ಯಾಪಾಟಿ ಹಳೆಯದಾದರೇನಂತೆ?

ಯಾಪಾಟಿ ಹಳೆಯದಾದರೇನಂತೆ?

 ಏಪ್ರಿಲ್ 20 ವಿಜಯ ಕನಾಟಕ  ಪತ್ರಿಕೆಯಲ್ಲಿ, ಡಿ ಎನ್ ಶಂಕರಭಟದಟರ ಲೇಖನವೊಂದಿದೆ. ಇದರಲ್ಲಿ ಅವರು ತಮ್ಮನ್ನೇ  'ಎಲ್ಲ ಕನ್ನಡಿಗರು' ಕರೆದುಕೊಂಡಿದ್ದಾರೋ ಎನಿಸುತ್ತದೆ. ಅದರಲ್ಲಿನ ಅವರ ‘ಕೆದುಕು’ (ಸಂಶೋಧನೆ), ನಲ್ಮೆಯಿಂದಲೇ ಕೂಡಿರಬಹುದು. ಆದರೂ ಒಟ್ಟು ಕನ್ನಡದ ಬಲ್ಮೆಗೆ ಇದು ಹೆಚ್ಚಿನದೇನನ್ನೂ ಕೊಟ್ಟಿರುವಂತಿಲ್ಲ. ಆದರೂ ಆದ ಮಟ್ಟಿಗೂ ಕನ್ನಡದ ಮಾತು ಮತ್ತು ಬರವೆಯಲ್ಲಿ ತನ್ನದೇ ಅನ್ನುಗಳನ್ನು ಹೂಡಬೇಕೆಂಬ, ಅವರ ತುಡಿತ, ಬರಮಾಡಿಕೊಳ್ಳತಕ್ಕದ್ದಾಗಿದೆ. ಆದರೆ ನಮ್ಮೆಲ್ಲರ ಹೊಸಗನ್ನಡವನ್ನು, ಸಂಸ್ಕೃತದ ಅನ್ನು-ಆಡುಗಳು ಬೋ ಪಾಟಿ, ಕಿತ್ತಲಾಗದಂತೆ ಹಿಡುದುಕೊಂಡಿವೆ. ಸಾವಿರ ವರ್ಷದಿಂದಲೂ ಈ ಹೋಕೆಯನ್ನು ಬಿಟ್ಟುಕೊಂಡಿರುವುದರಿಂದ ಅದರ ದಬ್ಬು-ಕೊಬ್ಬುಗಳು ಹೇರಾಗಿದೆ. ಈಗ ಹರಿ-ಹಾಯ್ದು ಅದನ್ನು ಹಿಂತಿದ್ದುವುದು, ಮುಂದಾಳ್ತನ, ಕನ್ನಡಕ್ಕೆ ಬೇಕಾಗಿಲ್ಲ. ನಮ್ಮದೇ ಒಂದು ‘ತನ’ ಬೇಕು ಎಂಬ ಎಚ್ಚರವಾಗಿದೆಯಲ್ಲಾ, ಅದು ಸಾಕು. ಇನ್ನು ಮುಂದೆ ಕನ್ನಡವನ್ನೇ ಕನ್ನಡವಾಗಿ ಅಚ್ಚಿಸಲು (’ಅರ್ಚಿಸಲು’ ಅಲ್ಲ!) ಮುಂದಾಗೋಣ; ಈಗಿರುವ ಪದಾಕ್ಷರಗುಚ್ಛಗಳನ್ನು ಹಾಗೇ ಇಟ್ಟುಕೊಳ್ಳೋಣ. 

Rating
No votes yet