳೆದ ಎರಡು ವರ್ಷಗಳಿಂದ ಆಗುತ್ತಿರುವ ಸಾಮಾಜಿಕ, ರಾಜಕೀಯ ಮತ್ತು ಕೋಮು ಸಂಬಂಧಿ ಸ್ಥಿತ್ಯಂತರಗಳ ಹಿನ್ನೆಲೆಯಾಗಿ ಪತ್ರಿಕೆಗಳಲ್ಲಿ, ವೆಬ್ಸೈಟುಗಳಲ್ಲಿ...

ಪ್ರತಿಕ್ರಿಯೆಗಳು: 22
ಹಿಟ್ಸ್ : 2,141
ಸರ್ವೋದಯ ಚೇತನ, ಸ್ವಾತಂತ್ರ್ಯ ಸೇನಾನಿ ಧಾರವಾಡದ ದಾಬಡೆ ಅಸ್ತಂಗತ.
harshavardhan v.sheelavant's picture
harshavardhan v. sheelavant
10
Aug
2010
ಪುಟ

...

ಪ್ರತಿಕ್ರಿಯೆಗಳು: 6
ಹಿಟ್ಸ್ : 746
'ಕೃಷಿ ಸಂಪದ' ಐದನೇ ಸಂಚಿಕೆ: ಫೆಬ್ರವರಿ ೨೦೧೦
ನಿರ್ವಹಣೆ's picture
ಸಂಪದ ನಿರ್ವಹಣೆ ತಂಡ
08
Feb
2010
ಪುಟ

ಈ ಸಂಚಿಕೆಯಲ್ಲಿ:

...

ಪ್ರತಿಕ್ರಿಯೆಗಳು: 0
ಹಿಟ್ಸ್ : 894
ಆದಿಶಂಕರ ಪ್ರತಿಪಾದಿತ ಜೀವನತತ್ತ್ವ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
18
May
2010
ಪುಟ

  ಶಂಕರ ಜಯಂತಿಯ ಈ ದಿನ ನಾವು ಆದಿಶಂಕರ ಪ್ರತಿಪಾದಿತ ಜೀವನತತ್ತ್ವದತ್ತ ಒಂದು ಸ್ಥೂಲ ನೋಟ ಹರಿಸೋಣ. ಆದಿಶಂಕರರ ಕೆಲವು ನುಡಿಗಳನ್ನು ಮನನ ಮಾಡಿಕೊಳ್ಳಲೆತ್ನಿಸೋಣ.
...

ಪ್ರತಿಕ್ರಿಯೆಗಳು: 16
ಹಿಟ್ಸ್ : 1,183

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಮತದಾರ ಪ್ರಜಾಕೋಟಿ ಬಾಲಮುದುಡಿಕೊಂಡಿದ್ದುಬಿಡಬೇಕೇ?

ಮತದಾರ ಪ್ರಜಾಕೋಟಿ ಬಾಲಮುದುಡಿಕೊಂಡಿದ್ದುಬಿಡಬೇಕೇ?

