ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
ನಮ್ಮ ಕನ್ನಡದಲ್ಲಿ 'ಪು' ತುಂಬ ಮುಕ್ಯವಾದುದು. ಇದರಿಂದ ನಾವು ಕೆಲಸದೊರೆ/ಕ್ರಿಯಾಪದವನ್ನ ಹೆಸರೊರೆ/ನಾಮಪದವನ್ನಾಗಿಸುವಾಗ ತುಂಬ ಬಳಕೆಗೆ ಬರುತ್ತೆ.
ಗಮನಿಸಿ. ಕನ್ನಡ ಕೆಲಸದೊರೆಗೆ ಬೆಲೆ ಕೊಡುವ ನುಡಿ(ಇದರ ಬಗ್ಗೆ ತಿಳಿದುಕೊಳ್ಳಲು ಶಂಕರಬಟ್ಟರ ಹೊತ್ತಿಗೆಗಳನ್ನು ಓದಿ). ನಮಗೆ ಆಗಾಗ ನಾಮಪದಿಸುವಿಕೆ ಮಾಡುವಾಗ ತಬ್ಬಿಬ್ಬಾಗುತ್ತೇವೆ. ಈ ಕೊರತೆಯನ್ನು ನೀಗಿಕೊಳ್ಳಲು ನಾವು ಕೆಲಸದೊರೆಗೆ ಕೊನೆಯಲ್ಲಿ 'ಪು' ಸೇರಿಸಿ ಸಲೀಸಾಗಿ ಹೆಸರೊರೆಯ ರೂಪಕ್ಕೆ ಇಳಿಸಬಹುದು.
ಇದಕ್ಕೆ ಈಗಾಗಲೆ ಇರುವ ಹಲವು ಮಾದರಿಗಳು ಇಂತಿವೆ:-
ಕೆಲಸದೊರೆ -> ಹೆಸರೊರೆಯ ರೂಪ
ನೆನೆ -> ನೆನಪು
ನೆರ್ -> ನೆರ್ಪು-> ನೆಪ್ಪು(ಪರಿಚಯ) ಮಾದರಿ: ಈ ಊರಲ್ಲಿ ನೆಪ್ಪಿನವರಿಲ್ಲ
ಸಯ್ -> ಸಯ್ಪು (ಸಯ್ ಪು)
ಹೊಳೆ -> ಹೊಳಪು
ತಣ್ -> ತಂಪು
ನೋನ್ -> ನೋಂಪು
ಕೆನ್ -> ಕೆಂಪು
ಬರೆ -> ಬರೆಪು
ಜೋಮ್ -> ಜೋಂಪು,ಜೊಂಪು
ತಿರುಗ್ -> ತಿರುಪು(screw) -> ತಿರುವು(cross)
ನುಣ್ -> ನುಣುಪು
ಮರೆ -> ಮರೆಪು -> ಮರೆವು
ಇನ್ -> ಇಂಪು
ಸೊನ್(?) -> ಸೊಂಪು
ಅಡ -> ಅಡಪು -> ಆಡವು (ಒತ್ತೆಯಿಡು)
ಅದ್ -> ಅದುಪು -> ಅದುಕು
ಇಮ್ -> ಇಂಪು
ಉಡು -> ಉಡುಪು
ಉರಿ -> ಉರಿಪು
ಎರ -> ಎರಪು -> ಎರವಲು
ತೆರೆ -> ತೆರಪು(opener) -> ತೆರೆವು(vacate)
ಕರ್ -> ಕರ್ಪು -> ಕಪ್ಪು
? -> ಕದಪು(?)
ಒರ್ -> ಒರ್ಪು -> ಒಪ್ಪು
ಮುಡಿ-> ಮುಡಿಪು, ಮುಡುಪು (ಮೀಸಲು)
ನೆರೆ -> ನೆರೆಪು(ಸಂಗ್ರಹ)
ಒಳ್ -> ಒಳ್ಪು (ಯೋಗ್ಯತೆ,ತಕ್ಕುಮೆ)
ಪದ -> ಪದಪು(ಹೆಬ್ಬಯಕೆ,ಬೆಡಗು,ಸಂತಸ)
ಹರಿ -> ಪರೆಪು-> ಹರೆವು( ಪ್ರಸಾರ, ವಿಸ್ತಾರ)
ಅಱು -> ಅಱುಪು -> ಅರುಹು(communicate)
ಕುಱುಪು -> ಕುರುಹು -> ಕುರುವು (ಗುರುತು)
ಇಲ್ಲಿ ಕೆಲವು ಹೊಸಗನ್ನಡದಲ್ಲಿ ಪು-->ಹು-->ವು ಗೆ ಮಾರ್ಪಾಗಿವೆ. ಅದರ ಜೊತೆಗೆ ವಸಿ ಅವುಗಳ ಅರಿತದಲ್ಲಿ ಬದಲಾವಣೆಯಾಗಿದೆ.
