' ಮಿ.ಭಾರತಗೆ ‘ದಾದಾ ಸಾಹೇಬ್ ಫಾಲ್ಕೆ’’'

' ಮಿ.ಭಾರತಗೆ ‘ದಾದಾ ಸಾಹೇಬ್ ಫಾಲ್ಕೆ’’'

ಚಿತ್ರ

 
                                                              
 
     ಹಿಂದಿ ಚಲನಚಿತ್ರರಂಗದ ಹಿಉರಿಯ ನಟ ಮನೋಜ್ ಕುಮಾರಗೆ 47 ನೇ ‘ದಾದಾ ಸಾಹೇಬ ಪಾಲ್ಕೆ’ ಪ್ರಶಸ್ತಿಯನ್ನು ಕೊಡ ಮಾಡಲಾಗಿದೆ. ಸ್ವರ್ಣ ಕಮಲ ಫಲಕ, ಹತ್ತು ಲಕ್ಷ ರೂಪಾಯಿಗಳ ನಗದು ಮೊತ್ತ ಮತ್ತು ಒಂದು ಶಾಲು ಹೊದಿಸಿ ಗೌರವಿಸಲಾಗುತ್ತದೆ. ಭಾರತೀಯ ಚಿತ್ರರಂಗದ ಎಲ್ಲ ಹಿರಿಯ ಸಾಧಕರಿಗೆ ಗೌರವ ಸೂಚಕವಾಗಿ ಈ ರೀತಿಯಾಗಿ ಗೌರವಿಸಲಾಗುತ್ತದೆ. 1957 ರಿಂದ 1995 ರ ವರೆಗೆ ಈತ ಹಿಂದಿ ಚಲನಚಿತ್ರ ರಂಗದಲ್ಲಿ ಕ್ರಿಯಾಶೀಲನಾಗಿದ್ದ. ಆತನ ಅವಿಸ್ಮರಣೀಯ ಸಾಧನೆಯನ್ನು ಗೌರವಿಸಿ ಈ ಪ್ರಶಸ್ತಿ ನೀಡಲಾಗಿದೆ.
 
     ಈತನ ಮೂಲ ಹೆಸರು ಹರಿಕೃಷ್ಣಗಿರಿ ಗೋಸ್ವಾಮಿ, ಈತ ಸನ್ 1937 ನೇ ಇಸವಿ ಜುಲೈ ತಿಂಗಳ 24 ರಂದು ಆಗಿನ ಅವಿಭಾಜ್ಯ ಭಾರತದ ಅಬೋಟ್ಟಾಬಾದ್‍ನಲ್ಲಿ ಜನಿಸಿದ. ಅದು ಈಗ ಪಾಕಿಸ್ತಾನದ ಭಾಗವಾಗಿದೆ. ಸತತ 38 ವರ್ಷಗಳ ಕಾಲ ಏಳು ಬೀಳುಗಳ ಮಧ್ಯೆ ಸಾಗಿ ಬಂದ ಆತನ ನಟನಾ ಬದುಕು ಒಂದು ಅಪೂರ್ವ ದಾಖಲಾರ್ಹವಾದುದು. 1947 ರಲ್ಲಿ ಭಾರತ ದೇಶ ವಿಭಜನೆಯಾದಾಗ ಅವರ ಕುಟುಂಬ ದೆಹಲಿಗೆ ವಲಸೆ ಬಂತು. ಆ ಕುಟುಂಬ ದೆಹಲಿಯ ವಿಜಸಯ ನಗರದ ಕಿಂಗ್ಸ್ ವೇ ನಿರಾಶ್ರಿತ ಶಿಬಿರದಲ್ಲಿ ಆಶ್ರಯ ಪಡೆಯಿತು, ನಂತರದಲ್ಲಿ ಹೊಸ ದೆಹಲಿಯ ಹಳೆಯ ರಾಜೇಂದ್ರ ನಗರದ ಪ್ರದೇಶಕ್ಕೆ ಸ್ಥಳಾಂತರಗೊಂಡಿತು. ಮನೋಜ ದೆಹಲಿ ವಿಶ್ವ ವಿದ್ಯಾಲಯದ ಹಿಂದ್ ಕಾಲೇಜ್‍ನಿಂದ ಪದವಿ ಪಡೆದ, ನಂತರದಲ್ಲಿ ಹಿಂದಿ ಚಲನಚಿತ್ರರಂಗದಲ್ಲಿ ತನ್ನ ಬದುಕು ಕಂಡು ಕೊಳ್ಳಲು ನಿರ್ಧರಿಸಿದ. ಈತ ಮುಂದೆ ಹರಿಯಾಣಾ ಮೂಲದ ಸಿರ್ಸಾ ಜಿಲ್ಲೆಯ ಜೋಧಕನ್ ಮೂಲದ ಶಶಿ ಎನ್ನುವವರನ್ನು ಮದುವೆಯಾದ. ಇವರ ದಾಂಪತ್ಯಕ್ಕೆ ವಿಶಾಲ್ ಮತ್ತು ಕುಣಾಲ್ ಎಂಬ ಎರಡು ಗಂಡು ಮಕ್ಕಳಿದ್ದು. ಮನೋಜ್‍ಗೆ ರಾಜೀವ ಗೋಸ್ವಾಮಿ ಎಂಬ ತಮ್ಮನೂ ಇದ್ದ. ಮನೊಜ್ ತನ್ನ ತಮ್ಮ ರಾಜೀವ ಮತ್ತು ಮಗ ಕುಣಾಲ್‍ರನ್ನು ನಟರಾಗಿ ಮತ್ತು ವಿಶಾಲ್‍ನನ್ನು ಗಾಯಕನಾಗಿ ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ ಆದರೆ ಇವರು ಯಶಸ್ಸು ಪಡೆಯಲಿಲ್ಲ. 
 
