23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮೂಢ ಉವಾಚ - 155

August 7, 2012 - 5:45pm
kavinagaraj

ಬಯಕೆಯದು ದೂರಾಗಿ ತೃಪ್ತಿ ಸಿಕ್ಕುವುದು

ಮತ್ಸರದ ನೆರಳಿರದೆ ನೆಲೆಸೀತು ಶಾಂತತೆಯು |

ಭಕ್ತಿಯೊಂದಿರಲಾಗಿ ಚಿರಸುಖವು ಸಿಕ್ಕೀತು

ನಿತ್ಯನೂತನ ಶಕ್ತಿ ಭಕ್ತಿ ಮೂಢ || ..309

ತಂತ್ರಗಳು ಬೇಕಿಲ್ಲ ಮಂತ್ರಗಳ ಹಂಗಿಲ್ಲ

ನಿಜಭಕ್ತನಾದವಗೆ ಕಟ್ಟುಪಾಡುಗಳಿಲ್ಲ |

ಚಂಚಲಿತ ಮನಕಿರಲಿ ರೀತಿನೀತಿಗಳು

ನಡೆದದ್ದೆ ದಾರಿ ಸಾಧಕಗೆ ಮೂಢ || ..310

**************

-ಕ.ವೆಂ.ನಾಗರಾಜ್.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by nanjunda on

(((ಚಂಚಲಿತ ಮನಕಿರಲಿ ರೀತಿನೀತಿಗಳು
ನಡೆದದ್ದೆ ದಾರಿ ಸಾಧಕಗೆ ಮೂಢ )))
ಸಂಚಲನ ಮೂಡಿಸುವ ನುಡಿಗಳಿವು. ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Prakash Narasimhaiya on

ಆತ್ಮೀಯ ನಾಗರಾಜ್
ಅಂತರಂಗದಲ್ಲಿ ಘನ ತಪಸ್ಸಿದ್ದರೆ ಬಹಿರಂಗದಲ್ಲಿ ಮಹತ್ಕಾರ್ಯಗಳು ಸಾಧ್ಯವಾಗುತ್ತದೆ. ಈ ಸತ್ಯವನ್ನು ಸರಳವಾದ ಮಾತುಗಳಲ್ಲಿ ಹೇಳಿದ್ದಿರ. ಉತ್ತಮವಾದ ಉವಾಚ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ಸುಂದರ ಪ್ರತಿಕ್ರಿಯೆಗೆ ವಂದನೆ, ಪ್ರಕಾಶರೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ಮೆಚ್ಚುಗೆಯ ನುಡಿಗಳಿಗೆ ವಂದನೆಗಳು, ನಂಜುಂಡರೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ತಂತ್ರಗಳು ಬೇಕಿಲ್ಲ ಮಂತ್ರಗಳ ಹಂಗಿಲ್ಲ

ನಿಜಭಕ್ತನಾದವಗೆ ಕಟ್ಟುಪಾಡುಗಳಿಲ್ಲ |

ನಿಜವೆ ನಿಜವಾದ ಶ್ರದ್ದೆ ನೀತಿ ಸ್ವಯಂಶಿಸ್ತು ಇದ್ದಲ್ಲಿ ಎಲ್ಲಿಯು ಕಟ್ಟುಪಾಡುಗಳ ಅವಶ್ಯಕತೆ ಇಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

+1, ಪಾರ್ಥಸಾರಥಿಗಳೆ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಏಕೆಂದರೆ ಬೇಡರ ಕಣ್ಣಪ್ಪನಂತಹ ಭಕ್ತರಿಗೆ ಯಾವುದೇ ಕಟ್ಟುಪಾಡುಗಳನ್ನು ಅನುಸರಿಸದಿದ್ದರೂ ಶಿವನು ಒಲಿದನು. ಆದ್ದರಿಂದ ನಿಜವಾದ ಭಕ್ತಿ ಮುಖ್ಯ; ಇದನ್ನೆ ಕವಿಗಳ ಮೂಢ ಬಹಳ ಚೆನ್ನಾಗಿ ಬಿಂಬಿಸಿದ್ದಾನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ಮೆಚ್ಚುಗೆಯ ನುಡಿಗಳಿಗೆ ವಂದನೆಗಳು, ಶ್ರೀಧರರೇ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ನಿಜ, ಪಾರ್ಥರೇ. ವಂದನೆಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ಚೆನ್ನಾಗಿದೆ ಸರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ವಂದನೆ, ಚಿಕ್ಕೂ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ನಿಜಭಕ್ತನಿಗೆ ಯಾವುದೆ ಕಟ್ಟುಪಾಡುಗಳಿರುವುದಿಲ್ಲ ಸತ್ಯವಾದ ಮಾತು. ಭಕ್ತಿಯ ಮುಂದೆ ಮಿಕ್ಕಿದ್ದೆಲ್ಲವೂ ಗೌಣ
>> ಚಂಚಲಿತ ಮನಕಿರಲಿ ರೀತಿನೀತಿಗಳು

ನಡೆದದ್ದೆ ದಾರಿ ಸಾಧಕಗೆ ಮೂಢ << ಸೊಗಸಾದ ಸಾಲುಗಳು
ಧನ್ಯವಾದಗಳು
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

+1

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

"ತಂತ್ರಗಳು ಬೇಕಿಲ್ಲ ಮಂತ್ರಗಳ ಹಂಗಿಲ್ಲ

ನಿಜಭಕ್ತನಾದವಗೆ ಕಟ್ಟುಪಾಡುಗಳಿಲ್ಲ |

ಚಂಚಲಿತ ಮನಕಿರಲಿ ರೀತಿನೀತಿಗಳು

ನಡೆದದ್ದೆ ದಾರಿ ಸಾಧಕಗೆ ಮೂಢ ||"

=====================

+1(ಸತೀಶ್)
ಹಿರಿಯರೇ

ಧನ್ಯವಾದಗಳು

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ಮೆಚ್ಚುಗೆಯ ನುಡಿಗಳಿಗೆ ವಂದನೆಗಳು, ಸತೀಶ, ಚಿಕ್ಕೂ, ಸಪ್ತಗಿರಿವಾಸಿ ಮತ್ತು ಪ್ರೇಮಾರವರೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.