ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ನಯಸೇನನ ಸಲೀಸಾದ ಸಾಲುಗಳು
ತುಂಬ ದಿನ ಆದ ಮೇಲೆ ಯಾವುದಾದರು ಹಳೆಗನ್ನಡದ(ಅಲ್ಲ ಹಿರಿಗನ್ನಡದ) ಕಬ್ಬವೋದಬೇಕೆಂಬ ಆಸೆಯಾಯಿತು. ತುಂಬ ದಿನಗಳ ಕೆಳಗೆ ನಯಸೇನನ 'ದರ್ಮಾಮ್ರುತಂ' ಇಲ್ಲಿಂದ ಇಳಿಸಿಟ್ಟಿದ್ದೆ.
ನಯಸೇನನ ಸಾಲುಗಳನ್ನು ಓದುವಾಗ ತುಂಬ ಕುಸಿಯಾಯಿತು. ಯಾಕಂದ್ರೆ ಯಾವುದೇ ತೊಡಕಿಲ್ಲದೆ ಸಲೀಸಾಗಿ ತಲೆಗಿಳಿಯಿತು. ಈ ಹಿಂದೆ ನಯಸೇನನ ಬಗ್ಗೆ ಇಲ್ಲಿ ಬ್ಲಾಗಿದ್ದೆ. http://sampada.net/blog/10/08/2007/5324
ಒಂದೊಂದೆ ಪದ್ಯಗಳನ್ನು ತೆಗೆದುಕೊಂಡು ನನ್ನ ತಲೆಗೆ ಎಶ್ಟು ಹೊಳೆಯುತ್ತೊ ಅಶ್ಟು ಅರುಹುವೆ. ತಪ್ಪಿದ್ದರೆ ದಾರಾಳವಾಗಿ ತಿದ್ದಿ.
ಪೊಲ್ಲಮೆಗಂಡದನಱಿದುಂ
ಮೆಲ್ಲನೆ ಸಯ್ತಾಗಿ ತಿರ್ದುವರ್ಸುಕವೀಶರ್
ಪೊಲ್ಲಮೆಯಿಲ್ಲದೊಡಂ ಲೇ
ಸಲ್ಲದು ಕ್ರುತಿಯೆಂದು ಕುಕವಿನಿಕರಂ ಪಳಿಗುಂ||
ಬಿಡಿಸಿದರೆ,
ಪೊಲ್ಲಮೆ ಕಂಡ್ ಅದನ್ ಅಱಿದುಂ
ಮೆಲ್ಲನೆ ಸಯ್ತ್ ಆಗಿ ತಿರ್ದು ಅವರ್ ಸುಕವೀಶರ್
ಪೊಲ್ಲಮೆಯಿಲ್ಲದೊಡಂ ಲೇಸ್
ಅಲ್ಲದು ಕ್ರುತಿಯೆಂದು ಕುಕವಿ ಇನಿಕರಂ ಪಳಿಗುಂ
ಪೊಲ್ಲಮೆ= ಕೆಟ್ಟದ್ದು, ಕೀಳುಮಟ್ಟದ್ದು
ತಿರುಳು:
ಒಳ್ಳೆ ಕಬ್ಬಿಗನಾ(ರಾ)ದವನ್ (ರ್) ತಮ್ಮ ಕಬ್ಬದಲ್ಲಿ ಕೆಟ್ಟದ್ದನ್ನು ಅರಿತು ಮೆಲ್ಲನೆ ತಿದ್ದಿ ಅದನ್ನು ಸರಿಪಡಿಸುವನು(ರು). ಈ ತೆರದಿ(ಇನಿಕರಂ) ಕೆಟ್ಟ ಕಬ್ಬಿಗರು ಕಬ್ಬ ನೆಗೞುವುದರಲ್ಲಿ ಅನುಬವ(ಪಳಿಗು) ಪಡೆಯುತ್ತಾರೆ.
ಒಂದು ಕ್ರುತಿಯಲ್ಲಿ ಕೆಟ್ಟದ್ದು(ಅತವ ತಪ್ಪುಗಳು) ಇಲ್ಲದೇ ಇರುವುದು ಲೇಸಲ್ಲ.

- ವೈಭವ ರವರ ಬ್ಲಾಗ್
- Login or register to post comments
- 239 hits
- Email this blog





RSS:
ಪ್ರತಿಕ್ರಿಯೆಗಳು
ಉ: ನಯಸೇನನ ಸಲೀಸಾದ ಸಾಲುಗಳು
ಹಿರಿಗನ್ನಡದ ಸಂಗಿತಿಗೆ ಹಿರಿನನ್ನಿ.!
