Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"

March 4, 2008 - 9:44pm — ವೈಭವ

ನಯಸೇನ, ದಿನಬದುಕಿನಲ್ಲಿ ತುಂಬ ಪಳಗಿದ ಹಯ್ದ ಅಂತ ತಿಳಿಸೋಕೆ ಈ ಕೆಳಗಿನ ಸಾಲುಗಳು ಮಾದರಿ

ಕಂಪಿಲ್ಲದ ತುಪ್ಪಮುಂ
ಪೆಂಪಿಲ್ಲದ ಪ್ರಬುತ್ವಮುಂ
ಸ್ನೇಹಮಿಲ್ಲದ ಕೋಡುಂ
ಮೋಹಮಿಲ್ಲದ ಬಾೞುಂ
ಬಕುತಿಯಿಲ್ಲದ ಕೊಂಡಾಟಮುಂ
ಶಕುತಿಯಿಲ್ಲದ ಸೆಣಸುಂ
ಕೋಡಿಲ್ಲದ ಸಿರಿಯುಂ
ನಾಡಿಲ್ಲದರಸುಂ
ಪಲವಿಲ್ಲದ ತೋಟಮುಂ
ಕುಲಮಿಲ್ಲದ ಮಹಿಮೆಯುಂ
ಬಟ್ಟೆಯಿಲ್ಲದ ಪಯಣಮುಂ
ಪಟ್ಟಣಮಿಲ್ಲದ ರಾಜ್ಯಮುಂ
ಕಿಚ್ಚಿಲ್ಲದಡುಗೆಯುಂ
ನೆಚ್ಚಿಲ್ಲದ ಪೆಂಡತಿಯುಂ
ದಯೆಯಿಲ್ಲದ ನೆಗೞ್ತೆಯುಂ
ನಯಮಿಲ್ಲದ ಸೇವೆಯುಂ
ಬಂಡಮಿಲ್ಲದಂಗಡಿಯುಂ
ಗಂಡನಿಲ್ಲದ ಸತಿಯುಂ
ಮೊದಲಿಲ್ಲದ ಪರದುಂ
ಮದಮಿಲ್ಲದಾನೆಯುಂ
ನೀರಿಲ್ಲದೂರುಂ
ಕೇರಿಲ್ಲದ ಮನೆಯುಂ
ಶ್ರುತಮಿಲ್ಲದ ತಪಮುಂ
ತುಪ್ಪವಿಲ್ಲದೂಟಮುಂ
ಸಮಱಿದರುಸನಮಿಲ್ಲದ ದಾನಮುಂ ತಪಮುಂ ಜಪಮುಂ ದರ್ಮಮುಮೊಪ್ಪಲಾರ್ಕುಮೆ?

ಗಮನಿಕೆ:

೧) ಮತ್ತೆ ಮೇಲಿನ ಪದ್ಯ ತುಂಬಾ ಸಲೀಸಾದ ಸಾಲುಗಳು

೨) ಕೇರಿಲ್ಲದ ಮನೆಯುಂ ..ಅಕ್ಕಿ ಕೇರುವುದು ಅಂತ ನಮ್ಗಳ ಮನೆಗಳಲ್ಲಿ ಹೆಂಗಸರು ಹೇಳುತ್ತಿರುತ್ತಾರೆ... ನೆನಪಿಸಿಕೊಳ್ಳಿ. ಇಲ್ಲಿ 'ಕಸ ಗುಡಿಸದ ಮನೆ' ಅಂತ ಅರಿತುಕೊಳ್ಳಬಹುದು

೩) ತುಪ್ಪವಿಲ್ಲದೂಟಂ: ನಾವು ಕನ್ನಡಿಗರು ತುಪ್ಪ ತುಂಬ ಬಳಸ್ತಿವಿ ಅಂತ ನನ್ನ ತಮಿಳು ಒಡಕೆಲಸಗಾರರು ಹೇಳುತ್ತಿರುತ್ತಾರೆ. ಕನ್ನಡಿಗರು ತುಪ್ಪವಿಲ್ಲದ ಊಟವನ್ನು ಊಹಿಸಿಕೊಳ್ಳಲಾರರು ಅನ್ಸುತ್ತೆ.

