25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮನದೊಡತಿ

August 17, 2012 - 1:29pm
Tejaswi_ac
  ಮನದೊಡತಿ
 
  ಮನದೊಡತಿಯ ನೆನಪೇ ಎನ್ನ ಮನದ ಅಲಂಕಾರ
  ನನ್ನಾಕೆಯ ಧ್ವನಿಯ ಗುಂಗೇ ಮನಕೆ ಮಾಧುರ್ಯ  
 
  ನನ್ನ ಕರುಳ ಕುಡಿಯ ಹೊತ್ತಿರುವಾಕೆಗೆ ವಿರಹದ
  ನೋವು ಸೋಕದಿರಲಿ, ನಾ ಮರಳುವೆ ಮನದನ್ನೆ    
 
  ನೀನಾಡುವ ಎರಡು ಜೀವಗಳ ಉಸಿರಿನ ಬಿಸಿ
  ಅನುದಿನವು ನನ್ನ ಸೋಕುವುದೆಂದು ಮರೆಯದಿರು  
 
  ನೀ ಆಡುವ ಪ್ರತಿ ಉಸಿರಿನಲು ನಿನ್ನ ಹೃದಯ
  ಬಡಿತ ಕೇಳುವುದೆಂದು ಮರೆಯದಿರು ಮನದನ್ನೆ 
 
  ನಿನ್ನೀ ಮನದ ತಳಮಳ ನನ್ನ ಹೃದಯದ ಪ್ರತಿ  
  ಬಡಿತಕ್ಕು ಬಂದು ತಲುಪುದೆಂದು ನೀ ತಿಳಿದಿರು   
 
  ವಿರಹದ ಬೇನೆಯಲಿರುವ ನಿನ್ನ ಪ್ರೀತಿಗೆ ಕರಗಿ
  ಕಾಲನೇ ನಿನ್ನ ನೋವನು ಬೇಗ ನಲಿವಾಗಿಸುವನು
 
  ನಿನ್ನ ಮನದ ಕೂಗಿಗೆ ಸಪ್ತಸಾಗರದ ದೂರವನ್ನು
  ಕ್ಷಣಿಕದಲಿ ದಾಟಿ ಬಂದು ಸೇರುವೆ ಮನದೊಡತಿ 
 
  ನೀನೆಂದು ಮರುಗಬೇಡ, ವಿರಹದಲಿ ಬೇಯಬೇಡ
  ನಿನಗಾಗಿ ಮರಳಿ ಬರುವೆ, ಸಂತಸವ ಹೊತ್ತಿ ತರುವೆ    
 
 - ತೇಜಸ್ವಿ ಎ ಸಿ
   ಲಂಡನ್, ಯು.ಕೆ
 
 
 
 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by makara on

ತೇಜಸ್ವಿಯವರೆ,
ದೂರದಲ್ಲಿದ್ದರೂ ಕೂಡ ನಿಮ್ಮ ಮನ ಮತ್ತು ಮನೆಯೊಡತಿಯ ಕಾಳಜಿ ಶ್ಲಾಘನೀಯ :)
ನಿಮ್ಮ ಕವನವೂ ಮನಮುಟ್ಟುವಂತಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Tejaswi_ac on

ಶ್ರೀಧರ್ ರವರೇ,
ಈ ವಿರಹದ ದಿನಗಳು ಯುಗಗಳಂತೆ ಕಾಣುತ್ತದೆ, ಆ ಭಾವವೇ ಕವಿತೆಯಾಗಿ ಹೊರಹೊಮ್ಮಿದೆ.
ಮೆಚ್ಚುಗೆ ವ್ಯಕ್ತ ಪಡಿಸಿದ್ದಕ್ಕೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ಅವರು ಲ೦ಡನ್ನು.. ಇವರು ಇ೦ಡಿಯಾ..!
ಆದಷ್ಟು ಬೇಗ ಬನ್ನಿ.. ಬರೇ ಕವಿತೆ ಬರೀತಾ ಕೂರಬೇಡಿ ( ಮು೦ದಿನ ದೂರವಾಣಿಯಲ್ಲಿ ಮನದೊಡತಿಯ ಆಕ್ಷೇಪಣೆ ಈ ರೀತಿ ಇರಬಹುದು!)
ಚೆನ್ನಾಗಿದೆ ತೇಜಸ್ವಿ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Tejaswi_ac on

ಹ್ಹ ಹ್ಹ ಹ್ಹ ...ನಾವಡರೆ, ವಿಪರ್ಯಾಸವೆಂದರೆ ನನ್ನ ಮನೆಯವರೇ ಕವಿತೆ ಬರೆಯಲು ಹೇಳಿದ್ದು. ಆದರೆ ದಿನಗಳು ಭಾರವಾಗಿರುವುದು ನಿಜ. ಆದ್ದರಿಂದಲೇ ಬೇಗ ವಾಪಸ್ ಆಗುವ ಯೋಜನೆಯಿದೆ. ... ಹ್ಹ ಹ್ಹ ಹ್ಹ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

"ನಿನ್ನ ಮನದ ಕೂಗಿಗೆ ಸಪ್ತಸಾಗರದ ದೂರವನ್ನು
ಕ್ಷಣಿಕದಲಿ ದಾಟಿ ಬಂದು ಸೇರುವೆ ಮನದೊಡತಿ "

ತೇಜಸ್ವಿ ಅವ್ರೇ‍

ಕವನ ಸಖತ್....

ವಿರಹದ ಬಗ್ಗೆ ಹಲವು ಬರಹಗಳಲ್ಲಿ ಓದಿರುವೆ... ಜೋಡಿಗಳ ಚ್ಹಡಪಡಿಕೆ ಕಲ್ಪಿಸಿಕೊಂಡೀರುವೆ(ನಾ ಅವಿವಾಹಿತ!!).. ಅಬ್ಬ ಕಲ್ಪನೆಯೇ ಕಟ್ಹೋರ...!!

ಮನದಾಳದ ಸಮಸ್ತ ಭಾವಗಳನ್ನು ಸೊಗಸಾಗಿ ಅಕ್ಛರ ರೂಪಕ್ಕೆ ಇಳಿಸಿರುವಿರಿ...

ಬೇಗ ಬನ್ನಿ... ಬೇಗ ಬನ್ನಿ...
ಅಪಾರ ಪ್ರೀತಿ ಹೊತ್ತು ತನ್ನಿ..!!

೧೦೬ ವರ್ಷ ಸುಖ ಶಾಂತಿ ನೆಮ್ಮದಿಯಿಂದ ಬಾಳಿ....

ಶುಭವಾಗಲಿ....

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Tejaswi_ac on

ಸಪ್ತಗಿರಿವಾಸಿರವರೆ,
ಬರುವೆ, ದಿನಗಳ ಎಣಿಕೆಯಷ್ಟೇ ಬಾಕಿ. ನಿಮ್ಮ ಹಾರೈಕೆಗೆ ಧನ್ಯವಾದಗಳು. ನಿಮಗೂ ಶುಭವಾಗಲಿ, ಬೇಗ ಮದುವೆಯು ಆಗಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.