24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಯಡ್ಡಿಯಿಂದ "ಜೈಲುಭರೋ" ಚಳವಳಿಗೆ ಚಾಲನೆ!

October 15, 2011 - 4:51pm
shashikannada

ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಲಿಯಾಸ್ ಯಡ್ಡಿ, ಮತ್ತೊಂದು ದಾಖಲೆಯನ್ನು ನಿರ್ಮಿಸಿದ್ದಾರೆ. ಆದರೆ, ಈ ಬಾರಿ ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಲಿಯಾಸ್ ಯಡ್ಡಿ "ಶೋಭಾಯಾತ್ರೆ"ಯ ಬದಲು "ಜೈಲುಯಾತ್ರೆ" ನಡೆಸುವ ಮೂಲಕ!

ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದ ಹಗರಣಗಳ ಮೇಲೆ ಹಗರಣಗಳನ್ನು ಸೃಶ್ಟಿಸುತ್ತ ನಡೆದಿದ್ದ ಯಡ್ಡಿ, ಇಡೀ ಬಿಜೆಪಿ ಸಚಿವ ಸಂಪುಟ "ಗ್ರಾಮವಾಸ್ತವ್ಯ"ದ ಬದಲು ವಿನೂತನ ಮಾದರಿಯ "ಜೈಲುವಾಸ್ತವ್ಯ "ಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಈಗಾಗಲೇ ತಮ್ಮ ನಾಯಕನ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿರುವ ಯಡ್ಡಿಯ ಕಟ್ಟಾಳು ಕಟ್ಟಾ ಸುಬ್ರಮಣ್ಯ ನಾಯ್ಡು ಜೊತೆಯಲ್ಲಿ ಉಭಯ ಕುಶಲೋಪರಿ ನಡೆಸಲು ಈ "ಯಾತ್ರೆ" ನಡೆಸಿದ್ದಾರೆಂದು ತಿಳಿದುಬಂದಿದೆ. ಇದಲ್ಲದೆ, ತಮ್ಮೊಂದಿಗೆ ತನ್ನ ಹಿಂಬಾಲಕರೂ ಈ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಅಲ್ಲ, ಆದೇಶ ನೀಡಿದ್ದಾರೆ. ಈ ಕುರಿತು ಸಧ್ಯದಲ್ಲೇ ನಮ್ಮ "ನಗಾಡುವಗೌಡ"ರು ಸಚಿವ ಸಂಪುಟದ ಸಭೆ ಕರೆದು ಒಮ್ಮತದ ತೀರ್ಮಾನ ತೆಗೆದುಕೊಳ್ಳಲು ನಿಶ್ಚಯಿಸಿದ್ದಾರೆಂದು, "ನಾವೆಲ್ಲ ಒಮ್ಮೆಲೆ ಹೋಗುವ" ಎಂದು ಹೇಳಿದ್ದಾರೆಂದು "ಜೈಲುಭರೋ" ಪತ್ರಿಕೆ ಸುದ್ದಿ ನೀಡಿದೆ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by partha1059 on