     ಮನೋಜ ಕುಮಾರ ತನ್ನ ತಾರುಣ್ಯದ ದಿನಗಳಲ್ಲಿ ದಿಲೀಪ ಕುಮಾರ, ಅಶೋಕ ಕುಮಾರ ಮತ್ತು ಆ ಕಾಲದ ಖ್ಯಾತ ನಟಿ ಕಾಮಿನಿ ಕೌಶಲ್ಯರ ಅಭಿಮಾನಿಯಾಗಿದ್ದ. 1949 ರಲ್ಲಿ ತೆರೆ ಕಂಡ ದಿಲೀಪ್ ಅಭಿನಯದ ‘ಶಬನಮ್’ ಚಿತ್ರದ ಪಾತ್ರದಿಂದ ಬಹಳ ಪ್ರಭಾವಿತನಾಗಿದ್ದ.. 1957 ರಲ್ಲಿ ‘ಫ್ಯಾಶನ್’ ಚಿತ್ರದಲ್ಲಿ ಸಣ್ಣ ಪಾತ್ರವೊಂದರ ಮೂಲಕ ತೆರೆಗೆ ಬಂದ, ಆದರೆ 1960 ರಲ್ಲಿ ತಯಾರಾದ ‘ಕಾಂಚ್ ಕಿ ಗುಡಿಯಾಂ’ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡು ಗಮನ ಸೆಳೆದ. ಇದರಲ್ಲಿ ಈತನಿಗೆ ನಾಯಕಿಯಾಗಿ ನಟಿಸಿದವಳು ಸಯೀದಾ ಖಾನ್. ಮುಂದೆ ಈತ ‘ಪಿಯಾ ಮಿಲನ್ ಕಿ ಆಸ್’ ಹಾಗೂ ‘ರೇಷ್ಮೆ ರುಮಾಲ್’ ಚಿತ್ರಗಳಲ್ಲಿ ನಟಿಸಿದ. 1962 ರಲ್ಲಿ ಆಗಿನ ಕಾಲದ ಖ್ಯಾತ ನಿರ್ದೇಶಕ ವಿಜಯ ಭಟ್ ನಿರ್ದೇಶನದಲ್ಲಿ ತೆರೆಗೆ ಬಂದ ‘ಹರಿಯಾಲಿ ಔರ್ ರಾಸ್ತಾ’ ಚಿತ್ರದಲ್ಲಿ ನಟಿಸಿ ಗಮನಾರ್ಹ ನಾಯಕ ನಟ ಎನಿಸಿದ. ಇದು ಈತನಿಗೆ ಹೆಸರು ತಂದು ಕೊಟ್ಟುದರ ಜೊತೆಗೆ ಆರ್ಥಿಕವಾಗಿ ಯಶಸ್ಸÀು ಕಂಡ ಚಿತ್ರ ಇದಾಗಿತ್ತು..  ಈ ಚಿತ್ರದಲ್ಲಿ ಈತನಿಗೆ ನಾಯಕಿಯಾಗಿ ಖ್ಯಾತ ತಾರೆ ಮಾಲಾ ಸಿನ್ಹಾ ನಟಿಸಿದ್ದರೆ ಇನ್ನೊಂದು ಸಮಾನಾಂತರ ಪಾತ್ರದಲ್ಲಿ ಮನೋಜನ ಸಿರಿವಂತ ಪತ್ನಿಯಾಗಿ ಶಶಿಕಲಾ ಅಭಿನಯಿಸಿದ್ದಳು.  ಅತ್ಯುತ್ತಮ ಕಥಾನಕ ಸಿಮ್ಲಾದ ಸುತÀ್ತ ಮುತ್ತ ಹಿಮಾಲಯದ ಗಿರಿ ಶಿಖರಗಳ ಹಿನ್ನೆಲೆಯಲ್ಲಿ ಚಿತ್ರೀಕರಣ, ಗೀತ ರಚನಕಾರರಾದ ಶೈಲೇಂದ್ರ ಮತ್ತು ಹಸರತ್ ಜೈಪುರಿಯವರ ಗೀತೆಗಳು ಶಂಕರ ಜೈಕಿಶನ್‍ರ ಮಧುರ ರಾಗ ಸಂಯೋಜನೆ ಲತಾ ಮತ್ತು ಮುಕೇಶರ ಕಂಠದಲ್ಲಿ ಸುಶ್ರಾವ್ಯವಾಗಿ ಮೂಡಿ ಬಂದ ಗೀತೆಗಳು ಈ ಚಿತ್ರವನ್ನು ಕಳೆಗಟ್ಟಿದ್ದವು. ಈ ಚಿತ್ರದ ಲತಾಳ ಕಂಠದಲ್ಲಿ ಮೂಡಿ ಬಂದ 
 
                                 ‘ಹರಿಯಾಲಿ ಔರ್ ಏ ರಾಸತಾ
                                 ಇನ ರಾಹೋಂ ಮೆ ತೆರಾ ಮೇರಾ 
                                 ಜೀವನ ಭರ್ ಕಾ ಸಾಥ ಹೈ’ 
 
     ಇಂದಿಗೂ ಒಂದು ಮಧುರ ಪ್ರೇಮ ಗೀತೆ ಇದರ ಅರ್ಥಪೂರ್ಣತೆ ಭಾವಾಭಿವ್ಯಕ್ತಿಯನ್ನು ಮಾಲಾ ಸಿನ್ಹಾ ತೆರೆಯ ಮೇಲೆ ಸೊಗಸಾಗಿ ಪಡಿ ಮೂಡಿಸಿದ್ದಾಳೆ.  ಇಲ್ಲಿಂದ ಮನೋಜ್ ಹಿಂದಿರುಗಿ ನೋಡಲಿಲ್ಲ. ಆತನ ಯಶಸ್ಸು ನಾಗಾಲೋಟದಲ್ಲಿ ಸಾಗಿತು.   
 