 ಉಪಲೋಕಾಯುಕ್ತರು, ಹುದ್ದೆ ಬಿಡುವುದಿಲ್ಲವೆಂದು ಪಟ್ಟುಹಿಡಿದಿದ್ದಾರೆ. ಸ್ವತಃ ಕಾನೂನು ಮತ್ತು ಸಂವಿಧಾನದ ಉದ್ಧಾಮ ಪರಿಣಿತರವರು. ಅವರ ನಿಲವಿಗೆ ಸಾಂವಿಧಾನಿಕ, ತಾಂತ್ರಿಕ ಸಮರ್ಥನೆ ಇದ್ದೇ ಇರುತ್ತದೆ. ಆದರೆ ಇಡೀ ಬೆಳವಣಿಗೆ, ಸಹಜ-ಸಾಧಾರಣ ’ನಾಡಾಡಿ’ ಪ್ರಜೆಗಳ ವಿವೇಕಕ್ಕೆ ಕಕವಾ ಹಿಡಿಸಿರದಿದ್ದರೆ ಆಶ್ಚರ್ಯ! ಉಪ-ಆಯುಕ್ತದ ನಿಯುಕ್ತಿ, ಅದಕ್ಕೆ ಮುಖ್ಯ ನ್ಯಾಯಮೂರ್ತಿಗಳ ಬೈಗುಳ, ’ಬನ್ನಿ’ ಎಂದು ಕರೆದು ಪ್ರಮಾಣವಚನ ಬೋಧಿಸಿದ ರಾಜ್ಯಪಾಲರಿಂದಲೇ, ಇದಕ್ಕೆ ಬೆಂಬಲ... ಮತದಾರ ಪ್ರಜಾಕೋಟಿ, ’ಕೇಳಲಿಕ್ಕೆ ನಾವ್ಯಾರು?’ ಎಂದು ಬಾಲಮುದುರಿಕೊಂಡಿದ್ದುಬಿಡಬೇಕಾದ ಸನ್ನಿವೇಶ! ಹಿಂದೆ ಉಪಲೋಕಾಯುಕ್ತ ಹುದ್ದಯಲ್ಲಿದ್ದವರೂ ಮತ್ತು ಅದಕ್ಕೆ ಮೇಲಿನ ಲೋಕಪಾಲಹುದ್ದೆಗೆ ನಿಯೋಜನೆಗೊಂಡ ನ್ಯಾವೇತ್ತರುಗಳು, ಸಂವಿಧಾನದ ಹಕ್ಕು-ಅಧಿಕಾರಗಳ ಪ್ರಶ್ನೆ ಎತ್ತಿ, ಸವಾಲೆಸೆಯದೆ, ತಮ್ಮ ವ್ಯಕ್ತಿತ್ವದ ಮತ್ತು ಹುದ್ದೆಯ ಮರ್ಯಾದಸ್ಥಿಕೆ ಉಳಿಸಿಕೊಂಡು ಹೊರಬಂದರೆಂದುಕೊಂಡಿದ್ದೆವು. ಆದರೆ ಈಗಿನ ಬೆಳವಣಿಗೆ, ಕಡು ಸತ್ಯವೊಂದನ್ನು ಕಂಡರಿಸಿದೆ; ದೇಶದ ಸಂವಿಧಾನ, ಕಾನೂನುಗಳು ಎಷ್ಟೇ ಮಹೋನ್ನತಿಯದಾದರೂ, ಅದು ಸಾರ್ಥಕವಾಗುವುದು, ಜಾರಿಗೊಳಿಸುವ ಉನ್ನತ ವ್ಯಕ್ತಿಗಳ ಸಂಸ್ಕೃತಿ, ಸಂಸ್ಕಾರ, ಪ್ರಾಮಾಣಿಕತೆ, ಆತ್ಮವಂತಿಕೆಗಳಿಂದ ಮಾತ್ರವೇ!
 

No votes yet
61 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
anand33's picture
13
Feb
2012
6:10

ಉ: ಮತದಾರ ಪ್ರಜಾಕೋಟಿ ಬಾಲಮುದುಡಿಕೊಂಡಿದ್ದುಬಿಡಬೇಕೇ?