ಶಶಿಕುಮಾರರೆ
ನನಗೆ ಯಡಿಯೂರಪ್ಪನವರನ್ನು ಜೈಲಿಗೆ ಹಾಕಿದರೆ ಯಾವ ಬೇಸರವು ಇಲ್ಲ
ಆದರೆ ನನ್ನ ಬೇಸರ ಬೇರೆಯೆ ಇದೆ
ಕರ್ನಾಟಕದ ಮುಖ್ಯಮಂತ್ರಿಯೊಬ್ಬರನ್ನು, ರಾಜ್ಯದ ಅತ್ಯುನ್ನತ ಶೃಂಗದಲ್ಲಿದ ಅಧಿಕಾರದಲ್ಲಿದ್ದವರನ್ನು
ಜೈಲಿಗೆ ಹಾಕುವ ಸಂದರ್ಭ ಬಂದಿರುವದಕ್ಕೆ ಅತ್ಯಂತ ಬೇಸರ ಬಂದಿದೆ,
ಹಿಂದೊಮ್ಮೆ ಮುಖ್ಯಮಂತ್ರಿ ಪದವಿ ಎಂದರೆ ಎಷ್ಟೊಂದು ಬೆಲೆಯಿತ್ತು,
ಆದರೆ ರಾಜಕಾರಣಿಗಳು ತಮ್ಮ ಹೊಲಸು ಕೆಸರೆರೆಚುವ ಆಟದಲ್ಲಿ ಅದರ ಬೆಲೆಯನ್ನು ಕಳೆದು ಬಿಟ್ಟರು,
ಈಗ ಮತ್ತೊಂದು ಭಯ ಕಾಡುತ್ತಿದೆ,
೨‍‍ ಜಿ ಸ್ಪೆಕ್ಟ್ರಮ್ ಹಗರಣವು ದೇಶದ ಅತ್ಯುನ್ನತ ಪದವಿ ಪ್ರದಾನಿಯನ್ನು ಜೈಲಿಗೆ ಎಳೆದುಬಿಟ್ಟರೆ
ಅ0ತರಾಷ್ಟೀಯ ಮಟ್ಟದಲ್ಲಿ ದೇಶದ ಮರ್ಯಾದೆಯ ಗತಿ ಏನು?
ಅಮೇರಿಕ ಅಧ್ಯಕ್ಷರಿಗೆ ಇರುವ ಸ್ಥಾನವನ್ನು ಯೋಚಿಸಿ, ಹಾಗೆ ಉಳಿದ ದೇಶಗಳೆಲ್ಲ ಇವೆ
ನಮಗೆ ಕಡೆಗೆ ಪಾಕಿಸ್ಥಾನವೆ ಮಾದರಿಯಾಗಿಬಿಡುತ್ತದೆ ಅನಿಸುತ್ತದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shashikannada on

ಯಾವುದೇ ದೇಶದಲ್ಲಿ, ಯಾವುದೇ ರಾಜ್ಯದಲ್ಲಿ ಇಂತಹ ಘಟನೆ ನಡೆದರೂ ಅದು ಅವಮಾನಕರವೇ! ಆದರೆ, ನಮ್ಮ ಕವಿರಾಜಮಾರ್ಗಕಾರ ಹೆಮ್ಮೆಯಿಂದ ಕೊಂಡಾಡುವ ಕನ್ನಡ ನಾಡಿನಲ್ಲಿ ಹೀಗಾಗಿರುವುದು ಮಾತ್ರ ಅತ್ಯಂತ ಅವಮಾನಕರ. ಇದು ಇಡೀ ಕನ್ನಡ ಸಮುದಾಯವೇ ತಲೆತಗ್ಗಿಸುವಂತಹ ವಿಶಯ. ಕೆಲವೇ ವರ್ಶಗಳ ಹಿಂದೆ ಅಭಿವೃದ್ಧಿಯಲ್ಲಿ ಇಡೀ ದೇಶದಲ್ಲಿ ನಂ.1 ಸ್ಥಾನದಲ್ಲಿದ್ದ ನಮ್ಮ ರಾಜ್ಯ, ಭ್ರಶ್ಟಾಚಾರದಲ್ಲಿ ನಂ.1 ಆದಾಗಲೇ ನಾವು ಎಚ್ಚೆತ್ತುಕೊಳ್ಳಬೇಕಿತ್ತು. ನಾವೆಲ್ಲರೂ ಅಲ್ಪತೃಪ್ತರು, ಸ್ವಾರ್ಥಿಗಳು. ಮೊನ್ನೆ ಸಂತೋಶ್ ಹೆಗ್ಡೆ ಕೂಡ ಅದನ್ನೇ ಹೇಳ್ತಿದ್ದರು. ಯಾವನೋ ಅಣ್ಣಾ ಹಜಾರೆ ಹೋರಾಡ್ತಾನೆ, ಯಾವನೋ ಸಂತೋಶ್ ಹೆಗ್ಡೆ ಹೋರಾಡ್ತಾನೆ ನಮಗ್ಯಾಕೆ ಇಲ್ಲದ ಉಸಾಬರಿ ಅಂತ ಮನೇಲಿ ಕೂರೋ ಮಂದಿ ಜಾಸ್ತಿ ಅಂತ. ರಾಜ್ಯದ ಜನತೆ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಯಡ್ಡಿಗೆ ಏನೇ ಆದ್ರು ಬೀದಿಗೆ ಬಂದು ಕೂರುತ್ತಿದ್ದ ಮಠಾಧೀಶರು ಯಡ್ಡಿ ಹಾಗೂ ಇತರ ಭ್ರಶ್ಟಾಚಾರಿಗಳನ್ನು ವಿರೋಧಿಸಿ ಬೀದಿಗೆ ಯಾಕೆ ಬರೊಲ್ಲ... ಉತ್ತರ ಸ್ಪಶ್ಟವಾಗಿದೆ. ಮಠಾಧೀಶರು ಕೂಡ ಭ್ರಶ್ಟಾಚಾರಿಗಳೇ! ಸಣ್ಣಪುಟ್ಟ ಭ್ರಶ್ಟಾಚಾರದಿಂದ ಹಿಡಿದು ದೊಡ್ಡದೊಡ್ಡ ಭ್ರಶ್ಟಾಚಾರದವರೆಗೆ ಎಲ್ಲವನ್ನೂ ವಿರೋಧಿಸುತ್ತ, ಖಂಡಿಸುತ್ತ ಅವರಿಗೆ ಶಿಕ್ಶೆಯಾಗುವವರೆಗೂ ಹೋರಾಟ ನಡೆಸಿದಲ್ಲಿ ಮಾತ್ರ ನಮ್ಮ ಸಮಾಜ, ದೇಶ "ಭ್ರಶ್ಟಾಚಾರಮುಕ್ತ" ಆಗುವುದು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಆರ್ ಕೆ ದಿವಾಕರ on

ಕೋರ್ಟಿನಿಂದ ವಾರೆಂಟ್ ಹಿಡಿದು ತಂದ ಉನ್ನತ ಪೊಲೀಸ್ ಅಧಿಕಾರಿಗಳು, ಫರಾರಿ ರೌಡಿಯೊಬ್ಬನನ್ನು ಬೇಟೆಯಾಡುವಂತೆ, ಮರ‍್ಯಾದಸ್ಥ ರಾಜಕಾರಣಿಯನ್ನು ಹಿಡಿಯಬೇಕಾಯಿತಲ್ಲಾ, ನಮ್ಮ ರಾಜಕಾರಣದ ಸನ್ನಿವೇಶದ ಬಗ್ಗೆಯೇ ಅಸಹ್ಯವೆನಿಸುವುದಿಲ್ಲವೇ? ಈ ನಾಯಕಮಣಿಗಳೆಲ್ಲಾ ನಮ್ಮ ನೆಚ್ಚಿನ ಪ್ರತಿನಿಧಿಗಳೇ! ಹಾಗೆಂದು ನಾವು ಅನಿವಾರ‍್ಯವಾಗಿ ಒಪ್ಪಿಕೊಳ್ಳಲೇಬೇಕಾಗಿದೆ! ನಮ್ಮೀ ಭವ್ಯ ಪ್ರಜಾಸತ್ತೆಯಲ್ಲಿ ದೋಷ ಎಲ್ಲಿದೆ ಎಂದು ತಲಸ್ಪರ್ಶಿಯಾಗಿ ಆಲೋಚಿಸಬೇಕಾದ ಕಾಲ ಈಗಲಾದರೂ ಬಂದಿಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shashikannada on

"ಕೋರ್ಟಿನಿಂದ ವಾರೆಂಟ್ ಹಿಡಿದು ತಂದ ಉನ್ನತ ಪೊಲೀಸ್ ಅಧಿಕಾರಿಗಳು, ಫರಾರಿ ರೌಡಿಯೊಬ್ಬನನ್ನು ಬೇಟೆಯಾಡುವಂತೆ, ಮರ‍್ಯಾದಸ್ಥ ರಾಜಕಾರಣಿಯನ್ನು ಹಿಡಿಯಬೇಕಾಯಿತಲ್ಲಾ, ನಮ್ಮ ರಾಜಕಾರಣದ ಸನ್ನಿವೇಶದ ಬಗ್ಗೆಯೇ ಅಸಹ್ಯವೆನಿಸುವುದಿಲ್ಲವೇ?"
ಯಾರು ಸರ್, ಆ "ಮರ‍್ಯಾದಸ್ಥ ರಾಜಕಾರಣಿ"?! ನಮ್ಮ ದೇಶದಲ್ಲಿ ಇನ್ನೂ ಅಂತಹವರು ಉಳಿದುಕೊಂಡಿದ್ದಾರೆಯೇ? ಅಂತಹವರೇನಾದರು ನಿಜವಾಗಿಯೂ ಇದ್ದಲ್ಲಿ, ನಮ್ಮ ಜನಗಳೇ ಗೆಲ್ಸೊಲ್ಲ...ಅದಕ್ಕೆ ಸಾಕಶ್ಟು ನಿದರ್ಶನಗಳಿವೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಆರ್ ಕೆ ದಿವಾಕರ on

