ಈಗಿನಂತೆ 3 ಸದಸ್ಯರು ಮತ್ತು 145 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಪಕ್ಷ(ಪಾತ)ಅತೀತ ಮಾಧ್ಯಮ ಎಲ್ಲಿದೆ?
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
19
Nov
2010
ಲೇಖನ

 

  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಹಗರಣಗಳ ಅಸ್ಥಿಪಂಜರಗಳು ಕಪಾಟುಗಳೊಳಗಿನಿಂದ ಒಂದೊಂದಾಗಿ ಹೊರಬೀಳುತ್ತಿರುವುದು ನಮ್ಮ ಮಾಧ್ಯಮಗಳಿಗೆ ಸುಗ್ಗಿಯಾಗಿ...

ಪ್ರತಿಕ್ರಿಯೆಗಳು: 12
ಹಿಟ್ಸ್ : 967
ವ್ಯಾಲಂಟೈನ್ಸ್ ಡೇ
ramvani's picture
ವಾಣಿ
14
Feb
2012
ಲೇಖನ

.. ಪ್ರೇಮ ಜ್ವರ, ಯಾವುದೇ ಹಬ್ಬಕ್ಕೆ ಇಲ್ಲದ ಖರೀದಿ ಭರಾಟೆ ವ್ಯಾಲಂಟೈನ್ಸ್ ಡೇ ಗೆ.ಇದು ವಿಶ್ವವ್ಯಾಪಿ. ಓಹ್ ಫೆಬ್ರವರಿ ಈಸ್ "ಮಂತ್ ಆಫ್ ಲವ್" ಅಂದಳು, ನನ್ನ ಕಾಲೇಜಿನ ಓರ್ವ...

ಪ್ರತಿಕ್ರಿಯೆಗಳು: 6
ಹಿಟ್ಸ್ : 427
ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧)
pvravi's picture
09
Jan
2006
ಪುಟ
ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... ***** ಭಾಗ ೧. ನನ್ನ ಹೆಸರು ಸೂರ್ಯ ಶರ್ಮ. ಈ ಕತೆಯ ಪ್ರಾರಂಭದ ಕಾಲದಲ್ಲಿ ನಾನು ಕರ್ನಾಟ್ಟ ದೇಶದ ವಾತಾಪಿ ನಗರಿಯಲ್ಲಿ ವಾಸವಾಗಿದ್ದೆ. ನಮ್ಮ...
ಪ್ರತಿಕ್ರಿಯೆಗಳು: 10
ಹಿಟ್ಸ್ : 2,272
ಪಕ್ಷಿನೋಟ - ಮೇ ಮಾಸದಲ್ಲಿ ಸಂಪದ
partha1059's picture
ಪಾರ್ಥಸಾರಥಿ
03
Jun
2011
ಬ್ಲಾಗ್ ಬರಹ

ಮೇ ಮಾಸದಲ್ಲಿ  ಲೇಖನಗಳು ಪ್ರಕಟವಾಗಿದ್ದು ಒಟ್ಟು ೩೫೨. ಎಂದಿನಂತೆ ಬ್ಲಾಗ್ ಬರಹ ಹಾಗು ಕವನಗಳದ್ದೆ ಮೇಲುಗೈ. ಈ ತಿಂಗಳ ಪ್ರತಿಕ್ರಿಯೆಗಳು...

ಪ್ರತಿಕ್ರಿಯೆಗಳು: 28
ಹಿಟ್ಸ್ : 633
ಲ೦ಡನ್ ಬೀದಿಯಲ್ಲಿ ಕೃಷ್ಣನ ರಥಯಾತ್ರೆ!
sudhichadaga's picture
ಸುಧೀ೦ದ್ರ ಚಡಗ
13
Aug
2010
ಬ್ಲಾಗ್ ಬರಹ

ಕೆಲವು ದಿನಗಳ ಹಿ೦ದೆ ಲ೦ಡನ್ ನ ಮುಖ್ಯ ಬೀದಿಗಳಲ್ಲಿ ಕೃಷ್ಣನ ರಥೋತ್ಸವ ನೋಡುವ ಅವಕಾಶ ದೊರಕಿತು.

ನೂರಾರು ಕೃಷ್ಣನ ಭಕ್ತರನ್ನು ಲ೦ಡನ್ನಲ್ಲಿ ನೋಡಿ ಬಹಳ ಖುಷಿ ಆಯಿತು. ನಮ್ಮ...

ಪ್ರತಿಕ್ರಿಯೆಗಳು: 14
ಹಿಟ್ಸ್ : 923
ಅಂತಿಂಥಾ ಗಂಡು...ನೀನೇನಾ?
rashmi_pai's picture
Rashmi Pai
19
Nov
2009
ಬ್ಲಾಗ್ ಬರಹ

ದೋಸೆಯನ್ನು ಕಾವಲಿಯಿಂದ ತೆಗಿಬೇಕಾದರೆ ಎಲ್ಲಾ ಪುಡಿ ಪುಡಿ, ಚಪಾತಿಯ ಆಕೃತಿ ಆಸ್ಟ್ರೇಲಿಯಾ ಅಥವಾ ಶ್ರೀಲಂಕಾದ ಭೂಪಟದಂತಿರುತ್ತದೆ. ನಂಗೇ ಇಡೀ ದೋಸೆ ಬೇಕು, ರೌಂಡ್ ಆಗಿರುವ ಚಪಾತಿ...

ಪ್ರತಿಕ್ರಿಯೆಗಳು: 16
ಹಿಟ್ಸ್ : 1,437
ನೂರು ವರ್ಷದ ಏಕಾಂತ - ಗೇಬ್ರಿಯಲ್ ಮಾರ್ಕ್ವೆಜ್ ನ ಕಾದಂಬರಿ
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
11
Sep
2006
ಬ್ಲಾಗ್ ಬರಹ
ಈ ಕಾದಂಬರಿಯನ್ನು ಹಿಂದೊಮ್ಮೆ ಓದಲು ಆರಂಬಿಸಿದ್ದೆ. ವಿಚಿತ್ರವಾಗಿದೆ . ಪ್ರಾರಂಭದ ಪುಟಗಳಲ್ಲಿ ಗಮನ ಸೆಳೆದ ಕೆಲವು ವಾಕ್ಯ ನೋಡಿ . ಹಿಂದೊಂದು ಕಾಲದಲ್ಲಿ "ಪ್ರಪಂಚದ ಹುಟ್ಟು...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,182
ನಮ್ಮವರ ಸಿಕ್ಸ್ ಸಿಗ್ಮಾ ದಕ್ಷತೆ!
thesalimath's picture
ಶ್ರೀಹರ್ಷ ಸಾಲಿಮಠ
17
Dec
2009
ಪುಟ

(ಈ ಲೇಖನವನ್ನು ಬರೆಯಲು ಗೆಳೆಯ ಲೋಹಿತ್ ಬೆಳೆಸಿದ "ಲೋಹಿತಂತ್ರಾಂಶ" ಬಳಸಿದ್ದೇನೆ)

  ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನುವ ಕಾರ್ಯಕ್ರಮ....

ಪ್ರತಿಕ್ರಿಯೆಗಳು: 41
ಹಿಟ್ಸ್ : 1,796
ಇಂಗ್ಲಿಷ್ ಕಾದಂಬರಿಕಾರ, ಕನ್ನಡದ ಎಚ್. ರಾಜಾರಾವ್ ಇನ್ನಿಲ್ಲ !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
09
Jul
2006
ಪುಟ
ಪ್ರಸಿದ್ಧ ಇಂಗ್ಲೀಷ್ ಕಾದಂಬರಿಕಾರ, ರಾಜಾರಾವ್, ಅಮೆರಿಕೆಯ ಟೆಕ್ಸಾಸ್ ವಿಶ್ವ ವಿದ್ಯಾನಿಲಯ, ಆಸ್ಟಿನ್ ನಲ್ಲಿ ಶನಿವಾರದಂದು ದೈವಾಧೀನರಾದರು. ೯೬ ವರ್ಷಹರೆಯದ ಹಾಸನದ ರಾಜಾರಾವ್,...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,547
ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು - ೦೪
manjunath.kunigal's picture
ಮಂಜುನಾಥ್ ಕುಣಿಗಲ್
13
Dec
2010
ಲೇಖನ

http://sampada.net/article/24590 - ಭಾಗ ೦೧

http://sampada.net/article/24910 - ಭಾಗ...

ಪ್ರತಿಕ್ರಿಯೆಗಳು: 10
ಹಿಟ್ಸ್ : 777

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಮರೆಯಲಾಗದ ವರಕವಿ ದ.ರಾ.ಬೇಂದ್ರೆ

 ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಪ್ರತಿವರ್ಷ ಜನೆವರಿ ತಿಂಗಳ ಮೂವತ್ತೊಂದನೆ ತಾರೀಕು ಬಂತೆಂದರೆ ನನಗೆ ವರಕವಿ ಬೇಂದ್ರೆಯವರ ನೆನಪು ಬರುತ್ತದೆ. ಕಾರಣವೇನೆಂದರೆ ಅದು ಬೇಂದ್ರೆ ಹುಟ್ಟಿದ ದಿನ. 1896 ನೇ ಇಸವಿ ಜನೆವರಿ ತಿಂಗಳ 31 ರಂದು ಅವರು ಧಾರವಾಡದಲ್ಲಿ ಜನಿಸಿದರು. ಈ ಸಂಧರ್ಭದಲ್ಲಿ ಅವರೆ ರಚಿಸಿದ ಒಂದು ಕವನ " ಮೀನಕೇತು " ನನಗೆ ನೆನಪಿಗೆ ಬರುತ್ತದೆ. ಆ ಕವನದಲ್ಲಿ ಅವರು ಕಾವ್ಯದ ಹುಟ್ಟು ಮತ್ತು ಅದರ ಕೊಡುಗೆಗಳ ಬಗ್ಗೆ ವಿವರಿಸಿ ಅವು ಮರೆಯಾದರೂ ಅವುಗಳ ಅರ್ಥ ಕುರುಹುಗಳು ಮರೆಯಾಗುವುದಿಲ್ಲ ಎಂಬುದನ್ನು ವಿವರಿಸುವ ಕವನವಿದು. ಅದರಲ್ಲಿ ಕವಿ ಒಂದೆಡೆ ಹೀಗೆ ಬರೆಯುತ್ತಾರೆ

                            ಅರಣಿಗೆ ಅರಣಿ ಬೆಂಕಿಯ ಕರಣಿ
                            ಹೊತ್ತಿತು ತಲೆ ಎತ್ತಿ
                            ಮರೆಯಾತು ದೀಪ ಮರೆಯಾತು ರೂಪ
                            ಬೂದಿಯೊಳೀಬತ್ತಿ

