20
June
2013

ರಕ್ಷಾಕವಚ ನೀನೇ

July 17, 2012 - 8:19pm
Premashri

ಅಂಬೆಗಾಲಿಟ್ಟು ಬಂದು ತೊಡೆಯೇರುವಾಸೆ
ಹೆಗಲೇರಿ  ಉಪ್ಪುಮೂಟೆಯಾಡುವಾಸೆ
ಕೈಹಿಡಿದು  ಸುತ್ತ ಬೆರಗ ನೋಡುವಾಸೆ
ಅಚ್ಚರಿಯನೆಲ್ಲ  ನಿನ್ನಲ್ಲಿ ಕೇಳುವಾಸೆ  ಅಪ್ಪಾ....

ಗಂಡು  ಹೆಣ್ಣು   ಸೃಷ್ಟಿ  ನಿಯಮ
ತೋರುವೆಯೇಕೆ  ತಾರತಮ್ಯ
ಅಮ್ಮನೊಡಲಲಿ  ಮೊಳೆಯುತಿರುವೆ
ಚಿವುಟದಿರು   ಕಟುಕನಾಗದಿರು  ಅಪ್ಪಾ....

ಕಣ್ತೆರೆಯಲು..., ನಾ ಹೆಣ್ಣೆಂದು
ಹಡೆದವ್ವನ  ಹೊಡೆಯದಿರು
ಕಂಡ ಕಂಡಾಗೆಲ್ಲ ನನ್ನ  ಸಿಡುಕದಿರು
ಎತ್ತಿ ಎಸೆಯದಿರು  ಕತ್ತು ಹಿಸುಕದಿರು
ನಕ್ಕು ನಗುತಾ  ಬಾಳಲು
ಇದೆ ನನಗೂ   ಹಕ್ಕು
ರಕ್ಷಾಕವಚ ನೀನೇ ಅಪ್ಪಾ....

 ಚಿತ್ರಕೃಪೆ-http://www.google.co...

ಉಪ್ಪುಮೂಟೆ-ವ್ಯಕ್ತಿಯ ಬೆನ್ನು ,ತೋಳುಗಳ ಮೇಲೆ  ಎಳೆ ಮಕ್ಕಳು ಸವಾರಿ ಮಾಡುವುದು.ಕೆಲವೆಡೆ ` ಕೂಸುಮರಿಯಾಟ ' ಎನ್ನುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by makara on

ಎಲ್ಲಾ ಅಪ್ಪಂದಿರೂ ಯೋಚಿಸಲೇ ಬೇಕಾದ ವಿಷಯ; ಇಲ್ಲದಿದ್ದರೆ ಮುಂದೊಂದು ದಿನ ಮನುಕುಲವೇ ವಿನಾಶದ ಅಂಚಿಗೆ ಸಾಗೀತು. ಒಳ್ಳೆಯ ವಿಷಯ, ಪ್ರೇಮಾರವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ಜನಜಾಗೃತಿಯಾಗಬೇಕಾಗಿದೆ.
ವಂದನೆಗಳು ಶ್ರೀಧರ್ ಬಂಡ್ರಿಯವರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

+1. ಬರಿಯ ಅಪ್ಪಂದಿರಲ್ಲ, ಎಲ್ಲರೂ ಯೋಚಿಸಬೇಕಾದ ಸಂಗತಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ವಂದನೆಗಳು ಕವಿನಾಗರಾಜ್ ಅವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಅಂಬೆಗಾಲಿಟ್ಟು ಬಂದು ತೊಡೆಯೇರುವಾಸೆ
ಹೆಗಲೇರಿ ಉಪ್ಪುಮೂಟೆಯಾಡುವಾಸೆ
ಕೈಹಿಡಿದು ಸುತ್ತ ಬೆರಗ ನೋಡುವಾಸೆ
ಅಚ್ಚರಿಯನೆಲ್ಲ ನಿನ್ನಲ್ಲಿ ಕೇಳುವಾಸೆ ಅಪ್ಪಾ....