ರಾಜ್ಯ ಸರ್ಕಾರವು ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರ ನೇಮಕದಲ್ಲಿ ಸರ್ವಾಧಿಕಾರಿ ಧೋರಣೆಯನ್ನು ತಳೆದಿರುವುದು ಕಂಡು ಬರುತ್ತದೆ. ಮುಖ್ಯ ನ್ಯಾಯಾಧೀಶರು ಸೂಚಿಸಿದ ಯಾವ ವ್ಯಕ್ತಿಯೂ ಉಪಲೋಕಾಯುಕ್ತ ಹುದ್ಧೆಗೆ ಬಾರದೆ ಇರುವುದು ಗಂಭೀರ ಲೋಪ ಹಾಗೂ ಸರಕಾರ ಸರ್ವಾಧಿಕಾರಿಯಾಗಿ ನಡೆದು ಕೊಳ್ಳುತ್ತಿದೆ ಎಂಬುದರ ಸೂಚಕ. ವಿರೋಧ ಪಕ್ಷದ ಮುಖಂಡರು, ಮುಖ್ಯ ನ್ಯಾಯಾಧೀಶರು ಹೀಗೆ ಎಲ್ಲರಿಗೆ ಒಪ್ಪಿಗೆಯಾಗುವ ವ್ಯಕ್ತಿಯನ್ನು ಲೋಕಾಯುಕ್ತ ಹಾಗೂ ಉಪಲೋಕಯುಕ್ತ ಆಗಿ ನೇಮಿಸುವುದು ಅಗತ್ಯ. ಹೀಗೆ ಮಾಡದೇ ಕೇವಲ ಅವರೊಡನೆ ಸಲಹೆ ಕೇಳುವುದು ಮತ್ತು ಅದನ್ನು ಪಾಲಿಸದೆ ಇರುವುದು ಮಾಡಿದರೆ ಅದು ಪ್ರಜಾಪ್ರಭುತ್ವ ಆಗುವುದಿಲ್ಲ, ಅದು ಸರ್ವಾಧಿಕಾರ ಆಗುತ್ತದೆ. ಮುಖ್ಯ ನ್ಯಾಯಾಧೀಶ ಹಾಗೂ ವಿರೋಧ ಪಕ್ಷದ ನಾಯಕರ ಜೊತೆ ಸಮಾಲೋಚನೆ ಮಾಡಬೇಕು ಎಂಬ ನಿಯಮ ಲೋಕಾಯುಕ್ತದಲ್ಲಿ ಸೇರಿಸಿರುವುದು ಸಂವಿಧಾನಿಕ ಸಮತೋಲನ ಕಾಯ್ದುಕೊಳ್ಳಲು ಎಂಬುದು ಮೂಲಭೂತ ತಿಳುವಳಿಕೆ. ಇದರ ಉದ್ಧೇಶ ನಿಷ್ಪಕ್ಷಪಾತ, ಪ್ರಾಮಾಣಿಕ, ದೃಢ ನಿಲುವಿನ ವ್ಯಕ್ತಿ ಆ ಸ್ಥಾನಕ್ಕೆಆಯ್ಕೆಯಾಗಬೇಕು ಎಂಬುದೇ ಆಗಿದೆ. ಇಂಥ ತಿಳುವಳಿಕೆ ಸರ್ಕಾರಕ್ಕಿರಲಿಲ್ಲ ಎಂದು ತಿಳಿಯಬೇಕಿಲ್ಲ. ಇಂಥ ತಿಳುವಳಿಕೆ ಸರ್ಕಾರಕ್ಕೆ ಚೆನ್ನಾಗಿಯೇ ಇದೆ, ಆದರೆ ನಾವು ಏನು ಮಾಡಿದರೂ ನಡೆಯುತ್ತದೆ ಎಂಬ ಅಹಂಕಾರವನ್ನು ಸರ್ಕಾರ ನಡೆಸುವವರು ಪದೇ ಪದೇ ವ್ಯಕ್ತ ಪಡಿಸುವುದನ್ನು ನಾವು ನೋಡುತ್ತಿದ್ದೇವೆ. ಇದರಿಂದಾಗಿ ಸರ್ಕಾರದ ವರ್ಚಸ್ಸು ಹಾಗೂ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ. ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳಿಗೆ ಬೆಲೆ ಕೊಡದ ಈ ಸರ್ಕಾರಕ್ಕೆ ಏನು ಹೇಳಿದರೂ "ಗೋರ್ಕಲ್ಲ ಮೇಲೆ ನೀರೆರೆದಂತೆ " ಆಗುವುದನ್ನು ನಾವು ನೋಡುತ್ತಲೇ ಇದ್ದೇವೆ. ಮುಖ್ಯ ನ್ಯಾಯಾಧೀಶರನ್ನೂ ಕೇಂದ್ರ ಸರ್ಕಾರದ ಏಜೆಂಟ್ ಎಂದು ಇವರು ಹೇಳಿದರೂ ಹೇಳಬಹುದು.