೪) ಕೊನೆಸಾಲಿನಲ್ಲಿ ದರುಮದ ಬಗ್ಗೆ ಯಾವುದೆ ತೀರ್ಪನ್ನೀಯದೆ(ಸಮಱಿದರುಸನ=ಸಮ್ಯಗ್ದರ್ಶನ) ಕೇಳ್ಮೆಯಾಗಿ ಇಟ್ಟಿರುವುದು ನಯಸೇನನ ಜಾಣ್ಮೆಗೆ ಕಯ್ಗನ್ನಡಿ.

ಸಮಱಿದರುಸನ ಅಂದ್ರೇನು?

Ornamental seperator
  • ವೈಭವ ರವರ ಬ್ಲಾಗ್
  • Login or register to post comments
  • 198 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 4, 2008 - 10:05pm — Sunil Jayaprakash

ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"

Sunil Jayaprakash's picture

samaṟu, savaṟu to make proper, fit, neat or beautiful, trim; n. trim, decoration;

  • Login or register to post comments
  • link
  • Email this ಪ್ರತಿಕ್ರಿಯೆ
March 4, 2008 - 10:28pm — ವೈಭವ

ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"

ವೈಭವ's picture

ಅದೇ ಪ್ರಾಪರ್ ದರುಸನ ಅಂದ್ರೇನು?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
March 4, 2008 - 10:44pm — Sunil Jayaprakash

ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"

Sunil Jayaprakash's picture

ಸಮ್ಯಗ್ದರ್ಶನ -> ಇದರ ಬಳಕೆ ವಿವೇಕಚೂಡಾಮಣಿಯಲ್ಲಿ ಆಗಿದೆ. ಬೆನಕ ಅವರು ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಬಲ್ಲರು ಅನ್ನಿಸತ್ತೆ. ನಯಸೇನ ಇದನ್ನು ಸಮರಿದರುಸನ ಅಂತ ಬಳಸಿರುವುದನ್ನು ನೋಡಿ ಅಚ್ಚರಿಯಾಯಿತು. ಏಕೆಂದರೆ ನಾನು ಓದಿದ್ದ ಪುಸ್ತಕದಲ್ಲಿ, "ಸಮ್ಯಗ್ದರ್ಶನ ನಿಷ್ಠಯಾ" ಎಂಬುದನ್ನು, "ಸಮ್ಯಕ್ ದರ್ಶನ ನಿಷ್ಠೆಯಿಂದ" ಎಂಬುದಾಗಿ ಅನುವಾದ ಮಾಡಿದ್ದರು.

  • Login or register to post comments
  • link
  • Email this ಪ್ರತಿಕ್ರಿಯೆ
March 5, 2008 - 9:34am — Sunil Jayaprakash

ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"

Sunil Jayaprakash's picture

ಸಮಱಿದರುಸನ - ಸಮ್ಯಗ್ದರ್ಶನವೇ ಆಗಿದ್ದರೆ, ಇದಕ್ಕೆ ಇದೇ ಅರ್ಥ ಎಂಬುದು ಇರಲಾರದು. ಏಕೆಂದರೆ, ವೈದಿಕರೂ ಇದರ ಬಳಕೆ ಮಾಡಿದ್ದಾರೆ, ಜೈನರೂ ಇದರ ಬಳಕೆ ಮಾಡಿದ್ದಾರೆ. ಭರತೇಶವೈಭವದಲ್ಲಿ ಇದನ್ನು ನೋಡಿದ್ದೇನೆ.

ಬಹುಶಃ ಇದನ್ನು "ನಂಬುಗೆಯ ಅರಿವು" - ಸೈದ್ಧಾಂತಿಕ ಅನುಭೂತಿ ( ಸ'ಕ್ಕು'ದಿಸಿದ ಕನ್ನಡ ) = doctrinal empathy ಎನ್ನಬಹುದೋ ಏನೋ.

  • Login or register to post comments
  • link
  • Email this ಪ್ರತಿಕ್ರಿಯೆ
March 4, 2008 - 10:10pm — Sunil Jayaprakash

ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"

Sunil Jayaprakash's picture

ನಯಸೇನ ಇಷ್ಟು ಸರಳವಾಗಿ ಬರೆದಿದ್ದಾನಾ.

  • Login or register to post comments
  • link
  • Email this ಪ್ರತಿಕ್ರಿಯೆ
March 4, 2008 - 10:20pm — hamsanandi

ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"

hamsanandi's picture

ಒಳ್ಳೆಯ ಸಾಲುಗಳು.