'ಪು' ವಿನ ಪೆರ್ಮೆ(ಹೆಮ್ಮೆ) ಇಶ್ಟೆ ಅಲ್ಲ...ಇನ್ನು ಇದೆ
ಈಟೆಲ್ಲ ಆದ್ಮೇಲೆ ಚರ್ --> ಚರಪು ಕನ್ನಡದ್ದೆ ಆಗಿರಬೇಕಲ್ವ?

- ವೈಭವ ರವರ ಬ್ಲಾಗ್
- Login or register to post comments
- 823 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
>>>> ಇಮ್ -> ಇಂಪು
ಇದು ಇನಿ(ದು) -> ಇಂಪು ಆಗಬೇಕು.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
ಹಂಸಾನಂದಿಗಳೇ..
ಇನ್ => ಇಂಪು ಸರಿ..
ಇಂಚರ => ಇನ್ + ಸರ
ಇನಿ => ಇನ್ ನ ಒಂದು ರೂಪ
ಕೊಲ್ => ಕೊಲೆ
ಹೊಲ್=>ಹೊಲೆ
ಉ: 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
ನಾನು ಹಾಗೆ ಅನ್ಕೊಂಡಿದ್ದೆ ಆದರೆ ಕೊಳಂಬೆಯವರು 'ಇಮ್' ಅಂತಾನೆ ಕೊಟ್ಟಿದ್ದಾರೆ. ಅವರು ಕೊಟ್ಟಿರುವುದು ಇಮ್ = ಸವಿ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
ಇಮ್ ಅಲ್ಲ ಇಂ/ಇನ್
http://dsal.uchicago.edu/cgi-bin/philologic/getobject.pl?c.0:1:533.burro...
ಕನ್ನಡದ ಇಂಪು = ತಮಿಳಲ್ಲಿ ಇನಿಪ್ಪು
ಉ: 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
ಕೊಳಂಬೆಯವರ ನುಡಿಗಂಟಿನಲ್ಲಿ ಹೀಗಿದೆ
ಇಮ್ = ಸವಿ, ಮಾದರಿ: ಮರನೆಲ್ಲಂ ಮಾವಿಮ್ಮಾವು (ಸವಿ ಮಾವು); ಇಮ್ಮೊಱೆ = ಸವಿಯಾದ ಹೇಳಿಕೆ
ಇಮ್ಪು = ಸವಿ, ಇಂಪು, ಮೆಚ್ಚು , ಸೊಗಸು
ಇನ್ = ಸವಿ, ಮಾದರಿ: ಇನ್ದುಟಿ, ಇನ್ನುಣಿಸು= ಸವಿಯಾದ ಊಟ
ಇನ್ = ಇಮ್ ಎರಡು ಸರಿ
ಇಂಪು = ಇನ್+ ಪು = ಇಮ್+ಪು
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
ಕೆಲವು ತಿದ್ದುಗಳು
೧)ತಿರುಗ್ -> ತಿರುಪು(screw) -> ತಿರುವು(cross)
ಇದು ತಿರಿ => ತಿರುಪು...
ಕನ್ನಡದಲ್ಲಿ ’ಗು/ಕು/ಕ’ ಎಂಬ ಹಿನ್ನೊಟ್ಟು/ಪ್ರತ್ಯಯ ಇದೆ..
ತಿರಿ =>ತಿರುಗು | ತಿರುಕ| ತಿರುಗ
ಮರು=>ಮರುಗು | ಮರುಕ
ಬೆಳ್=>ಬೆಳಗು/ಬೆಳುಗು | ಬೆಳಕ/ಬೆಳಕು
ಮೆರೆ => ಮೆರಗು
http://dsal.uchicago.edu/cgi-bin/philologic/getobject.pl?c.1:1:659.burro...
