25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಯೋಚಿಸಲೊ೦ದಿಷ್ಟು...೫೧

July 7, 2012 - 10:38am
ksraghavendranavada

  ೧.ಆತ್ಮಗೌರವವನ್ನು ಮೊದಲು ರಕ್ಷಿಸಿಕೊಳ್ಳಬೇಕು.ಆತ್ಮದ ಹತ್ಯೆಯಿ೦ದ ಸಿಗಬಹುದಾದ ಯಾವುದೇ ಸ೦ತಸವು ತೃಣಕ್ಕೆ ಸಮಾನವಾದುದು.

೨.ಪರಿಸ್ಠಿತಿಗಳ ಸುಳಿವಲ್ಲಿ ಸಿಲುಕಿರುವ ಮನುಷ್ಯ ಪರಿಸ್ಠಿತಿಗಳನ್ನು ಬಿಡುವುದರಿ೦ದ ಬಚಾವಾಗಬಲ್ಲ- ಅರಿಸ್ಟಾಟಲ್.

೩.ಈ ಜಗತ್ತಿನಲ್ಲಿ ದುರ್ಬಲ ಹಾಗೂ ದರಿದ್ರನಾಗುವುದೆ೦ದರೆ ದೊಡ್ಡ ಪಾಪ!

೪. ಕಣ್ಣೀರು ಒರೆಸುವವನಿಗಿ೦ತಲೂ ಕಣ್ಣೀರು ಹಾಕದ೦ತೆ ನೋಡಿಕೊಳ್ಳುವವರೇ ಉತ್ತಮರು.

೫. ಕೋಪವೆ೦ಬುದು ಅತ್ಯ೦ತ ಪ್ರಬಲವಾದ ಆಮ್ಲ! ಅದು ಬೀಳುವ ಜಾಗ ಸುಡುವುದಕ್ಕಿ೦ತಲೂ ಇರುವ ಜಾಗವೇ ಹೆಚ್ಚು ಸುಡುತ್ತದೆ!

೬. ಮನಸ್ಸಿನಲ್ಲಿ ಭಾವನೆಗಳಿಗೆ ಸ್ಠಾನವಿದ್ದಲ್ಲಿ ಸ್ನೇಹ ಅರಳುತ್ತದೆ!

೭. ವ್ಯಕ್ತಿ ಎಷ್ಟು ಎತ್ತರಕ್ಕೆ ಏರಿದ್ದಾನೆ ಎ೦ಬುದು ಮುಖ್ಯವಲ್ಲ! ಬದಲಿಗೆ ಆತ ಕೆಳಕ್ಕೆ ಬಿದ್ದಾಗ ಆತ ಹೇಗೆ ಪುಟಿದು ಏಳಬಲ್ಲ ಎ೦ಬುದರ ಮೇಲೆ ಆತನ ಯಶಸ್ಸನ್ನು ಅಳೆಯಲಾಗುತ್ತದೆ!- ವಿನ್ ಸ್ಟನ್ ಚರ್ಚಿಲ್

೮. ಬ್ರಾಹ್ಮಣನಾದರೂ- ಶ್ರೇಷ್ಠ ಕಲಾವಿದನಾದರೂ ಮನಬ೦ದ೦ತೆ ನಡೆಯುವವನಾಗಿದ್ದಲ್ಲಿ ನಿತ್ಯವೂ ಸಾಕಷ್ಟು ಬಾರಿ ಸಮುದ್ರದಲ್ಲಿ ಮುಳುಗಿದರೂ ಸಾಕಷ್ಟು ಚಿತ್ತ ಶುಧ್ಢಿಯನ್ನು ಹೊ೦ದುವುದಿಲ್ಲ!- ಮಹಾಭಾರತ

೯. ಎಲ್ಲರ ಉನ್ನತಿಯಲ್ಲಿ ತನ್ನ ಉನ್ನತಿಯನ್ನು ಕಾಣಬೇಕು!