ಪೊಲ್ = ಹೊಲ್, ( ಪೊಲಸು/ಹೊಲಸು )
ಪೊಲ್ಲ = ಕೆಟ್ಟದ್ದು, ಕೊಳಕು
ಹೊಲೆ/ಹೊಲಸು = impurity...
ಹಿರಿಗನ್ನಡ
ಪೊಲ್ಲಮೆ ಕಂಡ್ ಅದನ್ ಅಱಿದುಂ
ಮೆಲ್ಲನೆ ಸಯ್ತ್ ಆಗಿ ತಿರ್ದುವರ್ ಸುಕವೀಶರ್ ( ತಿರ್ದು ಅವರ್ ಬಿಡಿಸಬೇಡಿ.. )
ಪೊಲ್ಲಮೆ ಇಲ್ಲದ ಒಡಂ ಲೇಸ್
ಅಲ್ಲದು ಕ್ರುತಿ ಎಂದು ಕುಕವಿ-ನಿಕರಂ ಪಳಿಗುಂ ( ಕುಕವಿ-ನಿಕರ = ಕೆಟ್ಟಕವಿಗಳ ಗುಂಪು, ಕುಕವಿ + ಇನಿಕರಂ = ಕುಕವಿಯಿನಿಕರಂ != ಕುಕವಿನಿಕರಂ )
ಹೊಸಗನ್ನಡ
ಹೊಲಸು ಕಂಡು ಅದನ್ನು ಅರಿತು
ಮೆಲ್ಲನೆ ಸರಿಯಾಗಿ/ನ್ಯಾಯವಾಗಿ ತಿದ್ದುವರು ಒಳ್ಳೆಯ ಕಬ್ಬಿಗರು!
ಹೊಲಸು ಇಲ್ಲದ ಇದ್ದರೆ ಲೇಸ್
ಅಲ್ಲ ಕ್ರುತಿ ಎಂದು ಕೆಟ್ಟಕವಿಗುಂಪು ಹಳಿಯುವುದು.
Ka. par̤i to revile, scold, rebuke, scorn, upbraid, deride; n. (also par̤ivu) blame, rebuke, fault, guilt.
’ಪಳಿ’, ’ಪೞಿ’ಯೋ ಯಾವುದು?
ಉ: ನಯಸೇನನ ಸಲೀಸಾದ ಸಾಲುಗಳು
ಗುರುವೆ,
ಅಲ್ಲಿರುವುದು 'ಪಳಿಗು" ಅಂತ, 'ಪೞಿಗು' ಅಲ್ಲ.
ಪಳಿ= ಕ್ರಮ, ಪದ್ದತಿ
ಪೞಿ = ತೆಗೞ್, ಕೀೞ್ಮಾಡು
ಆದ್ದರಿಂದ 'ಕೆಟ್ಟ ಕಬ್ಬಿಗರು ಹೀಗೆ ಪಳಿಗು(ಕ್ರಮಕ್ಕೆ ಬರುವುದು)ವುದು ಅಂತ ಅರಿತ ಬರುತ್ತದೆ ಅನ್ಸುತ್ತೆ.
ನಿಕರ = ಗುಂಪು ? (ನಿಕರ ತದ್ಬವ ನಾ)
ಇಲ್ಲಿ ಇನ್ನೊಂದು ವಿಸ್ಯ,
ಈ ನಯಸೇನ ಹಲವು ಬಗೆಗಳಲ್ಲಿ(ಕಬ್ಬದ ತಿರುಳನ್ನು ನೋಡಿದರೆ) ಆಂಡಯ್ಯನನ್ನೇ ಹೋಲುತ್ತಾನೆ.
೧) ಸಕ್ಕದ ಬೆರೆಸುವುದನ್ನ ಬಲವಾಗಿ ಬೇಡವೆನ್ನುತ್ತಾನೆ.
೨) ಆ ಹೊತ್ತಿನಲ್ಲಿ ಕಬ್ಬ ಬರೆಯುವುದಕ್ಕೆ ಇದ್ದ ಕಟ್ಟುಪಾಡುಗಳನ್ನು ಮತ್ತು ಕೆಲವು ಟ್ರೆಡಿಶನಲ್ ಎನ್ನಬಹುದಾದ ಕಬ್ಬಿಗರ ಬಗ್ಗೆ ಇವನಿಗೆ ಸಿಟ್ಟಿದೆ ಅನ್ಸುತ್ತೆ.
೩) ಆಂಡಯ್ಯನ ತೆರ ತೀರ ಸಿಡಿದೇಳದಿದ್ದರೂ ಕಬ್ಬ ನೆಗೞುವುದರಲ್ಲಿ ತನ್ನತನ ಉದ್ದಕ್ಕೂ ಮೆರೆದಿದ್ದಾನೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ನಯಸೇನನ ಸಲೀಸಾದ ಸಾಲುಗಳು
ಪಳಿಗು ಬಗ್ಗೆ ತಿಳಿಸಿದಕ್ಕೆ ನನ್ನಿ...