ಯಾರ ’ಪಾದಸೇವೆ’ಗೆಂದು ಕಾಕಿ-ಕಾವಿಗಳೆಲ್ಲಾ ಟೊಂಕಕಟ್ಟಿ ದೌಡಾಯಿಸುತ್ತರೋ, ಅಂಥವರ ’ಬೆಲೆ’ಯೇನೂ ಕಡಿಮೆಯೇ ಸಾರ್. ’ಬೆಲೆ’ಯುಳ್ಳವರು ’ಮರ‍್ಯಾದಸ್ಥ’ರಲ್ಲವೇ? ತಾವು ನಿದರ್ಶಿಸಬಹುದಾದ ಘನವಂತರು ನೈತಿಕ ’ಮರ‍್ಯಾದಸ್ಥ’ ರೇ ಹೊರತು ಕೋಟಿ-ಕೋಟಿ ಕಪ್ಪು ಹಣವನ್ನು ಕೈಚೆಲ್ಲಿ ಕೊಡಬಲ್ಲರೇ, ಸಾರ್!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shashikannada on

ನೀವು ಹೇಳೋದು ನಿಜವೇ ಸರ್! ಈ ಹಿಂದೆ, ಶಿವರಾಮ ಕಾರಂತರು, ಗೋಪಾಲಕೃಷ್ಣ ಅಡಿಗರು ಚುನಾವಣೆಗೆ ನಿಂತು ಸೋತಿದ್ದರು. ಅದರಲ್ಲೂ, ಶಿವರಾಮ ಕಾರಂತರನ್ನ ಪ್ರಚಾರಕ್ಕೆ ಕರೆದಾಗ ಅವರು ಹೇಳಿದ್ರಂತೆ: ನನಗೆ ಇದೆಲ್ಲ ಇಶ್ಟವಾಗೊಲ್ಲ. ಜನಕ್ಕೆ ನಾನು ಪ್ರಾಮಾಣಿಕ, ಸಜ್ಜನ ಎಂಬ ನಂಬಿಕೆ ಇದ್ರೆ ಅವರೇ ವೋಟು ಹಾಕಿ ಗೆಲ್ಲಿಸ್ಲಿ. ನಾನ್ಯಾಕೆ ಅವರನ್ನ ಕೇಳ್ಬೇಕು? ನನ್ನಂತಹವನನ್ನ ಗೆಲ್ಸಿದ್ರೆ ಜನರಿಗೆ ಒಳ್ಳೆಯದು. ಪ್ರಾಮಾಣಿಕವಾಗಿ ಅವರ ಸೇವೆ ಮಾಡೋವಂತಹ ವ್ಯಕ್ತಿ ಸಿಕ್ತಾನೆ ಅಂದಿದ್ರಂತೆ. ಹಾಗಂತ ತುಂಬ ಹಿಂದೆ ಎಲ್ಲೋ ಓದಿದ ನೆನಪು.

ಇನ್ನು ಅಡಿಗರು ಕೂಡ ಬರೆವಣಿಗೆಯೇ ಬದುಕು ಅಂತ ನಂಬಿ ಬದುಕಿದವರು. ಇಂಗ್ಲಿಶ್ ಪ್ರೊಫೆಸರ್ ಆಗಿದ್ರು ಈಗಿನ ಪ್ರೊಫೆಸರ್ಗಳ ಹಾಗೆ ಯುಜಿಸಿ ಸ್ಕೇಲ್ ಸಂಬಳ ಏನು ಬರ್ತಿರ್ಲಿಲ್ಲ ಆಗ. ಅವರ ಹಣಕಾಸಿನ ಸ್ಥಿತಿ ಅಶ್ಟೇನೂ ಚೆನ್ನಾಗಿಲ್ದೆ ತುಂಬ ಕಶ್ಟ ಪಡ್ತಿದ್ರು ಅಂತ ಓದಿದ್ದೇನೆ. ಅವರು ಸ್ಪರ್ಧಿಸಿದ್ದು ಈಗಿನ ಬಿಜೆಪಿಯ ಮೂಲವಾದ ಜನಸಂಘ ಪಕ್ಶದಿಂದ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಬರೀ ಆಡಳಿತ ಪಕ್ಷವೇಕೆ, ವಿರೋಧ ಪಕ್ಷದವರೂ ಕೂಡ ಜೊತೆಯಾದರೆ ವಿಧಾನ ಸಭೆಯ ಕಾರ್ಯಕಲಾಪಗಳನ್ನು ಅಲ್ಲಿಂದಲೇ ನಡೆಸಬಹುದು ಎಂದು ಮಾಜಿಗೌಡರು ಹೇಳಿಕೆ ಕೊಟ್ಟಿದ್ದಾರಂತೆ. :)))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shashikannada on

ಅಂತದೊಂದು ಕಾಲ ಬಂದ್ರೆ ಅಚ್ಚರಿಯೇನಿಲ್ಲ! ಆದ್ರೆ, ಸುಮ್ನೆ ರಾಜಕಾರಣಿಗಳನ್ನೆಲ್ಲ ಜೈಲಿಗೆ ತುಂಬ್ತಾ ಬಂದ್ರೆ, ನಮ್ಮ ದೇಶದ ಜೈಲುಗಳೆಲ್ಲ ತುಂಬಿ ತುಳುಕ್ತವೆ. ಆಗ ಪಾಪ, ಸಣ್ಣಪುಟ್ಟ ಕಳ್ತನ, ದರೋಡೆ ಅಂತ ಮಾಡೋ ಮಂದಿ ಎಲ್ಲಿಗೋಗ್ಬೇಕು? ಅದಕ್ಕೆ ಒಂದು ಆದೇಶ ಹೊರಡಿಸ್ಬೇಕು. ಇನ್ಮೇಲೆ ವಿಧಾನಸೌಧದಿಂದ ಯಾರನ್ನೂ ಜೈಲುಗಳಿಗೆ ಕರೆತರುವಂತಿಲ್ಲ, ವಿಧಾನಸೌಧವನ್ನೇ ಜೈಲನ್ನಾಗಿ ಮಾರ್ಪಡಿಸಲಾಗುತ್ತೆ ಅಥವಾ ಅಲ್ಲಿಯೇ ಎಲ್ಲರನ್ನೂ ತುಂಬಲಿಕ್ಕಾಗದಿದ್ದಲ್ಲಿ, ವಿಕಾಸಸೌಧದ ತರಹ "ಜೈಲುಸೌಧ" ಕಟ್ಟಿಸಲಾಗುತ್ತೆ ಅಂತ. ಆದರೆ, ರಾಜಕಾರಣಿಗಳೆಲ್ಲ ಸೇರಿ ಇನ್ನು ಸ್ವಲ್ಪ ದಿನ ಹೋದ್ರೆ ಎಲ್ಲಿ ನಮ್ಮ "ವಿಧಾನಸೌಧ"ವನ್ನೂ ಮಾರ್ಬಿಡ್ತಾರೋ ಅಥವಾ ಗುತ್ತಿಗೆ ಕೊಟ್ಟುಬಿಡ್ತಾರೋ ಅಂತ ಭಯ ಅಶ್ಟೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಶಶಿಕುಮಾರ್ ಅವರೆ,
<<ರಾಜಕಾರಣಿಗಳೆಲ್ಲ ಸೇರಿ ಇನ್ನು ಸ್ವಲ್ಪ ದಿನ ಹೋದ್ರೆ ಎಲ್ಲಿ ನಮ್ಮ "ವಿಧಾನಸೌಧ"ವನ್ನೂ ಮಾರ್ಬಿಡ್ತಾರೋ ಅಥವಾ ಗುತ್ತಿಗೆ ಕೊಟ್ಟುಬಿಡ್ತಾರೋ ಅಂತ ಭಯ ಅಶ್ಟೆ!>>
ಮೊದಲು ಈ ಕಳ್ಳ ಮತ್ತು ಮೂರ್ಖರಿಗೆ ವಿಧಾನಸೌಧವನ್ನು ಐದು ವರ್ಷಕ್ಕೆ ಗುತ್ತಿಗೆ ಕೊಟ್ಟ ನಾವು ಈ ಮೊದಲೇ ಆಲೋಚಿಸಿದ್ದರೆ ಒಳ್ಳೆಯದಿತ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shashikannada on

ಅದೇ ಸರ್. ಇದೇ ವಿಶಯವನ್ನ ನಾನು ಭ್ರಶ್ಟಾಚಾರ ಕುರಿತ ನನ್ನ ಬರೆಹವೊಂದರಲ್ಲಿ ಹೇಳಿದ್ದೇನೆ. ಯಾವುದೇ ಸಮಾಜ, ಅಲ್ಲಿನ ಜನರ ನಡೆ-ನುಡಿಯ ಪ್ರತಿಬಿಂಬ ಅಂತ ಹೇಳ್ತಾರೆ. ಈಗ ನಮ್ಮ ಜನ ಹೇಗಿದಾರೋ ಹಾಗೆಯೇ ನಮ್ಮ ಸಮಾಜ ಕೂಡ ಆಗಿದೆ. ಇನ್ನು ಆಳುವವರು ಕೂಡ ಸಮಾಜದ ಭಾಗವೇ ತಾನೇ?! ಇತ್ತೀಚೆಗೆ ಮಾಧ್ಯಮದಲ್ಲಿ ನೋಡಿದ್ದೆ. ಹಳ್ಳಿಯೊಂದರಲ್ಲಿ ಹೆಂಗಸರು ಬೀದಿಯಲ್ಲಿ ನಿಂತು ತಮಗೆ ವೋಟು ಹಾಕೋದಕ್ಕೆ ಒಂದು ಪಾರ್ಟಿಯೋರು ದುಡ್ಡು, ವಸ್ತುಗಳನ್ನ ಕೊಟ್ರು. ಆದ್ರೆ, ಇನ್ನೊಂದು ಪಾರ್ಟಿಯೋರು ಕೊಡ್ಲಿಲ್ಲ, ಸರ್ಕಾರ ಮಂಜೂರು ಮಾಡಿರೋದನ್ನ ಹಿಂಗೆ ತಪ್ಪಿಸ್ತಾರಲ್ಲ ಸ್ವಾಮಿ ಅಂತ ಬೈಯ್ಯೋದನ್ನ ನೋಡಿದ್ದೆ. ಅಂದ್ರೆ, ಜನ ರಾಜಕೀಯ ಪಕ್ಷಗಳು ವೋಟು ಹಾಕೋದಕ್ಕೆ ಕೊಡೋ ಈ ಹಣ, ಹೆಂಡವನ್ನ ಕೂಡ ಸರ್ಕಾರ ಮಂಜೂರು ಮಾಡಿದೆ ಅಂತ ತಿಳ್ಕೊಂಡಿದಾರೆ. ಅಲ್ಲಿಗೆ ಅದು ಕೂಡ ಅಧಿಕೃತವಾಗಿಬಿಟ್ಟಿದೆ. ಇದೇ ಸಂದರ್ಭದಲ್ಲಿ ನಾನು ಮೈಸೂರಿನಲ್ಲಿ ಸಿಟಿ ಬಸ್ ನಲ್ಲಿ ಪ್ರಯಾಣ ಮಾಡುವಾಗ ನನ್ನ ಎರಡು ಪಟ್ಟು ವಯಸ್ಸಾಗಿದ್ದ ಹಳ್ಳಿಯ ಹಿರಿಯರೊಬ್ಬರನ್ನ ಮಾತನಾಡಿಸಿದಾಗ "ಎಂಥ ಕಾಲ ಬಂತಪ್ಪ! ಜನ ವೋಟಿಗೋಸ್ಕರ ತಮ್ಮತನಾನೇ ಮಾರ್ಕೊಳ್ಳೋದೆ? ನಾವು ಬಡವರಾದ್ರು, ಹಳ್ಳಿಯೋರಾದ್ರು ದೊಡ್ಡೋರು ಅಂತ ತೋರಿಸ್ಕೊಳ್ಳೋಕೆ ಇರೋದು ಇದೊಂದು(ವೋಟು ಹಾಕೋದು). ಅದನ್ನೂ ಮಾರ್ಕೊಂಡ್ರೆ ಏನು ಬಂತಪ್ಪ ಭಾಗ್ಯ!" ಅಂತ ಕೇಳ್ತಿದ್ರು. ಈ ಥರದ ವಿರೋಧಾಭಾಸಗಳ ನಡುವೆಯೇ ನಡೀತಿದೆ ನಮ್ಮ ನಿಮ್ಮೆಲ್ಲರ ಜೀವನ...ಈ ಸರಕಾರ, ಸಮಾಜ, ಮುಂತಾದವು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಆರ್ ಕೆ ದಿವಾಕರ on

ಗೋಪಾಲಕೃಷ್ಣ ಅಡಿಗರ ಬಗ್ಗೆ ತಮ್ಮ ಮರುಕದಲ್ಲಿ ಪ್ರಾಮಾಣಿಕತೆಯಿದೆ, ಶಶಿಕುಮಾರ್. ಅವರಿಗೆ ಯುಜಿಸಿ ಸ್ಕೇಲ್ ಬರಲಿಲ್ಲ; ಬರಬೇಕಾಗಿದ್ದ ಪ್ರಮೋಷನ್ ಸಿಗಲಿಲ್ಲ. ಇದು ಬೇರೆ "ಲೌಕಿಕ"ರಿಗೆ ಸಹ ಆಗಿರುವ ಅನ್ಯಾಯ. ಹೋಗಲಿ ಅತ್ಯುಚಿತವಾಗಿದ್ದ "ಜ್ಞಾನಪೀಠ’ವೂ ಬಂದೆರಗಲಿಲ್ಲ! ಅಂತಹ ಲೋಭದ "ಲಾಬಿ"ಯೇ ಇರದಿದ್ದ ಇವರು, ದೈತ್ಯ ರಾಜಕೀಯದ ಲೋಕಸಭಾ ಚುನಾವಣೆ ಸೋತಿದ್ದರಲ್ಲಿ ಏನಾಶ್ಚರ್ಯ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shashikannada on

ನಿಜ ಸರ್. "ಸಪ್ತಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ..." ಎಂದು ಬರೆದು ಆ ಸುಪ್ತಸಾಗರಕ್ಕಾಗಿ ತವಕಿಸುತ್ತಿದ್ದವರವರು. "ಜ್ಞಾನಪೀಠ" ಇರಲಿ, ಒಬ್ಬ ಸಾಮಾನ್ಯ ಮನುಶ್ಯನಿಗೆ ಸಿಗಬೇಕಾಗಿದ್ದ ಸುಖ, ಶಾಂತಿ, ನೆಮ್ಮದಿಯನ್ನು ಅವರು ಅನುಭವಿಸಲಾಗಲಿಲ್ಲ ಎಂದು ಕೇಳಿದ್ದೇನೆ, ಓದಿದ್ದೇನೆ. ಆದರೇನಂತೆ, ಅವರು ಕಟ್ಟಿದ ಕಾವ್ಯವನ್ನು ಇಂದು ನಾವೆಲ್ಲರು ಸವಿಯುತ್ತಿದ್ದೇವೆ. ಇಂದಿಗೂ ಬೇಂದ್ರೆ ನಂತರದ ಕನ್ನಡದ ದೊಡ್ಡ ಕವಿ ಎಂಬ ಹೆಸರು ಅವರಿಗಿದೆ. ಬಹುಶಹ, ಒಬ್ಬ ದೊಡ್ಡ ವ್ಯಕ್ತಿ ಸಾಧನೆ ಇದೇ ಏನೋ! "ಶರಣರ ಬದುಕನ್ನು ಮರಣದಲ್ಲಿ ನೋಡು" ಅಂತಾರಲ್ಲ ಹಾಗೆ. ಅಂಬಾನಿ, ಮಲ್ಯರನ್ನ ಯಾರು ನೆನಸ್ತಾರೆ ಹೇಳಿ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಆರ್ ಕೆ ದಿವಾಕರ on

ಮಲ್ಯ, ಅಂಬಾನಿಗಳನ್ನು ತಾವೇ ನೆನೆಸಿಕೊಂಡಿದ್ದೀರಲ್ಲಾ, ಅವರ ಪರವಾಗಿ ’ಥ್ಯಾಂಕ್ಸ್’ ಹೇಳಲೇ!
ಕಾರಂತ, ಅಡಿಗರಂಥಾ ಸೃಜನಶೀಲ ಪ್ರತಿಭಾವಂತರೇನೂ ಈ ಕೊಂಪೆ ರಾಜಕೀಯಕ್ಕೆ ಬೇಡ. ಮಲ್ಯ ಅಂಬಾನಿಯಂಥಾ ಹೆಸರುವಾಸಿ (ಹೆಸರಿಗಾದರೂ ವಾಸಿ!) ಕ್ಯಾಪಿಟಲಿಸ್ಟರಾದರೂ ಇಲ್ಲಿಲ್ಲ. ಏನೂ ಅಲ್ಲದವರು, ಏನೇನೂ ಆಗಲಾರದವರು ಮತ್ತು ಅದಕ್ಕಿಂತಾ ಭಯಂಕರವಾಗಿ ರೌಡೀ, ಗೂಂಡಾಗಳೇ ರಾಜಕೀಯವನ್ನು ತಮ್ಮ ಸಾಮ್ರಾಜ್ಯ ಮಾಡಿಕೊಂಡಿದ್ದಾರಲ್ಲಾ! ನಮ್ಮದು ಇದಾವ ಕರ್ಮ, ಹೇಳಿ?!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shashikannada on

ಅಯ್ಯೋ ಸರ್! ಮಲ್ಯ, ಅಂಬಾನಿಗಳನ್ನು ಯಾರು ನೆನಸ್ತಾರೆ ಅಂತ ಹೇಳಿದ್ದು ಕಾರಂತರು, ಅಡಿಗರ ಹೆಸರು ಕೆಲಸಗಳು ಉಳಿದಿರೋ ಹಾಗೆ ಮಲ್ಯ, ಅಂಬಾನಿಗಳದ್ದು ಉಳಿಯುತ್ತದೆಯೇ? ಮನುಶ್ಯನಿಗೆ ಮೌಲ್ಯಗಳು ಬಹಳ ಮುಖ್ಯ. ಕಾರಂತರು, ಅಡಿಗರು ಹಣ ಸಂಪಾದಿಸದಿರಬಹುದು. ಆದರೆ, ಹೆಸರು ಕೀರ್ತಿ ಸಂಪಾದಿಸಿದ್ದಾರೆ. ಅದೇ ಒಂದು ರಾಜ್ಯವನೇ ಖರೀದಿಸುವಶ್ಟು ಹಣ ಹೊಂದಿರುವ ಮಲ್ಯ, ಅಂಬಾನಿಗಳು ತಮ್ಮೆಲ್ಲ ಹಣ ಕೊಟ್ಟರೂ ಅಂತಹ ಹೆಸರು, ಕೀರ್ತಿ ಸಂಪಾದಿಸಲಾಗದು ಎಂಬರ್ಥದಲ್ಲಿ.

ಸರ್, ಸಾಚಾ ಮನುಶ್ಯರೆಲ್ಲ ರಾಜಕೀಯವನ್ನು ದೂರ ಮಾಡ್ತಾ ಹೋದ್ರೆ ಆಮೇಲೆ ಈಗಿರುವ ನಮ್ಮ ಪುಢಾರಿಗಳು ನಮ್ಮ ದೇಶವನ್ನೇ ಲೂಟಿ ಹೊಡೆದ್ಬಿಡ್ತಾರೆ, ಇಲ್ಲ ಮಾರಿಬಿಡ್ತಾರೆ. ಕಡೇ ಪಕ್ಶ ಇಂತದನ್ನ ವಿರೋಧಿಸೋದಕ್ಕಾದ್ರೂ ಕೆಲವರಾದ್ರೂ ಸಾಚಾ ಮನುಶ್ಯರು ರಾಜಕೀಯ ಪ್ರವೇಶ ಮಾಡ್ಬೇಕು. ಮಹಾತ್ಮ ಗಾಂಧಿ ಕೂಡ ಮೊಟ್ಟ ಮೊದಲಿಗೆ ಒಬ್ಬ ರಾಜಕಾರಣಿ ತಾನೇ. ಆದರೆ, ಅವರ ರಾಜಕಾರಣ ಮೌಲ್ಯಾಧಾರಿತವಾದದ್ದಶ್ಟೆ. ಆ ಮಟ್ಟಕೇರಲಾಗದಿದ್ದರೂ ಕಡೇ ಪಕ್ಶ ನಡೆನುಡಿಯಲ್ಲಿ ಶುದ್ಧವಿರೋರು ಬೇಕು ನಮ್ಮ ದೇಶಕ್ಕೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.