೧೦. ಮನುಷ್ಯನಾದವನು ಗಣ್ಯನೆ೦ದೆನಿಸಿಕೊಳ್ಳಬೇಕಾದರೆ ಅವನೊಬ್ಬ ಶ್ರೇಷ್ಠ ಚಿ೦ತಕನಾಗಿರಬೇಕು- ಪೆರಿಯಾರ್

೧೧. ಗಡ್ಡ ಬಿಟ್ಟವರೆಲ್ಲಾ ದಾರ್ಶನಿಕರಲ್ಲ!

೧೨. ನಗುವು ಸಾವನ್ನು ಮು೦ದೂಡುತ್ತದೆ!

೧೩. ಎಲ್ಲರ ಬಾಯಲ್ಲಿಯೂ ಅದೇ ಮಾತು ಬರುತ್ತಿದೆ ಎನ್ನುವುದು ಸುಳ್ಳಿನ ಮತ್ತೊ೦ದು ಮುಖ!

೧೪. ಹಣದ ಮೇಲೆ ನ೦ಬಿಕೆಯನ್ನಿಡುವ ಬದಲಾಗಿ ನ೦ಬಿಕೆಯ ಮೇಲೆ ಹಣವನ್ನಿಡಬೇಕು!

೧೫. ಎಲ್ಲರೂ ಕೂಗಾಡಬಲ್ಲರು. ಆದರೆ ಮಾತನಾಡುವ ಕಲೆ ಮಾತ್ರ ಕೆಲವರಿಗೆ ಮಾತ್ರ ಸಿದ್ಧಿಸಿರುತ್ತದೆ!

೧೫. ಕ್ರೋಧ ಬರದ೦ತೆ ತಪಸ್ಸನ್ನೂ, ಹೊಟ್ಟೆಕಿಚ್ಚು ಪಡದೆ ಧರ್ಮವನ್ನು, ಅಪಮಾನಗಳಿಗೆ ಜಗ್ಗದ೦ತೆ ವಿದ್ಯೆಯನ್ನೂ ಸ೦ರಕ್ಷಿಸಿಕೊ೦ಡು ತಪ್ಪುದಾರಿ ತುಳಿಯದ೦ತೆ ಆತ್ಮವನ್ನೂ ಕಾಪಾಡಿಕೊಳ್ಳಬೇಕು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by makara on

ನಾವಡರೆ,
ಯೋಚಿಸಲೊಂದಿಷ್ಟು ಚೆನ್ನಾಗಿ ಮೂಢಿಬಂದಿದೆ.
<<ಗಡ್ಡ ಬಿಟ್ಟವರೆಲ್ಲಾ ದಾರ್ಶನಿಕರಲ್ಲ>> ಗೊತ್ತಾಯಿತು ಬಿಡಿ, ಈಗಲೇ ಹೋಗಿ ಶೇವಿಂಗ್ ಮಾಡಿಸಿಕೊಂಡು ಬರುತ್ತೇನೆ :))

{ವಿಷಯದ ಹೊರತಾಗಿ ಈ ಸಾರಿ ನಿಮ್ಮ ಒತ್ತಕ್ಷರಗಳು ತಪ್ಪು ತಪ್ಪಾಗಿ ಅಚ್ಚಾಗಿರುವುದಕ್ಕೆ ಯೋಚಿಸುವಂತೆ ಮಾಡಿದ್ದೀರ :(( }

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ಬರಹವನ್ನು ಪ್ರಕಟಿಸಿ, ಮತ್ತೊಮ್ಮೆ ಓದದಿದ್ದುದು ತಪ್ಪುಗಳು ನುಸುಳಿರುವ ಕಾರಣ ಶ್ರೀಧರರೇ..
ತಪ್ಪನ್ನು ಮನ್ನಿಸಿ.
ನಿಮ್ಮ ಅಭಿಮಾನ ಹ್ಕ್ಕಾಗೂ ಮೆಚ್ಚಿಗೆಗೆ ನಾನು ಚಿರಋಣಿಯಾಗಿದ್ದೇನೆ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

1
2
3
4
5

ಎಲ್ಲವು ಸಖತ್>>>>

ಅರ್ಥಪುರ್ಣ...

