September 17, 2011 - 3:14pm
ಮಾತುಗಳು ಹೇಗಿರಬೇಕು ಅನ್ನುವಿರಾ?
ಬರಿಯ ಮಾತುಗಳಿಗಿಂತ ಆ ಮಾತುಗಳ
ಹಿಂದೆ ಅಡಗಿರುವ ಭಾವನೆಗಳು ಮುಖ್ಯ
ಆ ಮಾತುಗಳ ಹಿಂದಿರುವ ಭಾವನೆಗಳ
ಜೊತೆಗೆ ಮಾತುಗಳಾಶಯವೂ ಮುಖ್ಯ
ಬರಿಯ ಮಾತು ಮುದನೀಡದು ಮನಕೆ
ಸ್ವೀಕೃತವಾಗುವಂತಿರಬೇಕು ಹೃದಯಕೆ!
ಕೆಲವರ ಮಾತುಗಳು ನಿಜದಿ ನಮಗೇನೂ
ನಮ್ಮಲ್ಲಿ ಏನೇನನ್ನೂ ಮಾಡುವುದೇ ಇಲ್ಲ
ಕೆಲವರ ಮಾತುಗಳಂತೂ ನಮ್ಮನ್ನೇನು
ಮಾಡುತ್ತವೆ ಎಂದು ಹೇಳಲಾಗುವುದಿಲ್ಲ
ಕೆಲವರ ಸವಿ ಮಾತುಗಳ ಆಲಿಕೆಯಷ್ಟೇ
ನೀಡುವುದು ಒಮ್ಮೊಮ್ಮೆ ನಮಗೆ ಕರ್ಣಾನಂದ
ಇನ್ನು ಕೆಲವರ ಮಾತುಗಳ ತಾಳ್ಮೆಯಲಿ
ಆಲಿಸಿದರೆ ನಮ್ಮ ಮನಕ್ಕೆ ಮಹದಾನಂದ
ನಮ್ಮ ಮಾತುಗಳು ಕೇಳುಗರಲ್ಲಿ ಇನ್ನೂ
ಕೇಳುವ ಬಯಕೆಯ ಹುಟ್ಟಿಸುವಂತಿರಬೇಕು
ಕೇಳುಗನ ಭಾವವೂ ಮಾತಾಡುವವನನ್ನು
ಇನ್ನೂ ಜಾಸ್ತಿ ಮಾತನಾಡಿಸುವಂತಿರಬೇಕು
*****
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಮಾತುಗಳು ಹೀಗೇ ಇರಬೇಕು.
-ಗಣೇಶ.
ತಪ್ಪೊಪ್ಪು:
ಕೆಲವರ ಸವಿ ಮಾತುಗಳ ಆಲಿಕೆಯಷ್ಟೇ
ನೀಡುವುದೊಮ್ಮೆಮ್ಮೆ ನಮಗೆ ಕರ್ಣಾನಂದ
-ನೀಡುವುದೊಮ್ಮೊಮ್ಮೆ ನಮಗೆ ಕರ್ಣಾನಂದ
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಧನ್ಯವಾದಗಳು
ತಪ್ಪನ್ನು ಒಪ್ಪಿಕೊಂಡು ಸರಿಪಡಿಸಿದ್ದೇನೆ.
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಆಸುಹೆಗ್ಡೆಯವರೆ,
ರವಿವಾರ ತಮ್ಮ ರಜಾದಿನವೆಮ್ದು ನಾನೇ ತಪ್ಪೊಪ್ಪು ಬರೆದೆ :)
ಗಣೇಶ
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಸಂತೋಷ!
ಒಮ್ಮೊಮ್ಮೆ ಒಮ್ಮೆ ಎಮ್ಮೆ ಆಗಿತ್ತು!
:)
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಮಾತೇ ಮುತ್ತು, ಮಾತೇ ಮೃತ್ಯು! ಮಾತಿನಿ೦ದಲೇ ಎಲ್ಲವೂ!