     ದೀಪ ಆರಿದರೂ ಅದರ ರೂಪ ಶಾಶ್ವತವಾಗಿ ಉಳಿಯುತ್ತದೆ. ಬೆಂಕಿ ಬೂದಿಯಾಗಿ ವಿಭೂತಿಯಾಗುತ್ತದೆ. ಅಂದರೆ ಕವಿ ಮರೆಯಾದರೂ ಆತನ ಕಾವ್ಯ ಕಾಣ್ಕೆ ಉಳಿಯುತ್ತದೆ. ಕವಿ ಬೇಂದ್ರೆ ನಮ್ಮನಗಲಿದ್ದರೂ ಅವರ ಆತ್ಮ ಸದೃಶವಾದ ಕಾವ್ಯ ರೂಪದಲ್ಲಿ ನಮ್ಮನ್ನು ರಂಜಿಸುತ್ತ ರೂಪಿಸುತ್ತ ಬೆಳೆಯುತ್ತ ಸಾಗಿದ್ದಾರೆ.ಕಾಲಚಕ್ರದ ಗತಿಯಲ್ಲಿ  ನಶಿಸುವ ಕವಿಯಲ್ಲ ಬೇಂದ್ರೆ. ಹೊಸರೂಪ ಹೊಸದರ್ಶನಗಳನ್ನು ಕಾಣಿಸುತ್ತ ಹೋಗುವ ಅಮರ ಕವಿ ಅಂಬಿಕಾ ತನಯ ದತ್ತರು. 
     ಬೇಂದ್ರೆ ನನ್ನನ್ನು ಗಾಢವಾಗಿ ತಟ್ಟಿದ ಕವಿ, ಅದಕ್ಕೆ ಕಾರಣ ಪ್ರಾಥಮಿಕ ಶಾಲಾ ಮಟ್ಟದಲ್ಲಿ ಕನ್ನಡ ಸಾಹಿತ್ಯವನ್ನು ವಿಶದ ವಾಗಿ ಪಾಠ  ಮಾಡಿ ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಉಕ್ಕುವಂತೆ ಪಾಠ ಮಾಡಿದ ಶಿಕ್ಷಕರು. ಈ ಸಂಧರ್ಭದಲ್ಲಿ ಅವರನ್ನು ನೆನಪಿಸಿಕೊಳ್ಳುವುದು ಸೂಕ್ತ ವೆನಿಸುತ್ತದೆ. ಯಾಕೆಂದರೆ ಕವಿಗಳು ಯಾರೇ ಇರಲಿ ಅದೇ ತನ್ಮಯತೆಯಿಂದ ಅವರ ಬಗೆಗೆ ಸವಿವರವಾಗಿ ಗುರುವರ್ಯರುಗಳು ಪಾಠ ಮಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಆ ರೀತಿಯ ಪಾಠ ಮಾಡಿದವರನ್ನು ನಾ ಕಾಣೆ. ಅವರು ಪಾಠ ಮಾಡುವ ಕ್ರಮದಲ್ಲಿ ಒಂದು ವಿಶಿಷ್ಟವಾದ ಕಾವ್ಯ ದರ್ಶನವಿರುತ್ತಿತ್ತು.
     ಕುವೆಂಪು ಮತ್ತು ಬೇಂದ್ರೆ ಕನ್ನಡ ಕಾವ್ಯ ಜಗತ್ತಿನ ಎರಡು ಕಣ್ಣುಗಳು, ಇಬ್ಬರೂ ಜ್ಞಾನಪೀಠ  ಪುರಸ್ಕೃತರು. ಕುವೆಂಪುರವರ " ಶ್ರೀ ರಾಮಾಯಣ ದರ್ಶನಂ " ಕೃತಿಗೆ ಆ ಪ್ರಶಸ್ತಿ ಸಂದರೆ , ಬೇಂದ್ರೆ ಯವರ " ನಾಕು ತಂತಿ " ಕೃತಿಗೆ ಆ ಪ್ರಶಸ್ತಿ ಬಂದಿದೆ. ಇವರಿಬ್ಬರ ಕಾವ್ಯ ರಚನಾ ಶೈಲಿ ಭಿನ್ನ. ಕುವೆಂಪು ಸಂಸ್ಕೃತ ಮಿಶ್ರಿತ ಹಳಗನ್ನಡ ಬನಿಯಲ್ಲಿ ಕಾವ್ಯ ರಚನೆ ಮಾಡಿದರೆ, ಬೇಂದ್ರೆಯವರು ಜಾನಪದ ಸೊಗಡಿನ ಆಡುಭಾಷೆಯ ದೇಶೀ ಶೈಲಿಯನ್ನು ಬಹಳ ಸಮರ್ಥವಾಗಿ ಬಳಸಿಕೊಂಡು ಬರೆದ ಕವಿ.ಕುವೆಂಪುರವರ ಕರ್ಮಭೂಮಿ ಮೈಸೂರು ಆದರೆ ಬೇಂಧ್ರೆ ಯವರದು ಧಾರವಾಡ. 1926 ರಲ್ಲಿ ಗೆಳೆಯರ ಗುಂಪಿನ ವತಿಯಿಂದ ನಾಡಹಬ್ಬದ ಆಚರಣೆಯನ್ನು ಪ್ರಾರಂಬಿ ಸಿದರು. ಆ ಬಳಗದ ಪ್ರಮುಖರೆಂದರೆ ವಿ.ಕೃ.ಗೋಕಾಕ, ಕಾವ್ಯಾನಂದ ಮತ್ತು ಚೆನ್ನವೀರ ಕಣವಿ ಕಾವ್ಯಾಸಕ್ತರನ್ನು ಒಳಗೊಂಡಿದ್ದ ಮತ್ತು ಒಂದು ಚಿಂತನಪರ ಸಂಘಟನೆಯಾಗಿತ್ತು
     ಭಾರತದ ಸ್ವಾತಂತ್ರ ಸಂಗ್ರಾಮ ಕಾಲದಲ್ಲಿ ಬ್ರಿಟೀಷರ ದಾಸ್ಯವನ್ನು ಪ್ರತಿಭಟಿಸಿ ತಮ್ಮ ಕವನಗಳ ಮೂಲಕ ಜನ ಜಾಗೃತಿಗೆ ಕಾರಣ ರಾದರು. ಅವರು ರಚಿಸಿದ ನರಬಲಿ ಕವನ ಬ್ರಿಟೀಷರ ಕಣ್ಣು ಕೆಂಪಗಾಗಿಸಿತು. ಆ ಕಾರಣದಿಂದಾಗಿ ಅವರು ಹಿಂಡಲಗಾ ಜೈಲುವಾಸ ಅನುಭವಿಸುವಂತಾಯಿತು..ನಂತರದ ದಿನಗಳಲ್ಲಿ ಅವರನ್ನು ಮುಗದ ಗ್ರಾಮದಲ್ಲಿ ಸ್ಥಾನಬದ್ಧತೆಯಲ್ಲಿ ಇಡಲಾಯಿತು. ಇವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರು. ಆದರೆ ಇವರು ಕನ್ನಡ ಕಾವ್ಯ ಜಗತ್ತಿಗೆ ನೀಡಿದ ಕೊಡುಗೆ ಅನನ್ಯ. ಇವರ ರಚನೆಗಳು ಬಡತನ, ನಿರುದ್ಯೋಗ, ಪ್ರಕೃತಿ, ಪರಿಸರ, ಸಾಮಾಜಿಕ ಅಸದಮತೋಲನ, ಶೋಷಣೆ, ದೇಶ ಪ್ರೇಮಗಳನ್ನು ಕುರಿತು ಬರೆದವುಗಳೆಂದು ಸ್ಥೂಲವಾಗಿ ವರ್ಗೀಕರಿಸಬಹುದು.ಇವು ಓದುಗನನ್ನು ಚಿಂತನೆಗೆ ಹಚ್ಚುವ ರಚನೆಗಳು.
     ಇವರ ಕೃತಿಗಳ ಬಗ್ಗೆ ಸ್ಥೂಲವಾಗಿ ವಿವರಿಸುವದಾದಲ್ಲಿ ಗಂಗಾವತರಣ, ನಾದಲೀಲೆ, ಸಖೀಗೀತ, ನಾಕುತಂತಿ, ಗರಿ, ಅರಳುಮಲ್ಲಿಗೆ, ಮತ್ತೆ ಶ್ರಾವಣಬಂತು, ಅವರ ಶ್ರೇಷ್ಟ ಕೊಡುಗೆಗಳು.  ಅವರು ಅರವಿಂದರ ಇಂಗ್ಲೀಷ್ ಕೃತಿ ಯೊಂದನ್ನು ' ಭಾರತೀಯ ನರಜನ್ಮ 'ವೆಂದು ಕನ್ನಡಕ್ಕೆ ಅನುವಾದಿಸಿದ್ದಾರೆ. ಕನ್ನಡದ ಶ್ರೇಷ್ಟ ಕಾದಂಬರಿಕಾರ ರಲೊಬ್ಬರಾದ ಕೆ.ವಿ.ಅಯ್ಯರ ರವರ ' ಶಾಂತಲಾ ' ಕಾದಂಬರಿಯನ್ನು ಮರಾಠಿ ಬಾಷೆಗೆ ಅನುವಾದಿಸಿದ್ದಾರೆ. ಎ ಥಿಯರಿ ಆಫ್ ಇಮ್ಮೋರ್ಟಾಲಿಟಿ ಮತ್ತು  ಲ್ಯಾಗ್ವೇಜ್ - ಮ್ಯಾಥಮ್ಯಾಟಿಕ್ಸ್ -ಆಂಡ್ ಟ್ರುತ್ ಎಂಬ ಕೃತಿಗಳನ್ನು ಇಂಗ್ಲೀಷ್ ನಲ್ಲಿ ರಚಿಸಿದ್ದಾರೆ. ಕಾಳಿದಾಸನ ' ಮೇಘದೂತ ' ವನ್ನು ಕನ್ನಡಕ್ಕೆ ಅನುವಾದಿಸಿದ್ದು ಅದು ಬೇಂದ್ರೆ ಯವರ ಸ್ವತಂತ್ರ ಕೃತಿಯೇನೋ ಎನ್ನುವಷ್ಟರ ಮಟ್ಟಿಗೆ ಅದಕ್ಕೆ ಬೇಂದ್ರೆತನವನ್ನು ತುಂಬಿದ್ದಾರೆ. ಕಥಾ ಹಂದರದ ಸೂಕ್ಷ್ಮ ಎಳೆಯನ್ನು ಮಾತ್ರ ಮೂಲ ಕಾವ್ಯದಿಂದ ಪಡೆದದ್ದು ಬಿಟ್ಟರೆ ಉಳಿದದ್ದೆಲ್ಲ ಬೇಂದ್ರೆಯವರ ಸ್ವಂತಿಕೆಯ ಮೂಸೆಯಲ್ಲಿ ಮೂಡಿ ಬಂದಿದೆ. ಹೊಸ ಸಂಸಾರ, ಹುಚ್ಚಾಟಗಳು, ಸಾಯೋಆಟ, ಜಾತ್ರೆ, ದೆವ್ವದಮನೆ, ಮಂದಿಮನೆ ಮುಂತಾದ ಹದಿನಾಲ್ಕು ನಾಟಕಗಳನ್ನು ರಚಿಸಿದ್ದಾರೆ. ಇವಲ್ಲದೆ ಆರು ಸಂಪಾದನಾ ಗ್ರಂಥಗಳನ್ನು ತಂದಿದ್ದಾರೆ. ಇವರ ಹಲವು ಕವನಗಳನ್ನು ಕುಲವಧು, ಚಕ್ರತೀರ್ಥ, ಅರಿಷಿಣ ಕುಂಕುಮ, ಬೆಳ್ಳಿಮೋಡ ಮತ್ತು ಶರಪಂಜರ ಮುಂತಾದ ಚಲನಚಿತ್ರಗಳಲ್ಲಿ ಸಂಧರ್ಭಕ್ಕನುಸಾರವಾಗಿ ಸಮರ್ಥವಾಗಿ ಬಳಸಿಕೊಳ್ಳಲಾಗಿದೆ.  ಇವರ ಗಂಗಾವತರಣ ಕವನ ಇವರ ಶ್ರೇಷ್ಟ ರಚನೆ ಗಳ ಪೈಕಿ ಒಂದು.

                           ಇಳಿದು ಬಾ ತಾಯೆ
                           ಇಳಿದು ಬಾ
                           ಇಳಿದು ಬಾ ತಾಯೆ
                           ಇಳಿದು ಬಾ

                           ಹರನ ಜಡೆಯಿಂದ
                           ಹರಿಯ ಅಡಿಯಿಂದ
                           ಋಷಿಯ ತೊಡೆಯಿಂದ
                           ನುಸುಳಿ ಬಾ
                           ದೇವ ದೇವರನು
                           ತಣಿಸಿ ಬಾ
                           ದಿಗ್ದಿಗಂತದಲಿ ಹನಿಸಿ ಬಾ
                           ಚರಾಚರಗಳಿಗೆ
                           ಊಣಿಸಿ ಬಾ
                           ಬಾರೆ ಬಾ ತಾಯೆ 
                           ಇಳಿದು ಬಾ.......
                           ...........................

     ಈ ಕವನ ಭಾರತೀಯ ದರ್ಶನವನ್ನು ನಮ್ಮೆದುರು ಬಿಡಿಸಿ ತೋರಿಸುತ್ತದೆ. ಭಾರತೀಯರ ನಂಬಿಕೆಗಳು, ಆಧ್ಯಾತ್ಮ, ಜೀವನ ದರ್ಶನ, ಮೋಕ್ಷದ ಪರಿಕಲ್ಪನೆ ಇವುಗಳು ತಳಕು ಹಾಕಿ ಕೊಂಡಿರುವುದು ಅಬೇಧ್ಯ ಹಿಮವಂತ ನಲ್ಲಿ. ಮಾನಸ ಸರೋವರ, ಕೈಲಾಸ ಪರ್ವತ, ಗಂಗೋತ್ರಿ, ಯಮನೋತ್ರಿ, ಕಾಸಿ, ಹರಿದ್ವಾರ, ಗಯಾ, ಪ್ರಯಾಗ, ಹೃಷಿಕೇಶ, ಬದರಿನಾಥ, ಕೇದಾರನಾಥ ಗಳಂತಹ ಪುಣ್ಯ ಕ್ಷೇತ್ರಗಳಿರುವುದು ಆ ಹಿಮವಂತನಲ್ಲಿ. ಈ ಪುಣ್ಯಕ್ಷೇತ್ರ ಗಳ ದರ್ಶನ ಪ್ರತಿಯೊಬ್ಬ ಭಾರತೀಯುನ ನಂಬಿಕೆ ಮತ್ತು  ಕನಸು. ಗಂಗೆ ದೇವಲೋಕದಿಂದ ಭೂಮಿಗೆ ಹರಿದು ಬರುವುದು, ಭಗಿರಥ ತನ್ನ ಜಟೆಯಲ್ಲಿ ಗಂಗೆಯನ್ನು ಧರಿಸಿ ಭೂಲೋಕದಲ್ಲಿ ಆಕೆಯ ಹರಿಯುವಿಕೆಗೆ ಮಧ್ಯವರ್ತಿ ಯಾಗುವುದು ಇವೆಲ್ಲ ಎಷ್ಟು ಸುಂದರ ಪುರಾಣ ಪರಿಕಲ್ಪನೆ ಮತ್ತು ರೂಪಕಗಳು. ಈ ಕವನ ರಚನೆಗೆ ಅವರಿಗೆ ಪ್ರೇರಣೆ ಆಗ ಬಂಗಾಲದಲ್ಲಿ ಸಂಭವಿಸಿದ ಭೀಕರ ಬರಗಾಲದ ರೌದ್ರ ಪ್ರಸಂಗ. ಅವ್ಯಾಜ್ಯ ಕರುಣೆ ಈ ಕವನದ ಸ್ಥಾಯಿ ಭಾವಗಳು 1943 ರಲ್ಲಿ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಮೇಲ್ಕಂಡ ಕವನವನ್ನು ವಾಚನ ಮಾಡಿದರು. ಅಂತೆಯೆ ಇವರ ಒಂದೊಂದು ಕವನ ಒಂದೊಂದು ವಿಶಿಷ್ಟ ಅನುಭವ ಕೊಡುವ ಗುಣ ಹೊಂದಿವೆ ಎನ್ನುವುದು ಅಷ್ಟೆ ನಿಜ.

    ಬೇಂದ್ರೆ ಯವರ ಕಾವ್ಯ ಮೂಲ ಅಸರೆ ಪಂಚ ಭೂತಾತ್ಮಕ ಜಗತ್ತು, ಆದರೆ ಮೂಲ ಆಶಯ ಭಾವಶುದ್ಧಿ. ಅದಿ ಇಲ್ಲದ ಯಾವುದೇ ಚಿಂತನೆ ಮತ್ತು ರಚನೆಗಳು ಗ್ರಾಹ್ಯವಲ್ಲ ಎಂಬುದು ಅವರ ಆಶಯವಾಗಿತ್ತು. ಅವರು ' ಕಗ್ಗ ' ಎಂಬ ಕವನ ಬರೆದಿದ್ದಾರೆ.  ಅದರಲ್ಲಿ ಕವಿ ಕಗ್ಗ ಎಂಬ ಪದ ಪ್ರಯೋಗವನ್ನು ಏಕೆ ಮಾಡಿದ್ದಾರೆ ಎಂದರೆ ಕವಿ ಮತ್ತು ಓದುಗರ ಓದುವ ಕ್ರಿಯೆಯಲ್ಲಿ ಹೊಂದಿಕೆ ಬಂದರೆ ಅದು ಸಗ್ಗ, ಇಲ್ಲದಿದ್ದರೆ ಅದು ಬರಿ ಕಗ್ಗ. ಇಲ್ಲಿ ಓದುಗ ಕವನದ ನಾಡಿ ಬಡಿತವನ್ನು ಅರಿಯ ಬೇಕೆಂಬುದು ಕವಿ ಬೇಂದ್ರೆ ಯವರ ಆಶಯ.

    ನಮ್ಮ ಪ್ರಮುಖ ಹಬ್ಬವಾದ ದೀಪಾವಳಿ ಕತ್ತಲೆಯ ಭೀತಿಯನ್ನು ಓಡಿಸಿ ಬೆಳಕಿನ ಅಭಯವನ್ನು ಕೊಡುವ ಹಬ್ಬ. ಇದೊಂದು ಜೀವನದ ಸುಂದರ ರಾಗದ ಅಭಿವ್ಯಕ್ತಿ ಮತ್ತು ಕೋಮಲ ಭಾವಗಳನ್ನು ಬಡಿದೆಬ್ಬಿಸುವ ಪ್ರೀತಿ ಪ್ರೇಮ ಉಲ್ಲಾಸ ಮುಂತದವನ್ನು ಬಡಿದೆಬ್ಬಿಸುವ ಪುರಾತನ ಪರಿಕಲ್ಪನೆ ಮತ್ತು ನಂಬಿಕೆಗಳನ್ನು ಉದ್ದೀಪಿಸುವ ಬೆಳಕಿನ ಹಬ್ಬ ಮಾತ್ರವಲ್ಲ ಕತ್ತಲೆ ಬೆಳಕುಗಳ ಸಮ್ಮಿಶ್ರ ಸಮರಸಭಾವದ ಗೀತ ಗಾಯನವಾಗಿದೆ. ನರಕ ಚತುರ್ದಶಿ ಚಿರಂತನ ಬೆಳಕಿನ ಒಂದು ರೂಪಕ. ಆದರೆ 1981 ರ ಅಕ್ಟೋಬರ್ 26 ರಂದು ನರಕ ಚತುರ್ದಶಿ ಕನ್ನಡಿಗರ ಪಾಲಿಗೆ ಕರಾಳ ದಿನವಾಗಿ ಮೂಡಿ ಬಂತು. ಕನ್ನಡ ಕಾವ್ಯಪ್ರಭೆ, ವರಕವಿ, ಗಾನಗಾರುಡಿಗ ಎಂಬೆಲ್ಲ ಅಭಿದಾನಗಳನ್ನು ಪಡೆದ ಬೇಂದ್ರೆ ಮೂಂಬೈನ ಹರಿಕಿಶನ್ ಆಸ್ಪತ್ರೆಯಲ್ಲಿ ತಮ್ಮ ಜೀವನಯಾತ್ರೆಯನ್ನು ಮುಗಿಸಿದರು. ಅವರು ಸಾಗಿಹೋದ ಪಥ ನಮ್ಮ ಮುಂದೆ ಇದೆ. ಅವರ ನೆನಪು ನಮ್ಮಲ್ಲಿ ನಾಡು ನುಡಿಯ ಅಭಿಮಾನವನ್ನು ಉಕ್ಕಿಸಲಿ, ಕನ್ನಡ ನಾಡು ನುಡಿ ಅಭಿವೃದ್ಧಿ ಹೊಂದಲಿ, ಸತ್ವಪೂರ್ಣ ಸಾರ್ಥಕ ಬದುಕು ನಮ್ಮೆಲ್ಲರದಾಗಲಿ. ನಮ್ಮನಾಡ ಪ್ರೇಮ ಉಜ್ವಲವಾಗಲಿ. ಕನ್ನಡದ ಕವಿ ಸಾಹಿತಿಗಳ ಕೃತಿಗಳನ್ನು ಒದುವಂತೆ ನಮ್ಮೆಲ್ಲರನ್ನು ಪ್ರೇರೇಪಿಸಲಿ. ಶಾಸ್ತ್ರೀಯ ಭಾಷೆಯ ಸಮ್ಮಾನವನ್ನು ಪಡೆದ ಕನ್ನಡ ಅಭಿವೃದ್ದಿಯನ್ನು ಹೊಂದಿ ಪ್ರಗತಿಪಥದಲ್ಲಿ ಸಾಗಲಿ. ಪುಸ್ತಕಗಳನ್ನು ಕೊಂಡು ಓದುವ ಸಂಸ್ಕೃತಿ ನಮ್ಮೆಲ್ಲರ ದಾಗಲಿ.

     ಚಿತ್ರಕೃಪೆ: ಅಂತರ್ ಜಾಲ                                 
 

Average: 4.4 (8 votes)
387 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
venkatb83's picture
30
Jan
2012
9:18

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಹಿರಿಯರೇ-
ವರ ಕವಿ ಶ್ರೀ ಬೇಂದ್ರೆ ಅವ್ರ ಜನುಮ ದಿನದ ಒಂದು ದಿನ 'ಮುಂಚಿತವಾಗಿ' ನೀವ್ ಬರೆದ ಈ ಬರಹ ಅವರ ಬಗ್ಗೆ ಒಳ್ಳೆ 'ವ್ಯಕ್ತಿ ಚಿತ್ರಣ' ಕಟ್ಟಿ ಕೊಟ್ಟಿದೆ..

ಅವರ ಕೆಲ 'ಅರ್ಥ ಪೂರ್ಣ' ಸಾಲುಗಳನ್ನ ಇಲ್ಲಿ ಸೇರಿಸಿದ್ದು ಬರಹದ 'ಕಳೆ' ಹೆಚ್ಚಿಸಿದೆ..

ನನಗೆ ಮೊದಲಿಂದಲೂ ಬೇಂದ್ರೆ ಅವರ 'ಸರಳ ಜೀವನ' ಮತ್ತು 'ಆಪ್ತತೆ' ಹಿಡಿಸಿತ್ತು..

ಅವರ ನೀ ಹಿಂಗ ನೋಡಬೇಡ ನನ್ನ, ಈಗಲೂ ನನ್ನ ಮನ ಕಲಕುತ್ತದೆ(ಮಗನ ಸಾವಿನ ನೆನಪಲ್ಲಿ ಬರೆದದ್ದು ಎಂದು ಓದಿದ ನೆನಪು).
ಕೆಲ ವ್ಯಕ್ತಿಗಳು
(ನಟರು-
ಗಾಯಕರು-
ಲೇಖಕರು)
ಅವರ ಕಾಲ ನಂತರವೂ ಅವರು ಮಾಡಿದ
ಪಾತ್ರಗಳು-
ಗಾಯನಗಳಿಂದ -
ಸಾಹಿತ್ಯದಿಂದ ಸದಾ 'ಅಮರ'..

ಆ ಮಹಾನ ಚೇತನಗಳ ನೆನಪು ಸದಾ ಕಾಲ ಕರು ನಾಡಲಿ ಹಸಿರಾಗಿರಲು ಸರಕಾರಗಳು- ಸಂಘ ಸಂಸ್ಥೆಗಳೂ- ಹಲ ಸಾಹಿತ್ಯ ಪ್ರೋತ್ಸಾಹಕ ಕಾರ್ಯಕ್ರಮಗಳ ಮೂಲಕ ಪ್ರಯತ್ನಿಸಲಿ..
ಸಾಹಿತ್ಯಾಭಿರುಚಿಯ ಜನರೂ ಅವ್ರ ಪುಸ್ತಕ ಕೊಂಡು ಓದಿ, ಈಗಿನ ಪೀಳಿಗೆಗೂ ಮುಂದಿನ ಪೀಳಿಗೆಗೂ ಆ ಮಹಾನ್ ಚೇತನಗಳ ಕೆಲಸದ ಬಗ್ಗೆ ಮನದಟ್ಟು ಮಾಡಿಸಬೇಕು...
ಆಸಕ್ತಿ ಮೂಡುವಂತೆ ಮಾಡಬೇಕು...
ಆ ಕಾರ್ಯ ಆಗಲಿ ...