ಕವನದಲ್ಲಿ ಇಲ್ಲಿಯವರೆಗು ನಾವು ಸಹ ಕೇಳಬಹುದು
ಮುಂದಿನದು ಬೇರೆಯ ಭಾವ
ಉತ್ತಮ ಕವನ ಪ್ರೇಮ ಎಸ್ ರವರೆ
ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

+1
ಸಖತ್ ಬರಹ>>>>
ಯೊಛಿಸಬೆಕಾದ_ಕಾರ್ಯಪ್ರವುತ್ತ್ರಾಗಬೆಕಾದ ವಿಶ್ಯ>>>

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

>>ಯೊಛಿಸಬೆಕಾದ_ಕಾರ್ಯಪ್ರವುತ್ತ್ರಾಗಬೆಕಾದ ವಿಶ್ಯ>>>
- :)
ಪ್ರೇಮಾ ಅವರೆ,
ಕವನ ಚೆನ್ನಾಗಿದೆ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ಹೌದು ಸಪ್ತಗಿರಿಯವರೆ, ಕಾರ್ಯಪ್ರವೃತ್ತರಾಗಬೇಕಾಗಿದೆ.
ವಂದನೆಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ಧನ್ಯವಾದಗಳು ಗಣೇಶ್ ಅವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಪಾರ್ಥಸಾರಥಿಯವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Soumya Bhat on

ಪ್ರೇಮರವರೆ ಕವಿತೆ ತುಂಬಾ ಚೆನ್ನಾಗಿದೆ. ಎಷ್ಟೊಂದು ಕ್ಷೇತ್ರದಲ್ಲಿ ಬೆಳವಣಿಗೆ ಸಾದಿಸಿದ಼್ದರೂ ಇನ್ನೂ ಹೆಣ್ಣು ಮಗುವೆಂಬ ಕಾರಣಕ್ಕೆತಂದೆಯಿಂದ ಕೊಲೆಯಾಗುವ ಕಂದಮ್ಮಗಳ ಸಂಖ್ಯೆಗೇನು ಕಡಿಮೆ ಇಲ್ಲ.
ಶುಭವಾಗಲಿ,
>ಸೌಮ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ಹೆಣ್ಣಿನ ಬಗ್ಗೆ ತಿರಸ್ಕಾರ, ತಾತ್ಸಾರ ಎಂದು ಕೊನೆಗೊಳ್ಳುವುದೋ?
ಕವಿತೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆಧನ್ಯವಾದಗಳು ಸೌಮ್ಯ ಅವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

+1
ಒಳ್ಳೆಯ ಸಂದೇಶದ ಕವನ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ಧನ್ಯವಾದಗಳು ಸತೀಶ್ ಅವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by H A Patil on

ಮೇಡಂ ವಂದನೆಗಳು

" ರಕ್ಷಾ ಕವಚ ನೀನೆ " ಒಂದು ಉತ್ತಮವಾದ ಕವನ, ಹೆಣ್ಣಿನ ಬಗೆಗೆ ನಮ್ಮ ಸಮಾಜದಲ್ಲಿರುವ ಅವಗಣನೆ ಬಗ್ಗೆ ಮಾರ್ಮಿಕವಾಗಿ ಚಿತ್ರಿಸಿದ್ದೀರಿ, ಒಂದೊಳ್ಳೆಯ ಕವನ ನೀಡಿದ್ದಕ್ಕೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ಮೆಚ್ಚುಗೆಯ ವಿಮರ್ಶಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು ಹನುಮಂತ ಪಾಟೀಲ ಅವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಹೆಣ್ಣು ಮಗುವೇ ಬೇಕೆಂದು ಹಾರೈಸುತ್ತಾ, ಹೆಣ್ಣು ಮಗುವನ್ನೇ ಕರುಣಿಸಿದ ಭಗವಂತನಿಗೆ ವಂದಿಸಿ, ಹೆಣ್ಣು ಗಂಡು ಏನೇ ಆದರೂ ಒಂದೇ ಮಗು ಸಾಕು ಎಂದು ನಿರ್ಧರಿಸಿ ಬಾಳಿದ ನನಗೆ, ಹೆಣ್ಣು ಮಕ್ಕಳನ್ನು ದ್ವೇಷಿಸುವ‌ ಇಂಥವರ ಬಗ್ಗೆ ಬೇಸರ ಮೂಡುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ನಿಮ್ಮಂತೆ ಹೆಣ್ಣು ಮಗುವೇ ಬೇಕೆಂದು ಹಾರೈಸುವವರು ಕೆಲವರು ಇದ್ದಾರೆ ಎನ್ನುವುದು ಸಂತೋಷದ ವಿಷಯ.ವಂದನೆಗಳು ಆಶು ಹೆಗ್ಡೆಯವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by veena wadki on

ಕವನ ಚೆನ್ನಾಗಿದೆ , ಪ್ರೇಮಾ ಅವರೆ, ಎಲ್ಲರನ್ನೂ ಒಂದು ಕ್ಷಣ ಯೋಚಿಸುವಂತೆ ಮಾಡಿದಿರಿ, ಅಭಿನಂದನೆಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ಧನ್ಯವಾದಗಳು ವೀಣಾ ಅವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.