ಬರಿಯಬೇಕ್ರಿ ಚುಟುಕು ಮತ್ತೊಬ್ಬರು ನಗುವಂತೆ
ಇರಬೇಕ್ರಿ ಜಗದಾಗ ನಾವು ಮತ್ತೊಬ್ರಿಗೆ ಮುಳ್ಳಾಗದಂತೆ
ಹುಟ್ದಾಗ ನಾವು ಅಳತಿವಂತೆ
ಸತ್ತಾಗ ನಾವು ಅಳಸ್ತಿವಂತೆ
ಜೀವನಬರಿ ಮುರ್ದಿನದ ಸಂತಿ ಅಂತೆ
ಇಸ್ಟದ್ರಾಗೆ ಬಹಳ ವಾದ್ದಡ್ತಿವಂತೆ
ಗೊತ್ತಿಲ್ಲ ನಮಗೆ ಎಲ್ಲಿ ಜನಸ್ತಿವಂತೆ
ಹಾಗೆ ಗೊತ್ತಿಲ್ಲ ನಮಗೆ ಎಲ್ಲಿ ಸಾಯ್ತಿವಂತೆ
ದಯವಿಟ್ಟು ಇರಿ ನಿವು ಸದಾ ನಗುವಂತೆ ಹಾಗೆ ನಗಸ್ತಿರುವಂತೆ
ನಮ್ಮ ಜೀವನ ಬರೀ ಅಂತೆಕಂತೆಗಳ ಒಂದು ಸುಂದರ ಸಂತೆ ಅಂತೆ.
ಇಂತಿ ನಿಮ್ಮ ಕಿರು ಕವಿ .
ಸಿದ್ದರಾಮ ಏನ್. ಕೊರಪಳ್ಳಿ
ಶಹಾಬಾದ್, ಗುಲ್ಬರ್ಗಾ
ಈ ಪುಟವನ್ನು ಉಳಿದವರೊಂದಿಗೆ ಹಂಚಿಕೊಳ್ಳಿ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
ಪ್ರತಿಕ್ರಿಯೆಗಳು
ಉ: ಮೋದಲ ಚುಟುಕು
ಬಹಳ ಒಳ್ಳೇಯ ಚುಟುಕು
ಉ: ಮೋದಲ ಚುಟುಕು
ನಿಮ್ಮ ಕವಿತೆಗೆ ನೀವೇ ’ಒಳ್ಳೆಯ ಚುಟುಕು’ ಎಂದರೆ ಹೇಗೆ ಸಿದ್ದಾರಾಮ್! ಓದಿದವರು ಹೇಳಬೇಕಲ್ಲವೇ?
ಉ: ಮೋದಲ ಚುಟುಕು
ಮೋದಲ ಚುಟುಕು ಚೇನಾಗಿದೆ. ಏರಡನೆಯ ಚೂಟುಂಕುಗಾಗೀ......ಕಾದ ಇರುವೆ....
ಉ: ಮೋದಲ ಚುಟುಕು
ಸಿದ್ಧರಾಮ ಕೊರಪಳ್ಳಿಯವರೇ,
ನಿಜಕ್ಕೂ ನಿಮ್ಮ ಚುಟುಕು ಚೆನ್ನಾಗಿದೆ. ನಮ್ಮ ಕವನ ಮೊದಲು ನಮಗೆ ಮೆಚ್ಚುವಂತಿರಬೇಕೆನ್ನುವುದು ನಿಜವಾದರೂ ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವುದೇ :)) ಹಾಗೆಯೇ ಒತ್ತಾಕ್ಷರ ಮತ್ತು ದೀರ್ಘ/ಹ್ರಸ್ವಕ್ಕೆ ಗಮನಕೊಡಿ. ಆಲ್ ದ ಬೆಸ್ಟ್! (ಇದನ್ನೇ ಸೂಚ್ಯವಾಗಿ ಇದಕ್ಕೂ ಮೊದಲು ಪ್ರತಿಕ್ರಿಯಿಸಿರುವ ಸಂಪದಿಗರು ತಿಳಿಸಿದ್ದಾರೆ)
ಉ: ಮೋದಲ ಚುಟುಕು
ಪ್ರತ್ರಿಕ್ರಿಯಿಸಿದ ಎಲ್ಲರಿಗು ಧನ್ಯವಾದಗಳು
ಉ: ಮೋದಲ ಚುಟುಕು
olleyadu
ಉ: ಮೋದಲ ಚುಟುಕು
ಶಬ್ಬಾಶ್ ಸಿದ್ಧರಾಮ,
ಜೀವನದ ಒಳಗುಟ್ಟನ್ನು ಕೆಲವೇ ವಾಕ್ಯಗಳಲ್ಲಿ ಹೇಳಿಕೊಂಡಿದ್ದೀರ್.
ಬರೆಯುತ್ತಿರಿ.
ಇದರೊಂದಿಗೆ ಜ್ಞಾಪಕಕ್ಕೆ ಬಂದದ್ದು ಡಿವಿಜಿ ಯವರು:
ಅವರ ಸಾಲು ಓದಿ:
ಹುಲ್ಲಾಗು ಬೆಟ್ಟದಡಿ
ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನದಲಿತರಿಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ.
ಕೃಷ್ಣ
ಉ: ಮೋದಲ ಚುಟುಕು
ಧನ್ಯವಾದಗಳು ಸರ್