ಗೌರಿ ಬ್ಲಾಗ್
ನನ್ನ ಮಗಳು ಗೌರಿ ನನಗೆ ತೋರಿದ ಹೊಸ ಜಗತ್ತಿನ ಬಗ್ಗೆ ಈ ಬ್ಲಾಗ್. ಕಳೆದ ಆರು ವರ್ಷಗಳಿಂದ ವಿಶಿಷ್ಠಚೇತನಳಾಗಿರುವ ಮಗಳೊಂದಿಗೆ ನಾವೂ ಬೆಳೆಯುತ್ತಿದ್ದೇವೆ. ಈ ಅನುಭವ, ಇಂತಹ ಮಕ್ಕಳನ್ನು ಹೊಂದಿದ ತಂದೆತಾಯಿಗಳಿಗೆ ಹಾಗೂ ಮಕ್ಕಳ ಬೆಳವಣಿಗೆ ಬಗ್ಗೆ ಆಸಕ್ತರಾಗಿರುವ ಎಲ್ಲರಿಗೂ ಸಹಾಯವಾದೀತು ಎಂಬ ನಂಬಿಕೆ ನನ್ನದು. ಅದೇ ರೀತಿ, ಅಂಥ ಮಹನೀಯರ ಅನುಭವ ನಮಗೂ ಸಹಕಾರಿಯಾದೀತು ಎಂಬ ಆಸೆಯಿಂದ ಈ ಬ್ಲಾಗ್ ಪ್ರಾರಂಭಿಸಿದ್ದೇನೆ.
ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ನೀವೆಲ್ಲ ’ಬ್ಲ್ಯಾಕ್’ ಸಿನಿಮಾ ನೋಡಿದ್ದೀರಿ ಅಂತ ಅಂದುಕೊಂಡಿದ್ದೇನೆ. ವಿಶಿಷ್ಠಚೇತನ ಮಕ್ಕಳು ಹುಟ್ಟಿದಾಗ ತಂದೆತಾಯಿಗಳು ಮಾನಸಿಕವಾಗಿ ಕುಸಿದು ಹೋಗುತ್ತಾರೆ. ಅವರು ಬಡವರಿರಲಿ, ಶ್ರೀಮಂತರಿರಲಿ, ಓದಿದವರಿರಲಿ, ಅನಕ್ಷರಸ್ಥರಿರಲಿ- ಪ್ರತಿಕ್ರಿಯೆ ಒಂದೇ. ದೇವರು ನಮಗೆ ಹೀಗೇಕೆ ಮಾಡಿದ? ಎಂದು ದುಃಖಿಸುತ್ತಾರೆ.
ಇಲ್ಲಿಂದ ಶುರುವಾಗುವ ನೋವು ಒಮ್ಮೊಮ್ಮೆ ಜೀವನ ಪರ್ಯಂತ ಮುಂದುವರೆಯುತ್ತದೆ. ಮಗುವನ್ನು ಸಹಜ ಮಗುವಂತಾಗಿಸಲು ಒಬ್ಬೊಬ್ಬರ ಪ್ರಯತ್ನವೂ ಒಂದೊಂದು ಥರ. ಡಿಗ್ರಿ ಮುಗಿದ ಕೂಡಲೇ ಮದುವೆಯಾದ, ಅದಾಗಿ ಒಂದು ವರ್ಷದಲ್ಲಿ ಹೆಣ್ಣು ಮಗುವಿನ ತಾಯಿಯಾದ ನನಗೆ, ಹುಟ್ಟಿದ ಮಗು ಸಹಜವಾಗಿಲ್ಲ ಎಂದು ಅನ್ನಿಸಿದಾಗ ಉಂಟಾದ ನೋವು ಅಷ್ಟಿಷ್ಟಲ್ಲ. ಕಳೆದ ಆರು ವರ್ಷಗಳಲ್ಲಿ ನನ್ನ ಮಗಳು ಗೌರಿ, ಹೊಸ ಜಗತ್ತನ್ನು ನಮಗೆ ತೋರಿಸಿಕೊಟ್ಟಿದ್ದಾಳೆ. ಈಗಲೂ ನಾವು ಹೊಸದನ್ನು ಕಲಿಯುತ್ತಲೇ ಇದ್ದೇವೆ. ಇದೊಂದು ನಿರಂತರ ಕಲಿಕೆ.
ಆದರೆ, ಪ್ರಾರಂಭದ ನೋವನ್ನು ನಾವು ಮರೆತಿಲ್ಲ. ನನ್ನಂಥ ಲಕ್ಷಾಂತರ ತಾಯಂದಿರಿದ್ದಾರೆ. ಅವರೆಲ್ಲರ ಪ್ರಶ್ನೆಗಳು ಒಂದೇ. ಏಕೆಂದರೆ ಸಮಸ್ಯೆಯೂ ಒಂದೇ. ಇಂತಹ ಮಕ್ಕಳನ್ನು ಸಾಕುವುದು ಹೇಗೆ? ಅವರಿಗೆ ಜಗತ್ತಿನ ರೀತಿಯನ್ನು, ನಿತ್ಯದ ಕೆಲಸಗಳನ್ನು ಮಾಡಿಕೊಳ್ಳುವುದನ್ನು ಕಲಿಸುವುದು ಹೇಗೆ? ಇಂತಹ ಪ್ರಶ್ನೆಗಳ ಜೊತೆಗೆ, ಸಮಾಜ ಇಂತಹ ಮಕ್ಕಳನ್ನು ನೋಡುವ ರೀತಿಯನ್ನೂ ಜೀರ್ಣಿಸಿಕೊಂಡು ನಾವು ವಿಶಿಷ್ಠಚೇತನ ಮಗುವನ್ನು ಬೆಳೆಸಬೇಕು.