ಆರ್ ಕೆ ದಿವಾಕರ's picture
14
Feb
2012
9:07

ಉ: ಮತದಾರ ಪ್ರಜಾಕೋಟಿ ಬಾಲಮುದುಡಿಕೊಂಡಿದ್ದುಬಿಡಬೇಕೇ?

ತಮ್ಮ ಆಲೋಚನೆಯಲ್ಲಿ ಹುರುಳಿದೆ, ಆನಂದ ಪ್ರಸಾದ್‌ ಅವರೆ. ನಮ್ಮ ಸರ್ವೋನ್ನತ ಕಾನೂನು, ಸಂವಿಧಾನ ವಿಧಿಗಳನ್ನು ಸರ್ಕಾರ ’ವ್ರತಕಲ್ಪ’ದ ಶಾಸ್ತ್ರಗಳಂತೆ ಕಾಣುತ್ತದೆ. ನಾಡಿನ ವಿಧಿ-ನಿಯಮಗಳು ಕೇವಲ ಅಕ್ಷರ, ಪದಗುಚ್ಛಗಳಲ್ಲ; ಅವುಗಳಿಗೊಂದು ಅರ್ಥ, ಉದ್ದೇಶ ಮತ್ತು ಸದಾಶಯ - Spirit - ಇರುತ್ತದೆ. ಹಾಗೆನ್ನಿಸುವುದು ಸಭ್ಯ-ಸಂಸ್ಕಾರವಂತ ಜನಸ್ತೋಮಕ್ಕೆ ಮಾತ್ರಾ. ಅದರೆ ’ಸರ್ಕಾರ’ ಎಂಬುದನ್ನು ದಂಧೆ ಮಾಡಿಕೊಳ್ಳುವ ದಳ್ಳಾಳಿಗಳಲ್ಲಿ ಇಂಥಾ ’ಸಂಸ್ಕಾರವಂತಿಕೆ’ ನಿರೀಕ್ಷಿಸಲಾಗುತ್ತದೆಯೇ? ತಾವು ಯಾವುದನ್ನು ’ಸರ್ವಾಧಿಕಾರೀ ಧೋರಣೆ’ ಎಂದಿದ್ದೀರೋ, ಇಲ್ಲಿ ಅದು ನಿಜವಾಗಿ ಹದಿನೆಂಟನೇ ಶತಮಾನದ ತುಂಡು ಪಾಳೇಗಾರಿಕೆ, ಅಷ್ಟೆ! ಸರ್ವಾಧಿಕಾರಿಯಂತೆ ಸ್ಥಿರ ಪಟ್ಟದಲ್ಲುಳಿಯುವ ಶಕ್ತಿ-ಸಾಮಾರ್ಥ್ಯವಾಗಲೀ ಮಹತ್ವಾಕಾಂಕ್ಷೆಯಾಗಲೀ ಇಲ್ಲಿ ಕಂಡುಬರುವುದಿಲ್ಲ. ಎಂಟಾರು ದಿನಗಳಷ್ಟಾದರೂ ಅಧಿಕಾರ ಸಾಕು; ಅಷ್ಟರಲ್ಲಿ ತಲೆಮಾರಿಗಾಗುವಷ್ಟನ್ನು ದೋಚಿ, ನಾಮಾವಶೇಷವಾಗಿಹೋಗಬೇಕುಂಬುದೇ ಇಂಥವರ - Sketch - ಎನಿಸುತ್ತದೆ.
ಅದು ರಾಜಕಾರಣಿಗಳ - Level - ಆದರೆ ನ್ಯಾಯವೇತ್ತರ ಜಟಾಪಟಿ ಹೇಳಿ. ನಮ್ಮ, ಅಂದರೆ, ನಾಡಡಿಗಳ ಪಾಲಿಗೆ, ನ್ಯಾ. ಚಂದ್ರಶೇಖರಯ್ಯನವರನ್ನಾಗಲೀ, ನ್ಯಾ. ವಿಕ್ರಮಜಿತ್ ಸಿಂಗರಾಗಲೀ ಸಮಾನ ನ್ಯಾಯಕೋವಿದರೇ ಅಲ್ಲವೇ?!