     ಮುಂದೆ 1964 ರಲ್ಲಿ ಮನೋಜ್ ಸಾಧನಾ ಅಭಿನಯದ ‘ವೋ ಕೌನ್ ಥೀ’ ಚಿತ್ರ ತೆರೆಗೆ ಬಂತು. ರಹಸ್ಯಮಯ ಕಥಾ ನಿರೂಪಣೆ, ರಾಜ್ ಖೋಸ್ಲಾರ ಸಮರ್ಥ ನಿರ್ದೆಶನ, ಮನೋಜ್ ಮತ್ತು ದ್ವಿಪಾತ್ರಗಳಲ್ಲಿ ಸಾಧನಾಳ ಮನಸೂರೆಗೊಳುವ ಅಭಿನಯ. ಗಝಲ್ ಕಿಂಗ್ ಮದನ ಮೋಹನರ ಇಂಪಾದ ಸಂಗೀತ ನಿರ್ದೇಶನದಲ್ಲಿ ಲತಾ ಮತ್ತು ಆಶಾರ ಹಾಡುಗಳು ಚಿತ್ರದ ಹೈ ಲೈಟ್ ಆಗಿದ್ದವು. ಲತಾ ಹಾಡಿದ ಆಗಾಗ ಪುನರಾವರ್ತನೆ ಗೊಳುವ ‘ನೈನಾ ಬರಸೆ ರಿಮ್ ಝಿಮ್ ರಿಂ ಝಿಮ್’ ಗೀತೆ ಮತ್ತು ಆಶಾ ಹಾಡಿದ ‘ಶೋಖ್ ನಜರ್ ಕಿ ಬಿಜಲಿಯಾಂ’ ಗೀತೆಗಳು ಸೂಪರ್ ಹಿಟ್ ಗೀತೆಗಳಾಗಿದ್ದವು. 1965 ರಲ್ಲಿ ತೆರೆಗೆ ಬಂದ ಎನ್.ಸಿ.ಸಿಪ್ಪಿ ತಯಾರಿಸಿದ ‘ಗುಮ್‍ನಾಮ್’ ಒಂದು ಪತ್ತೆದಾರಿ ಗಮನಾರ್ಹ ಸಿನೆಮಾ ಆಗಿದ್ದು, ಒಂದೊಂದು ರಾತ್ರಿ ಒಬ್ಬೊಬ್ಬರಾಗಿ ಪಾತ್ರಧಾರಿ ಗಳಾದ ಧುಮಾಳ್, ಮುಖ್ರಿ, ಮದನ್‍ಪುರಿ, ಪ್ರಾಣ್, ಹೆಲೆನ್ ನಿಗೂಢವಾಗಿ ಸಾವನ್ನಪ್ಪುತ್ತಾ ಸಾಗುತ್ತಾರೆ. ಕೊಲೆಗಾರ ಯಾರು ? ಇದೇ ಕಥೆಯ ನಿಗೂ
ಢತೆ ಕೊನೆಯವರೆಗೂ ಸುಳಿವನ್ನು ಬಿಟ್ಟು ಕೊಡದ ನಿರ್ದೇಶನ, ಜೊತೆಗೆ ಇದರಲ್ಲಿ ಸಿನೆಮಾದ ಪ್ರಾರಂಭದಲ್ಲಿ ಎಲ್ಲ ಪಾತ್ರಧಾರಿಗಳನ್ನು ಮಿನಿ ವಿಮಾನದಲ್ಲಿ ಬಿಟ್ಟು ಹೋಗುವ ಮತ್ತು ಕೊನೆಗೆ ಉಳಿದವರನ್ನು ಕರೆದುಕೊಂಡು ಹೋಗುವ ದೃಶ್ವವನ್ನು ಚಿತ್ರಸಿದ್ದುದು ನಮ್ಮ ಬೆಳಗಾಂವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮತ್ತು ಕೆಲ ಕಾಡಿನ ದೃಶ್ಯಗಳನ್ನು ಸಹ ಖಾನಾಪುರದ ಸುತ್ತಮುತ್ತÀಲಿನ ಕಾಡಿನಲ್ಲಿ ಚಿತ್ರೀಕರಿಸಲಾಗಿತ್ತು ಎಂಬುದು ವಿಶೇಷ. ಈ ಚಿತ್ರದಲ್ಲಿ ಪುನರಾವರ್ತನೆಗೊಳ್ಳುವ  
 
                               ‘ಗುಮ್‍ನಾಮ್ ಹೈ ಕೋಯಿ ಬದನಾಮ್ ಹೈ ಕೋಯಿ 
                                ಕಿಸಿಕೋ ಖಬರ್ ಕೌನ್ ಹೈ ವೋ ಬದನಾಮ್ ಹೈ ಕೋಯಿ’ 
 
    ಎನ್ನುವ ಗೀತೆ ಹಾಗೂ ನಂದಾ ಮತ್ತು ಹೆಲೆನ್‍ರ ಮೇಲೆ ಚಿತ್ರೀ ಕರಿಸಿದ  ‘ನಾ ನಾ ಕರ್ ಕೆ ಪ್ಯಾರ್ ತುಮ್ಹೀಸೆ ಕರ್ ಬೈಠೆ’ ಹಾಗೂ ಮೆಹಮ್ಮೂದ್ ಮೇಲೆ ಚಿತ್ರೀಕರಿಸಿದ 
 
                                 ‘ಖಯಾಲೋ ಮೆ ಹಮಾರೆ ಕಾಲೆ ಸೆ ಡರ್ ಗಯಾ ಕ್ಯಾ 
                                  ಹಮ್ ಕಾಲೆ ಹೈ ತೋ ಕ್ಯಾ ಹುವಾ ದಿಲ್‍ವಾಲೆ ಹೈ 
                                  ಹಮ್ ತೆರೆ ತೆರೆ ತೆರೆ ತೆರೆ ಚಾಹನೆವಾಲೆ ಹೈ   
     
 
     ಅಲ್ಲದೆ ಮನೋಜ ಮತ್ತು ನಂದಾ ಮೇಲೆ ಚಿತ್ರೀಕರಿಸಿದ ಒಂದು ರೊಮ್ಯಾಂಟಿಕ್ ಗೀತೆ ಬಹಳ ಜನಪ್ರಿಯತೆ ಪಡೆದಿದುದಕ್ಕೆ ಅದೂ ಅಷ್ಟೆ ರೋಚಕವಾಗಿ ಮೂಡಿ ಬಂದಿದ್ದ ರಫಿ ಮತ್ತು ಶಾರದಾ ಹಾಡಿದ್ದ ಈ ಕೆಳಗಿನ ಮಾದಕ ಗೀತೆ.
 
                                   ‘ಜಾನೆ ಚಮನ್ ಶೋಲಾ ಬದನ್ 
                                    ಆ ಮೇಲೆ ಪೆಹಲೋ ಮೆ ಆ’
 
     ಎನ್ನುವ ಗೀತೆಗಳು, ಮನೋಜ್ ನಂದಾ ಮತ್ತು ಇತರ ಪಾತ್ರಧಾರಿಗಳ ಸತ್ವಪೂರ್ಣ ಅಭಿನಯ ಚಿತ್ರದ ಯಶಸ್ಸಿಗೆ ಸಹಕಾರಿಯಾಗಿದ್ದವು. ನಂತರದಲ್ಲಿ ಮತ್ತದೆ ರಾಜ್ ಖೋಸ್ಲಾ ನಿರ್ದೇಶನದಲ್ಲಿ ‘ದೋ ಬದನ್’ ಚಿತ್ರ ತೆರೆಗೆ ಬಂತು. ಪ್ರಮುಖ ಪಾತ್ರಗಳಲ್ಲಿ ಮನೋಜ ಕುಮಾರ ಆಶಾ ಪಾರೇಖ ಮತ್ತು ಪ್ರಾಣ ನಟಿಸಿದ್ದರೆ ಪೂರಕ ಪಾತ್ರಗಳಲ್ಲಿ ಪ್ರಾಣ, ಮನ ಮೋಹನ ಕೃಷ್ಣ ಮತ್ತು ಸಿಮಿ ಗರೆವಾಲ್ ಮುಂತಾದವರು ನಟಿಸಿದ್ದರು ಇದೊಂದು ದುರಂತ ಪ್ರೇಮ ಕಥೆಯಾಗಿದ್ದು ನಾಯಕ ನಾಯಕಿ ಇಬ್ಬರೂ ಮರಣ ಹೊಂದುವ ಕಥಾನಕ ಹೊಂದಿದ್ದು ಸತ್ವಪೂರ್ಣ ಕಥಾನಕ ನಿರ್ದೇಶನ ರಫಿ ಮತ್ತು ಆಶಾರ ಕಂಠಸಿರಿಯಲ್ಲಿ ಮೂಡಿ ಬಂದ  ಶಕೀಲ್ ಬದಾಯೂನಿ ಗೀತೆಗಳು ರವಿಯ ಮನಸೂರೆಗೊಳುವ ಸಂಗೀತ ಸಂಯೋಜನೆ ಇದನ್ನೊಂದು ಅಮರ್ ಕಹಾನಿ ಎನ್ನುವಂತೆ ಮಾಡಿದವು. ಆಶಾ ಹಾಡಿದ್ದ ‘ ಜಬ್ ಚಲಿ ಠಂಡೀ ಹವಾ ಜಬ್ ಉಠೀ ಕಾಲೀ ಘಟಾ  ಮುಝಕೋ ಸಮಝನ ಆಯೆ ತುಮ್ ಯಾದ ಆಯೆ’ ಮತ್ತು ‘ಲೋ ಆ ಗಯೀ ಉನ್ ಕಿ ಯಾದ್ ವೋ ನಹೀ ಆತಿ’ ಮತ್ತು ರಫಿ ಹಾಡಿದ ‘ಭರಿ ದುನಿಯಾ ಮೇ ಆಖಿರ್ ದಿಲ್ ಕೋ ಸಮಝಾನೆ  ಕಹಾಂ ಜಾಯೆ’ ಮತ್ತು ‘ನಸೀಬ್ ಮೆ ಜಿಸ್ ಕೊ ಲಿಖಾ ಥಾ ವೋ ತೆರಿ ಮೆಹಫಿಲ್ ಮೆ ಕಾಮ ಆಯಾ’  ಮುಂತಾದ ಗೀತೆಗಳು ಇಂದಿಗೂ ಅನುರಣನಗೊಳ್ಳುತ್ತಿವೆ. 
 
