August 21, 2012 - 10:35am
ಮರುಗುವುದು ಮನ ಮೆಚ್ಚುತ್ತಿಲ್ಲ ಜಗವೆನ್ನ ಎನಿಸಿ
ಗೈದ ಕಾರ್ಯಗಳಿಗೆ ಹೊಗಳಿಕೆಯನದು ಬಯಸಿ
ತೆಗಳಿಕೆಗಳನು ಸಹಿಸದೆ ಮನಸು ಕೊರಗುವುದು
ಮೆಚ್ಚಿಸಬೇಕಿದೆ ಜಗವನೆನುತಲಿ ಪರಿತಪಿಸುವುದು
ಮೆಚ್ಚಬೇಕೆನ್ನನೆಂದು ನೀ ಕರ್ಮಗಳ ಮಾಡದಿರು
ಜಗವನೆಲ್ಲ ಮೆಚ್ಚಿಸಲಾಗದೆಂಬುವುದನು ಅರಿತಿರು
ಮೆಚ್ಚುಗೆ,ತೆಗಳಿಕೆಗಳಿಗೆ ಸ್ಪಂದಿಸದಿರಲಿ ಮನಸು
ತೆಗಳಿಕೆಗಳಿಗಂಜದೆ ಸತ್ಕರ್ಮಗಳನೇ ಆಚರಿಸು
ಮೆಚ್ಚುಗೆ,ತೆಗಳಿಕೆಗಳೇನೆ ಬರಲಿ ಸನ್ಮಾರ್ಗದಿ ಮನಸನಿಡು
ಕೈ ಬಿಡದೆ ಸಲಹುವನು ಶ್ರೀ ನರಸಿಂಹ ಶಂಕೆಯನು ಬಿಡು
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಮೆಚ್ಚಗೆ-ತೆಗಳಿಕೆ (ಶ್ರೀ ನರಸಿಂಹ 45)
ಆತ್ಮೀಯ ಸತಿಶರೆ,
ಜಗವ ಮೆಚ್ಚಿಸಲು ಹೊರಟ ಧೀರರಾರು ಉಳಿದಿಲ್ಲ. ಜಗವ ಉಳಿಸಲು ಹೋರಾಟ ನಡೆಸಿದ ಯೋಧರು ಮಡಿದರು ಜೀವಂತ ಉಳಿದಿದ್ದಾರೆ. ಕರ್ಮವನ್ನು ಜನರ ಮೆಚ್ಚುಗೆಗೆ ಮಾಡದೆ, ಕರ್ತವ್ಯವೆಂದು ಮಾಡಿದ ಯಾವುದೇ ಆದರು ಉಳಿಯುವುದು ಮನಸಿನಲಿ ಬಹುದಿನ. ಉತ್ತಮ ಸಂದೇಶ . ಧನ್ಯವಾದಗಳು.
ಉ: ಮೆಚ್ಚಗೆ-ತೆಗಳಿಕೆ (ಶ್ರೀ ನರಸಿಂಹ 45)
ಧನ್ಯವಾದಗಳು ಪ್ರಕಾಶ್ ರವರೇ
...ಸತೀಶ್
ಉ: ಮೆಚ್ಚಗೆ-ತೆಗಳಿಕೆ (ಶ್ರೀ ನರಸಿಂಹ 45) @ ಸತೀಶ್ ಅವ್ರೇ
"ಮೆಚ್ಚಬೇಕೆನ್ನನೆಂದು ನೀ ಕರ್ಮಗಳ ಮಾಡದಿರು
ಜಗವನೆಲ್ಲ ಮೆಚ್ಚಿಸಲಾಗದೆಂಬುವುದನು ಅರಿತಿರು
ಮೆಚ್ಚುಗೆ,ತೆಗಳಿಕೆಗಳಿಗೆ ಸ್ಪಂದಿಸದಿರಲಿ ಮನಸು
ತೆಗಳಿಕೆಗಳಿಗಂಜದೆ ಸತ್ಕರ್ಮಗಳನೇ ಆಚರಿಸು"
ನಿಜ... ನಿಜ.... ನಿಜ... ಆದರೆ.....