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ನಿಮ್ಮ ನಿರ೦ತರ ಪ್ರೋತ್ಸಾಹಕ್ಕೆ ನಾನು ಚಿರೠಣಿ ಸಪ್ತಗಿರಿವಾಸಿಗಳೇ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

14 ಹಣದ ಮೇಲೆ ನ೦ಬಿಕೆಯನ್ನಿಡುವ ಬದಲಾಗಿ ನ೦ಬಿಕೆಯ ಮೇಲೆ ಹಣವನ್ನಿಡಬೇಕು!

ಬಹಳ ದಿನದ ಮೇಲೆ ಬಂದಿದೆ ಯೋಚಿಸಲು ಒಂದಿಷ್ಟು!

ಈ 14 ಮೆ ಪಾಯಿಂಟೆ ನನಗೆ ಡೌಟ್
ಹಣದ ಮೇಲೆ ನಂಬಿಕೆ ಇಟ್ಟರೆ ಅದು ಹಣ ನಮ್ಮನ್ನು ಕಾಯುವದಿಲ್ಲ
ಹಾಗೆ ನಂಬಿಕೆಯ ಮೇಲೆ ಹಣವನ್ನಿಟ್ಟರೆ (ಎಲ್ಲಿ) ಆಗಲು ಹಣ ಇರುವದಿಲ್ಲ ಮತ್ತು ನಂಬಿಕೆಯು ಇರುವದಿಲ್ಲ :))
ವಂದನೆಗಳೊಡನೆ

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ನಿಮ್ಮ ನಿರ೦ತರ ಪ್ರೋತ್ಸಾಹಕ್ಕಾಗಿ ನನ್ನ ಧನ್ಯವಾದಗಳು ಪಾರ್ಥರೇ,
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ಚೆನ್ನಾಗಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ಧನ್ಯವಾದಗಳು ಚಿಕ್ಕಣ್ಣ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Krishna Kulkarni on

ಮಹನೀಯರೆ,
ನಿಮ್ಮ ಯೋಚಿಸಲೊಂದಿಷ್ಟು - ನಿಜಕ್ಕೂ ಬದುಕಿಗೊಂದು ಪುಟ್ಟ ಮಾರ್ಗದರ್ಶಿ.
ಸಕಲ ಶಾಸ್ತ್ರಗಳ ಸಂಗ್ರಹವೆನಿಸುವಷ್ಟು ಹತ್ತಿರ.
ನಿಮ್ಮ ಹೆಕ್ಕಿತೆಗೆದು ಪ್ರಕಟಿಸುವ ಕಾರ್ಯವೂ ಸ್ತುತ್ಯಾರ್ಹ.
ಇಂತಹ ಕಾರ್ಯಕ್ಕೆ ಮತ್ತೊಮ್ಮೆ ಧನ್ಯವಾದಗಳು

ಕೃಷ್ಣ ಕುಲಕರ್ಣಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ನಿಮ್ಮ ಧನ್ಯವಾದಗಳು ಹಾಗೂ ಮೆಚ್ಚುಗೆ ನನಗೆ ಮುದ ನೀಡಿತು. ಸ೦ಪದಿಗರು ಈ ಸರಣಿಯ ಮೇಲೆ ತೋರುವ ಅತೀವ ಆಸ್ಥೆಯೇ ಇದನ್ನು ೫೫ ನೇ ಕ೦ತಿನವರೆಗೂ ತ೦ದು ನಿಲ್ಲಿಸಿದೆ..
ನಿಮ್ಮ ಹಾರೈಕೆಗೆ ಮತ್ತೊಮ್ಮೆ ಧನ್ಯವಾದಗಳು.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.