ಆರ್ ಕೆ ದಿವಾಕರ's picture
14
Feb
2012
9:07

ಉ: ಮತದಾರ ಪ್ರಜಾಕೋಟಿ ಬಾಲಮುದುಡಿಕೊಂಡಿದ್ದುಬಿಡಬೇಕೇ?

ತಮ್ಮ ಆಲೋಚನೆಯಲ್ಲಿ ಹುರುಳಿದೆ, ಆನಂದ ಪ್ರಸಾದ್‌ ಅವರೆ. ನಮ್ಮ ಸರ್ವೋನ್ನತ ಕಾನೂನು, ಸಂವಿಧಾನ ವಿಧಿಗಳನ್ನು ಸರ್ಕಾರ ’ವ್ರತಕಲ್ಪ’ದ ಶಾಸ್ತ್ರಗಳಂತೆ ಕಾಣುತ್ತದೆ. ನಾಡಿನ ವಿಧಿ-ನಿಯಮಗಳು ಕೇವಲ ಅಕ್ಷರ, ಪದಗುಚ್ಛಗಳಲ್ಲ; ಅವುಗಳಿಗೊಂದು ಅರ್ಥ, ಉದ್ದೇಶ ಮತ್ತು ಸದಾಶಯ - Spirit - ಇರುತ್ತದೆ. ಹಾಗೆನ್ನಿಸುವುದು ಸಭ್ಯ-ಸಂಸ್ಕಾರವಂತ ಜನಸ್ತೋಮಕ್ಕೆ ಮಾತ್ರಾ. ಅದರೆ ’ಸರ್ಕಾರ’ ಎಂಬುದನ್ನು ದಂಧೆ ಮಾಡಿಕೊಳ್ಳುವ ದಳ್ಳಾಳಿಗಳಲ್ಲಿ ಇಂಥಾ ’ಸಂಸ್ಕಾರವಂತಿಕೆ’ ನಿರೀಕ್ಷಿಸಲಾಗುತ್ತದೆಯೇ? ತಾವು ಯಾವುದನ್ನು ’ಸರ್ವಾಧಿಕಾರೀ ಧೋರಣೆ’ ಎಂದಿದ್ದೀರೋ, ಇಲ್ಲಿ ಅದು ನಿಜವಾಗಿ ಹದಿನೆಂಟನೇ ಶತಮಾನದ ತುಂಡು ಪಾಳೇಗಾರಿಕೆ, ಅಷ್ಟೆ! ಸರ್ವಾಧಿಕಾರಿಯಂತೆ ಸ್ಥಿರ ಪಟ್ಟದಲ್ಲುಳಿಯುವ ಶಕ್ತಿ-ಸಾಮಾರ್ಥ್ಯವಾಗಲೀ ಮಹತ್ವಾಕಾಂಕ್ಷೆಯಾಗಲೀ ಇಲ್ಲಿ ಕಂಡುಬರುವುದಿಲ್ಲ. ಎಂಟಾರು ದಿನಗಳಷ್ಟಾದರೂ ಅಧಿಕಾರ ಸಾಕು; ಅಷ್ಟರಲ್ಲಿ ತಲೆಮಾರಿಗಾಗುವಷ್ಟನ್ನು ದೋಚಿ, ನಾಮಾವಶೇಷವಾಗಿಹೋಗಬೇಕುಂಬುದೇ ಇಂಥವರ - Sketch - ಎನಿಸುತ್ತದೆ.
ಅದು ರಾಜಕಾರಣಿಗಳ - Level - ಆದರೆ ನ್ಯಾಯವೇತ್ತರ ಜಟಾಪಟಿ ಹೇಳಿ. ನಮ್ಮ, ಅಂದರೆ, ನಾಡಡಿಗಳ ಪಾಲಿಗೆ, ನ್ಯಾ. ಚಂದ್ರಶೇಖರಯ್ಯನವರನ್ನಾಗಲೀ, ನ್ಯಾ. ವಿಕ್ರಮಜಿತ್ ಸಿಂಗರಾಗಲೀ ಸಮಾನ ನ್ಯಾಯಕೋವಿದರೇ ಅಲ್ಲವೇ?!