     1960 ರ ದಶಮಾನ ಮನೋಜನ ಯಶಸ್ಸಿನ ಕಾಲ ಪ್ರಣಯ ಚಿತ್ರಗಳಾದ ಹನಿಮೂನ್, ಅಪನಾ ಬನಾಕೆ ದೇಖೋ, ನಕಲಿ ನವಾಬ್, ಸಾಜನ್, ಸಾವನ್ ಕಿ ಘಟಾ ಮತ್ತು ಸಾಮಾಜಿಕ ಚಿತ್ರಗಳಾದ ಶಾದಿ, ಗೃಹಸ್ತಿ, ಅಪನೆ ಹುವೆ ಪರಾಯೆ, ಪೆಹಚಾನ್ ಮತ್ತು ಆದಮಿ ಪತ್ತೆದಾರಿ ಚಿತ್ರಗಳಾದ ವೋ ಕೌನ್ ಥೀ, ಗುಮ್‍ನಾಮ್ ಮತ್ತು ಅನಿತಾ ಚಿತ್ರಗಳು ಆತನಿಗೆ ಹೆಸರು ತಂದು ಕೊಟ್ಟವು. ಆದಮಿ ಚಿತ್ರದಲ್ಲಿ ಮನೋಜ್‍ಗೆ ತನ್ನ ಪ್ರೀತಿಯ ನಟ ದಿಲೀಪ ಕುಮಾರ ಜೊತೆಗೆ ಅಭಿನಯಿಸುವ ಅವಕಾಸ ದೊರೆಯಿತು. ನಾಯಕಿಯಾಗಿ ಖ್ಯಾತ ತಾರೆ ವಹೀದಾ ರೆಹಮಾನ್ ಇದ್ದಳು, ಎಲ್ಲರೂ ಸ್ಪರ್ದೆಗೆ ಬಿದ್ದವರಂತೆ ಅಭಿನಯಿಸಿದ್ದರು. ಮತ್ತೆ ಶಕೀಲ್ ಗೀತೆಗಳು ನೌಷಾದ ಅಲಿಯ ಮಧುರ ರಾಗ ಸಂಯೋಜನೆ ರಫಿ ಹಾಡಿದ್ದ ಆ ಮೂವರ ಮೇಲೆ ಚಿತ್ರಿಸಲ್ಪಟ್ಟಿದ್ದ 
 
                                 ‘ನ ಆದಮಿ ಕಾ ಕೋಯೀ ಭರೋಸಾ 
                                 ನ ದೋಸತೀ ಕಾದ ಕೋಯಿ ಠಿಕಾನಾ 
                                  ವಪಾ ಕೆ ಬದಲೆ ಬೇವಫಾಯೀ ಮಿಲೆ ‘ 
 
     ಎಂಬ ಗೀತೆ ಚಿತ್ರದ ಮಹತಿಯನ್ನು ಹೆಚ್ಚಿಸಿದ್ದವು.  ಈ ಅವಕಾಶÀ ದೊರೆತಿದ್ದಕ್ಕಾಗಿ ಮನೋಜ ಸಂಭ್ರಮಿಸಿದ್ದ. ರೋಚಕ ಮತ್ತು ನಿಗೂಢ ಪತ್ತೆದಾರಿ ಕಥಾನಕಗಳನ್ನು ಹೊಂದಿದ ಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯನಾಗಿದ್ದÀರೂ ಮುಂದೆ ಆತ ಪ್ರಸಿದ್ಧಿ ಪಡೆದದ್ದು ದೇಶಭಕ್ತಿ ಮತ್ತು ಭಾರತೀಯ ಸಂಸ್ಕತಿಯನ್ನು ಬಿಂಬಿಸುವ ಚಿತ್ರ ತಯಾರಿಸಿ ನಟಿಸುವ ಮೂಲಕ ಎನ್ನುವುದು ಸತ್ಯ.
 