ಭಕ್ತಿಯಿಲ್ಲದ ಕೊಂಡಾಟಮಂ ಎನ್ನುವ ಪ್ರಯೋಗ ವಿಶಿಷ್ಟವಾಗಿದೆ. ಇಂದಿನ ಕನ್ನಡದಲ್ಲಿ ಕೊಂಡಾಡು - ಅನ್ನುವುದನ್ನು ಕೇವಲ praise ಎನ್ನುವ ಅರ್ಥದಲ್ಲಿ ಕೇಳಿದ್ದೆ. ಇಲ್ಲಿ ಅದನ್ನು ಆಚರಣೆ ಎನ್ನುವ ಅರ್ಥದಲ್ಲಿ ಬಳಸಿದ್ದಾನೆ ಕವಿ. ತಮಿಳಿನಲ್ಲಿ ಈಗಲೂ ಅದೇ ಅರ್ಥ (celebrate) ಇರುವುದನ್ನು ಗಮನಿಸಬಹುದು ( ಉದಾ: ಪೊಂಗಲ್ ವಿೞಾ ಕೊಂಡಾಡಲ್ಪಟ್ಟದು - ಸಂಕ್ರಾಂತಿ ಉತ್ಸವವನ್ನು ಆಚರಿಸಲಾಯಿತು; ಅದು ಪೆರಿಯ ಕೊಂಡಾಟ್ಟಂ - ಅದು ಬಹಳ ವಿಜೃಂಭಣೆಯ ಆಚರಣೆ ಇತ್ಯಾದಿ).

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • Email this ಪ್ರತಿಕ್ರಿಯೆ
March 4, 2008 - 10:43pm — ವೈಭವ

ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"

ವೈಭವ's picture

ನನ್ನಿ,
ನಾವು ಹೇಳಬಹುದು 'ಹೆಕ್ಕೊಂಡಾಟ' (ಪೆರ್+ಕೊಂಡಾಟ) ಅಂತ

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
March 4, 2008 - 10:35pm — Sunil Jayaprakash

ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"

Sunil Jayaprakash's picture

ತುಪ್ಪದ ವಿಚಾರ ಮಾತ್ರ ಎತ್ತಲೇ ಬೇಡಪ್ಪಾ Smiling ಸೋಮೇಶ್ವರ ಶತಕದಲ್ಲಿಯೂ ಇದು ಬೆಳಕಿಗೆ ಬಂದಿದೆ.

  • Login or register to post comments
  • link
  • Email this ಪ್ರತಿಕ್ರಿಯೆ
March 4, 2008 - 11:20pm — hamsanandi

ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"

hamsanandi's picture

ಹ್ಹ ಹ್ಹ Smiling ಪುರಂದರದಾಸರ ಕೃತಿಗಳೊಂದಷ್ಟನ್ನು ಈಗ ನೋಡಿದೆ - ಹಲವಾರು ಕಡೆ ತುಪ್ಪದ ಪ್ರಸ್ತಾಪ ಆಗಿದೆ. ಕೆಲವು ಅಚ್ಚರಿ ತರಿಸುವ ಹಾಡುಗಳೂ ಕಂಡವು. ಮತ್ತೊಮ್ಮೆ ಹಂಚಿಕೊಳ್ಳುತ್ತೇನೆ.

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಯಸೇನನ ಸಲೀಸಾದ ಸಾಲುಗಳು - ಬಿಡಿ 9 - ಸೊಗಸುಗಾರ ನಮ್ಮ ನಯಸೇನ
  • ನಯಸೇನನ ಸಲೀಸಾದ ಸಾಲುಗಳು
  • ನಯಸೇನನ ಸಲೀಸಾದ ಸಾಲುಗಳು -ಬಿಡಿ ೧೦- ಸೊಡರು ಮತ್ತು ಕಿಚ್ಚು
  • ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
  • ನಯಸೇನನ ಸಲೀಸಾದ ಸಾಲುಗಳು - ಬಿಡಿ ೬ - ಯಾವುದು ಮಿಗೆ ಪಿರಿದು ಸಂತಸ ?
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 6 ಅತಿಥಿಗಳು ಆನ್ಲೈನ್ ಇರುವರು.

ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-|
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು -- ಮಂಕುತಿಮ್ಮ ||

— ಡಿ. ವಿ. ಜಿ.

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator