19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಏನಿರಬಹುದು ಕಾರಣ....?

September 11, 2008 - 10:47pm
ವಲ್ಲರಿ
ಇತ್ತೀಚಿಗೆ ನಾನು ಅತ್ತೇಯಿಲ್ಲ
ಏನಿರಬಹುದು ಕಾರಣ?
ಕಂಬನಿ ಒರೆಸುವ ಕೈಗಳಿಲ್ಲ
ಎಂದು ಹಿಂಜರಿಯಿತೇನೋ ಮನ!

ದುಃಖವಾದರೆ ಅತ್ತುಬಿಡಬೇಕು
ಅದಕೇಕೆ ಯಾರದೋ ಹಂಗು?
ಮನಸ್ಸೇ ಹೀಗೆ ಮಾತೇ ಕೇಳುವುದಿಲ್ಲ
ಸದಾ ಇಲ್ಲದರದ್ದೇ ಗುಂಗು.

ಕಣ್ಣೀರಿಗೂ ಗೊತ್ತಾಗಿರಬೇಕು
ತನ್ನನ್ನು ನಿರ್ಲಕ್ಷಿಸುತ್ತಿದ್ದಾರೆಂದು,
ಸಮಯ ಸಾಧಿಸಿ ತುಳುಕಿಬಿಡುತ್ತದೆ
ಕೆಲವೊಮ್ಮೆ ಎಲ್ಲರ ಮುಂದೂ.

ಇವರಿಬ್ಬರ ನಡುವಿನ ಕಿತ್ತಾಟದಲ್ಲಿ
ಭಾವನೆಗಳಿಗೆ ನಿರಂತರ ಪೆಟ್ಟು,
ಇದಾವುದರ ಗೊಡವೆ ಬೇಡವೆಂದು
ಓಡಿ ಹೋಗಿದೆ ಬುದ್ಧಿ ಕೈಕೊಟ್ಟು.

ಹೇಗಾದರು ಮಾಡಬೇಕಿದೆ ಬೇಗ
ಇವರ ನಡುವೆ ಸಂಧಾನ,
ಒಂದಷ್ಟು ಹೊಂದಾಣಿಕೆಗಳಾದ ಮೇಲೆ
ಆಗಬಹುದೇನೋ ಸಮಸ್ಯೆ ಶಮನ.  
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ajitmb on
ಮನದ೦ಗಳದಲ್ಲಿ ಕಣ್ನಿನ ಕನಸು ಕ೦ಡ೦ಗಾಯಿತು. ತು೦ಬಾ ಚೆನ್ನಾಗಿ ಮೂಡಿದೆ. ಅಜಿತ. ಉಸಿರಾಡಲು ಮರೆತಿಲ್ಲಾ, ಮರೆತು ಉಸಿರಾಡುತಿರುವೆನು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಅರವಿಂದ್ on
ನಮಸ್ಕಾರ ವಲ್ಲರಿ ಕವನ ತುಂಬಾ ಚೆನ್ನಾಗಿದೆ, ಕವನದ ಸ್ವಾರಸ್ವವೂ ಸುಂದರ, ಕನ್ನಡವೇ ತಾಯ್ನಾಡಿಯು, ಕರುನಾಡು ತಾಯ್ನಾಡು, ಕನ್ನಡಿಗನು ನೀನೆಂಬ ಅಭಿಮಾನವಿರಲಿ. ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಇತ್ತೀಚಿಗೆ ನಾನು ಅತ್ತೇಯಿಲ್ಲ
ಏನಿರಬಹುದು ಕಾರಣ?
ಕಂಬನಿ ಒರೆಸುವ ಕೈಗಳಿಲ್ಲ
ಎಂದು ಹಿಂಜರಿಯಿತೇನೋ ಮನ!

ದುಃಖವಾದರೆ ಅತ್ತುಬಿಡಬೇಕು
ಅದಕೇಕೆ ಯಾರದೋ ಹಂಗು?
ಮನಸ್ಸೇ ಹೀಗೆ ಮಾತೇ ಕೇಳುವುದಿಲ್ಲ
ಸದಾ ಇಲ್ಲದರದ್ದೇ ಗುಂಗು.