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಧನ್ಯವಾದಗಳು ಮಂಜುನಾಥ್!
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಒಳ್ಳೆಯ ಮಾತುಗಳು ಸುರೇಶ್. ಮಾತನಾಡುವವರಿಗಿಂತ ಮಾತು ಕೇಳುವವರನ್ನು ಜನ ಇಷ್ಟಪಡುತ್ತಾರೆ! ಆದ್ದರಿಂದ ನೀವಂದಂತೆ [ನಮ್ಮ ಮಾತುಗಳು ಕೇಳುಗರಲ್ಲಿ ಇನ್ನೂ
ಕೇಳುವ ಬಯಕೆಯ ಹುಟ್ಟಿಸುವಂತಿರಬೇಕು].
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಧನ್ಯವಾದಗಳು ನಾಗರಾಜ್!
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಮಾತಿನಿಂದಲೆ ಇಹವು ಮಾತಿನಿಂದಲೆ ಪರವು.
ಮಾತಿನಿಂದಲೆ ಸಕಲ ಸಂಪದವು.
ಮಾತಾಡಲರಿಯದಧಮಂಗೆ ಮಾಣಿಕವುತೂತು ಬಿದ್ದಂತೆ ಸರ್ವಜ್ಞ ||
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಮಾತಿನಿಂದಲೆ ಇಹವು ಮಾತಿನಿಂದಲೆ ಪರವು.
ಮಾತಿನಿಂದಲೆ ಸಕಲ ಸಂಪದವು.
ಮಾತಾಡಲರಿಯದಧಮಂಗೆ ಮಾಣಿಕವುತೂತು ಬಿದ್ದಂತೆ ಸರ್ವಜ್ಞ ||
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಮಾತಿನಿಂದಲೆ ಇಹವು ಮಾತಿನಿಂದಲೆ ಪರವು.
ಮಾತಿನಿಂದಲೆ ಸಕಲ ಸಂಪದವು.
ಮಾತಾಡಲರಿಯದಧಮಂಗೆ ಮಾಣಿಕವುತೂತು ಬಿದ್ದಂತೆ ಸರ್ವಜ್ಞ ||
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಹರಿನಾರಾಯಣ,
ಸರ್ವಜ್ಞನ ವಚನಗಳನ್ನು ಹಂಚಿಕೊಂಡುದಕ್ಕಾಗಿ ಧನ್ಯವಾದಗಳು!
ತಮ್ಮ ಪ್ರತಿಕ್ರಿಯೆಯನ್ನೂ ತಿಳಿಸಿದ್ದರೆ ಇನ್ನೂ ಸಂತಸವಾಗುತ್ತಿತ್ತು!
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಮಾತುಗಳು ಹೇಗಿರಬೇಕು ಅನ್ನುವಿರಾ?
....
...
ಮಾತುಗಳು ಶಿವ ಮೆಚ್ಚಿ ಅಹುದು ಅಹುದು
ಅನ್ನುವ0ತಿರಬೇಕು ..
ಪಾರ್ಥಸಾರಥಿ
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಪಾರ್ಥಸಾರಥಿ,
ನಿಜ, ನಮ್ಮ ಮಾತುಗಳು ನಮ್ಮೊಳಗಿರುವ ಶಿವನಿಗೆ ಮೆಚ್ಚುಗೆಯಾಗುವಂತಿರಬೇಕು!
ಧನ್ಯವಾದಗಳು
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಬಹಳ ಸು0ದರ .ಕೊನೆಯ ಎರಡು ಚರಣಗಳು ನೇರ ಸ0ದೇಶ ನೀಡುತ್ತಿವೆ.
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಧನ್ಯವಾದಗಳು ರಘು!
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಶ್ರೀಯುತ ಆಸು ಹೆಗ್ಡೆಯವರಿಗೆ ವಂದನೆಗಳು.
ತಮ್ಮ ಕವನ ಓದಿ ಸಂತೋಷ ಪಟ್ಟವರಲ್ಲಿ ನಾನು ಸಹ ಒಬ್ಬ.
ಗಾದೆ ಮಾತು ಹೇಳುವಂತೆ " ಮಾತು ಬಲ್ಲವನಿಗೆ ಜಗಳವಿಲ್ಲ,ಊಟ ಬಲ್ಲವನಿಗೆ ರೋಗವಿಲ್ಲ."ಹಾಗೆಯೆ "ಮಾತು ಆಡಿದರೆ ಕಳೆಯಿತು,ಮುತ್ತು ಬಿದ್ದರೆ ಒಡೆಯಿತು" ಯೆಂಬ ನಾನ್ನುಡಿ ಕೇಳಿದ ನೆನಪು ನನಗೆ.ಅಂದ ಹಾಗೆ ಒಂದು ಸುಂದರ ಚಿತ್ರಗೀತೆಯ ಸಾಲು ಸಹ ಮನಸ್ಸಿನಲ್ಲೇ ಗುನುಗುಡುತ್ತಿದೆ....ಒಂದೇಮಾತು,ಒಂದೇಮನಸು,ಒಂದೇ ನೀತಿಬೇಕು ನಮ್ಮನಾಡಿನ ಮಕ್ಕಳೆಲ್ಲರು ಒಂದುಗುಡಬೇಕು.ಇದು ಸಾದ್ಯವಾದೀತೆ?
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ತಮಗೂ ವಂದನೆಗಳು.
ತಮಗಾದ ಸಂತೋಷ ನನ್ನಲ್ಲಿ ಧನ್ಯತಾಭಾವ ಮೂಡಿಸಿದೆ.
ತಾವು ಹಂಚಿಕೊಂಡಿರುವ ಗಾದೆಮಾತುಗಳಿಗೆ ನನ್ನ ಸಹಮತ ಇದೆ.
ತಮ್ಮ ಮನಸ್ಸಿನಲ್ಲಿ ಗುನುಗುಟ್ಟಿದ ಹಾಡಿನ ಧಾಟಿ ನೆನಪಾಗುತ್ತಿಲ್ಲ.
ಧನ್ಯವಾದಗಳು.
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಮಾತುಗಳು ಬೇರೆಯವರ ಮನಸನ್ನು ನೋಯಿಸದಂತಿರಬೇಕು, ಹಾಗೆ ಮಾತನ್ನು ಕಮ್ಮಿ ಮಾಡಿದಷ್ಟು ಒಳ್ಳೆಯದು ಎನ್ನುವುದು ನನ್ನ ಅನಿಸಿಕೆ, ಮಾತಿನ ಬಗ್ಗೆ ಬರದಿರುವ ನಿಮ್ಮ ಕವನ ಮನಮುಟ್ಟುವಂತಿದೆ.
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಹೂಂ... ಅಂತೀನಿ!
ಧನ್ಯವಾದಗಳು!
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಸುರೇಶ್
ನಿಮ್ಮ ಮಾತಿಗು
ನಿಮ್ಮ ಮೌನಕ್ಕು
ವೆತ್ಯಾಸ ತಿಳಿಸುವಿರ
ಪಾರ್ಥಸಾರಥಿ
< ಸಾರ್ ಎನ್ನುವುದು ನಿಮಗೆ ಇಷ್ಟವಿಲ್ಲ ಏನು ಅನ್ನದೆ ಹೆಸರು ಹೇಳಲು ನಮಗೆ ಸಮಾದಾನವಿಲ್ಲ >
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಮಾತು ಮಾಣಿಕ್ಯ ಮೌನ ಬಂಗಾರ !
ಪಾರ್ಥಸಾರಥಿಯವರೆ! ಇಷ್ಟೆ ವ್ಯತ್ಯಾಸ.
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಮಾತು ಮಾಣಿಕ್ಯ ಮೌನ ಬಂಗಾರ !
ಪಾರ್ಥಸಾರಥಿಯವರೆ! ಇಷ್ಟೆ ವ್ಯತ್ಯಾಸ.
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಮಾತು ಮಾಣಿಕ್ಯ ಮೌನ ಬಂಗಾರ !
ಪಾರ್ಥಸಾರಥಿಯವರೆ! ಇಷ್ಟೆ ವ್ಯತ್ಯಾಸ.
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
– ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್ |
ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ ||(ಭಗವದ್ಗೀತೆ 17.15)||
ಅನು ಅವರೆ, ತಮ್ಮ ಮಾತುಗಳು ಮೇಲಿನ ವಾಙ್ಮಯ ತಪಸ್ಸನ್ನು ಜ್ಞಾಪಿಸುವನ್ತಿದೆ. ಅನುದ್ವೇಗಕರವಾದ ವಾಕ್ಯವು ಪ್ರಿಯವೂ ಹಿತ\ವೂ ಆಗಿರುವುದು ಬಹಳ ಕಷ್ಟಸಾಧ್ಯವಾದುದರೆಂದ ತಪಸ್ಸೆಂದು ಕರೆಯಲ್ಪಟ್ಟಿದೆ.
ಧನ್ಯವಾದಗಳು ತಮ್ಮ ಅನಿಸುವಿಕೆಗೆಯನ್ನು ಪದ್ಯರೂಪದಲ್ಲಿ ಪ್ರಸ್ತುತಪಡಿಸಿದುದಕ್ಕೆ.
ಹಿತವೂ ಮನೋಹಾರಿಯೂ ಆದ ಮಾತು ಬಹಳ ದುರ್ಲಭವೆಂದು ಬಲ್ಲವರ ಮಾತು.
ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ ||೬೪||
ಅಪ್ರಿಯವಾಗಿಯುಂ ಹಿತವಂ ನುಡಿದವವನುಂ ಕೇಳಬಲ್ಲವನುಂ ದುರ್ಲಭಂ|
(ಹಿತೋಪದೇಶ ಕನ್ನಡ ಅನುವಾದ ಸಹಿತ - ಮೂಲ ವಾಲ್ಮೀಕಿರಾಮಾಯಣ 3-37-2).
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ವ್ಯತ್ಯಾಸ ಬಹಳ ಸೂಕ್ಷ್ಮ.
ಮಾತು ನಮ್ಮ ಕಿವಿಗಳ ಮೂಲಕ ಮನವನ್ನು ತಟ್ಟುತ್ತದೆ.
ಮೌನ ನಮ್ಮ ಮನದ ಮೂಲಕ ಹೃದಯವನ್ನು ತಟ್ಟುತ್ತದೆ!
ಮೌನವೂ ಚೆನ್ನ, ಆದರೆ ಅದು ಮಾತಿನ ನಡುವೆ ಇದ್ದರೆ ಚಿನ್ನಕ್ಕಿಂತ ಚೆನ್ನ!
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
< ಸಾರ್ ಎನ್ನುವುದು ನಿಮಗೆ ಇಷ್ಟವಿಲ್ಲ ಏನು ಅನ್ನದೆ ಹೆಸರು ಹೇಳಲು ನಮಗೆ ಸಮಾದಾನವಿಲ್ಲ >
ಮೌನ!
ಉ: ಮಾತುಗಳು ಹೇಗಿರಬೇಕು ಅನ್ನುವಿರಾ?
ಹೆಗ್ಡೆ ಸರ್ ಬರವಣಿಗಿ ಭಾಳ ಚ0ದ ಐತ್ರಿ ಮಾತು ಎ0ಬ ಮಾಣಿಕ್ಯದ ಬಗ್ಗೆ ವರ್ಣನೆ ಇಷ್ಟಾ ಆತ್ರಿ. : )