>>>> ನೀವ್ ಬರೆವ ವ್ಯಕ್ತಿ ಚಿತ್ರಣದ ಬರಹಗಳು ನನಗೆ ಬಹು ಹಿಡಿಸಿವೆ..
ವಂದನೆಗಳು..
ಶುಭವಾಗಲಿ...

H A Patil's picture
31
Jan
2012
8:46

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಸಪ್ತಗಿರಿಯವರೆ ವಂದನೆಗಳು

ನಿಮ್ಮ ಪ್ರತಿಕ್ರಿಯೆ ಓದಿದೆ, ಬೇಂದ್ರೆಯವರ ಕುರಿತು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದೀರಿ, ಧನ್ಯವಾದಗಳು.

padma.A's picture
30
Jan
2012
10:12

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಹನುಮಂತ ಪಾಟೀಲರೇ
ಪ್ರಾಥಮಿಕ ಶಾಲಾ ಮಟ್ಟದಲ್ಲೇ ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಉಕ್ಕುವಂತಹ, ಕನ್ನಡ ಸಾಹಿತ್ಯ ಪಾಠವನ್ನು ಕೇಳುವ ಪುಣ್ಯ ನಿಮ್ಮದಾಗಿತ್ತಲ್ಲ ನೀವೇ ಪುಣ್ಯವಂತರು.
ಬೇಂದ್ರೆ ನಿಮ್ಮನ್ನು ಗಾಢವಾಗಿ ತಟ್ಟಿದ ಹೃದಯವನ್ನು ಮುಟ್ಟಿದ ಕವಿಯೆಂದು ನಿಮ್ಮ ಬರಹಗಳಲ್ಲಿ ವ್ಯಕ್ತವಾಗುತ್ತದೆ.
ಬೇಂದ್ರೆಯವರ ಕಾವ್ಯಗಳಲ್ಲಿ ಕಂಡು ಬರುವ ಭಾರತೀಯರ ನಂಬಿಕೆಗಳು, ಆಧ್ಯಾತ್ಮ, ಜೀವನ ದರ್ಶನ, ಮೋಕ್ಷದ ಪರಿಕಲ್ಪನೆ ನಿಮ್ಮಹಲವು ಬರಹಗಳಲ್ಲೂ ಕಂಡುಬರುತ್ತದೆ.
ಗುರುವಿಗೆ ನೀವು ನೀಡಿರುವ ಉತ್ತಮ ಕಾಣಿಕೆಯಿದು
ಲೇಖನ ತುಂಬಾ ಚೆನ್ನಾಗಿದೆ.
ಸಮಯೋಚಿತವಾಗಿದೆ

H A Patil's picture
31
Jan
2012
8:52

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಮೇಡಂ ವಂದನೆಗಳು

ನನ್ನ ಬೇಂದ್ರೆ ಬರಹ ಕುರಿತು ನೀವು ಪ್ರತಿಕ್ರಿಯಿಸಿದ್ದನ್ನು ಓದಿದೆ, ನನ್ನ ಬದುಕಿನಲ್ಲಿ ಜೀವಂತಿಕೆ ತಂದವರು, ಬದುಕಿನ ಬಗ್ಗೆ ಆಶೆ ಹುಟ್ಟಿಸಿದವರು, ಮಾರ್ಗದರ್ಶಕರಾಗಿ ನಿಂತವರು, ಬೇಂದ್ರೆ ಪುಟ್ಟಪ್ಪ ರಂತಹ ಕವಿವರ್ಯರು, ಸಾಹಿತಿಗಳು, ಸಂಗೀತಗಾರರು
( ವಿಶೇಷವಾಗಿ ಹಿಂದುಸ್ತಾನಿ ). ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದೆಗಳು.

Shreekar's picture
31
Jan
2012
7:10

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಒಂದು ಒಳ್ಳೆಯ ಸಕಾಲಿಕ ಬರಹಕ್ಕಾಗಿ ನನ್ನಿ.

ಬೇಂದ್ರೆಯವರಿಗೆ ರಾಷ್ಟ್ರಕವಿ ಪ್ರಶಸ್ತಿ ಬರದಿದ್ದುದು ಪ್ರಾದೇಶಿಕ ರಾಜಕೀಯದಿಂದಿರಬಹುದೇ?.

<<<< "ಕುವೆಂಪು ಮತ್ತು ಬೇಂದ್ರೆ ಕನ್ನಡ ಕಾವ್ಯ ಜಗತ್ತಿನ ಎರಡು ಕಣ್ಣುಗಳು, ಇಬ್ಬರೂ ಜ್ಞಾನಪೀಠ ಪುರಸ್ಕೃತರು. ಕುವೆಂಪುರವರ ....ಇವರಿಬ್ಬರ ಕಾವ್ಯ ರಚನಾ ಶೈಲಿ ಭಿನ್ನ. ಕುವೆಂಪು ಸಂಸ್ಕೃತ ಮಿಶ್ರಿತ ಹಳಗನ್ನಡ ಬನಿಯಲ್ಲಿ ಕಾವ್ಯ ರಚನೆ ಮಾಡಿದರೆ, ಬೇಂದ್ರೆಯವರು ಜಾನಪದ ಸೊಗಡಿನ ಆಡುಭಾಷೆಯ ದೇಶೀ ಶೈಲಿಯನ್ನು ಬಹಳ ಸಮರ್ಥವಾಗಿ ಬಳಸಿಕೊಂಡು ಬರೆದ ಕವಿ..." >>>>

ಎರಡು ಮಹಾನ್ ಚೇತನಗಳ ಹೆಚ್ಚಿನ ಹೋಲಿಕೆ ಇಲ್ಲಿದೆ. ಪ್ರತಿಕ್ರಿಯೆಗಳು ಕೂಡ ಚೆನ್ನಾಗಿವೆ.

.http://decemberstud.wordpress.com/2007/06/05/why-i-like-bendre-more-than-kuvempu/

H A Patil's picture
31
Jan
2012
9:50

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಶ್ರೀಕರರವರಿಗೆ ವಂದನೆಗಳು

ನಿಮ್ಮ ಪ್ರತಿಕ್ರಿಯೆ ಓದಿ ಸಂತಸವಾಯಿತು. ನೀವು ಪ್ರಾರಂಭದಲ್ಲಿಯೆ ಒಂದು ಪ್ರಶ್ನೆ ಎತ್ತಿದ್ದೀರಿ ....ಬೇಂದ್ರೆಯವರಿಗೆ ರಾಷ್ಟ್ರಕವಿ ಪ್ರಶಸ್ತಿ ಬರದಿರುವುದಕ್ಕೆ ರಾಜಕೀಯ ಕಾರಣವಿರಬಹುದೆ ?... ಇದಕ್ಕೆ ಉತ್ತರಿಸುವುದೋ ಬಿಡುವುದೋ ಎನ್ನುವ ದ್ವಂದ್ವ ನನ್ನನ್ನು ಕಾಡುತ್ತಿದೆ.ನಿಮ್ಮ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸಲು ಹೋದರೆ ಅದು ಜೇನುಗೂಡಿಗೆ ಕಲ್ಲು ಎಸೆದಂತೆ, ನನ್ನ ಮಿತಿಯಲ್ಲಿ ನೀವು ಎತ್ತಿದ ಪ್ರಶ್ನೆಗೆ ವಿವರಿಸಲು ಪ್ರಯತ್ನಿಸುವೆ, ಇದು ಕೇವಲ ನನ್ನ ವೈಯಕ್ತಿಕ ಅನಿಸಿಕೆ. ಈ ಗ್ರಹಿಕೆ ತಪ್ಪೂ ಇರಬಹುದು, ಯಾಕೆಂದ್ರೆ ನಾನೊಬ್ಬ ಸೀಮಿತ ಚಿಂತನೆಯ ಸಾಮಾನ್ಯ ಓದುಗ .
ಈಗ ನೋಡಿ ಕುವೆಂಪು ಕಂಬಾರರನ್ನು ಹೊರತು ಪಡಿಸಿದರೆ ಉಳಿದೆಲ್ಲ ಜ್ಞಾನಪೀಠ ಪುರಸ್ಕೃತರು ಒಂದೋ ವಸೀಲಿಬಾಜಿ ಮಾಡಿ ಪಡೆದವರು, ಇಲ್ಲವೆ ಅವರಿಗೆ ಪ್ರಶಸ್ತಿ ಸಂದ ಕೃತಿಗಳಿಗೆ ಆ ಅರ್ಹತೆಯಿರಲಿಲ್ಲ ಎನ್ನುವಂತಹ ಅಕಡೆಮಿಕ್ ವಲಯದ ಕೆಲವು ಗಣ್ಯರ, ಸಾಹಿತಿಗಳ ಒಟ್ಟಾರೆ ಅನಿಸಿಕೆ ಗಳನ್ನ ಆಯಾ ಕಾಲಘಟ್ಟದಲ್ಲಿ ನಾವು ನೋಡುತ್ತ ಬಂದಿದ್ದೇವೆ. ಇದು ಯಾಕೆ ಹೀಗೆ ? ಇದು ಇಂದಿಗೂ ನನ್ನನ್ನು ಕಾಡುತ್ತಿರುವ ಪ್ರಶ್ನೆ. ಬೇಂದ್ರೆಯವರ " ನಾಕು ತಂತಿ " ಕೃತಿಗೆ ಎರಡನೆ ಜ್ಞಾನಪೀಠ ಪ್ರಶಸ್ತಿ ಬಂತು ಆದರೆ ಅದು ಪೂರ್ಣ ಪ್ರಮಾಣದ ಪ್ರಶಸ್ತಿಯಾಗಿರಲಿಲ್ಲ. ಮಲೆಯಾಳಂ ಮತ್ತು ಕನ್ನಡಕ್ಕೆ ಜಂಟಿಯಾಗಿ ಸಂದಪ್ರಶಸ್ತಿಯಾಗಿತ್ತು. ಇಂತಹ ಸಂಧರ್ಭದಲ್ಲೂ ಸಹ ' ನಾಕುತಂತಿ ' ಕೃತಿಯ ಬಗ್ಗೆ ಶಂಕೆ ವ್ಯಕ್ತ ಪಡಿಸಿದ್ದರು. ಬೇಂದ್ರೆಯವರಿಗೂ ಸಹ ಸ್ವಲ್ಪ ಮಟ್ಟಿನ ಬೇಸರವಾಗಿತ್ತು ಎಂಬುದನ್ನುಪತ್ರಿಕೆಯಲ್ಲಿ ಓದಿದ ನೆನಪು. ಇನ್ನು ಭೀಮಸೇನ ಜೋಶಿ ಯವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಬಂದಾಗ ಅವರಿರುವುದು ಮಹಾರಾಷ್ಟ್ರದಲ್ಲಿ ಅವರಿಗೇಕೆ ಈ ಪ್ರಶಸ್ತಿ ಎಂದು ಪ್ರಮುಖ ಕನ್ನಡದ ಕಟ್ಟಾಳು ಪ್ರಶ್ನಿಸಿದ್ದರು. ಇನ್ನು ಬೇಂದ್ರೆಯವರು ಕನ್ನಡದ ಪ್ರಮುಖ ಕವಿ ಆದರೆ ಅವರು ಮಹಾಕಾವ್ಯವನ್ನು ಬರೆಯಲಿಲ್ಲ ಎಂದು ಖ್ಯಾತ ವಿಮರ್ಶಕರೊಬ್ಬರು ಬರೆದಿದ್ದರು. ಇವೆಲ್ಲ ಏನು ತೋರಿಸುತ್ತದೆ ಎಂದರೆ ನಮ್ಮ ವೈಚಾರಿಕ ದಿಕ್ಕು ದೆಶೆಗಳು ಯಾವ ನಿಟ್ಟಿನಲ್ಲಿ ಇವೆ ಎಂಬುದನ್ನು. ಬೇಂದ್ರೆ ಮಾಸ್ತರರಾದರೂ ಅವರಿಗೆ ಶಾಶ್ವತವಾದ ಉದ್ಯೋಗ ಅವರಿಗೆ ದೊರೆಯಲಿಲ್ಲ. ಧಾರವಾಡದಲ್ಲಿ ಕೆಲವು ಕಡೆ ಹಾಗೂ ಗದಗಿನಲ್ಲಿ ಮಾಸ್ತರಿಕೆ ಮಾಡಿದರಾದರೂ ಅವರ ವೃತ್ತಿಗೆ ಭದ್ರತೆ ಇರಲಿಲ್ಲ. ಅವರನ್ನು ಮೆಚ್ಚುವವರಷ್ಟೆ ಮೆಚ್ಚದವರೂ ಇದ್ದರು. ಅವರನ್ನು ತೆಗಳಿ ಸಿಟ್ಟಿಗೆಬ್ಬಿಸಿ ಅವರು ಜಗಳಗಂಟ ರೆಂದು ಬಿಂಬಿಸಿದವರೂ ಇದ್ದರು. ಅವರು ಯಾವುಧೋ ಒಂದು ಸೀಮಿತ ವರ್ಗಕ್ಕೆ ಸೇರಿದವರು ಇಂತಹ ಯಾವ ಯಾವುವೋ ಕಾರಣಗಳಿರಬಹುದು. ಅದು ಅಲ್ಲದೆ ಇವರಿಗೆ ಪ್ರಶಸ್ತಿ ಬಂದದ್ದು ಸರಿ ಅವರಿಗೆ ಬೇಕಾದರೆ ಮರಣೋತ್ತರ ಪ್ರಶಸ್ತಿ ಕೊಡಿ ಎಂದು ಸಾರ್ವಜನಿಕ ವೇದಿಕೆಗಳಲ್ಲಿ ಸಭ್ಯತೆಯ ಎಲ್ಲೆ ಮೀರಿ ಮಾತನಾಡುವ ಪರಿಸ್ಥಿತಿಯಿರುವ ವರ್ತಮಾನದಲ್ಲಿ ಬೇಂದ್ರೆ ಯವರಿಗೆ ಯಾಕೆ ರಾಷ್ಟ್ರಕವಿ ಪ್ರಶಸ್ತಿ ಬರಲಿಲ್ಲ ಎನ್ನುವುದನ್ನು ನೀವೆ ನಿಮಗೆ ವಿಚಾರಿಸಿಕೊಳ್ಳಬೇಕಾದ ವಿಚಾರ.
ಇನ್ನೊಂದು ಜ್ಞಾನಪೀಠ ಕನ್ನಡಕ್ಕೆ ಡಿವಿಜಿಯವರ ' ಮಂಕುತಿಮ್ಮನ ಕಗ್ಗ ' ಕೃತಿಗೆ ಬರಬೇಕಿತ್ತು. ಆ ವರ್ಷ ಪ್ರಶಸ್ತಿಯ ಅಂತಿಮ ಸುತ್ತಿಗೆ ಡಿವಿಜಿ ಯವರ ಈ ಕೃತಿ ಮತ್ತು ಇನ್ನೊಂದು ಬೆಂಗಾಲಿ ಕೃತಿಗಳು ಬರುತ್ತವೆ. ಆಗ ಅಹೋಬಲ ಶಂಕರ ಎನ್ನುವವ ರೊಬ್ಬರಿಗೆ ಇವೆರಡರಲ್ಲಿ ಒಂದನ್ನು ಆಯ್ದುಕೊಡಲು ಸಮಿತಿ ನಿರ್ಧರಿಸುತ್ತದೆ, ಅವರು ಬೆಂಗಾಲಿ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡುತ್ತಾರೆ. ಇಲ್ಲಿ ಅಹೋಬಲರಿಗೆ ಈ ಹೊಣೆಗಾರಿಕೆ ಹೊರಿಸಿದ್ದೆ ತಪ್ಪು ಎಂದು ನನ್ನ ಭಾವನೆ, ಯಾಕೆಂದರೆ ಅವರು ಎಡಪಂಥೀಯ ವಿಚಾರ ಧಾರೆಯವರು. ಹಿಗಾಗಿ ಡಿವಿಜಿ ಪ್ರಶಸ್ತಿ ವಂಚಿತರಾಗಬೇಕಾಗುತ್ತದೆ. ಇದು ಅಹೋಬಲರೆ ಒಂದೆಡೆ ಹೇಳಿರುವುದು, ಈ ವಿಷಯ ಆಗ ಚಾಲ್ತಿಯಲ್ಲಿತ್ತು. ಇಲ್ಲಿ ಗಮನಿಸಬೇಕಾದದ್ದು ಅಹೋಬಲರು ಕನ್ನಡಿಗರು, ಇತ್ತೀಚೆಗೆ ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ತೀರಿ ಕೊಂಡರು. ಈ ವಿಷಯವನ್ನು ಇಲ್ಲಿ ಪ್ರಸ್ತಾಪಿಸಿದ್ದು ಅವರು ಕನ್ನಡ ಕೃತಿಗೇ ಕೊಡಬೇಕಾಗಿತ್ತು ಎಂಬುದರ ಅರ್ಥವಲ್ಲ ಆಯ್ಕೆ ಕ್ರಮ ನಡೆಯುವ ದಿಕ್ಕನ್ನು ಸೂಚಿಸುವುದು ಮಾತ್ರ.
ಹೀಗಾಗಿ ಸಾಹಿತಿಗಳು ಯಾರೇ ಇರಲಿ ನನಗೆ ಅವರ ಕೃತಿಗಳು ಮತ್ತು ಅವು ಮಾಡಿಸುವ ಜೀವನ ದರ್ಶನ ಮುಖ್ಯವಾಗುತ್ತವೆಯೆ ಹೊರತು ಕೃತಿಕಾರರು ಅವರಿಗೆ ಸಂದ ಪ್ರಶಸ್ತಿಗಳ ಬಗ್ಗೆ ನಾನು ತೆಲೆಕೆಡಿಸಿಕೊಳ್ಳುವುದಿಲ್ಲ, ಲೇಖನದ ಬರಹಗಾರನಾಗಿ ನೀವು ಎತ್ತಿದ ಪ್ರಶ್ನೆಗೆ ನನಗೆ ತೋಚಿದ್ದನ್ನು ಹೇಳದೆ ಹೋದರೆ ನಾನು ಅಪ್ರಾಮಾಣಿಕನಾಗುತ್ತೇನೆ, ಹೀಗಾಗಿ ಈ ಮರು ಪ್ರತಿಕ್ರಿಯೆ, ನನ್ನ ಆಲೋಚನಾ ಕ್ರಮದಲ್ಲಿ ಮತ್ತು ಗ್ರಹಿಕೆಯಲ್ಲಿ ಲೋಪವಿರಲೂ ಬಹುದು. ಧನ್ಯವಾದಗಳು.

Shreekar's picture
31
Jan
2012
12:56

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಮಾನ್ಯ ಪಾಟೀಲ್ ಸಾಹೇಬರಿಗೆ

ಪ್ರಣಾಮಗಳು.

ನಿಮ್ಮ ಮರುಪ್ರತಿಕ್ರಿಯೆ ಬಹಳ ಚೆನ್ನಾಗಿದೆ. ಅನೇಕ ಒಳ ನೋಟಗಳು ತಿಳಿದವು.

ಭೀಮಸೇನ ಜೋಷಿಯವರ ಪ್ರಶಸ್ತಿಯ ಹಿಂದೆ ಅಪಸ್ವರ ಹಾಕಿದವರಿದ್ದರು ಎಂದು ಕೇಳಿ ಬೇಸರವಾಯಿತು.

ನೀವು ಸಂಗೀತಪ್ರೇಮಿ ಎಂದು ತಿಳಿದು ಸಂತೋಷವಾಯಿತು.

ಈ ಬಗ್ಗ ಕೂಡಾ ನಿಮ್ಮ ಬರಹಗಳು ಬರಲಿ ಎಂದು ಹಾರೈಸುತ್ತೇನೆ.

ಈ ದಿಸೆಯಲ್ಲಿ ನಿಮಗೆ ಸಹಾಯವಾಗಬಲ್ಲ ಎರಡು ಜಾಲ ತಾಣಗಳು ಇಲ್ಲಿವೆ. ಸುಮಾರು ಎರಡು ಸಾವಿರಕ್ಕೂ ಮೀರಿದ ಅಪರೂಪದ ಸಂಗೀತದ ತುಣುಕುಗಳಿವೆ (ಆಡಿಯೋ ಕ್ಲಿಪ್ಸ್).

http://www.parrikar....
http://www.sawf.org/...

H A Patil's picture
31
Jan
2012
8:43

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಸ್ರೀಕರರೆ ವಂದನೆಗಳು,

ನಿಮ್ಮ ಮರುಪ್ರತಿಕ್ರಿಯೆ ಓದಿದೆ, ನಾನು ಬರಿ ಸಂಗೀತ ಕೇಳುಗನಷ್ಟೆ, ಎರಡು ಸಂಗೀತ ತಾಣಗಳ ಮಾಹಿತಿ ನೀಡಿದ್ದೀರಿ ನಿಮ್ಮ ವಿಶ್ವಾಸಕ್ಕೆ ಧನ್ಯವಾದಗಳು.

H A Patil's picture
31
Jan
2012
8:43

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಸ್ರೀಕರರೆ ವಂದನೆಗಳು,

ನಿಮ್ಮ ಮರುಪ್ರತಿಕ್ರಿಯೆ ಓದಿದೆ, ನಾನು ಬರಿ ಸಂಗೀತ ಕೇಳುಗನಷ್ಟೆ, ಎರಡು ಸಂಗೀತ ತಾಣಗಳ ಮಾಹಿತಿ ನೀಡಿದ್ದೀರಿ ನಿಮ್ಮ ವಿಶ್ವಾಸಕ್ಕೆ ಧನ್ಯವಾದಗಳು.

Shreekar's picture
02
Feb
2012
6:53

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಪಾಟೀಲ ಸಾಹೇಬರೇ,

ಪ್ರಣಾಮಗಳು

"... ನಾನು ಬರಿ ಸಂಗೀತ ಕೇಳುಗನಷ್ಟೆ...."

ನಿಮ್ಮಂತಹ "ಕಾನ್ ಸೇನ" ರಿರುವ‌ದ‌ರಿಂದ‌ಲೇ ತಾನ‌ಸೇನರುಗಳ ಸ‌ಂಗೀತ‌ಕ್ಕೆ ಚ‌ಲಾವ‌ಣೆ.

ಸಿತಾರ್ ಸಾಮ್ರಾಟ್ ವಿಲಾಯ‌ತ್ ಖಾನರು ಒಳ್ಳೆಯ‌ ಕೇಳುಗ‌ರಿಲ್ಲದ ಸಭೆಗಳಲ್ಲಿ ಸಿತಾರ‌ ವಾದ‌ನ‌ ಅರ್ಧದಲ್ಲೇ ನಿಲ್ಲಿಸಿ ಬಿಟ್ಟು ಹೊರ‌ನ‌ಡೆದ‌ ಉದಾಹ‌ರ‌ಣೆಗ‌ಳಿದ್ದುವ‌ಂತೆ. ‌

H A Patil's picture
02
Feb
2012
1:49

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಶ್ರೀಕರರೆ ವಂದನೆಗಳು,

ನಿಮ್ಮ ಅಭಿಪ್ರಾಯ ಸರಿ. ಸಿತಾರ ವಾದಕ ವಿಲಾಯತಖಾನ್ ಒಳ್ಳೆಯ ಕೇಳುಗರಿಲ್ಲದ ಸಂಗೀತ ಕಛೇರಿಯನ್ನು ಬಿಟ್ಟು ಹೊರನಡೆಯುತ್ತಿದ್ದರೆ ಭಿಮಸೇನ ಜೋಶಿ ಆಸಕ್ತ ಕೇಳುಗರು ಬೆರಳೆಣಿಕೆಯಷ್ಟೆ ಇದ್ದರೂ ತಮ್ಮ ಎಂದಿನ ಸಂಗೀತ ಕಛೇರಿಯನ್ನೆ ನೀಡುತ್ತಿದ್ದರು. ಕೇಳುಗ ತನಗೆ ಗಂಭೀರ ಆಸಕ್ತಿ ಇದ್ದರೆ ಮಾತ್ರ ಅಲ್ಲಿರಬೇಕು ಇಲ್ಲದಿದ್ದರೆ ಅಲ್ಲಿಂದ ಹೊರನಡೆಯಬೇಕು. ಇದಕೊಂದು ಉದಾಹರಣೆ ಈಗ್ಗೆ ಸುಮಾರು ಮೂರು ದಶಕಗಳ ಹಿಂದೆ ಭದ್ರಾವತಿಯಲ್ಲಿ ಖ್ಯಾತ ಹಿಂದುಸ್ತಾನಿ ಸಂಗೀತ ವಿದುಷಿ " ಪರ್ವೀನ್ ಸುಲ್ತಾನಾರ " ಸಂಗೀತ ಕಛೇರಿಯಿತ್ತು, ಅವರು ಠುಮ್ರಿಯೊಂದನ್ನು ಪ್ರಸ್ತುತ ಪಡಿಸುತ್ತಿದ್ದರು, ಆಗಲೆ ಪ್ರೇಕ್ಷಕ ಗಣದಿಂದ ವಿವಿಧ ಪಶು ಪಕ್ಷಿಗಳ ಕೂಜನ ಅರಚಾಟ, ಹಿಂದಿ ಸಿನೆಮಾ ಹಾಡು ಗಳನ್ನು ಹಾಡುವಂತೆ ಕೂಗಾಟ ಮತ್ತು ಚೀಟಿಗಳ ರವಾನೆ. ಸಂಗೀತ ಕಾರ್ಯಕ್ರಮ ಆಯೋಜಕರು ಜೊತೆಗೆ ಗಾಯಕಿ ಇಬ್ಬರೂ ತಬ್ಬಿಬ್ಬು. ಇಂತಹ ಘಟನೆಗಳೂ ಸಂಭವಿಸುತ್ತವೆ ಎನ್ನುವುದಕ್ಜಕೊಂದು ಇದು ಉದಾಹರಣೆ. ಮರು ಪ್ರತಿಕ್ರಿಯೆಗೆ ಧನ್ಯವಾದಗಳು.

Shreekar's picture
02
Feb
2012
6:57

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

<<<"ನನ್ನ ಆಲೋಚನಾ ಕ್ರಮದಲ್ಲಿ ಮತ್ತು ಗ್ರಹಿಕೆಯಲ್ಲಿ ಲೋಪವಿರಲೂ ಬಹುದು.">>>

ನಿಮ್ಮ ಆಲೋಚನಾ ಕ್ರಮ ಮತ್ತು ಗ್ರಹಿಕೆಗಳು ಸರಿಯಾಗಿಯೇ ಇವೆ ಮತ್ತು ಅವುಗಳ ಬಗ್ಗೆ ನನಗೆ ಅತೀವ ಗೌರವವಿದೆ.

H A Patil's picture
02
Feb
2012
1:59

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಶ್ರೀಕರರೆ ನಮನಗಳು

ನಿಮ್ಮ ಮರುಪ್ರತಿಕ್ರಿಯೆಯಲ್ಲಿ ' ನನ್ನ ಆಲೋಚನಾ ಕ್ರಮ ಮತ್ತು ಗ್ರಹಿಕೆಗಳು ಸರಿಯಾಗಿಯೆ ಇವೆ, ಅವುಗಳ ಬಗ್ಗೆ ನಿಮಗೆ ಗೌರವವಿದೆಯೆಂದು ' ದಾಖಲಿಸಿದ್ದೀರಿ. ಇದಕ್ಕೆ ಕಾರಣ ನಿಮ್ಮ ಪ್ರಬುದ್ಧ ಮತ್ತು ವಿವೇಚನಾಯುತ ಚಿಂತನೆ. ನಮ್ಮ ದುರದೃಷ್ಟವೆಂದರೆ ಈಗ ನಮ್ಮ ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಎರಡು ಬಣಗಳು, ಒಬ್ಬರು ಹೇಳಿದ್ದಕ್ಕೆ ಮತ್ತೊಬ್ಬರ ವಿರೋಧ ಹೀಗಾಗಿ ನಾವು ದಾಖಲಿಸಿದ ಸಂಗತಿ ಯಾರೇ ಒಬ್ಬರಿಗೆ ಸರಿ ಯಾಗಿ ಕಾಣದೇ ಹೋದರೆ ಆಕ್ಷೇಪ, ಹೀಗಾಗಿ ನನ್ನ ಲೇಖನದ ಮಿತಿಯ ಕುರಿತು ನಾನು ದಾಖಲಿಸುವುದು ನನಗೆ ಅನಿವಾರ್ಯವಾಗುತ್ತದೆ. ಧನ್ಯವಾದಗಳು.

Shreekar's picture
02
Feb
2012
9:59

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಪಾಟೀಲ ಸಾಹೇಬರೇ,

ಪ್ರಣಾಮಗಳು.

<<< " ನಮ್ಮ ದುರದೃಷ್ಟವೆಂದರೆ ಈಗ ನಮ್ಮ ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಎರಡು ಬಣಗಳು, ಒಬ್ಬರು ಹೇಳಿದ್ದಕ್ಕೆ ಮತ್ತೊಬ್ಬರ ವಿರೋಧ ಹೀಗಾಗಿ ನಾವು ದಾಖಲಿಸಿದ ಸಂಗತಿ ಯಾರೇ ಒಬ್ಬರಿಗೆ ಸರಿ ಯಾಗಿ ಕಾಣದೇ ಹೋದರೆ ಆಕ್ಷೇಪ...">>>

ನಿಮ್ಮ ಮೂಲ ಲೇಖನದ ಬೇಂದ್ರೆಯವರಿಗೂ ದೊಡ್ಡ ವಿರೋಧಿಗಳಿದ್ದರು ‍ ಪ್ರಖ್ಯಾತ ಸಂಶೋಧಕ ಶಂ. ಬಾ, ಜೋಷಿ ಯವರು!

ನನ್ನ ಅನಿಸಿಕೆ ಏನೆಂದರೆ,ಎರಡು ಬಣಗಳು ಮತ್ತು ಆರೋಗ್ಯಕರ ವಿರೋಧ ಇವು ಅತಿ ಅವಶ್ಯ. ಏಕೆಂದರೆ ವಿಷಯವೊಂದರ ಬಗ್ಗೆ ನಾವು ಆಲೋಚಿಸಿರದ ಆಯಾಮಗಳನ್ನು ವಿರೋಧಿಗಳು ಬೊಟ್ಟು ಮಾಡಿ ತೋರಿಸುತ್ತಾರೆ. ಇನ್ ಫೋಸಿಸ್ ನಂತಹ enlightened ಕಂಪೆನಿಗಳು ಈ ಒಂದು ಉದ್ದೇಶಕ್ಕಾಗಿಯೆ independent directors ಗಳನ್ನು ತಮ್ಮ ಬೋರ್ಡ್ ಸೇರಲು ಆಮಂತ್ರಿಸುತ್ತಾರೆ.

ಬಹುಶ ಪ್ರೇಮಶೇಖರ ಅವರ ಈ ಕೆಳಗೆ ಉದ್ಧರಿಸಿದ ವಾದ ಇದನ್ನು ಚೆನ್ನಾಗಿ ಮನದಟ್ಟು ಮಾಡಿಕೊಡಬಹುದು.

"ನೆಹರೂ ನೀತಿಗಳ ಬಗ್ಗೆ ವಿರೋಧವಿಲ್ಲದ್ದು: ದೇಶದ ಮೊದಲ ಪ್ರಧಾನಮಂತ್ರಿ ಜವಾಹರ್ಲಾಲ್ ನೆಹರೂ ಮಹಾನ್ ನಾಯ‌ಕ ನಿಜ. ನಮ್ಮ ನೆರೆಯ ರಾಷ್ಟ್ರಗಳು ಸೈನಿಕ ಶಾಸನ, ಏಕಪಕ್ಷದ ಸರ್ವಾಧಿಕಾರಗಳತ್ತ ಜಾರುತ್ತಿದ್ದ ಸಮಯದಲ್ಲಿ ಅವರು ಭಾರತವನ್ನು ಪ್ರಜಾಪ್ರಭುತ್ವದ ಹಾದಿಯಲ್ಲಿ ಮುನ್ನಡೆಸಿದರು ಎಂಬುದೂ ನಿಜ. ಆದರೆ ಅವರ ಹಲವಾರು ನೀತಿಗಳು, ಮುಖ್ಯವಾಗಿ ಆರ್ಥಿಕ ಮತ್ತು ವಿದೇಶನೀತಿಗಳು ದೋಷಪೂರಿತವಾಗಿದ್ದವು. ಆಮದು ರಫ್ತು ನೀತಿ, ಲೈಸನ್ಸ್ ರಾಜ್ ಮುಂತಾದ ಆರ್ಥಿಕ ನೀತಿಗಲು ರಾಷ್ಟ್ರದ ತ್ವರಿತ ಆರ್ಥಿಕ ಪ್ರಗತಿಗೆ ಅಡ್ಡಿಯಾಗಿದ್ದರೆ ಅವರ ಅಲಿಪ್ತತೆ, ಅಮೆರಿಕಾವಿರೋಧೀ ನೀತಿ ಮುಂತಾದ ವಿದೇಶನೀತಿಗಳು ಅಂತರರಾಷ್ಟ್ರೀಯ ರಾಜಕಾರಣದಲ್ಲಿ ಭಾರತಕ್ಕೆ ಸಿಗಬೇಕಾಗಿದ್ದ ಸ್ಥಾನಮಾನ, ಮನ್ನಣೆ, ಜವಾಬ್ದಾರಿಗಳಿಗೆ ಮುಳುವಾದವು. ಆ ದಿನಗಳ ದುರಂತವೆಂದರೆ ಈಗಿನಂತಹ ಪರಿಣಾಮಕಾರೀ ವಿರೋಧಪಕ್ಷಗಳು ಆಗ ಇರಲೇ ಇಲ್ಲ ಮತ್ತು ನೆಹರೂ ಅವರ ಇಂಗಿತಗಳನ್ನು ಯಾವುದೇ ಚರ್ಚೆ ಇಲ್ಲದೇ ರಾಷ್ಟ್ರೀಯ ನೀತಿಗಳಾಗಿ ಈ ದೇಶ ಒಪ್ಪಿಕೊಳ್ಳುತ್ತಿತ್ತು. ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಯಾವುದೇ ಮಸೂದೆಗಳು ಮೊಟ್ಟಮೊದಲು ಸಂಸತ್ತಿನಲ್ಲಿ ಮಂಡಿತವಾಗಬೇಕು ಮತ್ತು ಅವುಗಳ ಮೇಲೆ ಪ್ರಜಾಪ್ರತಿನಿಧಿಗಳಿಂದ ಚರ್ಚೆಯಾಗಬೇಕು. ಆದರೆ ಹಲವಾರು ನಿರ್ಣಯಗಳು ಮೊದಲು ಸಂಸತ್ತಿನಲ್ಲಿ ಮಂಡಿತವಾಗದೇ, ಸಾರ್ವಜನಿಕ ಭಾಷಣಗಳಲ್ಲಿ ನೆಹರೂ ಅವರ ಇಂಗಿತಗಳಾಗಿ ಹೊರಬರುತ್ತಿದ್ದವು. ಕೆಲವು ಮೂಲಗಳ ಪ್ರಕಾರ ಕೆಲವು ಪ್ರಮುಖ ನಿರ್ಣಯಗಳನ್ನು ನೆಹರೂ ಅವರು ಸಂಸತ್ತಿನಲ್ಲಿ ಮಂಡಿಸುವ ಮೊದಲೇ ತಮ್ಮ ಗೆಳತಿಯಾಗಿದ್ದ ಲೇಡಿ ಎಡ್ವಿನಾ ಮೌಂಟ್ಬ್ಯಾಟನ್ ಅವರಿಗೆ ಪತ್ರ ಮುಖೇನ ತಿಳಿಸಿದ್ದೂ ಉಂಟಂತೆ. ಹೀಗೆ ನೆಹರೂ ಅವರ ಇಂಗಿತಗಳು, ಆಶಯಗಳು ಯಾವುದೇ ಚರ್ಚೆಯಾಗದೇ ಸರಕಾರದ ನೀತಿನಿರ್ಣಯಗಳ ರೂಪ ತಾಳಿದ್ದರಿಂದಾಗಿ ಹಲವಾರು ಕ್ಷೇತ್ರಗಳಲ್ಲಿ ಈ ದೇಶ ಹಿನ್ನಡೆ ಸಾಧಿಸಬೇಕಾಯಿತು. ಚೀನಾದಂತಹ ಸಮಾಜವಾದೀ ರಾಷ್ಟ್ರ ೧೯೭೮ರಲ್ಲೇ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದರೆ ನಾವು ೧೯೯೧-೯೨ರವರೆಗೆ ಕಾಯಬೇಕಾಯಿತು. ವಿದೇಶನೀತಿಗಳಲ್ಲಿ ನೆಹರೂ ಎಸಗಿದ ತಪ್ಪುಗಳನ್ನು ಈ ದೇಶ ಚರ್ಚೆಯಿಲ್ಲದೇ ಒಪ್ಪಿಕೊಂಡ ಪರಿಣಾಮಗಳನ್ನು ನಾವು ಈಗಲೂ ಅನುಭವಿಸುತ್ತಿದ್ದೇವೆ."

http://premashekhara...

H A Patil's picture
03
Feb
2012
9:23

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಶ್ರೀಕರ ರವರೆ ವಂದನೆಗಳು

ನಿಮ್ಮ ಮರು ಮರು ಪ್ರತಿಕ್ರಿಯೆ ಓದಿದೆ, ನೀವು ವ್ಯಕ್ತ ಪಡಿಸಿದ ಅಭಿಪ್ರಾಯ ಸರಿ.ಇನ್ನು ಬೇಂದ್ರೆ ಶಂಭಾ ಕುರಿತಂತೆ. ಬೇಂದ್ರೆ ಖ್ಯಾತ ಕವಿ ಯಾದರೆ ಶಂಬಾ ಜೋಶಿ ಖ್ಯಾತ ಸಂಶೋಧನಾಕಾರ. ಸಂಶೋಧಕನಿಗಿಂತ ಕವಿಗೆ ಪಸಿದ್ಧಿ ಜಾಸ್ತಿ. ಹೀಗಾಗಿ ಬೇಂದ್ರೆ ಯವರಲ್ಲಿಗೆ ಜನರ ಭೇಟಿ ಜಾಸ್ತಿ. ಹೀಗಾಗಿ ಅವರಲ್ಲಿ ಪರಸ್ಪರ ಸಹನೆಯಿತ್ತಂದು ಕಾಣುತ್ತದೆ. ಇನ್ನು ನೆಹರು ಅಧಿಕಾರಕ್ಕೆ ಬಂದಾಗ ಅವರಿಗೆ ಅದು ಪ್ರಥಮ ಅನುಭವವಾಗಿತ್ತು. ದೇಶದ ವಿಭಜನೆ ನಿರಾಶ್ರಿತರ ಆಗಮನ, ಸಂಸ್ಥಾನಗಳ ವಿಲಿನೀಕರಣ, ಭಾಷಾವಾರು ಪ್ರಾಂತಗಳ ರಚನೆ, ಮ್ಯಾಕ್ ಮೋಹನ ರೇಖೆಯ ಗಡಿಯ ಬಳಿ ಚೀನಾದ ಆಕ್ರಮಣ, ಟಿಬೇಟಿಗೆ ಚೀನಾದ ಆಕ್ರಮಣದ ಕಾರಣದಿಂದಾಗಿ ಟಿಬೇಟಿಯನ್ನರ ಭಾರತದ ವಲಸೆ ಇನ್ನೂ ಒಂದು ಸಂವಿಧಾನ ವನ್ನು ಹೊಂದಿರದ ಸ್ವತಂತ್ರ ಭಾರತ ಈ ಎಲ್ಲ ಕಾರಣಗಳಿಂದಾಗಿ ನೆಹರೂ ಕೆಲವೆಡೆ ಎಡವಿರ ಬಹುದೆಂದು ನನ್ನ ಭಾವನೆ. ಮೇಲಾಗಿ ನೆಹರೂರ ರಸಿಕತನದ ವಿಷಯಗಳು ಏನೇ ಇರಲಿ, ಆತನೊಬ್ಬ ಆಧುನಿಕ ಭಾರತದ ಬಗ್ಗೆ ಕನಸು ಕಂಡಿದ್ದ, ಅದಕ್ಕಾಗಿ ಶ್ರಮಿಸಿದ. ನಿಜ ಅರ್ಥದಲ್ಲಿ ಆತನ ಕುಟುಂಬ ಜೇಲಿನಲ್ಲಿಯೆ ತಮ್ಮ ಜೀವನದ ಬಹುಭಾಗವನ್ನು ಕಳೆದರು. ನೆಹರೂ ಚೈನಾ ಯುದ್ಧ ಸಂಧರ್ಭದಲ್ಲಿ ತಳೆದ ನಿಲುವು ನಾಚಿಗೆಗೇಡಿನದು. ಅ ಕೊರೆವ ಮೈನಸ್ 20 ಡಿಗ್ರಿಯ ಚಳಿಯಲ್ಲಿ ನಮ್ಮ ಸೈನಿಕರು ಧರಿಸಲು ಸ್ವೇಟರ್ ಕಾಲಿಗೆ ಸಾಕ್ಸ್ ಬೂಟುಗಳಿಲ್ಲದೆ, ಬರಿ .303 ರೈಫಲ್ ಹೊಂದಿ ನಾಲಕ್ಐದು ಕಾಡುತೂಸುಗಳನ್ನು ಮಾತ್ರ ಹೊಂದಿ ಅತ್ಯಾಧುನಿಕ ಮಾರಕಾಸ್ತ್ರ ಗಳನ್ನು ಚೀನಿಯರ ದಾಳಿಗೆ ಸಿಲುಕಿ ಅಸಹಾಯಕರಾಗಿ ಮರಣ ಹೊಂದಿ ದ್ದನ್ನು ನೆನಪಿಸಿಕೊಂಡರೆ ಮನ ಕದಡಿ ಹೋಗತ್ತೆ. ಇದರ ಬಗೆಗೆ ನೀವು ತಿಳಿಯ ಬೇಕೆಂದರೆ ಬ್ರಿಗೇಡಿಯರ್ ಜಾನ್ ಪಿ ದಳವಿ ಬರೆದ ' ಹಿಮಾಲಯನ್ ಬ್ಲಂಡರ್ ' ಪುಸ್ತಕವನ್ನು ಒಮ್ಮ ಓದಿ. ಚಿನೀಯರಿಗೆ ಸೆರ ಸಿಕ್ಕ ಆತ ಎರಡು ವರ್ಷ ಬಂದಿಯಾಗಿ ಚಿತ್ರೆ ಹಿಂಸೆ ಅನುಭವಿಸಿ ಬಂದ ಆತನನ್ನು ಚೀನಾ ಯುದ್ಧದ ಬಗೆಗೆ ಸಮಗ್ರ ವರದಿಯನ್ನು ಕೊಡಲು ಕೇಂದ್ರ ಕೇಳುತ್ತದೆ. ಆತ ಕೊಟ್ಟ ವರದಿಯನ್ನು ಜಾರಿಗೆ ತರುವುದು ಇರಲಿ, ಅದು ಸಂಶತ್ತಿನಲ್ಲಿ ಸರಿಯಾಗಿ ಅದ ಮಂಡನೆ ಯಾಗುವದೇ ಇಲ್ಲ.
ಬದಲಾಗಿ ಆತನ ' ಹಿಮಾಲಯನ್ ಬ್ಲಂಡರ್ ' ಕೃತಿಯನ್ನು ಕೇಂದ್ರ ಸರ್ಕಾರ ನಿಷೇಧಿಸುತ್ತದೆ. ಇದೆಲ್ಲ ಏನ? ಇದ್ದರೂ ನೆಹರೂ ಅಪ್ರಾಮಾಣಿಕ ರಾಗಿರಲಿಲ್ಲ. 1982 ರಲ್ಲಿ ಹಿಂದಿಯ ಪ್ರಸಿದ್ದ ಸಾಹಿತಿ ಪ್ರೇಮಚಂದ್ರ ಬೆಂಗಳೂರಿಗೆ ನೆಹರೂ ಬಗೆಗಿನ ಉಪನ್ಯಾಸ ಕಾರ್ಯಕ್ರಮ ವೊಂದಕ್ಕೆ ಬಂದಾಗ ಪ್ರಶ್ನೋತ್ತರ ಸಮಯದಲ್ಲಿ ಒಬ್ದಬರು ನೆಹರೂವನ್ನು ಚೀಟ್ ಎನ್ನುತ್ತಾರೆ. ಿದರಿಂದ ಕನಲಿದ ಮುನ್ಸಿ ಪ್ರೇಮಚಂದ್ ನೀವು ಬೇಕಾದರೆ ಅವರ ನಿಲುವುಗಳು ಹಲವು ಸರಿಯಿರಲಿಲ್ಲ ಎನ್ನಿ ಬೇಕಾದರೆ , ಆದರೆ ಚೀಟ್ ಎನ್ನುವ ಪದ ಅವರಿಗೆ ಉಪಯೋಗಿಸಬೇಡಿ ಎಂದುದನ್ನು ಲಂಕೇಶ ರವರ ಪತ್ರಿಕೆಯಲ್ಲಿ ಓದಿದ್ದ ನೆನಪು. ಇಷ್ಟು ಸಕು ಧನ್ಯವಾದಗಳು.

H A Patil's picture
02
Feb
2012
1:59

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಶ್ರೀಕರರೆ ನಮನಗಳು

ನಿಮ್ಮ ಮರುಪ್ರತಿಕ್ರಿಯೆಯಲ್ಲಿ ' ನನ್ನ ಆಲೋಚನಾ ಕ್ರಮ ಮತ್ತು ಗ್ರಹಿಕೆಗಳು ಸರಿಯಾಗಿಯೆ ಇವೆ, ಅವುಗಳ ಬಗ್ಗೆ ನಿಮಗೆ ಗೌರವವಿದೆಯೆಂದು ' ದಾಖಲಿಸಿದ್ದೀರಿ. ಇದಕ್ಕೆ ಕಾರಣ ನಿಮ್ಮ ಪ್ರಬುದ್ಧ ಮತ್ತು ವಿವೇಚನಾಯುತ ಚಿಂತನೆ. ನಮ್ಮ ದುರದೃಷ್ಟವೆಂದರೆ ಈಗ ನಮ್ಮ ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಎರಡು ಬಣಗಳು, ಒಬ್ಬರು ಹೇಳಿದ್ದಕ್ಕೆ ಮತ್ತೊಬ್ಬರ ವಿರೋಧ ಹೀಗಾಗಿ ನಾವು ದಾಖಲಿಸಿದ ಸಂಗತಿ ಯಾರೇ ಒಬ್ಬರಿಗೆ ಸರಿ ಯಾಗಿ ಕಾಣದೇ ಹೋದರೆ ಆಕ್ಷೇಪ, ಹೀಗಾಗಿ ನನ್ನ ಲೇಖನದ ಮಿತಿಯ ಕುರಿತು ನಾನು ದಾಖಲಿಸುವುದು ನನಗೆ ಅನಿವಾರ್ಯವಾಗುತ್ತದೆ. ಧನ್ಯವಾದಗಳು.

Aravind M.S's picture
31
Jan
2012
2:38

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಸಾರ್,

ತಮ್ಮ ಲೇಖನಕ್ಕೆ ಅನಂತ ಧನ್ಯವಾದಗಳು.

‍‍‍‍ ಅರವಿಂದ‌

H A Patil's picture
31
Jan
2012
8:44

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಅರವಿಂದ ರವರಿಗೆ ವಂದನೆಗಳು

ತಮ್ಮ ಪ್ರತಿಕ್ರಿಯೆ ನೋಡಿದೆ, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

swara kamath's picture
31
Jan
2012
4:37

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಪ್ರಿಯ ಸ್ನೇಹಿತರೆ,

ಸಂಪದ ಅಂಕಣಕ್ಕೆ ಶೋಭೆ ತರುವಂತಹ ಇನ್ನೊಂದು ಉತ್ತಮ ಲೇಖನ 'ಮರೆಯಲಾಗದ ವರಕವಿ ದ.ರಾ.ಬೇಂದ್ರೆ' ಬರೆದಿರುವಿರಿ.
ಓದಿ ಸಂತೋಷವಾಯಿತು.
<< ದೀಪ ಆರಿದರೂ ಅದರ ರೂಪ ಶಾಶ್ವತವಾಗಿ ಉಳಿಯುತ್ತದೆ. ಬೆಂಕಿ ಬೂದಿಯಾಗಿ ವಿಭೂತಿಯಾಗುತ್ತದೆ. ಅಂದರೆ ಕವಿ ಮರೆಯಾದರೂ ಆತನ ಕಾವ್ಯ ಕಾಣ್ಕೆ ಉಳಿಯುತ್ತದೆ. ಕವಿ ಬೇಂದ್ರೆ ನಮ್ಮನಗಲಿದ್ದರೂ ಅವರ ಆತ್ಮ ಸದೃಶವಾದ ಕಾವ್ಯ ರೂಪದಲ್ಲಿ ನಮ್ಮನ್ನು ರಂಜಿಸುತ್ತ ರೂಪಿಸುತ್ತ ಬೆಳೆಯುತ್ತ ಸಾಗಿದ್ದಾರೆ.ಕಾಲಚಕ್ರದ ಗತಿಯಲ್ಲಿ ನಶಿಸುವ ಕವಿಯಲ್ಲ ಬೇಂದ್ರೆ. ಹೊಸರೂಪ ಹೊಸದರ್ಶನಗಳನ್ನು ಕಾಣಿಸುತ್ತ ಹೋಗುವ ಅಮರ ಕವಿ ಅಂಬಿಕಾ ತನಯ ದತ್ತರು>>
ನನಗೆ ಈ ಮೆಲಿನ ಸಾಲುಗಳು ತುಂಬಾ ಇಷ್ಟವಾಯಿತು.
ವಂದನೆಗಳು

H A Patil's picture
01
Feb
2012
9:13

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಎನ್ ರಮೇಶ ಕಾಮತರೆ ವಂದನೆಗಳು

ನನ್ನ ಬೇಂದ್ರೆ ಲೇಖನಕ್ಕೆ ನೀವು ಬರೆದ ಪ್ರತಿಕ್ರಿಯೆ ಓದಿದೆ, ಲೇಖನದ ಸಾಲುಗಳನ್ನು ಉದ್ಗರಿಸಿ ಬೆರೆದಿದ್ದೀರಿ, ನಿಮ್ಮ ಅಭಿಮಾನ ದೊಡ್ಡದು. ಬೇಂದ್ರೆ ಬರಿ ಮನರಂಜಿಸುವ ಕವಿ ಮಾತ್ರವಲ್ಲ ಅಷ್ಟೆ ಆಗಿದ್ದರೆ ಕಾಲಚಕ್ರದಲ್ಲಿ ಅವರ ಹೆಸರು ಸೇರಿ ಹೋಗುತ್ತಿತ್ತು, ಬೇಂದ್ರೆ ಮನರಂಜಿಸುವುದರ ಜೊತೆಗೆ ಭಾವಗಳ ಲೋಕವನೆ ತೆರೆದಿಡುವ ಶಬ್ದ ಗಾರುಡಿಗ, ಜೊತೆಗೆ ಜೀವನದ ಪರಮ ದರ್ಶನ ಮಾಡಿಸುವ ಹೃದಯ ತಟ್ಟುವ ಕವಿ. ಹೀಗಾಗಿ ಬೇಂದ್ರೆ ಮತ್ತು ಕುವೆಂಪು ಯಾವ ಕಾಲಕ್ಕೂ ಸಲ್ಲುವ ಕವಿಗಳು. ಹೀಗಾಗಿ ಸಂಧರ್ಭಾ ನುಸಾರ ಅವರನ್ನು ನೆನಪಿಸಿಕೊಳ್ಳ ಬೇಕಾಗುತ್ತದೆ. ಪ್ರತಿಕ್ರಿಯೆಗೆ ಧನ್ಯವಾದಗಳು.

santhosh_87's picture
31
Jan
2012
7:46

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಬೇಂದ್ರೆಯವರ ಮತ್ತು ಶಂಬಾ ಜೋಶಿಯವರ ಜಗಳಗಳು ತುಂಬಾ ಖ್ಯಾತಿಯನ್ನು ಪಡೆದಿತ್ತು ಎಂಬುದನ್ನು ಎಲ್ಲೋ ಓದಿದ ನೆನಪು.
ಬೇಂದ್ರೆ ಸರಳ ಭಾಷೆ ಮತ್ತು ಗಂಭೀರ ಭಾವದಿಂದ ಹೆಚ್ಚು ಆಪ್ತವಾಗುತ್ತಾರೆ.

H A Patil's picture
04
Feb
2012
12:00

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಸಂತೋಷ ಎನ್ ಆಚಾರ್ಯ ರವರೆ ವಂದನೆಗಳು

ನೀವು 31 ರಂದು ಬರೆದ ಪ್ರತಿಕ್ರಿಯೆ ನೋಡಿದೆ, ಸಂಫದದ ತಾಂತ್ರಿಕ ತೊಂದರೆ ಮತ್ತು ನಾನು ಕೆಲಸ ಮಾಡುವ ಕಂಪ್ಯೂಟರ್ ನಲ್ಲಿಯೂ ತಾಂತ್ರಿಕ ತೊಂದರೆಯ ಕಾರಣ ಉತ್ತರಿಸುವಲ್ಲಿ ವಿಳಂಬವಾಯಿತು ಕ್ಷಮೆಯಿರಲಿ. ನೀವು ಪ್ರತಿಕ್ರಿಯೆಯಲ್ಲಿ ಕಾಣಸಿದಂತೆ ಬೇಂದ್ರೆ ಮತ್ತು ಜೋಶಿ ರವರಲ್ಲಿ ಸ್ವಲ್ಪ ಮಾತ್ಸರ್ಯ ವಿದ್ದಿರ ಬಹುದೇನೋ. ಇಬ್ಬರೂ ನೇರವಂತರಾಗಿದ್ದರು, ಬದುಕಿನಲ್ಲಿ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದವರು ಅವರಿಬ್ಬರು ಯಾವತ್ತೂ ಒಳಗೊಂದು ಹೊರಗೊಂದು ಎಂಬಂತೆ ಬದುಕಿದವರಲ್ಲ. ಯಾವವೋ ಕೆಲವು ಘಟನೆಗಳನ್ನು ಹಲವರು ವರ್ಣರಂಜಿತವಾಗಿ ಹೇಳಿರಬಹುದು, ಬಾಯಿಯಿಂದ ಬಾಯಿಗೆ ಉಪ್ಪು ಖಾರ ಸೇರಿ ಆ ರೀತಿ ಪ್ರಚಾರ ವಾಗಿರಬಹುದು, ಮೇಲಾಗಿ ಸ್ವತಂತ್ರ ಪೂರ್ವದಲ್ಲಿ ಬೇಂದ್ರೆಯವರನ್ನು ಕವಿಯೆಂದು ಗಂಭೀರವಾಗಿ ಪರಿಗಣಿಸಿರಲಿಲ್ಲ ವೆಂಬುದನ್ನು ಹಲ ಹಿರಿಯರು ಹೇಳುತ್ತಿದ್ದುದನ್ನು ಕೇಳಿದ್ದೆ. ಇಬ್ದರೂ ಮರಾಠಿ ಮೂಲದವರು ಕನ್ನಡದಲ್ಲಿ ಬರೆದರು. ಜೋಶಿಯವರ ಸಂಶೋಧನೆಯ ಪ್ರಕಾರ ಕನ್ನಡದ ವ್ಯಾಪ್ತಿ ಮಾಹಾರಾಷ್ಟ್ರ ಪ್ರದೇಶಗಳ ಕೆಲ ಪ್ರದೇಶಗಳ ವರೆಗೂ ವ್ಯಾಪಿಸಿತ್ತು ಎಂದು ದಾಖಲಿಸಿದ್ದಾರೆ.ಈ ಕಾರಣಕ್ಕಾಗಿ ಹಲ ಮರಾಠಿ ವಿದ್ವಾಂಸರಲ್ಲಿ ಜೋಶಿ ಯವರ ಬಗ್ಗೆಅಸಮಾಧಾನವಿತ್ತು. ಅವರವರ ಕ್ಷೇತ್ರಗಳಲ್ಲಿ ಅಗ್ರಗಣ್ಯರು ಎಂದು ಮಾತ್ರ ಹೇಳಬಲ್ಲೆ. ಧನ್ಯವಾದಗಳು

partha1059's picture
01
Feb
2012
9:01

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಇಳಿದು ಬಾ ತಾಯೆ
ಇಳಿದು ಬಾ
ಇಳಿದು ಬಾ ತಾಯೆ
ಇಳಿದು ಬಾ

ಹರನ ಜಡೆಯಿಂದ
ಹರಿಯ ಅಡಿಯಿಂದ
ಋಷಿಯ ತೊಡೆಯಿಂದ
ನುಸುಳಿ ಬಾ
ದೇವ ದೇವರನು
ತಣಿಸಿ ಬಾ
ದಿಗ್ದಿಗಂತದಲಿ ಹನಿಸಿ ಬಾ
ಚರಾಚರಗಳಿಗೆ
ಊಣಿಸಿ ಬಾ
ಬಾರೆ ಬಾ ತಾಯೆ

ಪಾಟಿಲರೆ ಇಂತಹ ಸುಮದುರ ಗೀತೆ ಬರೆಯಬಲ್ಲ
ಬೇಂದ್ರೆ ನನಗೆ ಅಚ್ಚುಮೆಚ್ಚು
ಅಲ್ಲ..
ಅವರು ನಾಡಿಗೆ ಅಚ್ಚುಮೆಚ್ಚು
ಪಾರ್ಥಸಾರಥಿ

H A Patil's picture
04
Feb
2012
12:10

ಉ: ಮರೆಯಲಾಗದ ವರಕವಿ ದ.ರಾ.ಬೇಂದ್ರೆ

ಪಾರ್ಥಸಾರಥಿಯವರೆ ವಂದನೆಗಳು

ಬಹಳ ದಿನಗಳ ನಂತರ ನಮ್ಮಿಬ್ಬರ ಭೇಟಿಯಾಗುತ್ತಿದೆ, ಆ ಕಾರಣದಿಂದ ನನಗೆ ಸಂತಸ ವಾಗಿದೆ. ಸಂಪದದ ಹಾಗೂ ನಾನು ಕೆಲಸ ಮಾಡುವ ಕಂಪ್ಯೂಟರ್ ಗಳ ತಾಂತ್ರಿಕ ತೊಂದರೆಗಳ ಕಾರಣದಿಂದ ಉತ್ತರಿಸುವಲ್ಲಿ ವಿಳಂಬವಾಯಿತು, ಕ್ಷಮೆ ಯಿರಲಿ . ..ಬೇಂದ್ರೆಯವರ ಕೆಲವು ಕವನಗಳ ಸಾಲುಗಳನ್ನು ಉದ್ಘರಿಸಿ ಪ್ರತಿಕ್ರಿಯಿಸಿದ್ದೀರಿ. ನೀವು ದಾಖಲಿಸಿದ ಕೊನೆಯ ಸಾಲುಗಳು ..ಬೇಂದ್ರೆ ಒಬ್ಬರಿಗೆ ಮಾತ್ರ ಅಲ್ಲ ಎಲ್ಲರಿಗೂ ಅಚ್ಚುಮೆಚ್ಚು. ಇದು ಮುತ್ತಿನಂತಹ ಮಾತು, ಹಾಗೆಯೇ ಸಾರ್ವಕಾಲಿಕ ಸತ್ಯ ಕೂಡ. ಧನ್ಯವಾದಗಳು.