ಕಣ್ಣೀರಿಗೂ ಗೊತ್ತಾಗಿರಬೇಕು
ತನ್ನನ್ನು ನಿರ್ಲಕ್ಷಿಸುತ್ತಿದ್ದಾರೆಂದು,
ಸಮಯ ಸಾಧಿಸಿ ತುಳುಕಿಬಿಡುತ್ತದೆ
ಕೆಲವೊಮ್ಮೆ ಎಲ್ಲರ ಮುಂದೂ.

ಇವರಿಬ್ಬರ ನಡುವಿನ ಕಿತ್ತಾಟದಲ್ಲಿ
ಭಾವನೆಗಳಿಗೆ ನಿರಂತರ ಪೆಟ್ಟು,
ಇದಾವುದರ ಗೊಡವೆ ಬೇಡವೆಂದು
ಓಡಿ ಹೋಗಿದೆ ಬುದ್ಧಿ ಕೈಕೊಟ್ಟು.

ಹೇಗಾದರು ಮಾಡಬೇಕಿದೆ ಬೇಗ
ಇವರ ನಡುವೆ ಸಂಧಾನ,
ಒಂದಷ್ಟು ಹೊಂದಾಣಿಕೆಗಳಾದ ಮೇಲೆ
ಆಗಬಹುದೇನೋ ಸಮಸ್ಯೆ ಶಮನ.
-----------------------------------------------

ವಲ್ಲರಿ ಅವ್ರೆ

ಮೂರು ಮುಕ್ಕಾಲು ವರ್ಷದ ಹಿಂದಿನ ನಿಮ್ಮ ಈ ಅಪರೂಪದ ಭಾವೋತ್ಕರ್ಷಣೆಯ ಕವನ ನನಗೆ ಈಗ ಓದಲು ಆಕಾಸ್ಮಾತ್ತಾಗಿ ಸಿಕ್ಕಿತು..

ಇದನ್ನ ನಾ ಮಿಸ್ ಮಾಡಿಕೊಂಡಿದ್ದೆ..

ತುಂಬಾ ಚೆನ್ನಾಗಿದೆ...

ಇಡೀ ಕವನವೇ ಹಿಡಿಸಿದ್ದರಿಂದ ನಾ ಇಡೀ ಕವನವನ್ಣ ಯಥಾವತ್ತಾಗಿ ಮರು ಛಾಪಿಸಿರುವೆ..

(ಇದುವರೆಗೂ ನಾ ನನಗೆ ಹಿಡಿಸಿದ ಬರಹವನ್ಣ ಯಥಾವತ್ತಾಗಿ ಮರು ಛಾಪಿಸಿದ ಉದಾಹರಣೆ ಬಹು ಕಡಿಮೆ ಈ ವಿಷಯದಲ್ಲಿ ನಿಮ್ಮ ಕವನದ ಹೆಗ್ಗಳಿಕೆ ಅದೇ )

ನೀವು ಯಾರಿಬ್ಬರನ್ನ ಉದ್ದೇಶಿಸಿ ಈ ಕವನ ಬರೆದಿರೋ ಗೊತ್ತಿಲ್ಲ
(ನನ್ನ ಊಹೆ- ಪ್ರೇಮಿಗಳಿಬ್ಬರು ಇರಬೇಕು ಅನ್ನಿಸುತ್ತೆ!!)
ಆದರೆ ಭಾವನೆಯನ್ನ ಅಕ್ಷರ ರೂಪಕ್ಕಿಳಿಸಿದ ರೀತಿ ಮೆಚ್ಚುಗೆಯಾಯ್ತು..

ಮೊದಲ ೪ ಸಾಲು ಸೂಪರ್...

ಮತ್ತು ಕೆಲವೊಮ್ಮೆ ನಿಜವೂ ಹೌದು..

ನಿಮ್ಮಿಂದ ಇನ್ನಸ್ತು ಮಟ್ಟಸ್ತು ಮಗಾದಸ್ತು ಈ ತರಹದ ಬರಹಗಳನ್ನ ನಿರೀಕ್ಷಿಸುವೆ..

ಸಂಪದದಲ್ಲಿ ಸಕ್ರಿಯರಾಗಿ
ಶುಭವಾಗಲಿ

************ಯುಗಾದಿಯ ಮುಂಗಡ ಶುಭಾಶಯಗಳು*************

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.