ಇಂತಹ ಮಕ್ಕಳೆಡೆಗೆ ಸಮಾಜದ ಭಾವನೆಯನ್ನು ತಕ್ಕಮಟ್ಟಿಗೆ ಬದಲಾಯಿಸಲು ಯತ್ನಿಸಿದ ’ಬ್ಲ್ಯಾಕ್’ ಸಿನಿಮಾದ ನಿರ್ದೇಶಕರಿಗೆ (ಅವರ ಹೆಸರು ನನಗೆ ಗೊತ್ತಿಲ್ಲ) ಹಾಗೂ ’ತಾರೆ ಝಮೀನ್ ಪರ್’ ಸಿನಿಮಾ ತೆಗೆದ ನಟ ಆಮೀರ್ ಖಾನ್ ಅವರಿಗೆ ನನ್ನ ಬ್ಲಾಗ್‌ನ ಈ ಮೊದಲ ಬರಹವನ್ನು ಅತ್ಯಂತ ಕೃತಜ್ಞತೆಯಿಂದ ಅರ್ಪಿಸುತ್ತಿದ್ದೇನೆ.
ದೇವರು ಇಂತಹ ವ್ಯಕ್ತಿಗಳ ಸಂಖ್ಯೆಯನ್ನು ವೃದ್ಧಿಸಲಿ. ಎಲ್ಲರಲ್ಲೂ ನೆಮ್ಮದಿ ಮೂಡಿಸುವ ಜೀವಗಳ ಸಂತತಿ ಸಾವಿರವಾಗಲಿ.
- ರೇಖಾ ಚಾಮರಾಜ

- ರೇಖಾ ರವರ ಬ್ಲಾಗ್
- Login or register to post comments
- 662 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ನಿಮ್ಮ ಲೇಖನ ಓದಿ ಮನಸಿಗೆ ಬಹಳ ಸಂಕಟವಾಯ್ತು ಮ್ಯಾಡಮ್...!
ನಾನು ವಿಕಲತೆಯಿಂದ ಹುಟ್ಟದಿದ್ದರು ನನ್ನ ಜೀವನದಲ್ಲಿ ಕೆಲವು ವರ್ಶದ ಹಿಂದೆ ವಿಕಲತೆ ಎಂಬುದು ಬಂದು ಕೆಲವು ತಿಂಗಳು ದೇಹವನ್ನು ನರಳಿಸಿ ಮಾಯವಾಯ್ತು.
ನಿಮ್ಮ ಮಗುವು ಪುನಸ್ಚೇತನ ಪಡೆದುಕೊಂಡು ಎಲ್ಲ ಮಗುವಂತೆ ಸುಂದರ ಜೀವನ ಅನುಭವಿಸಲಿ ಎಂಬುದು ನನ್ನ ಆಶಯ..!!
-ಯುವಪ್ರೇಮಿ
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ನಿಮಗೊಂದು ಹ್ಯಾಟ್ಸ್ ಆಫ಼್
-ನಂದನ್
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ಥ್ಯಾಂಕ್ಸ್ ನಂದನ್ ಅವರೇ.
- ರೇಖಾ ಚಾಮರಾಜ
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ಥ್ಯಾಂಕ್ಸ್. ನಿಮ್ಮ ಹಾರೈಕೆಯಂತೆ ನಮ್ಮ ಮಗಳು ಬೇಗ ಪುನಶ್ಚೇತನಗೊಳ್ಳಲಿ. ಅವಳು ಗುಣವಾದಾಗ, ನಾನು ನೆನಪಿಸಿಕೊಳ್ಳುತ್ತೇನೆ, ನಿಮ್ಮ ಹಾರೈಕೆಯ ಒಂದು ಪಾಲು ನಮ್ಮ ಮಗಳು ಗುಣವಾಗಲು ಸಹಾಯ ಮಾಡಿದೆ ಅಂತ.
- ರೇಖಾ ಚಾಮರಾಜ
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ನಿಮ್ಮ ಉದಾತ್ತ ಆಶಯಕ್ಕೆ ನಮ್ಮ ಬೆಂಬಲವಿದೆ.
ಎಲ್ಲಾ ಒಳ್ಳೆಯದಾಗಲಿ ಎಂದು ಹಾರೈಸುವೆ.
-ಸುಶೀಲ್.
****************************
ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ..
ಜಲವೆಂದರೆ ಕೇವಲ ನೀರಲ್ಲ ಅದು ಪಾವನತೀರ್ಥ!!
****************************
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ಸುಶೀಲ್ ಅವರೇ, ನಿಮ್ಮ ಹಾರೈಕೆಯಂತೆ ನಮ್ಮ ಮಗಳು ಬೇಗ ಗುಣವಾಗಲಿ.
- ರೇಖಾ ಚಾಮರಾಜ
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
'black' ಸಿನಿಮಾ ನೋಡಿದಾಗ ಅದರ ಕಥೆ ಭಾರೀ ಸಿನಿ-ಕತೆ ಅನಿಸಿತು. ಅದರಲ್ಲಿ ತೋರಿಸದ ನೂರೆಂಟು ತಾಪತ್ರಯಗಳೂ ಇರುತ್ತವೆ ಅನ್ನಿಸಿತು. ಉದಾಹರಣೆಗೆ ಹಣದ ಸಂಗತಿ.
ನಿಮ್ಮ ಬರಹಗಳನ್ನು ಕುತೂಹಲದಿಂದ ನಿರೀಕ್ಷಿಸುವೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ಥ್ಯಾಂಕ್ಸ್ ಎಚ್.ಪಿ.ಎನ್. ಅವರೇ. ನಿಮ್ಮ ಅಭಿಪ್ರಾಯ ನಿಜ. ಬ್ಲ್ಯಾಕ್‌ನಲ್ಲಿ ತೋರಿಸಿದ್ದಕ್ಕಿಂತ ಮಿಗಿಲಾದ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಸಿನಿಮಾದಲ್ಲಿ ಒಂದು ಮಗುವಿಗೆ ಒಬ್ಬ ಟೀಚರ್ ಇರುವಂತೆ ತೋರಿಸಿದ್ದಾರೆ. ಆದರೆ ಅದು ಸ್ವಲ್ಪ ಕಷ್ಟ. ನೀವೇ ಹೇಳಿದಂತೆ, ಹಣ ಅದಕ್ಕೆ ಕಾರಣ.
- ರೇಖಾ ಚಾಮರಾಜ
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ರೇಖಾ... ಯಾರು ಹೇಳಿದ್ದು ನಿಮ್ಮ ಮಗು ವಿಕಲಚೇತನ ಅಂತ....? ಗೌರಿ ಫೋಟೋ ನೋಡಿದ ನನಗೆ ಎಷ್ಟು ಖುಷಿ ಆಯ್ತು. ಬೇಜಾರೂ ಆಯ್ತು. ತುಂಬಾ ಮುದ್ದಾದ, ಸುಂದರವಾದ ಮಗು ಅದು.... ನಿಮ್ಮ ನೋವಿನಲ್ಲೂ, ನಲಿವಿನಲ್ಲೂ ನಮಗೂ ಒಂದಿಷ್ಟು ಪಾಲು ಕೊಡಿ. ನಿಮ್ಮ ಅನುಭವ, ಆಶಯಗಳಿಗೆ ನಾವು ಸದಾ ಕಾಯುತ್ತಿರುತ್ತೇವೆ... ಎಲ್ಲರಲ್ಲೂ ನೆಮ್ಮದಿ ಮೂಡಿಸುವ ಜೀವಗಳ ಸಂತತಿ ಸಾವಿರವಾಗಲಿ‘ ಎಂಥ ಉದಾತ್ತ ಆಶಯ ತಮ್ಮದು... ನಿಜಕ್ಕೂ ನೀವು ಗ್ರೇಟ್ ರೇಖಾ...
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ಶ್ರೀದೇವಿಯವರೆ, ನಿನ್ನೆ ಇದನ್ನೇ ಬರೆಯೋಣ ಎಂದು ಹೊರಟವನು ಪದಗಳು ಸರಿಯಾಗಿ ಹೊಳೆಯದೆ ಆ ಭಾಗ ಕೊನೆಗೆ ತೆಗೆದು ಪೋಸ್ಟ್ ಮಾಡಿದೆ.
ಫಾರೆಸ್ಟ್ ಗಂಪ್ ಅನ್ನೋ ಒಂದು ಇಂಗ್ಲೀಷ್ ಚಿತ್ರದ ಕಥೆ ನೆನಪಾಗುತ್ತದೆ: ಪುಟ್ಟ ಹುಡುಗನನ್ನು ವಿಕಲಚೇತನ ಎಂದು ಕಡೆಗಣಿಸುತ್ತಿರುತ್ತಾರೆ. ಆದರೆ ಅವನ ತಾಯಿ "ನೋಡು ಫಾರೆಸ್ಟ್, ನೀನು ಯಾರಿಗಿಂತಲು ಕಡಿಮೆಯಿಲ್ಲ. ಅದನ್ನ ತಿಳಿ" ಅನ್ನುತ್ತಿರುತ್ತಾಳೆ. "ಲೈಫ್ ಇಸ್ ಲೈಕ್ ಅ ಬಾಕ್ಸ್ ಆಫ್ ಚಾಕೊಲೇಟ್ಸ್ - ಯು ನೆವರ್ ನೋ(know) ವಾಟ್ ಯುರ್ ಗಾನ ಗೆಟ್" ಎನ್ನುತ್ತಿರುತ್ತಾಳೆ.
ಫಾರೆಸ್ಟ್ ಗಂಪ್ ಎಲ್ಲರ ನಿರೀಕ್ಷೆಯನ್ನೂ ಮೀರಿ ಮುಂದಕ್ಕೆ ಬರುತ್ತಾನೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ಥ್ಯಾಂಕ್ಸ್ ಶ್ರೀದೇವಿ. ಯಸ್ ಗೌರಿ ಫೋಟೊ ನೋಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಮಗು ಈ ಥರ ಇದೆ ಅಂತ. ಬಹುಶಃ ತಾಯಿಯಾಗಿ ನನಗೆ ಹಾಗೆ ಅನ್ನಿಸುತ್ತದೆಯೋ ಏನೋ. ಅದು ಮಮಕಾರದಿಂದ ಇರಬಹುದು ಅನ್ಕೊಂಡಿದ್ದೆ. ಆದರೆ, ಬಹಳ ಜನ ಹೇಳಿದ್ದಾರೆ, ಗೌರಿ ಎಷ್ಟು ಮುದ್ದಾಗಿದ್ದಾಳೆ ಎಂದು. ಆ ಚೆಂದಾನೇ ಅವಳಿಗೆ ದೃಷ್ಟಿಯಾಯಿತೇನೋ ಅನ್ನುವಂಥ ಅಂದ ಅವಳದು. ಎಲ್ಲರಲ್ಲೂ ಕೇಳಿಕೊಳ್ಳುವುದೇನೆಂದರೆ, ಬೇಗ ಅವಳಿಗೆ ಒಳ್ಳೆಯದಾಗಲಿ ಅಂತ ಎಲ್ಲರೂ ಹಾರೈಸಿ. ನನ್ನ ಮಗಳು ಬೇಗ ಗುಣವಾಗಲಿ.
- ರೇಖಾ ಚಾಮರಾಜ
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ರೇಖಾ, ಇನ್ನೊಂದು ಮುಖ್ಯ ಸಮಸ್ಯೆಯಿದೆ. ಇಂತಹವರಿಗಾಗಿನ ಹೆಚ್ಚಿನ ಚಿಕಿತ್ಸಾ ಕೇಂದ್ರಗಳು ಬೆಂಗಳೂರಿನಲ್ಲಿ ಇದೆ. ಒಂದು ವೇಳೆ, ತಂದೆತಾಯಿಯರು ಬೇರೊಂದು ಊರಿನಲ್ಲಿದ್ದಾಗ ಕಾಡುವ ಗಿಲ್ಟ್ ಇದೆಯಲ್ಲ, ಮನಸ್ಸನ್ನೆಲ್ಲ ಹಿಂಡಿಹಿಪ್ಪೆಮಾಡಿಬಿಡತ್ತೆ
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ಸುನೀಲ್ ಅವರೇ, ಗೌರಿಯನ್ನು ಈಗಾಗಲೇ ಸಾಕಷ್ಟು ಚಿಕಿತ್ಸಾ ಕೇಂದ್ರಗಳಲ್ಲಿ ತೋರಿಸಿದ್ದೇವೆ. ತಂದೆತಾಯಿ ತೊಡಗಿಸಿಕೊಳ್ಳುವುದರಿಂದ ಗುಣವಾಗುತ್ತಾಳೆ ಎಂದು ಹೇಳಿದ್ದಾರೆ. ಅವರವರ ಮಕ್ಕಳು ಅವರವರ ಹತ್ತಿರ ಬೆಳೆಯಬೇಕು ಎಂಬುದು ನನ್ನ ಅನಿಸಿಕೆ. ಗೌರಿಯಂಥ ಮಗುವೊಂದೇ ಅಲ್ಲ, ಪ್ರತಿಯೊಂದು ಮಗುವೂ ತನ್ನ ತಂದೆತಾಯಿ ಹತ್ತಿರವೇ ಬೆಳೆಯಬೇಕು.
- ರೇಖಾ ಚಾಮರಾಜ
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ನಿಮ್ಮ ಲೇಖನ ಓದಿದೆ, ನಿಮ್ಮ ಮಗುವನ್ನು ಈ ಕಾಲಕ್ಕೆ ತಕ್ಕಂತೆ ಬೆಳೆಸುವ ನಿಮ್ಮ ಆತ್ಮ ವಿಸ್ವಾಸ ಇನ್ನು ವೃದ್ದಿಸಲಿ. ನಿಮ್ಮ ಜೋತೆ ನಾವೂ ಇದ್ದೇವೆ. ವಂದನೆಗಳು.
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ಕರಡ್ಡಿ ಶಿವರಾಜ ಅವರೇ, ನಿಮ್ಮ ಪ್ರೋತ್ಸಾಹಕರ ಮಾತುಗಳಿಗಾಗಿ ಥ್ಯಾಂಕ್ಸ್. ನಮ್ಮ ಮಗಳು ಬೇಗ ಗುಣವಾಗಲು ನಿಮ್ಮ ಬರಹ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಿ.
- ರೇಖಾ ಚಾಮರಾಜ
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ಶಾಲೆ, ಕಾಲೇಜಲ್ಲಿ ಬಹಳ ಬುದ್ಧಿವಂತರಾಗಿರಬಹುದು.ಎಷ್ಟೇ ಕಠಿನ ಪ್ರಶ್ನೆಗೆ ಸುಲಭದಲ್ಲಿ ಉತ್ತರಿಸಬಹುದು.
ಆದರೆ ಸಂಸಾರಕ್ಕೆ ಕಾಲಿರಿಸಿದಾಗ ಅಲ್ಲಿ ಬರುವ ಸಮಸ್ಯೆಗಳೇ ಬೇರೆ.ಅದನ್ನು ಬಿಡಿಸುವುದು ಹೇಗೆ ಎಂದು
ಎಲ್ಲೂ ಕಲಿತಿರುವುದಿಲ್ಲ, ನೋಡಿ, ಬಹಳ ಕಷ್ಟವೆನಿಸುವುದು. ನನಗೇ ಏಕೆ ಈ ಕಷ್ಟ? ನಾನು ಏನು ತಪ್ಪು ಮಾಡಿದೆ ಎಂದು ಈ ಶಿಕ್ಷೆ ಎಂಬ ಯೋಚನೆ ಬರುವುದು.
ದೇಶದಲ್ಲಿರುವ ಕೋಟ್ಯಾಂತರ ತಾಯಿಯರಿಗಿಂತ ನೀವು ಆ ಮಗುವನ್ನು ನೋಡಲು ಯೋಗ್ಯರು ಅನಿಸಿದ್ದರಿಂದ ದೇವರು ನಿಮ್ಮ ಕೈಗೆ ಮಗುವಿನ ಜವಾಬ್ದಾರಿ ವಹಿಸಿದ್ದಾರೆ. ನಿಮ್ಮಿಂದ ಇದು ಸಾಧ್ಯ.
ನಿಮಗೆ ಒಳ್ಳೆಯದಾಗಲಿ.
-ಗಣೇಶ.
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ನೋಡಿ ರೇಖಾ,
ಗೌರಿ ಪುಟ್ಟಾ ಬಗ್ಗೆ ಎಷ್ಟೊಂದು ಜನರಿಗೆ ಪ್ರೀತಿ ಇದೆ.... really she is so cute.... ಖಂಡಿತ ಮನೆಗೆ ಬರ್‍ತೀನಿ. ಅವಳನ್ನ ನೋಡ್ಬೇಕು ಅನ್ನಸ್ತಿದೆ. ಅವರವರ ಮಕ್ಕಳು ಅವರವರ ಹತ್ತಿರ ಬೆಳೆಯಲೇಬೇಕು..... ಅಪ್ಪ-ಅಮ್ಮನ ಮಡಿಲಲ್ಲಿ ಮಲ್ಕೊಳ್ಬೇಕು ಅಂತ ಎಷ್ಟು ಸಲಿ ಅನ್ನಸ್ತಿರತ್ತೆ. ನಿಮ್ಮ ಲೇಖನ ನೋಡಿ ನನಗೆ ಅವರ ನೆನಪು ತುಂಬಾನೇ ಆಗ್ತಿದೆ....
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
Shreedevi you are welcome. ಗೌರಿಯನ್ನು ಒಂದು ಸಾರಿ ನೋಡಿದರೆ ನಿಮಗೆ ಖುಷಿ ಮತ್ತು ಆಶ್ಚರ್ಯಗಳೆರಡೂ ಆಗುತ್ತವೆ. ಅವಳು ತುಂಬಾ ಮುಗ್ಧ ಮತ್ತು ಜಾಣೆ. ಬನ್ನಿ, ಹೊಸ ಮುಖಗಳು ಪರಿಯಚವಾದಷ್ಟೂ ಅವಳ ಬೆಳವಣಿಗೆಗೆ ಒಳ್ಳೆಯದೇ.
ನಮಗೆ ಹೇಗೆ ನಮ್ಮ ಅಪ್ಪ-ಅಮ್ಮ ನೆನಪಾಗುತ್ತಾರೋ, ಅಂಥದೇ ಪ್ರೀತಿಯನ್ನು ನಾವು ನಮ್ಮ ಮಕ್ಕಳಿಗೆ ಕೊಡಬೇಕಲ್ವೇ? ಅಂದ್ಹಾಗೆ ನಿಮಗೆಷ್ಟು ಮಕ್ಕಳು?
- ರೇಖಾ ಚಾಮರಾಜ
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ನೋಡಿ ರೇಖಾ,
ಗೌರಿ ಪುಟ್ಟಾ ಬಗ್ಗೆ ಎಷ್ಟೊಂದು ಜನರಿಗೆ ಪ್ರೀತಿ ಇದೆ.... really she is so cute.... ಖಂಡಿತ ಮನೆಗೆ ಬರ್‍ತೀನಿ. ಅವಳನ್ನ ನೋಡ್ಬೇಕು ಅನ್ನಸ್ತಿದೆ. ಅವರವರ ಮಕ್ಕಳು ಅವರವರ ಹತ್ತಿರ ಬೆಳೆಯಲೇಬೇಕು..... ಅಪ್ಪ-ಅಮ್ಮನ ಮಡಿಲಲ್ಲಿ ಮಲ್ಕೊಳ್ಬೇಕು ಅಂತ ಎಷ್ಟು ಸಲಿ ಅನ್ನಸ್ತಿರತ್ತೆ. ನಿಮ್ಮ ಲೇಖನ ನೋಡಿ ನನಗೆ ಅವರ ನೆನಪು ತುಂಬಾನೇ ಆಗ್ತಿದೆ....
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ನಿಜ ಗಣೇಶ್ ಅವರೇ, ಶಾಲೆ ಕಾಲೇಜುಗಳಲ್ಲಿ ಕಲಿಯುವುದೇ ಬೇರೆ. ಅದರಲ್ಲೂ ಸಣ್ಣ ಊರಲ್ಲಿ ಡಿಗ್ರಿ ಮುಗಿಸಿರುವ ನನಗೆ ಅಷ್ಟೊಂದು ಏನೂ ತಿಳಿದಿರಲಿಲ್ಲ. ಗೌರಿ ಹುಟ್ಟಿದ ಮೇಲೆ ಆಕೆ ಸಾಕಷ್ಟು ಕಲಿಸಿದ್ದಾಳೆ. ನಾನು ವಿಚಾರ ಮಾಡುವ ದಿಕ್ಕನ್ನೇ ಬದಲಾಯಿಸಿದ್ದಾಳೆ.
ಆದರೂ ಕೆಲವೊಮ್ಮೆ ತಾಳ್ಮೆ ಕಳೆದುಕೊಳ್ಳುತ್ತೇನೆ. ಅದಕ್ಕೇ ಈ ಬ್ಲಾಗ್ ಬರೀತಾ ಇದ್ದೇನೆ. ಈ ಮೂಲಕ ನನ್ನ ತಾಳ್ಮೆ ಮತ್ತು ಆತ್ಮವಿಶ್ವಾಸಗಳೆರಡನ್ನೂ ಹೆಚ್ಚಿಸಿಕೊಳ್ಳಬೇಕು, ಗೌರಿಯನ್ನು ವಿಶಿಷ್ಠ ರೀತಿಯಿಂದ ಬೆಳೆಸಬೇಕು.
- ರೇಖಾ ಚಾಮರಾಜ
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ನಿಮ್ಮ ಆತ್ಮವಿಶ್ವಾಸ ಮತ್ತು ಧೈರ್ಯ ನೋಡಿದರೆ ಗೌರಿ ಗುಣವಾಗುವದರಲ್ಲಿ ಸಂಶಯವೇ ಇಲ್ಲ. ಅವಳು ತುಂಬ ಬೇಗ ಗುಣವಾಗಲಿ.
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ಖಂಡಿತ ಶ್ರೀನಿವಾಸ ಅವರೇ, ನನ್ನಲ್ಲಿ ಆ ಆತ್ಮವಿಶ್ವಾಸ ಬಂದಿದೆ. ಯಾವ ಡಾಕ್ಟರು ಏನೇ ಹೇಳಿದರೂ ನನ್ನ ಮಗಳು ಗುಣವಾಗುತ್ತಾಳೆ ಎಂಬ ನಂಬಿಕೆ ನನಗಿದೆ. ನೋಡ್ತಾ ಇರಿ, ಅವಳೂ ಮುಂದೊಮ್ಮೆ ಬ್ಲಾಗ್‌ನಲ್ಲಿ ಬರೆಯುವ ಹಾಗೆ ಆಗುತ್ತಾಳೆ. ಆ ದಿನಗಳೂ ದೂರವಿಲ್ಲ ಅಂತ ಅಂದುಕೊಂಡಿದ್ದೇನೆ.
- ರೇಖಾ ಚಾಮರಾಜ
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ರೇಖಾರವರೇ
ತುಂಬಾ ಹಿಂದೆ ಹಾಯ್ ಬ್ಯಾಂಗಳೂರಿನಲ್ಲಿ ರವಿ ಬೆಳಗೆರೆಯವರು ಒಬ್ಬ ಅಥ್ಲೆಟ್‌ನ ಜೀವನದ ಯಶೋಗಾತೆ ಬರೆದ್ದಿದರು .
ಬೆಂಕಿಯ ಅಪಘಾತದಿಂದ ತನ್ನ ಕಾಲೆರೆಡನ್ನೂ ಕಳೆದುಕೊಂಡ ಹುಡುಗನೊಬ್ಬ ತನ್ನ ತಾಯಿಯ ಛಲದಿಂದ ಒಬ್ಬ್ ಖ್ಯಾತ ಅಥ್ಲೆಟ್ ಆಗಿ ಬೆಳೆಯುವ ನಿಜವಾಗಿ ನಡೆದ ಕತೆ
ಹಾಗಾಗಿ ವಿಕಲ ಚೇತನತೆ ಎಂಬುದು ಮನಸಿಗೆ ಸಂಭಂಧಿಸಿದ ವಿಷಯ ನಿಮ್ಮ ಮಗುವಿಗೆ ಆ ಮನೋಧೈರ್ಯ ತುಂಬಿ . ಅದರ ಮನಸಿಗೆ ಆ ಭಾವನೆ ಎಂದೂ ಬಾರದಂತೆ ವರ್ತಿಸಿ.
ನಿಮ್ಮ ಸಹಕಾರದಿಂದ ನಿಮ್ಮ ಪುಟ್ಟ ಗೌರಿ ಮುಂದೊಂದು ದಿನ ಸಾಧಕತೆಯ ತುದಿಯನ್ನು ತಲುಪಲು ಸಾಧ್ಯ
ಅವಳಿಗೆ ಆ ಚೇತನ ಕೊಡಿ
ಹಾಗು ಅವಳಿಗೆ ಆ ಚೇತನ ಬರಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.
http://thereda-mana.blogspot.com/
ರೂಪ
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ಹೌದು ರೂಪಾ ಅವರೇ, ಅಂತಹ ಬರಹಗಳನ್ನು ನಾನೂ ಓದಿದ್ದೇನೆ. ನನ್ನ ಗಂಡ ಪತ್ರಕರ್ತನಾಗಿರುವುದರಿಂದ, ಅಂತಹ ಬರವಣಿಗೆಗಳನ್ನು ಆಗಾಗ ತೋರಿಸುತ್ತಿರುತ್ತಾರೆ. ನಿಮ್ಮ ಸಲಹೆಗಳಿಗೆ ತುಂಬಾ ಥ್ಯಾಂಕ್ಸ್. ಗೌರಿಗೆ ಯಾವುದೇ ರೀತಿಯ ಕೀಳರಿಮೆ ಕಾಡದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇನೆ. ಅದೇ ರೀತಿ ಗೌರಿಯ ತಂಗಿ ನಿಧಿ ಕೂಡ ಆತ್ಮವಿಶ್ವಾಸ ರೂಢಿಸಿಕೊಂಡು ಬೆಳೆಯುವಂತೆ ಪ್ರಯತ್ನಿಸುತ್ತೇನೆ.
ಇಂತಹ ಸಲಹೆಗಳಿದ್ದರೆ ದಯವಿಟ್ಟು ಬರೆಯಿರಿ. ನನಗೂ ಆತ್ಮವಿಶ್ವಾಸ ಬೆಳೆಯುತ್ತದೆ.
- ರೇಖಾ ಚಾಮರಾಜ
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ರೇಖಾ, ನಿಮ್ಮ ಮಗುವಿಗೆ ನನ್ನ ಒಲವು. ನಿಮ್ಮ ಬರಹಗಳಿಗಾಗಿ ಕಾಯುತ್ತಿರುತ್ತೇನೆ. ಆದರೆ ಒ೦ದು ವಿನ೦ತಿ, ದಯವಿಟ್ಟು ’ವಿಕಲ ಚೇತನ’ ಎ೦ಬ ಪದವನ್ನು ಉಪಯೋಗಿಸಬೇಡಿ. ನಿಮ್ಮ ಮಗುವಿಗೆ ಅಷ್ಟೇ ಅಲ್ಲ ಯಾರಿಗೇ ಆಗಲೀ ಆ ಪದ ಸಲ್ಲ ಎ೦ಬುದು ನನ್ನ ಅಬಿಪ್ರಾಯ. ಏಕೆ೦ದರೆ ನಿಮ್ಮ ಮಗು ಹಾಗೂ ಅ೦ತಹ ಎಲ್ಲರೂ ದೈಹಿಕವಾಗಿ ಅಥವಾ ಸ್ವಲ್ಪ ಮಟ್ಟಿಗೆ ಮಾನಸಿಕವಾಗಿ ಬೇರೆಯವರಿಗಿ೦ತಲೂ ಕಡಿಮೆ ಇರಬಹುದು ಆದರೆ ಅವರೆಲ್ಲರ ಚೇತನ ಬೇರೆಲ್ಲರಿಗಿ೦ತ ಶಕ್ತಿಯುತವಾದುದು. ಅವರ ಚೇತನ ವಿಕಲವಾಗಿಲ್ಲ. ನಮ್ಮೆಲ್ಲರಿಗಿ೦ತ ಅವರು ತು೦ಬ ಮೇಲಿನ ಸ್ತರದಲ್ಲಿರುವವರು. ನಿಮ್ಮ ಮಗುವಿಗೆ ಒಳ್ಳೆಯದಾಗಲಿ. ನಿಮ್ಮ ಚೇತನವೂ ಅವಳೊಡನೆ ಬೆರೆತು ವಿಕಸಿಸಲಿ..ಅರಳಲಿ..
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ನಮಸ್ತೇ ಥ್ಯಾಂಕ್ಸ್. ನೀವು ಹೇಳಿದಂತೆ ನನಗೆ ಆ ಶಬ್ದ ಬರೆಯುವಾಗ ಅಳು ಬಂದಿತ್ತು. ಅದಕ್ಕೆಂದೇ, ನಿಮ್ಮ ಸಲಹೆಯ ಮೇರೆಗೆ ಅದನ್ನು ’ವಿಶಿಷ್ಠಚೇತನ’ ಎಂದು ಬದಲಿಸಿದ್ದೇನೆ. ಗಮನಿಸಿ. ಅದನ್ನು ಏಕೆ ಬರೆದೆನೆಂದರೆ, ಬ್ಲಾಗ್ ಬರೆಯುವ ಉದ್ದೇಶ ನನ್ನ ಗೌರಿಯ ಚಿಕಿತ್ಸೆಗೆ ಸಂಬಂಧಿಸಿದಂತೆ ಬಲ್ಲವರಿಂದ ಏನಾದರೂ ಮಾಹಿತಿ ಸಿಗಬಹುದು ಎಂಬ ಆಸೆಯಿಂದ. ಅದರಿಂದ ಮಗುವಿನ ಬೆಳವಣಿಗೆಗೆ ಏನಾದರೂ ಸಹಾಯವಾಗಬಹುದು ಎಂಬ ಬಯಕೆಯಿಂದ. ಯಾವುದೇ ವಿಷಯದ ಬಗ್ಗೆ ಮುಕ್ತ ಮನಸ್ಸಿನಿಂದ ಮಾತನಾಡಿದರೆ ಮಾತ್ರ ಹೊಸ ವಿಷಯಗಳು ಗೊತ್ತಾಗಬಹುದು ಎಂದು ನನ್ನ ಮನೆಯವರು ಹೇಳುತ್ತಿರುತ್ತಾರೆ. ಬ್ಲಾಗ್ ಶುರು ಮಾಡಿದ್ದೂ ಆ ಕಾರಣಕ್ಕೆ. ನಾವಂತೂ ಯಾರಿಂದಲೂ ಗೌರಿಯ ಸಮಸ್ಯೆ ಮುಚ್ಚಿಟ್ಟಿಲ್ಲ. ಯಾರಾದರೂ ಮನೆಗೆ ಬಂದರೆ ಮೊದಲು ಗೌರಿಯನ್ನು ಪರಿಚಯಿಸುತ್ತೇವೆ. ಇದರಿಂದ ನಮಗೆ ಸಾಕಷ್ಟು ಸಲ ಸಹಾಯವಾಗಿದೆ.
- ರೇಖಾ ಚಾಮರಾಜ
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ರೇಖಾರವರೆ,
ಮಗುವಿಗೆ ಏನಾಗಿದೆ ಎಂದು ವಿವರ ಸ್ವಲ್ಪ ಕೊಡುತ್ತೀರಾ? ನನ್ನ email ಇಲ್ಲಿದೆ
ನಾನಿರುವುದು ಮುಂಬಯಿಯಲ್ಲಿ. ವಿವರ ಕೊಟ್ಟರೆ , ನೋಡೋಣ. ನನಗೆ ಗೊತ್ತಿರುವವರಲ್ಲಿ ವಿಚಾರಿಸಿ ನೋಡುತ್ತೇನೆ ಏನಾದರೂ ಮಾಡಲು ಸಾಧ್ಯವೋ ಎಂದು
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ನನ್ನ email ngnavil@gmail.com
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ನಾರಾಯಣ ಸರ್, ಬಿಡುವು ಮಾಡಿಕೊಂಡು ಗೌರಿಗೆ ಸಂಬಂಧಿಸಿದ ಮಾಹಿತಿಯನ್ನು ನಿಮ್ಮ ಈಮೇಲ್‌ಗೆ ಕಳಿಸುತ್ತೇನೆ. ನಿಮ್ಮ ಸಹಾಯಕ್ಕೆ ತುಂಬಾ ಧನ್ಯವಾದ.
- ರೇಖಾ ಚಾಮರಾಜ
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ಪ್ರತಿಯೊಬ್ಬರಿಗೂ ದೇವರು ಪ್ರತಿಭೆಯನ್ನು ಕೊಟ್ಟಿರುತ್ತಾರೆ. ಹಾಗೆ ನಿಮ್ಮ ಮಗುವಿನಲ್ಲಿರುವ ಪ್ರತಿಭೆಯನ್ನು ನಿಮ್ಮಿಂದ ಬೇಗನೆ ಗುರುತಿಸಲ್ಪಡಲಿ ಹಾಗೆಯೆ ಒಳಿತನ್ನು ಕಾಣಲಿ ಎಂದು ಹಾರೈಸುತ್ತೇನೆ.
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ಹೌದು ರಾಜೇಶ್ವರಿಯವರೇ, ಅವಳಲ್ಲಿ ಕೆಲವೊಂದು ವಿಶಿಷ್ಠ ಪ್ರತಿಭೆಗಳಿವೆ. ಸಂಗೀತ ಎಂದರೆ ಆಕೆಗೆ ತುಂಬಾ ಇಷ್ಟ. ಅದಕ್ಕೆಂದೇ ಹಾರ್ಮೋನಿಯಮ್ ತಂದಿದ್ದೇವೆ. ದಿನಾ ಹಾಡುಗಳನ್ನು ಹಾಡುವುದು ಮಾಡುತ್ತೇನೆ. ಆ ಮೂಲಕ ಆಕೆಯ ವಿಕಾಸಕ್ಕೆ ನೆರವಾಗುವ ಪ್ರಯತ್ನ ನಡೆಸಿದ್ದೇನೆ. ಸಂಗೀತ ಚಿಕಿತ್ಸೆ ಬಗ್ಗೆಯೂ ಕೇಳಿದ್ದೇನೆ. ಸಾಧ್ಯವಾದಾಗ ಅದರ ಜೊತೆಗೆ ನೃತ್ಯ ಚಿಕಿತ್ಸೆ ಕೊಡಿಸುವ ಯೋಚನೆಯೂ ಇದೆ. ನಿಮ್ಮ ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್.
- ರೇಖಾ ಚಾಮರಾಜ
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ರೇಖಾ ಅವರೇ,.. ಗೌರಿ ದಿಟವಾಗಿ ತುಂಬ ಮುದ್ದಾಗಿದಾಳೆ. ಆಕೆಗೆ ಲಗುನೇ ಆರಾಮಾಗಿ ಎಲ್ಲರಿಗಿಂತ ಗುಂಜಿ ಹೆಚ್ಚಿಗೇನೆ ಬುದ್ದಿವಂತೆ ಆಗಲಿ ಅಂತ ನಾನು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ,.. ಮತ್ತು ಇಲ್ಲಿನ ನನ್ನ ಸಂಪದ ಗೆಳೆಯ/ಗೆಳೆತಿಯರಿಗೂ ಪ್ರಾರ್ಥನೆ ಮಾಡಲು ಇಲ್ಲಿ ಹೇಳುತ್ತಿದ್ದೇನೆ,.. ಯಾಕಂದರೆ "ಪ್ರಾರ್ಥನೆ"ಗಳಲ್ಲಿ ಎಂತೆಂತ ಸಮಸ್ಸೆಗಳನ್ನೂ ಬಗೆಹರಿವಂತೆ ಮಾಡುವ ಬಲ ಇದೆ..
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಇಂತಹ ಮಕ್ಕಳನ್ನು ಬೆಳೆಸುವುದು ಹೇಗೆ?
ಧನ್ಯವಾದಗಳು ಸಂಗನಗೌಡರಿಗೆ, ನಿಮ್ಮ ಹಾರೈಕೆಯಂತೆ ನನ್ನ ಮಗಳು ಒಂದು ಗುಂಜಿ ಹೆಚ್ಚಿಗೇನೇ ಬುದ್ಧಿವಂತಳಾಗಲಿ.
- ರೇಖಾ ಚಾಮರಾಜ