ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ಕವಿರಾಜಮಾರ್ಗದಲ್ಲಿ ಮಾತಱಿವಂ, ನಿಪುಣಂ, ಜಾಣಂ ಮತ್ತು ಬಲ್ಲಂ

June 6, 2008 - 10:45pm — ವೈಭವ

ಕುಱಿತಂತು ಪೆಱರ ಬಗೆಯಂ
ತೆಱೆದಿರೆ ಪೆಱರ್ಗಱಿಪಲಾರ್ಪವಂ ಮಾತಱಿವಂ
ಕಿಱಿದಱೊಳೆ ಪಿರಿದುಮರ್ಥಮ
ನಱಿಪಲ್ ನೆಱೆವಾತನಾತನಿಂದಂ ನಿಪುಣಂ

ತಿರುಳು: ಮೇಲೆ ತಿಳಿಸಿದ ಬೇರೆಯವರ(ಕಬ್ಬಿಗರ) ಬಗೆಯನ್ನ(ಕಬ್ಬದ,ಮಾತಿನ) ಬಿಡಿಸಿ ಮತ್ತೆ ಬೇರೆಯವರಿಗೆ ಅರುಹಲಾಗುವವನು ಮಾತಱಿವಂ(ನ್)/ವಾಗ್ಮಿ(speaker)
              ಕಡಿಮೆ ಪದಗಳನ್ನು ಬಳಸಿ ಅದರಲ್ಲಿ ಹಿರಿದಾದ ವಸ್ತು,ವಿಶಯವನ್ನ ತುಂಬಿ ಅರುಹಲಾಗುವವನು ನಿಪುಣಂ(ನ್)

ನುಡಿಯಂ ಛಂದದೊಳೊಂದಿರೆ
ತೊಡರ್ಚಲಱಿವಾತನಾತನಿಂದಂ ಜಾಣಂ
ತಡೆಯದ ಮಹಾದ್ವಕೃತಿಗಳ
ನೊಡರಿಸಲಾರ್ಪಾತನೆಲ್ಲರಿಂದಂ ಬಲ್ಲಂ

ತಿರುಳು: ನುಡಿಯೊಳಗೆ ಚಂದಸ್ಸನ್ನು ಹೊಂದಿಸಿ(ತೊಡರ್ಸಿ) ಬರೆಯಲು ಅಱಿತವನು ಜಾಣಂ(ನ್)
             ಕೂಡಲೆ ಹೆಗ್ಗಬ್ಬಗಳನ್ನು ಹುಟ್ಟಿಸು(ಒಡರಿಸು)ವವನು ಎಲ್ಲರಿಗಿಂತ ಬಲ್ಲಂ(ನ್)/ಪಂಡಿತ

ತಿರುಳಿನ ಬಗ್ಗೆ ನಿಮ್ಮ ಕೆಡೆನುಡಿಗಳಿಗೆ ನಲ್ವರವು(ಸ್ವಾಗತ)

  • ಕವಿರಾಜಮಾರ್ಗ ಸಿರಿವಿಜಯ ನ್ರುಪತುಂಗ ನೃಪತುಂಗ ಮಾತಱಿವಂ ನಿಪುಣಂ ಜಾಣಂ ಬಲ್ಲಂ
~.~
  • ವೈಭವ ರವರ ಬ್ಲಾಗ್
  • Login or register to post comments
  • 171 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 7, 2008 - 10:55am — mahesha

ಉ: ಕವಿರಾಜಮಾರ್ಗದಲ್ಲಿ ಮಾತಱಿವಂ, ನಿಪುಣಂ, ಜಾಣಂ ಮತ್ತು ಬಲ್ಲಂ

mahesha's picture

ಕೆಡೆನುಡಿಯಿಲ್ಲ ಒಡನುಡಿ ಅಯಿತೆ..

