24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮರೆವಿನ ಮಾಯೆ (ಶ್ರೀ ನರಸಿಂಹ 42)

July 31, 2012 - 10:39am
sathishnasa

ಮರೆವು ಎಂಬುವುದೆಮಗೆ ದೇವ ನೀಡಿರುವ ವರವು
ನೀಡಿರದಿದ್ದರೆ ಮರೆವ ನಡೆಯುತಿರಲಿಲ್ಲವಿ ಜೀವನವು
ಕ್ಷಣಿಕವಾಗನುಭವಿಪುದು ಮನ ಸುಖ,ದುಃಖಗಳನು
ಸಮಯ ಕಳೆದಂತೆಮಗೆ ಇವುಗಳನವ ಮರೆಸುವನು
 
ಮರೆ ಸುಖ,ದುಃಖಗಳ ಮರೆಯದಿರು ಜನನಿ,ಜನಕರ
ಮರೆ ಕೋಪ,ದ್ವೇಷಗಳ ಇರಿಸೊಳಗೆ ತಾಳ್ಮೆಯ ಬೇರ
ಮರೆ ನೀನು, ನಾನು,ನನದೆಂದೆನುವ ಅಹಮಿಕೆಯನು
ಮರೆಯದಿರು ಮನವೆ ನೀನು ಶ್ರೀಹರಿಯ ಸ್ಮರಣೆಯನು
 
ಮರೆಸುವನೆಲ್ಲ ಅಗಲಿಕೆಯ ನೋವನು,ಪರಿಹರಿಸುವನೆಲ್ಲ ಕ್ಲೇಷವನು

ನಂಬು,ನಂಬದಿರು ಶ್ರೀನರಸಿಂಹನೇ ಕೋಟಿ ಬ್ರಹ್ಮಾಂಡಕೆ ಒಡೆಯನು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Prakash Narasimhaiya on

ಆತ್ಮೀಯ ಸತೀಶ್,
ಕಾಲ ಎಲ್ಲವನು ಮರೆಸುವುದು. ಈ ಮರೆವು ನಮ್ಮೊಡನೆ ಇಲ್ಲದ್ದಿದ್ದರೆ ಯಾರೂ ಬದುಕುವ ಹಾಗೆ ಇಲ್ಲ. ಭಗವಂತ ನಮ್ಮ ಮೇಲಿನ ಅಪಾರ ಕಾರುಣ್ಯದಿಂದ ಕರುಣಿಸಿರುವ ವರ. ಆದರೂ, ಬೇಡದ ನೆನಪುಗಳ ಕೆದಕಿಕೊಂಡು ಚಿಂತೆ ಮಾಡುವ, ದ್ವೇಷ ಕಾರುವ, ದುಃಖ ಪಡುವ ಮಂದಿಗೆ ಏನೆಂದು ಹೇಳುವುದು?
ಮರೆತು ಬಿಡು ..ಮರೆತು ಬಿಡು ಎಲ್ಲವನ ಮರೆತುಬಿಡು
ಜೀವ ಕೊಟ್ಟ ಆ ತಂದೆಯ ನೆರಳಿನಲಿ ಬದುಕಿರುವಾಗ
ಮರೆತು ಬಿಡು ....ಎಲ್ಲವನು ಮರೆತು ಬಿಡು ..
ನಿಮ್ಮ ಕವನದ ಸಾಲುಗಳನು ಓದುವಾಗ ಕೆಲವು ವರ್ಷಗಳ ಹಿಂದೆ ಬರೆದು ಹಾಡಿದ ಈ ಸಾಲುಗಳು ಜ್ಞಾಪಕಕ್ಕೆ ಬಂದು ನಿಮ್ಮೊಂದಿಗೆ ಹಂಚಿಕೊಂಡೆ. ಸುಂದರವಾದ ಸಾಲುಗಳಿಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರಕಾಶ್ ರವರೇ
>>ಮರೆತು ಬಿಡು ..ಮರೆತು ಬಿಡು ಎಲ್ಲವನ ಮರೆತುಬಿಡು
ಜೀವ ಕೊಟ್ಟ ಆ ತಂದೆಯ ನೆರಳಿನಲಿ ಬದುಕಿರುವಾಗ
ಮರೆತು ಬಿಡು ....ಎಲ್ಲವನು ಮರೆತು ಬಿಡು ..<< ನಿಜ ಎಲ್ಲ ಮರೆತು ಅವನಿಗೆ ಶರಣಾದಾಗಲೇ ಮನಕೆ ನೆಮ್ಮದಿ ಸಿಗುವುದು.
ಧನ್ಯವಾದಗಳೊಂದಿಗೆ
....ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

"ಮರೆವು ಎಂಬುವುದೆಮಗೆ ದೇವ ನೀಡಿರುವ ವರವು
ನೀಡಿರದಿದ್ದರೆ ಮರೆವ ನಡೆಯುತಿರಲಿಲ್ಲವಿ ಜೀವನವು"

ಸತೀಶ್ ಅವ್ರೆ

ಮರೆವು ಅಂದ ಕೂಡಲೇ ನನಗೆ ಅನ್ನಿಸಿದ್ದು...

ಮರೆವು ಒಳ್ಳೇದು ನಾವ್ ಯಾರಿಂದಲಾರ ಸಾಲ ತೆಗೆದುಕೊಂಡಿದ್ದರೆ,.....!!
ಆದರೆ ಕೊಟ್ಟಿದ್ದರೆ ಅಲ್ಲ...:()))

ಹಾಗೆಯೇ >>> ಅರೆ ಮರೆವು ಮಾತ್ರ ಅಪಾಯಕಾರಿ...

ನನಗೆ ಮರೆವು ಅಂದ ಕೂಡಲೇ ಹಳೆಯ ಜೋಕ್ ನೆನಪ್ಗೆ ಬಂತು....
ಸಂಬಂಧಿಕರನ್ನ ಬೀಳ್ಕೋಡಲು ಬಂದಿದ್ದ ಪ್ರೊಫೆಸರ್ ತಾವೇ ಪ್ರಯಾಣಿಸಿದ್ದು.....!!

ಈ ಮರೆವು ಅಂದ ಕೂಡಲೇ ನನಗೆ ನೆನಪಾಗಿದ್ದು
ಕೆಲವೊಂದು ಕೆಟ್ತ ಘಟನೆಗಳನ್ನ ನಾವ್ ಮರೆಯಲು ಆಗೊಲ್ಲ , ಆಗ ನನಗೆ ಅನ್ನ್ಸಿದ್ದು ಆ ತರಹದ್ದನ್ನ ಮಾತ್ರ ಮೆದುಳಿಂದ ಅಳಿಸಿ ಹಾಕುವ ಸಾಧ್ಯತೆ ಇದೆಯ? ಅಂತ, ಬಹುಶ ಇರ್ವ ಹಾಗಿಲ್ಲ....

ಮರೆವು ಬಗ್ಗೆ ಚ್ಹೆನ್ನಾಗಿ ಹೇಳಿರುವಿರಿ...

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

>>ಮರೆವು ಒಳ್ಳೇದು ನಾವ್ ಯಾರಿಂದಲಾರ ಸಾಲ ತೆಗೆದುಕೊಂಡಿದ್ದರೆ,.....!!
ಆದರೆ ಕೊಟ್ಟಿದ್ದರೆ ಅಲ್ಲ...:()))<<
ನಾವು ಸಾಲ ತೆಗೆದುಕೊಂಡಿದ್ದನ ಮರೆತರು ಕೊಟ್ಟವನು ಮರೆತಿರಲ್ವಲ್ಲ, ಹಾಗೆ ನಾವು ಸಾಲಕೊಟ್ಟಾಗ ನಮಗೆ ಜ್ಙಾಪಕ ಇರುತ್ತೆ
ನೀವು ಹೇಳಿದ ಹಾಗೆ ಸಾಲತಗೊಂಡಿದ್ದನ್ನ ಮರಿಬಾರದು ಅಂತಾನೆ ಬ್ಯಾಂಕ್ ನವರು ಮನೆ ಪತ್ರಗಳನ್ನು ಅವರ ಬಳಿ ಇಟ್ಕೋಳುದು ಅನ್ಸುತ್ತೆ ....!! ಅಲ್ಲವೆ
>>ಕೆಲವೊಂದು ಕೆಟ್ತ ಘಟನೆಗಳನ್ನ ನಾವ್ ಮರೆಯಲು ಆಗೊಲ್ಲ , ಆಗ ನನಗೆ ಅನ್ನ್ಸಿದ್ದು ಆ ತರಹದ್ದನ್ನ ಮಾತ್ರ ಮೆದುಳಿಂದ ಅಳಿಸಿ ಹಾಕುವ ಸಾಧ್ಯತೆ ಇದೆಯ? ಅಂತ, ಬಹುಶ ಇರ್ವ ಹಾಗಿಲ್ಲ....<<
ಯಾವುದೆ ಘಟನೆಗಳು ನಡೆದ ಸಮಯದಲ್ಲಿ ಮನಸ್ಸಿನ ಮೇಲೆ ತೀಕ್ಷ್ಣ ಪ್ರಭಾವ ಬೀರಿದರೂ ಸಮಯ ಕಳೆದಂತೆ ಅದರ ತೀಕ್ಷ್ಣತೆ ಕಡಿಮೆಯಾಗುತ್ತದೆ. ಕ್ರಮೇಣ ಮನಸ್ಸಿನಿಂದ ಮರೆಯಾಗುತ್ತದೆ. ಬಲವಂತವಾಗಿ ಜ್ಞಾಪಿಸಿಕೊಂಡರೆ ಮಾತ್ರ ಜ್ಞಾಪಕ ಬರುತ್ತೆ ಅಷ್ಟೆ ಎನ್ನುವುದು ನನ್ನ ಭಾವನೆ ವೆಂಕಟೇಶ್ ರವರೇ ಧನ್ಯವಾದಗಳೊಂದಿಗೆ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಸಪ್ತಗಿರಿವಾಸಿ ಮತ್ತು ಸತೀಶ್ ಅವರೆ,
>>>>>ಕೆಲವೊಂದು ಕೆಟ್ತ ಘಟನೆಗಳನ್ನ ನಾವ್ ಮರೆಯಲು ಆಗೊಲ್ಲ , ಆಗ ನನಗೆ ಅನ್ನ್ಸಿದ್ದು ಆ ತರಹದ್ದನ್ನ ಮಾತ್ರ ಮೆದುಳಿಂದ ಅಳಿಸಿ ಹಾಕುವ ಸಾಧ್ಯತೆ ಇದೆಯ? ಅಂತ
- http://www.scienceda...

ಕವನ ಚೆನ್ನಾಗಿದೆ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ಗಣೇಶ್ ರವರೇ ಮೆಚ್ಚುಗೆಗೆ ಹಾಗೂ ಉಪಯುಕ್ತ ಮಾಹಿತಿಗೆ
....ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಸತೀಶ್ ಅವರೆ,
ಮರೆವಿನ ವಿವೇಚನೆಯನ್ನು ಚೆನ್ನಾಗಿ ತಿಳಿಸಿಕೊಟ್ಟಿದ್ದೀರ. ಅದರ ಕುರಿತಾಗಿ ಅರ್ಥಗರ್ಭಿತ ಕವನವನ್ನು ಹೊಸೆದಿದ್ದೀರ, ಅಭಿನಂದನೆಗಳು.

ದೇವರು ಮರೆವು ಕೊಟ್ಟದ್ದರಿಂದಲೆ ನಮ್ಮ ನಿಜ ಸ್ವಭಾವವನ್ನು ಮರೆತು ದೇಹದೊಂದಿಗೆ ನಮ್ಮನ್ನು ಗುರುತಿಸಿಕೊಂಡಿದ್ದೇವೆ :((

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ಶ್ರೀಧರ್ ರವರೇ
>>ದೇವರು ಮರೆವು ಕೊಟ್ಟದ್ದರಿಂದಲೆ ನಮ್ಮ ನಿಜ ಸ್ವಭಾವವನ್ನು ಮರೆತು ದೇಹದೊಂದಿಗೆ ನಮ್ಮನ್ನು ಗುರುತಿಸಿಕೊಂಡಿದ್ದೇವೆ :((<< ನಿಜ ಶ್ರೀಧರ್ ರವರೇ, ಮಾಯೆಗೊಳಗಾಗಿ ಇದು ಅರಿತು ಅರಿಯದಂತೆ ಇದ್ದೇವೆ ಆದ್ದರಿಂದ ಇದನ್ನು ಜಾಣ ಮರೆವು ಅಂದರೆ ತಪ್ಪಲ್ಲವೇನು
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ಪ್ರೇಮರವರೇ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

<<ಮರೆವು ಎಂಬುವುದೆಮಗೆ ದೇವ ನೀಡಿರುವ ವರವು>> ಸತ್ಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ನಾಗರಾಜ್ ರವರೇ
....ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by swara kamath on

ಸತೀಶ್ ಅವರೆ.
ಈ ಸರಣಿಯಲ್ಲಿ ಮರೆವಿನ ವಿಶಯದ ಕುರಿತು ಅರ್ಥಪೂರ್ಣವಾಗಿ ಬರದಿದ್ದೀರಿ.
ನಮ್ಮ ಮನಸ್ಸು ಪ್ರತಿಕ್ಷಣಕ್ಕೂ ಭಾವನೆಗಳಿಗೆ ಸ್ಪಂದಿಸಿ ಸುಖ ದುಖಃ ನೀಡುತ್ತೀರುತ್ತವೆ.ಕೆಲವು ಘಟನೆಗಳು ನಿಚ್ಚಳವಾಗಿ ಕಡೆಯವರೆಗೂ ಮನಸ್ಸಿನಲ್ಲಿ ಉಳಿದರೂ ಕಾಲವು ಅದನ್ನು ಹದಗೊಳಿಸಿ ಮಾಗಿಸುತ್ತದೆ ಅನ್ನುವುದು ಸುಳ್ಳಲ್ಲ.
ವಂದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

>>ನಮ್ಮ ಮನಸ್ಸು ಪ್ರತಿಕ್ಷಣಕ್ಕೂ ಭಾವನೆಗಳಿಗೆ ಸ್ಪಂದಿಸಿ ಸುಖ ದುಖಃ ನೀಡುತ್ತೀರುತ್ತವೆ.ಕೆಲವು ಘಟನೆಗಳು ನಿಚ್ಚಳವಾಗಿ ಕಡೆಯವರೆಗೂ ಮನಸ್ಸಿನಲ್ಲಿ ಉಳಿದರೂ ಕಾಲವು ಅದನ್ನು ಹದಗೊಳಿಸಿ ಮಾಗಿಸುತ್ತದೆ ಅನ್ನುವುದು ಸುಳ್ಳಲ್ಲ.<< ಸತ್ಯವಾದ ಮಾತು ರಮೇಶ್ ರವರೇ ಧನ್ಯವಾದಗಳೊಂದಿಗೆ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ಸಕತ್ ಸತೀಶವ್ರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ಚೇತನ್ ರವರೇ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.