19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮಾತಿಗೆ ಬೇಕು ಮೌನದ ತೂಕ...!!

July 20, 2011 - 7:59pm
prasannakulkarni
 
ಆಗಸದಲ್ಲಿ ನಕ್ಷತ್ರ ಉದುರಿದ ಹಾಗೆ,
ಮಾತಿಲ್ಲದೆ ಮೌನದೊಳಗೆ ಅದ್ಹೇಗೆ ಹೇಳಿ ಬಿಡುತ್ತಿ ನೀನು..?
ಕಾಯುತ್ತಿರಬೇಕು ನಾನು ಲಕ್ಷ್ಯಗೊಟ್ಟು ಆ ಕ್ಷಣಕ್ಕೆ...
ಆ ಗಳಿಗೆ ಏನಾದರೂ ಕಣ್ಣುತಪ್ಪಿ ಹೋದರೇ,
ನಿನ್ನ ಆ ಮೌನದ ಮಾತು ಕೊನೆವರೆಗೂ ಕೇಳುವುದೇ ಇಲ್ಲ..!
ಮದುವೆಯ ಮ೦ಗಳವಾದ್ಯದವರಲ್ಲಿ ಅವನು,
ತನ್ನ ತುಟಿಗಳ ನಡುವೆ ಶಹನಾಯಿಯ ಬಾಯಿ ಕಚ್ಚಿ,
ಗಲ್ಲ ಉಬ್ಬಿಸಿ, ಕೆ೦ಪಾಗಿಸಿದ್ದಾನೆ ಕಣ್ಣ...
ಪಕ್ಕದಲ್ಲಿ ಮತ್ತೊಬ್ಬನು, ತನ್ನ ಬಾತ ಬೆರಳುಗಳನ್ನು
ಮೃದ೦ಗದ ಚರ್ಮದ ಮೇಲೆ ಹರಿದಾಡಿಸುವಾಗ
ಅವನ ಆ ಬೆರಳುಗಳು ಕಾಣುವುದೇ ಇಲ್ಲ...
ನಿನಗೆ ಗೊತ್ತೇ..? ನಿನ್ನ ಮೌನದ ನೆನಪಿನಲ್ಲಿ
ನನಗೆ ಈ ಮ೦ಗಳವಾದ್ಯ ಕೇಳುವುದೇ ಇಲ್ಲ..!
ಆದರೆ,
ಮದುವೆಯಾಗುತ್ತಿರುವದ೦ತೂ ದಿಟ..!
ರಾಯರು ಮತ್ತು ಪದುಮ ಹಸೆಮಣೆಯೇರಿದ್ದಾರೆ,
ಮಾವ ಅಕ್ಷತೆ ಹಿಡಿದು ನಿ೦ತಿದ್ದಾರೆ,
ರಾಯರ ನಾದಿನಿ ಹೂದಾನಿಯಲಿ ಪನ್ನೀರೆರಚುತ ಸ್ವಾಗತಿಸುತ್ತಿದ್ದಾಳೆ...
ಮತ್ತೆ, ಆ ಮೂಲೆಯಲ್ಲಿ, ಚೆನ್ನಯ್ಯ ಬಳೆಯೇರಿಸುತ್ತಿದ್ದಾನೆ ಮುತ್ತೈದೆಯರ ಕೈಗೆ...
ನಿನಗೆ ಗೊತ್ತೇ..? ನಿನ್ನ ಮೌನದ ನೆನಪಿನಲ್ಲಿ
ನನಗೆ ಈ ಸಡಗರದ ಸದ್ದು ಕೇಳುವುದೇ ಇಲ್ಲ..!
ನಾನು ಅ೦ದು,
ಮಾತು ಬೆಳ್ಳಿ ಮೌನ ಬ೦ಗಾರ ಅ೦ದದ್ದು,
ಮಾತಿಗೆ ಮೌನದ ತೂಕ ಬರಲೆ೦ದು...
ಮೌನವ ದಾಟದ ಸಾಗರವಾಗಿಸಲೆ೦ದಲ್ಲ..!!
 

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by partha1059 on

ಪ್ರಸನ್ನ
ಭಾವಪೂರ್ಣ ಕವನ
ನಿಜ ಮಾತಿಗೆ ಮೌನದ(ಬಂಗಾರದ) ಬೆಲೆ ಬಂದಾಗಲೆ , ನಮ್ಮ ತೂಕವು ಸ್ವಲ್ಪ ಜಾಸ್ತಿ,
ಮಾತು ಜಾಸ್ತಿಯಾಗಿ ಬಂಗಾರದ ಬೆಲೆ ಕೆಳಗೆ ಬಿದ್ದಲ್ಲಿ, ಹಗುರವೆ ನಾವು ಎಲ್ಲರ ಕಣ್ಣಲ್ಲಿ
-ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannakulkarni on

ಹೌದು.. ಪಾರ್ಥಸಾರಥಿಯವರೇ..
ಮಾತು ಕನಸು ಕಟ್ಟಬಲ್ಲದು, ಮನಸ್ಸು ಮುರಿಯಲೂ ಬಲ್ಲದು..!!
ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.