ಆನ್ ಬಿಡಿಸಲ್ ತಿಣಿಕಿರ್ಪೆನ್.. Smiling

ಕುಱಿತಂತು ಪೆಱರ ಬಗೆಯಂ
ತೆಱೆದಿರೆ ಪೆಱರ್ಗಱಿಪಲಾರ್ಪವಂ ಮಾತಱಿವಂ
ಕಿಱಿದಱೊಳೆ ಪಿರಿದುಮರ್ಥಮ
ನಱಿಪಲ್ ನೆಱೆವಾತನಾತನಿಂದಂ ನಿಪುಣಂ

ಕುಱಿತು ಅಂತು ಪೆಱರ ಬಗೆಯನ್
ತೆಱೆದಿರೆ ಪೆಱರ್ಗೆ ಅಱಿಪಲ್ ಆರ್ಪ-ಅವನ್ ಮಾತ್-ಅಱಿವನ್
ಕಿಱಿದಱ-ಒಳೆ ಪಿರಿದುಂ ಅರ್ಥಮನ್
ಅಱಿಪಲ್ ನೆಱಿ-ಮಾತನ್ ಆತನಿಂದಂ ನಿಪುಣನ್

ಕುಱಿತು = ಗುರಿ ಮಾಡಿ, ಉದ್ದೇಶಿಸಿ
ಅಂತು = ಹಾಗೆ, ಅಲಾ, ಆ ಬಗೆಯಲ್ಲಿ, ಆ ತೆಱನಿದೆ ಎಂದು
ಬಗೆಯನ್ = ಬಗೆಯನ್ನು, ರೀತಿಯನ್ನು, ಶಯಿಲಿಯನ್ನು
ತೆಱಿದಿರೆ = ತೆಱಿದಿಟ್ಟರೆ, ಬಿಚ್ಚಿ ಹೇೞಿರೆ, ಬಗೆಬಗೆಯಾಗಿ ಹೇೞಿರೆ
ಪೆಱರ್ಗೆ = ಬೇಱೆಯವಱಿಗೆ, ಅನಿಯರಿಗೆ
ಅಱಿಪಲ್ = ಅಱುಹಲ್, ತಿಳಿಸಲ್, ಬೋದಿಪಲ್
ಆರ್ಪವನ್ = ಆರ್ಪುವುಳ್ಳವನ್, ಸಮರ್ತನಾದವನ್, ಶಕುತಿಯುಳ್ಳವನ್
ಮಾತ್-ಅಱಿವನ್ = ಮಾತು ಅಱಿಯುವನು, ನುಡಿ ತಿಳಿಯುವನು, ಬಾಶೆಯ ಜ್ನಾನವುಳ್ಳವನ್
ಕಿಱಿದಱ = ಕಿಱಿದು ಅದಱ, ಚಿಕ್ಕದರ, ಸಣ್ಣಗೆ ಇದುವುದಱ
ಕಿಱಿದಱೊಳೆ = ಚಿಕ್ಕದರಲ್ಲೇ, ಸಣ್ಣಗೇನೇ, ಸಂಕ್ಶಿಪ್ತವಾಗೇ
ಪರಿದುಂ = ಹಿರಿದು, ದೊಡ್ಡದು, ಮಹತ್ತರವಾದುದು, ಉನ್ನತವಾದುದು
ಅರ್ಥಮನ್ = ಅರ್ತವನ್ನ, ಹುಱುಳನ್ನು, ತಿರುಳನ್ನು, ಸಾರವನ್ನು
ಅಱಿಪಲ್ = ಹೇೞಲ್, ಅಱುಹಲ್, ತಿಳಿಸಲ್
ನೆಱೆ-ಮಾತಂ = ಕೂಡಿಸಿದ ಮಾತನ್ನು, ಹೆಣೆದ ನುಡಿಯನ್ನು, ಹೊಸೆದ ಮಾತನ್ನು, ಓಜಿದ ಮಾತನ್ನು
ಆತನಿಂದಂ = ಅವನಿಂದ
ನಿಪುಣನ್ = ಬಲ್ಲನ್, ಹೆಜ್ಜಾಣನ್, ಪೆೞಗಿದವನ್