     ಕ್ರಾಂತಿಕಾರಿ ಭಗತ್‍ಸಿಂಗ್ ಕುರಿತು ಆ ಮೊದಲೆ ಚಿತ್ರ ತಯಾರಾಗಿದ್ದರೂ ಮನೋಜ ಕುಮಾರ ಅಭಿನಯದಲ್ಲಿ 1965 ರಲ್ಲಿ ಮನೋಜ್ ಕುಮಾರ್ ಮತ್ತು ಪ್ರೇಮ್ ಛೋಪ್ರಾ ಮುಂತಾದವರ ತಾರಾಗಣದಲ್ಲಿ ಕಪ್ಪು ಬಿಳುಪಿನಲ್ಲಿ ತಯಾರಾಗಿದ್ದ ಚಿತ್ರ ತೆರೆ ಕಂಡು ಜನ ಮನ್ನಣೆ ಗದಳಿಸಿತು. ಆ ಕಾಲ ಘಟ್ಟದಲ್ಲಿ ಇಂಡೋ ಪಾಕ್ ಕದನ ನಡೆದುದರ ಜೊತೆಗೆ ನಮ್ಮ ದೇಶ ತೀವ್ರ ಆಹಾರ ಧಾನ್ಯಗಳ ಕೊರತೆಯನ್ನು ಅನುಭವಿಸುತ್ತಿತ್ತು. ಯುದ್ಧ ಮತ್ತು ಕೃಷಿ ಸಂಕಷ್ಟಕರ ಸ್ಥಿತಿಯಲ್ಲಿ ಇದ್ದಾಗ ಇವುಗಳ ಗಹನತೆ ಮತ್ತು ಸೂಕ್ಷ್ಮತೆಯನ್ನು ಗಮನಿಸಿದ್ದ ಆಗಿನ ಭಾರತದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷಣೆಯನ್ನು ಮೊಳಗಿಸಿದರು. ಇದನ್ನು ದೇಶದ ಜನತೆ ಒಕ್ಕೊರಲಿನಿಂದ ಸ್ವಾಗತಿಸಿತು. ಅವರ ಕರೆಗೆ ಓಗೊಟ್ಟು ಅನೇಕ ದಿನಗಳ ಕಾಲ ಪ್ರತಿ ಸೋಮವಾರದಂದು ಒಂದು ಹೊತ್ತು ಊಟ ಮಾಡಿ ಆಹಾರ ಧಾನ್ಯಗಳನ್ನು ಉಳಿಸುವ ಮಹತ್ತರ ಕಾರ್ಯಕ್ಕೆ ಕೈ ಜೋಡಿಸಿದ್ದರು. ರಾಜಕಾರಂಣಿಗಳ ಮಾತಿಗೂ ಕೃತಿಗೂ ಹೊಂದಾಣಿಕೆ ಇದ್ದ ಮತ್ತು ಜನ ಸಮೂಹ ರಾಷ್ಟ್ರೀಯ ನಾಯಕರನ್ನು ತಮ್ಮ ಐಕಾನ್‍ಗಳೆಂದು ಪರಿಗಣಿಸುತ್ತಿದ್ದ ಕಾಲ. ಇದೇ ಸಂಧರ್ಭದಲ್ಲಿ ‘ಜೈ ಜವಾನ್ ಜೈ ಕಿಸಾನ್’ ಘೋಷಣೆಯನ್ನಾಧರಿಸಿ ಮನೋಜ ಕುಮಾರ ತನ್ನದೆ ಚಿತ್ರ ತಯಾರಿಕಾ ಸಂಸ್ಥೆ ವಿಶಾಲ್ ಪ್ರೊಡಕ್ಶನ್ ಹುಟ್ಟು ಹಾಕಿ ‘ಉಪಕಾರ’ ಚಿತ್ರವನ್ನು ನಿರ್ಮಿಸಿ ನಟಿಸಿ ನಿರ್ದೇಶಿಸಿ 1966 ರಲ್ಲಿ ತೆರೆಗೆ ತಂದ. ಇದರಲ್ಲಿ ನಾಯಕ ಪಾತ್ರದ ಹೆಸರು ಭಾರತ ಅದೊಂದು ಗ್ರಾಮೀಣ ಕೃಷಿಕನ ಮಹತ್ವವನ್ನು ಬಿಂಬಿಸುವ ಪಾತ್ರ. ನಾಯಕಿಯಾಗಿ ಆಶಾ ಪಾರೇಖ ವೈದ್ಯೆಯ ಪಾತ್ರದಲ್ಲಿ ಅಭಿನಯಿಸಿದ್ದರೆ ಖಳರ ಪಾತ್ರದಲ್ಲಿ ಪ್ರೇಮ್ ಛೋಪ್ರಾ ಮದನ ಪುರಿ ಮತ್ತು ಕನ್ಹಯ್ಯಲಾಲ ನಟಿಸಿದ್ದರು. ನಾಯಕನ ತಾಯಿಯಾಗಿ ಮನೋಜನ ಇಷ್ಟದ ತಾರೆ ಕಾಮಿನಿ ಕೌಶಲ್ಯ ನಟಿಸಿದ್ದಳು. ಕುಂಟ ಯೋಧನ ಪಾತ್ರದಲ್ಲಿ ಖಳನಟ ಪ್ರಾಣ ನಟಿಸಿದ್ದ, ಇದೊಂದು ಚಾರಿತ್ರಿಕ ಪಾತ್ರವಾಗಿದ್ದು ಆತನ ನಟನಾ ಬದುಕಿಗೆ ಹೊಸ ತಿರುವನ್ನು ಇದು ನೀಡಿತು, ಮುಂದೆ ಆತ ಬಹಳಷ್ಟು ಬೇಡಿಕೆಯ ನಟನಾದ. ಪೂರಕ ಪಾತ್ರವೊಂದರಲ್ಲಿ ಕನ್ನಡದ ಖ್ಯಾತ ತಾರೆ ಭಾರತಿ ಸಹ ನಟಿಸಿದ್ದಳು. ಗುಲ್ಶನ್ ಬಾವ್ರಾ ಕೆಲವು ಗೀತೆಗಳನ್ನು ರಚಿಸಿದ್ದರು. ಕಲ್ಯಾಣಜಿ ಆನಂದಜಿ ಸಂಗೀತ ಸಂಯೋಜನೆ ಈ ಚಿತ್ರಕ್ಕಿತ್ತು. 
 
                                 ‘ಮೇರೆ ದೇಶಕೆ ಧರತಿ ಸೋನಾ ಉಗಲೆ
                                 ಉಗಲೆ ಹೀರೆ ಮೋತಿ ಮೇರೆ ದೇಶಕೆ ಧರತಿ’
                                            ಮತ್ತು 
                                 ‘ಕಸ್ಮೆ ವಾದೆ ಪ್ಯಾರ್ ವಫಾ ಕಿ ಬಾತೆ ಹ್ಞೈ
                                  ಬಾತೋಂಕಾ ಪ್ಯಾರ…’
 
     ಈ ಗೀತೆಗಳು ಬಹಳ ಜನಪ್ರಿಯತೆಯನ್ನು ಪಡೆದಿದ್ದವು ಮೊದಲನೆಯ ಗೀತೆಯನ್ನು ಮಹೇಂದ್ರ ಕಪೂರ ಹಾಡಿದ್ದು ಸುಗ್ಗಿಯ ಸಂಧರ್ಭz ಸನ್ನಿವೇಶದÀಲ್ಲಿ ಅಳವಡಿಸಿ ಕೊಂಡಿದ್ದರೆ ಎರಡನೆಯ ಗೀತೆಯನ್ನು ಪ್ರಾಣ ಮೇಲೆ ಚಿತ್ರೀಕರಿಸಲಾಗಿತ್ತು. ಈ ಚಿತ್ರದ ನಿರ್ದೇಶನಕ್ಕಾಗಿ ಮನೋಜ ಕುಮಾರನಿಗೆ ಆ ವರ್ಷ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಫಿಲಂ ಫೇರ್ ಕೊಟ್ಟು ಗೌರವಿಸಿತು. ಇದು ಮನೋಜನಿಗೆ ಬಹಳ ಹೆಸರು ತಂದು ಕೊಟ್ಟಿತು ಮುಂದೆ ತನ್ನ ಸ್ವಂತ ನಿರ್ಮಾಣದಲ್ಲಿ ವಿಶಿಷ್ಟತೆಯನ್ನು ಈತ ಕಂಡು ಕೊಂಡ. ಪ್ರೇಕ್ಷಕರು ಈತನ ನಿರ್ಮಾಣದ ಚಿತ್ರಗಳನ್ನು ಕುತೂಹಲದಿಂದ ಕಾಯುತ್ತಿದ್ದರು. ಈ ಚಿತ್ರ ಆತನ ನಿರ್ಮಾಣ ಸಂಸ್ಥೆಗೊಂದು ಘನತೆಯನ್ನು ತಂದು ಕೊಟ್ಟಿತು.   
 
     ಮುಂದೆ 1970 ರಲ್ಲಿ ಮನೋಜ ತನ್ನ ಲಾಂಛನದಡಿ ‘ಪೂರಬ್ ಔರ್ ಪಶ್ಚಿಮ್’ ಚಿತ್ರ ತಯಾರಿಸಿದ ಇದರಲ್ಲಿ ಮನೋಜ ನಾಯಕನಾಗಿ ಅಭಿನಯಿಸಿದರೆ ನಾಯಕಿಯಾಗಿ ಸಾಯಿರಾಬಾನು ಮತ್ತೂ ಪೂರಕ ಪಾತ್ರಗಳಲ್ಲಿ ವಿನೋದ ಖನ್ನಾ, ಭಾರತಿ ಮತ್ತು ಪ್ರೇಮ ಛೋಪ್ರಾ ಮುಂರತಾದವರು ಅಭಿನಯಿಸಿದ್ದರೆ ವಿಶೇಷ ಪೋಷಕ ಪಾತ್ರದಲ್ಲಿ ಮದನ ಪುರಿ ಅಭಿನಯಿಸಿದ್ದ.. ಈ ಚಿತ್ರದಲ್ಲಿ ಪೂರ್ವ ವಿಶೇಷವಾಗಿ ಭಾರತ ಮತ್ತು ಪಾಶ್ಚಾತ್ಯ ಸಂಸ್ಕತಿಗಳನ್ನು ಮುಖಾಮುಖಿಯಾಗಿಸಿ ನಮ್ಮ ಸಂಸ್ಕತಿ ಹೇಗೆ ಶ್ರೇಷ್ಟ ಜೊತೆಗೆ ಉದಾತ್ತವಾದದ್ದು ಎಂಬ ಅಂಶವನ್ನು ಮನ ಮಿಡಿವ  ರೀತಿಯಲ್ಲಿ ಮನೋಜ ಚಿತ್ರಿಸಿದ್ದ. ನಂತರ 1972 ರಲ್ಲಿ ‘ಶೋರ್’ ಎಂಬ ಭಿನ್ನ ಕಥಾನಕ ಹೊಂದಿದ ಗಂಭೀರ ಸ್ವರೂಪದ ಚಿತ್ರ ನಿರ್ಮಿಸಿದ. ನಾಯಕನಾಗಿ ಮನೋಜ ಅಭಿನಯಿಸಿದ್ದರೆ ನಾಯಕಿಯಾಗಿ ಖ್ಯಾತ ತಾರೆ ನಂದಾ ಅಭಿನಯಿಸಿದ್ದಳು. ಇದು ಹಣ ಗಣಿಕೆಯಲ್ಲಿ ಅಪಾರ ಯಶಸ್ಸು ಕಂಡ ಚಿತ್ರವಾಯಿತು. ಈ ಚಿತ್ರದ 
 
                                     ಏಕ ಪ್ಯಾರ್ ಕಾ ನಗ್ಹಮಾ ಹೈ 
                                     ಮೌಜೋಂ ಕಿ ರವಾನಿ ಹೈ  
                                     ಜಿಂದಗಿ ಔರ್ ಕುóಛ ನಹೀ ಹೈ     
                                     ತೆರಿ ಮೇರಿ ಕಹಾನಿ ಹೈ 
 
     ಎಂಬ ಗೀತೆ ಜೀವನ ಪ್ರೀತಿ ಕುರಿತ ಸೂಕ್ಷ್ಮ ಒಳ ನೊಟ ಹೋಂದಿದ್ದ ಗೀತೆ ಇದಾಗಿದ್ದು ಈ ಗೀತೆಯನ್ನು ಸಂತೋಷ ಆನಂದ ಬರೆದಿದ್ದರೆ ಲಕ್ಷ್ಮೀಕಾಂತ ಪ್ಯಾರೆಲಾಲ್ ರಾಗ ಸಂಯೋಜಿಸಿದ ಈ ಗೀತೆಯನ್ನು ಲತಾ ಮಂಗೇಶಕರ ಮತ್ತು ಮುಖೇಶ ಹಾಡಿದ್ದರು. ಆಗ ಇದು ಜನಪ್ರಿಯ ಗೀತೆ ಎನಿಸಿ ಕೊಂಡಿತ್ತು. ಮುಂದೆ 1970 ರ ದಶಕ ನಿರ್ವಿವಾದವಾಗಿ ಮನೋಜನದು. ಆತ ನಿರ್ಮಿಸಿ ನಿರ್ದೇಶಿಸಿ ನಟಿಸಿದ ಚಿತ್ರಗಳು ಯಶಸ್ಸು ಕಂಡವು. 1974 ರಲ್ಲಿ ಈತ ‘ರೋಟಿ ಕಪಡಾ ಔರ್ ಮಕಾನ’ ಚಿತ್ರ ನಿರ್ಮಿಸಿದ. ಇದರಲ್ಲಿ ಮನೋಜ ಜೊತೆಗೆ ಶಶಿ ಕಪೂರ, ಅಮಿತಾಬ ಬಚ್ಚನ್ ಮತ್ತು ಝೀನತ್ ಅಮಾನ್ ಮುಂತಾದವರು ನಟಿಸಿದ್ದರು. ಈ ಚಿತ್ರಕ್ಕೆ ಆಯ್ದುಕೊಂಡ ಭಿನ್ನ ಕಥಾವಸ್ತು ಮತ್ತು ಅದನ್ನು ತೆರೆಗೆ ಅಳವಡಿಸಿದ ರೀತಿಯಿಂದಾಗಿ ಜನಪ್ರಿಯತೆ ಪಡೆಯಿತು. ಈ ಚಿತ್ರದ ನಿರ್ದೇಶನಕ್ಕಾಗಿ ಮನೋಜ ಎರಡನೆಯ ಬಾರಿಗೆ ಫಿಲಂ ಫೇರ್ ಪ್ರಶಸ್ತಿ ಪಡೆದ. ಮುಂದೆ 1975 ರಲ್ಲಿ ಖ್ಯಾತ ನಟಿ ಹೇಮಾ ಮಾಲಿನಿ ಜೊತೆಗೆ ‘ಸನ್ಯಾಸಿ’ ಚಿತ್ರದಲ್ಲಿ ನಟಿಸಿದ ನಮ್ಮ ಧಾರ್ಮಿಕ ಪರಂಪರೆಯನ್ನು ಹಾಸ್ಯದ ಬನಿಯಲ್ಲಿ ಚಿತ್ರೀಕರಿಸಿದ ಚಿತ್ರ ಇದಾಗಿತ್ತು. ಈ ಚಿತ್ರಕ್ಕೆ ಶಂಕರ ಜೈಕಿಶನ್ ರಾಗ ಸಂಯೋಜನೆ ಮಾಡಿದ್ದ ‘ಚಲ್ ಸನ್ಯಾಸಿ ಮಂದಿರ್ ಮೆ’ ಎನ್ನುವ ಗೀತೆ ಜನಪ್ರಿಯವಾಗಿತ್ತು. ಇದೇ ತಾರಾಗಣದಲ್ಲಿ 1976 ರಲ್ಲಿ ‘ದಸ್ ನಂಬರಿ’ ಚಿತ್ರ ನಿರ್ಮಾಣಗೋಂಡಿತು ಅದು ಸಹ ಯಶಸ್ಸು ಪಡೆಯಿತು, 
 
     1980 ರ ದಶಕದ ಪ್ರಾರಂಭದ ವರ್ಷಗಳು ಮನೋಜ ಯಶಸ್ಸಿನ ಉತ್ತುಂಗದಲ್ಲಿದ್ದ ಆತ ಮುಟ್ಟ್ಟಿದ್ದೆಲ್ಲ ಚಿನ್ನವಾಗುತ್ತಿದ್ದಂತಹ ಕಾಲ. ‘ಕ್ರಾಂತಿ’  ಹತ್ತೊಂಭತ್ತನೆ ಶತಮಾನದ ಭಾರತ ಸ್ವಾತಂತ್ರ ಹೋರಾಟದ ಕಥೆಯನ್ನು ಹೊಂದಿದ್ದ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಮನೋಜನ ಪ್ರಿಯ ನಟ ದಿಲೀಪ ಕುಮಾರ ಅಭಿನಯಿಸಿದ್ದ ನಾಯಕಿಯಾಗಿ ಹೇಮಾ ಮಾಲಿನಿ ಇದ್ದಳು. ಇದು ಅದ್ಭುತ ಯಶಸ್ಸು ಕಂಡ ಚಿತ್ರವಾಯಿತು. ಮುಂದೆ ಮನೋಜನ ಇಳಿಕೆಯ ದಿನಗಳು ಪ್ರಾರಂಭವಾದವು, ಆತನ ಮಿದಾಸ್ ಸ್ಪರ್ಶ ಮಾಯವಾಗಿತ್ತು. ಆತನ ಅಭಿನಯದ ಎಲ್ಲ ಚಿತ್ರಗಳು ಅಪಯಶಸ್ಸು ಕಂಡವು. ಮುಂದೆ 1989 ರಲ್ಲಿ ‘ಕ್ಲರ್ಕ’ ಎಂಬ ಚಿತ್ರ ನಿರ್ಮಿಸಿ ನಿರ್ದೇಶಿಸಿದ, ಇದರಲ್ಲಿ ಪಾಕಿಸ್ಥಾನಿ ನಟ ನಟಿಯರಾದ ಮಹಮ್ಮದ್ ಅಲಿ ಮತ್ತು ಜೆಬಾ ಅಭಿನಯಿಸಿದ್ದರು.  ಇದು ಯಶಸ್ಸು ಪಡೆಯಲಿಲ್ಲ. ಈತ 1999 ರಲ್ಲಿ ತನ್ನ ಮಗ ಕುಣಾಲ ಗೊಸ್ವಾಮಿಗಾಗಿ ‘ಜೈ ಹಿಂದ್’ ಎನ್ನುವ ಹೆಸರಿನ ದೇಶ ಭಕ್ತಿ ಕಥಾನಕದ ಚಿತ್ರ ನಿರ್ಮಿಸಿ ನಿರ್ದೇಶಿಸಿದ, ಇದು ಯಶಸ್ಸು ಪಡೆಯಲಿಲ್ಲ. ಕಾಲದ ಗತಿಯಲ್ಲಿ ಸಿನೆ ಪ್ರೇಕ್ಷಕರ ಅಭಿರುಚಿಗಳು ಬದಲಾಗಿದ್ದವು ತಮ್ಮಂತಹವರಿಗೆ ಇದು ಕಾಲವಲ್ಲ ಎಂದು ನಿರ್ಧರಿಸಿ ಚಿತ್ರ ರಂಗದ ಎಲ್ಲ ಚಟುವಟಿಕೆಗಳಿಂದ ದೂರ ಸರಿದ. ಮನೋಜ ಕುಮಾರನ ದೇಶಭಕ್ತಿ ಭಾರತಿಯ ಸಂಸ್ಕøತಿಯ ಬಗೆಗಿನ ಕಾಳಜಿ ಪ್ರೀತಿಗಳು ಅಪ್ರಸ್ತುತವಾಗ ತೊಡಗಿದ್ದವು. ಆತನ ಭಾರತ ಇಮೇಜಿನ ಪಾತ್ರಗಳು ಇತಿಹಾಸದ ಪುಟ ಸೇರಿದವು. ಅದೇ ವರ್ಷ ಜೀವ ಮಾನದ ಸಾಧನೆಗಾಗಿ ಫಿಲಂ ಫೇರ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು. 
 
     ತಮ್ಮ ಸಿನೆ ದಿನಗಳು ಮುಗಿದ ನಂತರ ರಾಜಕೀಯ ಸೇರಿದ ಅನೇಕ ಸೆಲೆಬ್ರಿಟಿಗಳಂತೆ ಮನೋಜ ಸಹ ರಾಜಕೀಯದೆಡೆಗೆ ಮನಸು ಮಾಡಿದ. 2004 ರಲ್ಲಿ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಶಿವಸೇನಾ ಪಕ್ಷದ ಜೊತೆಗೆ ಗುರುತಿಸಿಕೊಂಡ. ಆದರೆ ಯಶಸ್ಸು ದೊರೆಯಲಿಲ್ಲ. ಎಲ್ಲ ಚಟುವಟಿಕೆಗಳಿಂದ ಮುಕ್ತಿ ಪಡೆದು ಮನೆಗಷ್ಟೆ ಸೀಮಿತನಾದ. 1992 ರಲ್ಲಿ ಕೇಂದ್ರ ಸರಕಾರ ಈತನಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಅಲ್ಲದೆ ತನ್ನ ಜೀವಮಾನದಲ್ಲಿ ಅನೇಕ 
ಪ್ರಶಸ್ತಿ ್ತ ಪುರಸ್ಕಾರಗಳಿಗೆ ಭಾಜನನಾದ. 2008 ರಲ್ಲಿ ಮಧ್ಯ ಪ್ರದೇಶ ಸರಕಾರ ಈತನ ಹೆಸರನ್ನು ಭಾರತ ರತ್ನ ಪ್ರಶ್ತಿಗೆ ಶಿಫಾರಸು ಮಾಡಿತು, ಅಲ್ಲದೆ ಆತನ ಹೆಸರಿನಲ್ಲಿ ಒಂದು ಲಕ್ಷ ರೂಪಾಯಿ ಮೊತ್ತದ ಪ್ರಶಸ್ತಿಯನ್ನು ಸಾಧಕರಿಗೆ ನೀಡಲು ತೀಮಾನಿಸಿತು. 2012 ರಲ್ಲಿ ಈತನ ಹೆಸರು ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಗಾಗಿ ಸೂಚಿಸಲ್ಪಟ್ಟಿತ್ತು, ಆದರೆ ಆ ವರ್ಷ ಆ ಪ್ರಶಸ್ತಿ ಖ್ಯಾತ ಬಂಗಾಲಿ ನಟ ಸೌಮಿತ್ರ ಚಟರ್ಜಿ ಪಾಲಾಯಿತು. ಆ ಪ್ರಶಸ್ತಿ ಈ ಸಲ ಮನೋಜಗೆ ಒಲಿದು ಬಂದಿದೆ ಅದಕ್ಕೆ ಆತ ಅರ್ಹ ಕೂಡ ಎಂಬುದು ನಿರ್ವಿವಾದ. ಪ್ರಶಸ್ತಿ ಒಂದು ಸಾಧಕರು ಸಾವಿರಾರು ಮಂದಿ ಹೀಗಾಗಿ ಪ್ರಶಸ್ತಿ ತಡವಾಗಿ ಬಂದಿತು ಆದರೂ ಬಂದಿತು ಎನ್ನುವುದು ಸಂತಸ ತರುವ ಸಂಗತಿ. ಮನೋಜ ನೀನು ನಿನ್ನ ಜಮಾನಾದಲ್ಲಿ ಸುಮಾರು ಮೂರು ದಶಕಗಳ ಕಾಲದಲ್ಲಿ ಭಾರತೀಯ ಮೌಲ್ಯ ಸಂಸ್ಕಾರ ದೇಶ ಮತ್ತು ದೇಶಭಕ್ತಿಗಳು ಕುರಿತು ಚಿಂತಿಸಿ ರಜತ ಪರದೆಯ ಮೇಲೆ ತಂದವನು. ಆ ಕಾಲ ಘಟ್ಟದ ಜನ ಸಮೂಹ ಜೀವನದ ಮೌಲ್ಯಗಳ ಕುರಿತು ಚಿಂತಿಸುವಂತೆ ಮಾಡಿದವನು. ನೀನು ನಿನ್ನ ಆಲೊಚನೆಗಳನ್ನು ಕಾರ್ಯಗತ ಗೊಳಸಿದ ಬದ್ಧತೆಗೆ ಸಂದ ಗೌರವವಿದು. ನಿನ್ನ ಅಭಿಮಾನಿಗಳಾದ ನಮಗೆ ಇದು ಬಹಳ ಸಂತಸ ತರುವ ಸಂಗತಿ. ನಿನ್ನ ಸಾಧನೆಯ ಬದುಕು ಬಹಳ ಅರ್ಥಪೂರ್ಣವಾದುದು ಜೊತೆಗೆ ಸಾರ್ಥಕವಾದುದು. ಭಾರತೀಯ ಚಲನಚಿತ್ರ ರಂಗದ ನಿನ್ನ ಕ್ರಿಯಾತ್ಮಕತೆಗೆ ಸಂದ ಮಾನ ಸಮ್ಮಾನವಿದು. ನಿನ್ನ ಜೀವನದ ಸಂಧ್ಯಾಕಾಲ ಸಂತಸಕರವಾಗಿರಲಿ ಎನ್ನುವ ಸದಾಶಯದೊಂದಿಗೆ. 
 
                                                                                  ದಿನಾಂಕ. 6. 3. 2016ದ
 
                   ಚಿತ್ರಕೃಪೆ; ಅಂತರ್ ಜಾಲ                                              *
 

Rating
No votes yet

Comments

Submitted by kavinagaraj Tue, 03/15/2016 - 15:05

ಮನೋಜಕುಮಾರ ನನ್ನ ಅತ್ಯಂತ ಪ್ರೀತಿಯ ಹಿಂದಿ ಚಿತ್ರನಟನಾಗಿದ್ದ. ಆತನ ಉಪಕಾರ್ ಚಿತ್ರವನ್ನು ಮೂರು ಸಲ ನೋಡಿದ್ದೆ. ನೀವು ಉಲ್ಲೇಖಿಸಿದ 'ಮೇರೆ ದೇಶ್ ಕಿ ದರ್ತಿ . .' ಹಾಡು ಮರೆಯಲಾಗದ ಹಾಡಾಗಿದೆ. ಮನೋಜನ ಮನೋಜ್ಞ ಅಭಿನಯ ಮರೆಯಲಾಗದಂತಹದು. ಆತನ ದೇಶಭಕ್ತಿ ಪ್ರೇರಿತ ಚಿತ್ರಗಳನ್ನು ನಾನು ತಪ್ಪದೆ ನೋಡುತ್ತಿದ್ದೆ. ಈಗಲೂ ಆ ಹಳೆಯ ಸಿನೆಮಾಗಳ ನೆನಪುಗಳು ಮೆಲುಕು ಹಾಕುವಂತಿವೆ. ಮನೋಜರಿಗೆ ಪ್ರಶಸ್ತಿ ಬಂದದ್ದು ನನಗೆ ಅತ್ಯಂತ ಸಂತೋಷ ತಂದಿದೆ. ಪರಿಚಯ ಲೇಖನಕ್ಕೆ ಧನ್ಯವಾದಗಳು, ಪಾಟೀಲರೇ.

Submitted by H A Patil Thu, 03/31/2016 - 20:42

In reply to by kavinagaraj

ಕವಿ ನಾಗರಾಜರವರಿಗೆ ವಂದನೆಗಳು
ಮನೋಜ ಕುಮಾರ ಈಗ ನೇಪಥ್ಯಕ್ಕೆ ಸರಿದ ವ್ಯಕ್ತಿ ಆಗಿದ್ದರೂ ಆತನ ಭಿನ್ನ ಆಲೋಚನಾ ಸರಣಿ ದೇಶ ಪ್ರೇಯುವಂತೆ ಮ ಮತ್ತು ಆತನ ಕಾಲದ ಸಮಸ್ಯೆಗಳಿಗೆ ಸ್ಪಂದಿಸಿ ಚಿತ್ರದ ಮೂಲಕ ಅಭಿವ್ಯಕ್ತಿಸಿದ ಕ್ರಮ ಬರೆಯುವಂತೆ ಪ್ರೇರೇಪಿಸಿದವು ಹೀಗಾಗಿ ಈ ಲೇಖನ ಮೂಡಿ ಬಂತು, ಪ್ರತಿಕ್ರಿಯೆಗೆ ಧನ್ಯವಾದಗಳು.