25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮನಸಿನ ಸ್ಥಿತಿ (ಶ್ರೀ ನರಸಿಂಹ 39)

July 10, 2012 - 1:04pm
sathishnasa
ಶಿಶುವಾಗಿರುವಾಗ ಇರದು ನಾನು,ನನದೆನುವ ಮೋಹವು
ಕಲುಷಿತವಿರದ ತಿಳಿಯ ಕೊಳದಂತೆ ಇರುವುದು ಮನವು
ಬೆಳದಂತೆ,ಮನದಿ ಬೆಳೆವುದು ನಾನು,ನನದೆನುವ ಭಾವ
ಸ್ವಾರ್ಥದಿಂದಲಿ ಕೂಡಿ ಪಡೆಯಲಿಚ್ಛಿಪೆವು ಬಯಸಿದ ಎಲ್ಲವ
 
ಇರಿಸ ಬೇಕಿದೆ ಶಿಶುವಾಗಿರುವಾಗ ಇರುವಂತೆ ಮನಸನು
ಬಯಸದಂತಿರಬೇಕು ಜಗದಲಿ ನಮ್ಮದಲ್ಲದ ಏನೊಂದನು
ಅರಿತಿರು ನೀ ಪಡೆದುದನೆಲ್ಲ ಬಿಟ್ಟು ಹೋಗಬೇಕಿದೆ ಇಲ್ಲಿಯೆ
ತಿಳಿದಿರು ಎಲ್ಲರಿಗೂ,ಎಲ್ಲದಕೂ ಒಡೆಯನು ಶ್ರೀನರಹರಿಯೆ
 
ಇರು ಜಗದೊಳಗೆ,ತೊರೆ ಒಳಗೆ ನಾನು,ನನದೆಂಬ ಮಮಕಾರವನು

ಇರಿಸಿ ಭಕ್ತಿಯನು ಸ್ಮರಿಸು ಅನವರತ  ಮನದಲಿ ಶ್ರೀ ನರಸಿಂಹನನು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by makara on

ಅದಕ್ಕೆ ಏನೋ ದೊಡ್ಡವರು ಹೇಳುವುದು ಮಗುವಿನಂತಹ ಮನಸ್ಸಿರಬೇಕೆಂದು. ಇಂತಹ ಮನಸ್ಸಿದ್ದರೆ ದೈವ ಸಾಕ್ಷಾತ್ಕಾರಕ್ಕೆ ಹತ್ತಿರವಾಗುತ್ತೇವೇನೋ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

+1
ನಿಜ ಅಂತಹ ಮನವಿರಬೇಕು
??
ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ಪಾರ್ಥಸಾರಥಿಯವರೇ.
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

+

ಶಿಶುವಾಗಿರುವಾಗ ಇರದು ನಾನು,ನನದೆನುವ ಮೋಹವು
ಕಲುಷಿತವಿರದ ತಿಳಿಯ ಕೊಳದಂತೆ ಇರುವುದು ಮನವು
ಬೆಳದಂತೆ,ಮನದಿ ಬೆಳೆವುದು ನಾನು,ನನದೆನುವ ಭಾವ
ಸ್ವಾರ್ಥದಿಂದಲಿ ಕೂಡಿ ಪಡೆಯಲಿಚ್ಛಿಪೆವು ಬಯಸಿದ ಎಲ್ಲವ

=================================

ಸತೀಶ್ ಅವ್ರೆ- ಸಖತ್.... ಅರ್ಥಪೂರ್ಣ

ಮತ್ತು ನಿಜವಾದ ಮಾತು...
\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Prakash Narasimhaiya on

ಆತ್ಮೀಯರೇ,
ಮಗುವಿನ ಮನಸು ಮಾಗುವಂತೆ ಮಾಯೆ ಆವರಿಸುತ್ತದೆ. ಆಗಲೇ ಎಲ್ಲವು ಬರುವುದು. ಆದ್ದರಿಂದಲೇ " ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ? " ಎಂದು ದಾಸರು ಪ್ರಶ್ನಿಸುತ್ತಾರೆ. ಮಗುವಿನ ಮನಸು ಕೂಡ ದಿನ ಕಳೆದಂತೆ ನಾನು ನನ್ನದೆಂಬ ಮೋಹ ಪಾಶಕ್ಕೆ ಬೀಳಲು ಪ್ರಾರಂಭಿಸುತ್ತದೆ. ಯಾವಾಗಲು ಮಗುವಿನ ಮನಸಿನಂತೆ ಇದ್ದರೆ ಜೀವನ ವ್ಯಾಪಾರ ನಡೆಯುವುದಾದರು ಹೇಗೆ?
"ಇರಬೇಕು ಇರದಿರಬೇಕು," ಎನ್ನುವುದು ಸೂಕ್ತವಾದೀತೇನೋ..........
ಧನ್ಯವಾದಗಳು
ಪ್ರಕಾಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ಪ್ರಕಾಶ್ ರವರೇ
>>"ಇರಬೇಕು ಇರದಿರಬೇಕು," ಎನ್ನುವುದು ಸೂಕ್ತವಾದೀತೇನೋ..........<<
ಇದನ್ನೆ ಕಡೆಯಲ್ಲಿ ಈ ಸಾಲಿನಲ್ಲಿ ಬರೆದಿದ್ದೇನೆ
>>ಇರು ಜಗದೊಳಗೆ,ತೊರೆ ಒಳಗೆ ನಾನು,ನನದೆಂಬ ಮಮಕಾರವನು<<
ಧನ್ಯವಾದಗಳೊಂದಿಗೆ
....ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ವೆಂಕಟೇಶ್ ರವರೇ.
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

>>ಇಂತಹ ಮನಸ್ಸಿದ್ದರೆ ದೈವ ಸಾಕ್ಷಾತ್ಕಾರಕ್ಕೆ ಹತ್ತಿರವಾಗುತ್ತೇವೇನೋ.<<
ನಿಮ್ಮ ಮಾತು ನಿಜ ಶ್ರೀಧರ್ ರವರೇ
ಧನ್ಯವಾದಗಳೊಂದಿಗೆ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ಪ್ರೇಮರವರೇ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ಸತೀಶರೇ, ಶಿಶುವಿನಂತಿರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಶಿಶುವಿಗೂ ತನ್ನದು, ಬೇಕು/ಬೇಡ ಇತ್ಯಾದಿಗಳ ಭಾವಗಳಿರುವುವು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ನಾಗರಾಜ್ ರವರೇ
>>ಶಿಶುವಿಗೂ ತನ್ನದು, ಬೇಕು/ಬೇಡ ಇತ್ಯಾದಿಗಳ ಭಾವಗಳಿರುವುವು.<< ನಿಜ ಆದರೆ ಅದು ಆ ಕ್ಷಣಿಕ ಅಲ್ಲವೇ ?
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ಚೆನ್ನಾಗಿದೆ ಸತೀಶವ್ರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ಚೇತನ್ ರವರೇ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.