ತಿಳಿವು :

ಬೇಱೆಯವರ ಬಗೆಯನ್ನು ಶಯಿಲಿಯನ್ನು ಬರೆವಣಿಗೆಯನ್ನು ಬಿಚ್ಚಿ, ಬಗೆಬಗೆಯಾಗಿ ವಿದವಿದವಾಗಿ ಬಿಡಿಸಿ ಬಿಡಿಸಿ ಬೇಱೆಯವರಿಗೆ ಹೇೞಿರೆ(ತಾನು ಅಱಿತುದಲ್ಲದೇ ಬೇಱೆಯವರಿಗೆ ಅಱುಹುವುದು) ಮಾತನ್ನು ನುಡಿಯನ್ನು ಬಾಶೆಯನ್ನು ಅಱಿತವನು, ಬಲ್ಲನು, ತಿಳಿದವನು.

ಚಿಕ್ಕದಾಗಿ, ಕಿಱಿದರಲ್ಲೇ, ಸಣ್ಣಗೇನೇ ಹಿಱಿದು, ದೊಡ್ಡದು, ಮಹತ್ತರವಾದ ಸಂಗತಿಯ ಹುಱುಳನ್ನು ತಿರುಳನ್ನು ಅರ್ತವನ್ನು ಸಾರವನ್ನು ತಿಳಿಸಲು, ಅಱುಹಲು, ಹೇೞಕೊಡಲು( ತಾನು ಕಲಿತು, ಬೇಱೆಯವಱಿಗೆ ತಿಳಿಸುವುದು. ) ಜೋಡಿಸಿದ ಮಾತು, ಓರಣದ ಮಾತು ಆ ನಿಪುಣನಿಂದ (ಆಗುವುದು).
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ನಯಸೇನನ ಸಲೀಸಾದ ಸಾಲುಗಳು - ಬಿಡಿ ೮ - ಕೆಟ್ಟವರ/ಸಿತಗರ ಒಡನಾಟ
  • ಕಬ್ಬದ ಸವಿ
  • ದ ಗ್ರೇಟ್ ಡಿಬೇಟರ್‍ಸ್- ಒಂದು ಸಿನಿಮಕತೆ
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಲಿನಕ್ಸಾಯಣ - ೧೬ - ಉಬುಂಟು ನನ್ನ ಭಾಷೆಯಲ್ಲಿ?
  • ಒದ್ದಾಡುವ ನೆನಪುಗಳು..
  • ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ..!
  • ನನ್ನ ಮುದ್ದು ಕೋತಿಗೆ !
  • ಅಮ್ಮ ನ ನೆನಪು ಮತ್ತು ಫಾರಿನ್ನು .:)
  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shashikannada
    ಉ: ಕನ್ನಡ ಭಾಷೆ ಎಷ್ಟು ಹಳೆಯದು?
    August 30, 2008 - 6:26pm
  • spruhi
    ಉ: ಅಮ್ಮ ನ ನೆನಪು ಮತ್ತು ಫಾರಿನ್ನು .:)
    August 30, 2008 - 6:21pm
  • spruhi
    ಉ: ಕನ್ನಡ ಮಾತಾಡಿ, ಮಜಾ ಮಾಡಿ
    August 30, 2008 - 6:16pm
  • cmariejoseph
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 5:56pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:48pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:39pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:35pm
  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
  • cmariejoseph
    ಉ: ಒಂದು ನಾಯಿ ಕತೆ
    August 30, 2008 - 5:00pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 62 ಅತಿಥಿಗಳು ಆನ್ಲೈನ್ ಇರುವರು.


ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು |
ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ ||
ನಿತ್ಯಜೀವನದಿ ನೀನಾ ನಯವನನುಸರಿಸೊ |
ಸತ್ವದಾಶೆಯ ನೀಗಿ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator