19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮರೆತಿರುವ ನೆನಪುಗಳೇ...!

May 20, 2012 - 4:17pm
asuhegde

ಮರೆತಿರುವ ನೆನಪುಗಳೇ...!

ಮರೆತಿರುವ ನೆನಪುಗಳೇ ಕಾಡದಿರಿ ನನ್ನನ್ನು ಹೀಗೆ ಇನ್ನೂ
ನೆಮ್ಮದಿಯಿಂದಿರಲು ಬಿಟ್ಟು ಬಿಡಿ ಬಾರದಿರಿ ನನ್ನ ಸನಿಹ ಇನ್ನೂ

ಉದುರಿ ಹೋದ ನಕ್ಷತ್ರಗಳೇ ತುಂಬಿವೆ ನನ್ನೀ ಜೋಳಿಗೆಯಲ್ಲಿ
ಇನೆಷ್ಟು ದಿನ ಬಾಳುವೆನೋ ನಾನೀ ಕನಸುಗಳ ಭರವಸೆಯಲ್ಲಿ
ಹೆಚ್ಚಿಸದಿರಿ ನೀವು ಬಂದಿಲ್ಲಿ ಹುಚ್ಚನಾಗಿಹ ನನ್ನ ಈ ಹುಚ್ಚನ್ನಿನ್ನೂ
ನೆಮ್ಮದಿಯಿಂದಿರಲು ಬಿಟ್ಟು ಬಿಡಿ ಬಾರದಿರಿ ನನ್ನ ಸನಿಹ ಇನ್ನೂ

ನಡು ಬೀದಿಯಲ್ಲಿ ನಿಲ್ಲಿಸಿ ನನ್ನನ್ನು ಲೂಟಿ ಮಾಡದಿರಿ ಹೀಗೆ
ಕರೆಮಾಡಿ ಕರೆಯದಿರಿ ಹೊಸ ಮಾರ್ಗವನು ತೋರುವ ಹಾಗೆ
ಮತ್ತೆ ಬೀಳಿಸದಿರಿ, ಬಾಳಲ್ಲಿ ಬಿದ್ದು ಒದ್ದಾಡಿ ಎದ್ದು ನಿಂತವನನ್ನು
ನೆಮ್ಮದಿಯಿಂದಿರಲು ಬಿಟ್ಟು ಬಿಡಿ ಬಾರದಿರಿ ನನ್ನ ಸನಿಹ ಇನ್ನೂ

ಮರೆತಿರುವ ನೆನಪುಗಳೇ ಕಾಡದಿರಿ ನನ್ನನ್ನು ಹೀಗೆ ಇನ್ನೂ
ನೆಮ್ಮದಿಯಿಂದಿರಲು ಬಿಟ್ಟು ಬಿಡಿ ಬಾರದಿರಿ ನನ್ನ ಸನಿಹ ಇನ್ನೂ
*********************************

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by partha1059 on

ಆಸುರವರೆ ನಮಸ್ಕಾರ‌
ವ್ಯಕ್ತಿಯೊಬ್ಬ ತನ್ನ
ಕಹಿನೆನಪುಗಳಿಂದ ಹೊರಬರಲು ನಡೆಸುವ‌
ಮನಸಿನ ಹೋಯ್ದಾಟದ ಚಿತ್ರಣ ನಿಮ್ಮ ಈ ಕವನ.
ಆದರು ವ್ಯಾಮೋಹಗಳಿಂದ ಸಂಬಂಧಗಳಿಂದ ಬಿಡುಗಡೆ
ಅಷ್ಟು ಸುಲುಭವಲ್ಲ
ಬಿಟ್ಟೆನೆಂದರು ಬಿಡದ ಮಾಯೆ ‍ ಅನ್ನುತ್ತಾರಲ್ಲ ಹಾಗೆ
ಬೆನ್ನ ಹಿಡಿದು ಕಾಡುತ್ತವೆ.
>> ಮರೆತಿರುವ ನೆನಪುಗಳೇ ಕಾಡದಿರಿ ನನ್ನನ್ನು ಹೀಗೆ ಇನ್ನೂ

ಆದರು ಒಂದು ಅನುಮಾನ
ಮೊದಲ ವಾಕ್ಯದ ಎರಡುಬಾಗಗಳು ಒಂದಕ್ಕೊಂದು ವಿರುದ್ದವಲ್ಲವೆ
ಮರೆತಿರುವ ನೆನಪುಗಳಾದರೆ ಅವು ನಮ್ಮನ್ನೆಲ್ಲಿ ಕಾಡುತ್ತವೆ :))

ವಿಶ್ವಾಸದೊಂದಿಗೆ
ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಈಗ ಪೂರ್ತಿ ಗೊತ್ತಾಯ್ತು ಬಿಡಿ
ಪೇಸ್ ಬುಕ್ ನಲ್ಲಿ ನೋಡಿದೆ.
ಸುಂದರ ಭಾವಾನುವಾದ!

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nanjunda on

ಆಸು ಹೆಗ್ಡೆಯವರೇ, ಭಾವಪೂರ್ಣ ಭಾವಾನುವಾದ.
ಮರೆಯಲು ಪ್ರಯತ್ನಿಸಿದರೆ ನೆನಪಿನಲ್ಲಿರುತ್ತದೆ. ನೆನಪಿನಲ್ಲಿಡಲು ಪ್ರಯತ್ನಿಸಿದರೆ ಮರೆಯುತ್ತದೆ. ಈ ಮನಸ್ಸು ತುಂಬಾ ವಿಚಿತ್ರವಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ನಂಜುಂಡರವರೇ,
ನಾವು ಮರೆತರೂ, ಆ ನೆನಪುಗಳು ನಮ್ಮನ್ನು ಮರೆತಿರುವುದಿಲ್ಲ. ನಮ್ಮನ್ನು ಕಾಡುತ್ತವೆ, ನಾವು ಇಚ್ಛಿಸಿದರೂ, ಇಚ್ಛಿಸದೇ ಇದ್ದರೂ.
ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗಾಗಿ.
-ಆಸು ಹೆಗ್ಡೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಪಾರ್ಥಸಾರಥಿಯವರೇ,
ತಮ್ಮ ಮೊದಲ ಪ್ರತಿಕ್ರಿಯೆಯನ್ನು ಆಗಲೇ ಓದಿದ್ದೆ, ಆದರೆ, ಸುಮ್ಮನಿದ್ದೆ.
ತಾವು ಮರಳಿ ಬರುತ್ತೀರಿ ಅನ್ನುವ ನಂಬಿಕೆ ಇತ್ತು.
ಧನ್ಯವಾದಗಳು.

Submitted by Jayanth Ramachar on

ಹೆಗ್ಡೆ ಅವರೇ ಬಹಳ ದಿನಗಳ ನ೦ತರ ಮತ್ತೆ ಸ೦ಪದದಲ್ಲಿ ಸು೦ದರವಾದ ಸಾಲುಗಳೊ೦ದಿಗೆ ಕಾಣಿಸಿಕೊ೦ಡಿದ್ದೀರಿ. ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ashoka_15 on

ಆಸು ಹೆಗ್ಡೆರವರಿಗೆ

ಶುಭವಾಗಲಿ,
ಚೆನ್ನಾಗಿದೆ ನಿಮ್ಮ
ನೆನೆಪುಗಳ ಬೀಳ್ಕೊಡುವಿಕೆ,

ನಿಮ್ಮ ಜೋತೆ ನಾನು ಕೈ ಜೊಡಿಸುತ್ತೆನೆ.

ಕವಲುದಾರಿಯ ಜಾಡಿ ಇಡಿದು
ನೆನೆಪುಗಳ ಮೂಟೆ ಹೊತ್ತು
ಈಡೇರದ ಕನಸುಗಳ
ಕಲ್ಲುಮುಳ್ಳುಗಳಂತೆ ಕಿತ್ತು
ಮುನ್ನಡೆದಂತೆ
ಹೊತ್ತ ಮೂಟೆ ಬಾರವಾಗದೆ?
ಬೇರೊಬ್ಬರೊಡನೆ ಬಿಚ್ಚಿಟ್ಟರೆ ಅಗುರಾಗದೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಧನ್ಯವಾದಗಳು.

ಕನ್ನಡ ಕನ್ನಡವಾಗಿದ್ದರೇ ಚೆಂದ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಧನ್ಯವಾದಗಳು ಜಯಂತ್!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ಸರಿಪಡಿಸಬಹುದಾದ ಸಂಗತಿಗಳಿದ್ದರೆ ಸರಿಪಡಿಸಬಹುದು, ಸಾಧ್ಯವಿಲ್ಲವಾದರೆ ಅದಕ್ಕಾಗಿ ಚಿಂತಿಸುವುದರಲ್ಲಿ ಅರ್ಥವಿಲ್ಲ. ಹಾಗಾದಾಗ ನೆನಪುಗಳು ಕಾಡಲಾರವು. ಆದರೆ ಕಾಡಲೆಂದೇ ಕೆಲವು ನೆನಪುಗಳು ಉಳಿಯುತ್ತವೆ. ಅದನ್ನು ಕಾಲವೇ ಮರೆಯಿಸಬೇಕು. ಇಂತಹ ಮನಸ್ಥಿತಿಯೇ ನನ್ನದೂ. ಸಮಭಾವಿಗಳಿದ್ದಾರೆಂಬುದೇ ಸಮಾಧಾನ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

 >>  ಆದರೆ ಕಾಡಲೆಂದೇ ಕೆಲವು ನೆನಪುಗಳು ಉಳಿಯುತ್ತವೆ. ಅದನ್ನು ಕಾಲವೇ ಮರೆಯಿಸಬೇಕು. ಇಂತಹ ಮನಸ್ಥಿತಿಯೇ ನನ್ನದೂ. 

ನಾಗರಾಜರೆ ಕಾಡಲೆಂದೇ ಇರುವ ನೆನಪುಗಳನ್ನು ಮರೆಸಲೆಂದು ನಿಮ್ಮಲ್ಲಿ ಮೂಡನೊಬ್ಬನಿದ್ದಾನಲ್ಲ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ನಿಜ ಕವಿಗಳೇ,
ಕೆಲವು ಕಾಡಲೆಂದೇ ಉಳಿಯುವವುಗಳು
ಕೆಲವು ಉಳಿಸಲೆಂದೇ ಕಾಡುವವುಗಳು

ತಾವಂದಂತೆ ಸಮಭಾವಿಗಳಿದ್ದಾರೆಂಬ ಸಮಾಧಾನದಿಂದಲೇ ಈ ಸಂಪದ ಸಂಪದ್ಭರಿತವಾಗಿದೆ, ಈ ಜೀವನಕ್ಕೂ ಅರ್ಥ ದೊರೆಯುತ್ತಿದೆ !

ಧನ್ಯವಾದಗಳು

-ಆಸು ಹೆಗ್ಡೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ಚೆನ್ನಾಗಿದೆ.
<<ಮರೆತಿರುವ ನೆನಪುಗಳೇ ಕಾಡದಿರಿ ನನ್ನನ್ನು ಹೀಗೆ ಇನ್ನೂ
ನೆಮ್ಮದಿಯಿಂದಿರಲು ಬಿಟ್ಟು ಬಿಡಿ ಬಾರದಿರಿ ನನ್ನ ಸನಿಹ ಇನ್ನೂ>> ಮರೆಯಬೇಕೆನಿಸಿದ ನೆನಪುಗಳು ಮರೆತಿದ್ದೇವೆ ಅಂದುಕೊಂಡರೂ ಮತ್ತೂ ಅವು ಕಾಡುವುದು ಹೆಚ್ಚೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.