26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕನಸುಗಳನು ಹೊತ್ತು ತನ್ನಿ

August 30, 2010 - 7:00pm
ರುಕ್ಸಾನಾ

ಓ ತಾರೆಗಳೇ ನಾನಿದ್ದಲ್ಲಿಗೆ

ನೀವೂ ಬಂದಿರುವಿರಾ

ನಮ್ಮೂರಿಗೂ ಹೋಗಿದ್ದೀರಾ

ನಮ್ಮ ಮನೆಯ ಅಂಗಳದಲ್ಲೂ ನಿಂತಿದ್ದೀರಾ

ದಯಮಾಡಿ ಹೇಳಿ ನನಗೊಮ್ಮೆ

ಕೇಳುವ ತವಕ ನನ್ನಲ್ಲಿ

ಮನಸೆಲ್ಲ ಮನೆಯಲ್ಲಿ

ಮನಸ ಹತ್ತಿರವಿದ್ದವರು

ಯಾರೂ ಇಲ್ಲ ನನ್ನ ಜೊತೆಯಲ್ಲಿ

ಹೊರಡಿ ನೀವು ಈಗಲೇ

ನನ್ನ ಮನೆಯವರಿಗೆ ಮಿತ್ರರಿಗೆ

ನನ್ನ ಸಂದೇಶವ ಕೊಡಿ

ಅವರೊಡನೆ ನಾ ಹಂಚಿಕೊಂಡ

ಸುಮಧುರ ನೆನಪುಗಳೊಡನೆ

ನಾ ಇರುವದು ಹೇಳಿ

ಅವರು ನನಗಾಗಿ ಕೊಡುವ

ಕನಸುಗಳನು ಹೊತ್ತು ತನ್ನಿ

ನಾ ಕಾಯುವೆ ನಿಮಗಾಗಿ

ಪ್ರತಿರಾತ್ರಿ ಕಣ್ಣು

ಮುಗಿಲಿಗೆ ಕಾಸಿ.

                           ರುಕ್ಸಾನಾ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by vasanth on

ಸುಮಧುರ ಸಾಲುಗಳು ಚಂದ್ರ, ತಾರೆಗಳೆಲ್ಲ, ಬಂದು ಹೋದವು ಚೆಂದದ ಕವನ ರುಕ್ಸಾನಾ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ರುಕ್ಸಾನಾ ಅವರೇ
ನಕ್ಷತ್ರಗಳ ಜತೆಗಾರ ಚಂದ್ರನೆಲ್ಲಿ?
ಚೆನ್ನಾಗಿದೆ ಕವನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vasanth on

ಧಯವಿಟ್ಟಯ ಕ್ಷಮೆಯಿರಲಿ ಗೋಪಿನಾಥ್ ಸರ್. ರುಕ್ಸಾನಾರವರು ಚಂದ್ರನನ್ನು ಮರೆತಂತಿದೆ ನಾನು ಚಂದ್ರನನ್ನು ನೋಡಿದಷ್ಟು ಕುಶಿಯಿಂದ ಚಂದ್ರನ ಬಗ್ಗೆ ಉಲ್ಲೇಖಿಸಿ ಬಿಟ್ಟೆ. ನಿಮ್ಮಲ್ಲು ಕ್ಷಮೆಯಿರಲಿ ರುಕ್ಸಾನಾರವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಅದಕ್ಯಾಕೆ ಕ್ಷಮೆ ಕೇಳ್ತೀರಾ ವಸಂತ್?
ನಿಜವಾಗಿಯೂ ಚಂದ್ರನಿದ್ದಾಗ ನಕ್ಷತ್ರಗಳು ಕಡಿಮೆ ಕಾಣುತ್ತವೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vasanth on

ಧನ್ಯವಾದಗಳು ಗೋಪಿನಾಥ್ ಸರ್. >>>ಯಾರೂ ಇಲ್ಲ ನನ್ನ ಜೊತೆಯಲ್ಲಿ<<< ಚಂದ್ರನು ಸಹ ಸಾಗಿ ಹೋಗಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಸು೦ದರ ಕವನ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Harish Athreya on

ಆತ್ಮೀಯ
ನಿಮ್ಮ ಮನೆಯವರಿ೦ದ ದೂರ ಇರುವಿರೆ೦ದು ನಿಮ್ಮ ಕವನದಲ್ಲೇ ತಿಳಿಯುತ್ತಿದೆ. ಆ ನೋವು ಅನುಭವಿಸಿದವನಿಗೇ ಗೊತ್ತು. ರಾತ್ರಿಯ ದೀಪಗಳಿಗೆ ಅವರ ಕನಸುಗಳನ್ನು ತನ್ನಿ ಎನ್ನುವ ಭಾವ ತೀವ್ರತೆ ಮನಮುಟ್ಟಿತು. ಅದ್ಭುತ ಕವನ ಎ೦ದಷ್ಟೇ ಹೇಳಬಲ್ಲೆ.
ಹರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by raghusp on

ಒಳ್ಳೆಯ ಕವನ ರುಕ್ಸಾನ ಅವರೇ ...ಈ ಸಾಲುಗಳಲ್ಲಿ ಕಾಸಿ ಅಂತ ಇದೆ ಅಲ್ಲಿ ಹಾಸಿ ಬರಬೇಕಿತ್ತೆ ತಿಳಿಸಿ <<ಮುಗಿಲಿಗೆ ಕಾಸಿ.>>

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.