anand33's picture
14
Feb
2012
12:46

ಉ: ಮತದಾರ ಪ್ರಜಾಕೋಟಿ ಬಾಲಮುದುಡಿಕೊಂಡಿದ್ದುಬಿಡಬೇಕೇ?

ಉಪ ಲೋಕಾಯುಕ್ತರಾಗಿ ನೇಮಕವಾದ ಚಂದ್ರಶೇಕರಯ್ಯನವರ ನೇಮಕ ಸರಿಯಲ್ಲವೆಂದು ನಿವೃತ್ತ ನ್ಯಾಯಮೂರ್ತಿ ಸಲ್ದಾನ ಅವರು ಹೇಳಿದ್ದಾರೆ ಎಂಬುದನ್ನು ನಾವು ಗಮನಿಸಬೇಕು. ಚಂದ್ರಶೇಕರಯ್ಯ ಅವರ ಮೇಲೆ ಕೆಲವು ಆಪಾದನೆಗಳಿವೆ ಎಂಬ ಮಾತು ಕೇಳಿ ಬಂದಿದೆ. ತರಾತುರಿಯಲ್ಲಿ ಅವರನ್ನು ನೇಮಿಸಿದ್ದು ನೋಡಿದರೆ ಸರ್ಕಾರಕ್ಕೆ ಏನೋ ಒಂದು ಉದ್ದೇಶ ಇದೆ ಎಂಬ ಅನುಮಾನ ಪ್ರಜ್ನಾವಂತರಿಗೆ ಬರದೆ ಇರಲಾರದು. ಹೈಕೋರ್ಟಿನ ಮುಖ್ಯ ನ್ಯಾಯಾಧೀಶರೇ ತಮ್ಮ ನೇಮಕ ಸಮರ್ಪಕವಾಗಿಲ್ಲ ಎಂದು ಹೇಳಿದ ಮೇಲೆ ರಾಜೀನಾಮೆ ಬಿಸಾಡಿ ಹೊರಬರುವುದು ಉಪಲೋಕಾಯುಕ್ತರಿಗೆ ಭೂಷಣವಾಗುತ್ತಿತ್ತು. ಆದರೆ ಅವರು ರಾಜಕಾರಣಿಯಂತೆ ಅಧಿಕಾರಕ್ಕೆ ಅಂಟಿ ಕುಳಿತಿರುವುದು ಶೋಚನೀಯ. ಇದು ಲೋಕಾಯುಕ್ತ ಸಂಸ್ಥೆಯ ಮೇಲೆ ಜನರಿಗೆ ಇರುವ ನಂಬಿಕೆ ಕಡಿಮೆಯಾಗಲು ಕಾರಣವಾಗಲಿದೆ.