ಆದರೆ
ವೆಂಕಟಸುಬ್ಬಯ್ಯರ ನಿಗಂಟು
೧. ನಿಕರ (ಸಂ) (ನಾ) ೧ ಗುಂಪು, ಸಮೂಹ ೨ ಯೋಗ್ಯವಾದ ಪಾರಿತೋಷಕ, ಗೌರವದ ಕಾಣಿಕ . ಇಲ್ಲಿ ನಿಮ್ಮ ಬಿಡಿಸು ಸರಿಯಿಲ್ಲ.. ಅದನ್ನು ತಿಳಿಸಿದ್ದೀನಿ.
ಶ್ರೀವನಿತೆಯರಸನೇ....
.....ಸನಕಾದಿಸಜ್ಜನ’ನಿಕರ’ದಾತಾರ
......ಗದುಗಿನ ವೀರನಾರಾಯಣ
ಇನ್ನು ನಯಸೇನನ ಒಳಸಂಗತಿಯರಿವಿಲ್ಲ.
ಉ: ನಯಸೇನನ ಸಲೀಸಾದ ಸಾಲುಗಳು
ಬಸವಣ್ಣನವರ ವಚನಗಳಲ್ಲಿ "ಹೊಲ್ಲ" ಪದ ಹೆಚ್ಚಾಗಿ ಬಳಸಲ್ಪಟ್ಟಿದೆ. ನನಗೆ ಅನ್ನಿಸೋದು. ನಾವು ಹಳಗನ್ನಡ ಕಾವ್ಯವನ್ನು ಸುಮ್ಮನೆ ಸೃಜನಶೀಲ ದೃಷ್ಟಿಯಿಂದ ನೋಡಬಾರದು. ನೋಡು, ಈ "ಹೊಲ್ಲ" ಪದವನ್ನು ನಾವು ಮನಸ್ಸು ಮಾಡಿದರೆ, ಎಷ್ಟೋ ಕಡೆ ಗ್ರಾಂಥಿಕವಾಗಿ ಬಳಸಬಹುದು.
"ಹಳ್ಳಿಗಳಲ್ಲಿ ಶಾಲೆಗಳಿರದಿರೆ ಹೊಲ್ಲ" ಅಂತ ಸಿಂಪಲ್ಲಾಗಿ ಸ್ಲೋಗನ್ನುಗಳನ್ನು ಮುಂದೆತರಬಹುದಲ್ವಾ. ಹಾಗೆಯೇ, "ಕುಡಿದ ಅಮಲಿನಲ್ಲಿ ಗಾಡಿ ಓಡಿಸುವದು ಹೊಲ್ಲ", ಅಥವಾ "ಕುಡಿದ ಅಮಲಿನಲ್ಲಿ ಗಾಡಿ ಓಡಿಸಬೇಡಿ". ಅದನ್ನು ಬಿಟ್ಟು, ಸರ್ಕಾರ ಬಿಟ್ಟಿಯಾಗಿ ಕುಡಿಯೋದಕ್ಕೆ ಆಹ್ವಾನ ನೀಡಿತ್ತೆ. ನೋಡಿಲ್ಲಿ,
"ಮದ್ಯಪಾನ ಮಾಡಿ,
ಅದು ಬೇರೆ ಬೇರೆ ಲೈನಿನಲ್ಲಿ, ಕಾಮಾದೊಂದಿಗೆ.
ವಾಹನ ಚಾಲನೆ ಮಾಡಬೇಡಿ"
ಉ: ನಯಸೇನನ ಸಲೀಸಾದ ಸಾಲುಗಳು
ಲೇ..
ಹೊಲೆ/ಹೊಲ್/ಹೊಲಸು/ಹೊಲ್ಲಮೆ ಎಲ್ಲ ಒಂದೆ.
ಹೊಲ್ಲಮೆ = impurity, ದೋಶ
ಉ: ನಯಸೇನನ ಸಲೀಸಾದ ಸಾಲುಗಳು
ಕುಕವಿ ಇನಿಕರ ಅಲ್ಲ. ಕುಕವಿನಿಕರ ಅಂದರೆ ಕುಕವಿಗಳ ಗುಂಪು. ಪಳಿಗುಂ ಅಲ್ಲ. ಪೞಿಗುಂ ಸರಿಯಾದ ಶಬ್ದ.
ಉ: ನಯಸೇನನ ಸಲೀಸಾದ ಸಾಲುಗಳು
ಅಲ್ಲ,
ಅದು ಪಳಿಗುನೆ,
ಪಳಿ = ಕ್ರಮ
ಪೞಿ= ತೆಗಳ್, ಕೀೞ್ಮಾಡು
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು