25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮಳೆ

July 15, 2011 - 11:12am
kamath_kumble

ಬರಡಾದ ಮನಕ್ಕೆ ಸಾಂತ್ವನ ಕೊಟ್ಟು ನೀ ಜಿನುಗುತ್ತಿದ್ದಿಯೋ
ನವಿರಾದ ದುಃಖಕ್ಕೆ ಆಹ್ವಾನ ಇಟ್ಟು ನೀ ಛೇಡಿಸುತ್ತಿದ್ದಿಯೋ
ಕಾರಣ ಕೊಟ್ಟು ಜಾರಬಾರದೆ ಕಣ್ಣೀರಿಗೆ ಜೊತೆಯಾದ ಹನಿಯೇ
ಮಡುಗಟ್ಟುವ ಎದೆಯ ಭಾರಕೆ ಗುಡುಗುಟ್ಟುವ ಮೇಘವೇ ಇನಿಯ

ಒಂಟಿ ಬೀದಿಯಲಿ ವಿರಹದ ಮಳಿಗೆಯ ಬಾಗಿಲು ತೆರೆದಾಗಿದೆ
ಜಂಟಿ ದಾರಿಯಲಿ ಸವೆದ ಗಳಿಗೆಯ ನೆನಪ ಜೋಡಿಸಿಡಲಾಗಿದೆ
ನಡೆಯದ ವ್ಯವಹಾರಕ್ಕೆ ಕಾಯುವ ನಾಲ್ಕು ಗಳಿಗೆಯ ವರ್ತಕ
ಬಿಡದೆ ನೀ ಹೀಗೆ ಸುರಿದರೆ ನಿಲ್ಲದ ಪ್ರಯತ್ನ ಆಗವುದೆಂದು ಸಾರ್ಥಕ

ಹರೆಯದ ಉತ್ಸಾಹಕೆ ಸ್ಪೂರ್ತಿಯಾದ ಹನಿಯು ಬೇಕಾಗಿದೆ ಇಂದು
ಮರೆಮಾಡಲು ನಲ್ಲನ ವಿಯೋಗದ ಹನಿಯ ನಡುವಯಸ್ಸಿನೋಳು
ಒಡಲಲ್ಲಿ ಕುರುವ್ಹಿಟ್ಟು,ತನ್ನ ಅಸ್ತಿತ್ವ ಮರೆಮಾಡಿ,ವಿಧವೆ ಪದವಿಯು
ಹಣೆಯಲ್ಲಿ ಬೊಟ್ಟಿಟ್ಟು,ಹೊಸ ವ್ಯಕ್ತಿತ್ವ ತರೆಯಲು ಬೇಕಿದೆ ಆಸರೆಯು

ಕಿಟಕಿಯ ಹೊರ ಮಳೆ ನಿಂತರೂ ಒಳಗೆ ಇನ್ನೂ ಸುರಿಯುತ್ತಿದೆ
ಹೊರಗಿನ ಹನಿ ಸೇರಿ ಕವನದಂಚಿನಲಿ ಸಿಹಿ ಮತ್ತು ಪೇರಿಸಿದೆ
ಒಳಗಿನ ಹನಿ ಹರಿದ ಸೇರಗಿನಂಚಿನಲಿ ಮಣಿಮುತ್ತು ಪೋಣಿಸಿದೆ

ಕಾಮತ್ ಕುಂಬ್ಳೆ

ಸಾಹಿತ್ಯ ಸ್ವಂತದ್ದು, ಚಿತ್ರ ಕದದ್ದು.
 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ಸುಮ ನಾಡಿಗ್ on

ವೆಂಕಟೇಶ್,
ಫೋಟೊಕ್ಕೆ ಸೂಕ್ತ ಕ್ರೆಡಿಟ್ಸ್ ಕೊಡಬಹುದೆ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kamath_kumble on

google ಕೃಪೆ :P :P

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಕಮ್ತಿಯವರೇ ಸುಂದರ ಅನಿಸಿಕೆ
ಅದು ಸಾಂತ್ವನ ಅಲ್ಲವೇ?
ಚಂದದ ಚಿತ್ರ,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kamath_kumble on

ಗೋಪಿನಾಥ್ ಸರ್ ಬದಲಾಯಿಸಿದ್ದೇನೆ. ಮೆಚ್ಚಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ನಂದೀಶ್ ಬಂಕೇನಹಳ್ಳಿ on

ಚಿತ್ರ ಕವನ ತುಂಬಾ ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kamath_kumble on

ನಂದೀಶ್ ಅವರೇ ಮೆಚ್ಚಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ಚಿತ್ರ ಸಹ ಸೊಗಸಾಗಿದೆ. ವ್ಯಕ್ತಿಯ ಮುಖ ಕಾಣದಿದ್ದರೂ ನಿರೀಕ್ಷೆಯ ಭಾವ ವ್ಯಕ್ತವಾಗುತ್ತದೆ. ಚಿತ್ರ ಮತ್ತು ಕವನಕ್ಕಾಗಿ ಅಭಿನಂದನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kamath_kumble on

ಮೆಚ್ಚಿ ಪ್ರತಿಕ್ರಿಯಿಸಿದಕ್ಕೆ ವಂದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ಕಾಮತರವರೆ,
ಸುಂದರ ಕವನ. ಇಷ್ಟವಾಯ್ತು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

+1

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kamath_kumble on

ಮೆಚ್ಚಿ ಪ್ರತಿಕ್ರಿಯಿಸಿದ ಚಿಕ್ಕು ಮತ್ತು ಭಾಗ್ವತ್ ರವರಿಗೆ ವಂದನೆಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by KAVITHA K S on

ಕಾಮತರವರೆ,
ಚಂದದ ಚಿತ್ರ ಮತ್ತು ಸುಂದರ ಕವನ. ಇಷ್ಟವಾಯ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kamath_kumble on

ಹಳೆಯ ಸಾಲುಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದ ಕವಿತಾ ಅವರೇ ವಂದನೆಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.