ಹೊಗಳಿಕೆ ನಮ್ಮನ್ನು ಮತ್ತಸ್ಟಕ್ಕೆ ಉತ್ತೇಜಿಸಬಹ್ದು , ತೆಗಳಿಕೆ ಇನ್ನಸ್ಟು ಸುಧಾರಿಸಲು ಸಾಧ್ಯ ಆದೀತು...
ಆದರೆ ಹೊಗಳಿಕೆ ಮತ್ತೂ ತರಿಸೀತು..!! ಅಹಂ ತಂದೀತು....
ಸ್ತಿಥಪ್ರಜ್ನ ಆಗಿರೋದೆ ಉತ್ತಮ.... ಅದು ವಸಿ ಕಸ್ಟದ ಕೆಲ್ಸ.....
ಒಳಿತಾಗ್ಲಿ...
\|/
ಉ: ಮೆಚ್ಚಗೆ-ತೆಗಳಿಕೆ (ಶ್ರೀ ನರಸಿಂಹ 45) @ ಸತೀಶ್ ಅವ್ರೇ
ಧನ್ಯವಾದಗಳು ವೆಂಕಟೇಶ್ ರವರೇ
>>>> ಸ್ತಿಥಪ್ರಜ್ನ ಆಗಿರೋದೆ ಉತ್ತಮ.... ಅದು ವಸಿ ಕಸ್ಟದ ಕೆಲ್ಸ.....<<
ನಿಜ ಅದು ಬಹು ಕಷ್ಟದ ಕೆಲಸವೆ ಆದರೆ ಇದನ್ನು ಸಾದಿಸದರೆ ಮನಸ್ಸು ಶಾಂತವಾಗಿರುತ್ತದೆ.
....ಸತೀಶ್
ಉ: ಮೆಚ್ಚಗೆ-ತೆಗಳಿಕೆ (ಶ್ರೀ ನರಸಿಂಹ 45)
"ಹೊಗಳಿ ಹೊಗಳಿ ಎನ್ನ ಹೊನ್ನ ಶೂಲಕೇರಿಸ ಬೇಡಿ" ಎಂದು ಹೊಗಳಿಕೆಯಿಂದ ದೂರವುಳಿದು ಸ್ಥಿತಪ್ರಜ್ಞತೆಯನ್ನು ತಂದುಕೊಳ್ಳಬೇಕೆಂದು ಬಸವಣ್ಣನವರ ನುಡಿಗಳು ಎಚ್ಚರಿಸುತ್ತವೆ. ಆದರೆ ಅದನ್ನು ಗಳಿಸಿಕೊಳ್ಳುವುದು ಸಪ್ತಗಿರಿಯವರೆಂದಂತೆ ನಿಜಕ್ಕೂ ಕಷ್ಟದ ಕೆಲಸ. ಒಳ್ಳೆಯ ಸಂದೇಶಾತ್ಮಕ ಭಕ್ತಿ ಪಂಕ್ತಿಗೆ ಧನ್ಯವಾದಗಳು, ಸತೀಶ್ ಅವರೆ.
ಉ: ಮೆಚ್ಚಗೆ-ತೆಗಳಿಕೆ (ಶ್ರೀ ನರಸಿಂಹ 45)
ಧನ್ಯವಾದಗಳು ಶ್ರೀಧರ್ ರವರೆ
...ಸತೀಶ್
ಉ: ಮೆಚ್ಚುಗೆ-ತೆಗಳಿಕೆ (ಶ್ರೀ ನರಸಿಂಹ 45)
<ಮೆಚ್ಚಬೇಕೆನ್ನನೆಂದು ನೀ ಕರ್ಮಗಳ ಮಾಡದಿರು
ಜಗವನೆಲ್ಲ ಮೆಚ್ಚಿಸಲಾಗದೆಂಬುವುದನು ಅರಿತಿರು
ಮೆಚ್ಚುಗೆ,ತೆಗಳಿಕೆಗಳಿಗೆ ಸ್ಪಂದಿಸದಿರಲಿ ಮನಸು> ++೧
ಸತೀಶವ್ರೆ ಚೆನ್ನಾಗಿದೆ
ಉ: ಮೆಚ್ಚುಗೆ-ತೆಗಳಿಕೆ (ಶ್ರೀ ನರಸಿಂಹ 45)
ಧನ್ಯವಾದಗಳು ಚೇತನ್ ರವರೇ
...ಸತೀಶ್