ಮಿಕ್ಕ ಬೇರುಗಳನ್ನೊಮ್ಮೆ ದ್ರಾವಿಡ ಒರೆಗಂಟಲ್ಲಿ ನೋಡಿಕೊಳ್ಳಿ..
ಪಟ್ಟಿ ಚನ್ನಾಗಿದೆ..
ಉ: 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
"ಹರಿ -> ಪರೆಪು-> ಹರೆವು( ಪ್ರಸಾರ, ವಿಸ್ತಾರ) "
ಇಲ್ಲಿ ಹರಿ > ಹರಿವು ಆಗಬೇಕಲ್ಲವೇ? ಪರಿ, ವರಿ ಕೂಡಾ ಆಗುತ್ತೆ, ಸಂದರ್ಭಕ್ಕೆ ತಕ್ಕಂತೆ. (ಮುಂದಕ್ಕೆ ಹರಿ > ಮುಂದುವರಿ> ಮುಂಬರಿ). ಇನ್ನು ಹರಿ>ಹರೆವು ಆಗಿಬಿಟ್ಟರೆ ಮರಿ>ಮರೆವು ಆಗಿಬಿಡುತ್ತೇ ಅಂತ ನನ್ನ ಆತಂಕ ಅಷ್ಟೇ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
ಅದು ಪರವು, ಪರಪು
ಪರ ಬೇರು
http://dsal.uchicago.edu/cgi-bin/philologic/getobject.pl?c.1:1:1365.burr...
ಉ: 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
ಪರ => ಹರ ಸರಿ ಅನ್ಸುತ್ತೆ.
ಆಮೇಲೆ ಇನ್ನೊಂದು ಈ 'ಪು' ಸೇರಿದಾಗ ಕೆಲಸದೊರೆಯಲ್ಲಿ ಕೆಲವು ಬದಲಾವಣೆಗಳಾಗುತ್ತವೆ.
ಗಮನಿಸಿ
ನೆನೆ -> ನೆನಪು , ಇಲ್ಲಿ ನೆನೆ ಇದ್ದಿದ್ದು 'ನೆನ' ಆಯ್ತು
ಹೊಳೆ -> ಹೊಳಪು, ಇಲ್ಲಿ ಹೊಳೆ ಇದ್ದಿದ್ದು 'ಹೊಳ' ಆಯ್ತು
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
ಹರಿ ಬೇರೆ ಹರ ( ಹರಡು) ಬೇರೆ.
ಹರ > ಹರವು
ಸವಿತೃ
ಉ: 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
ಹರಿ > ಹರಿವು = flow
ಹರ > ಹರವು = width, coverage
ಉ: 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
'ಪುಂಗರಸನೇ' ಒಳ್ಳೆಯ ವಿಷಯಗಳನ್ನು ಪೇರಿಸಿದ್ದೀಯಾ. ಮತ್ತೊಂದಷ್ಟು ಬಳಕೆಗಳು, ಒನಪು, ಸೆಳಪು, ಹೊಳಪು, ಹುರುಪು, ಸುಳುಹು(ಪು), ಸುಳಿವು(ಪು), ಮುಪ್ಪು..
ಉ: 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
ನನ್ನಿ,
ಪ -> ಹ ಸುಮಾರು ಹನ್ನೊಂದನೆ ನೂರೇಡಿನಲ್ಲಿ ಬದಲಾವಣೆ ಯಾಕೆ ಆಯಿತು ಇದನ್ನ ಇಲ್ಲಿ ಬರೆಯಪ್ಪ. ಕನ್ನಡ ನುಡಿ ಬೆಳವಣಿಗೆಯಲ್ಲಿ
ಪ --> ಹ ತುಂಬ ತಲೆಮೆಯ ವಿಚಾರ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
ತುಂಬ ಚೆನ್ನಾಗಿದೆ ಕನ್ನಡದ ಕಂ’ಪು’.
ಆದರೆ ನನಗೆ ಸರಿಯಾಗಿ ವ್ಯಾಕರಣ ಗೊತ್ತಿಲ್ಲ. ಕಲಿಬೇಕಂತ ಅನ್ನಿಸ್ತಾಯಿದೆ ಒಂದು ಒಳ್ಳೆಯ ಪುಸ್ತಕ ಇದ್ದರೆ ಹೇಳಿ.
ನಮ್ಮ ಮಾಸ್ತರರು ತಮಾಶೆಯಾಗಿ ಹೇಳುತ್ತಿದ್ದರು, ಅದರಾಗೇನೈತಿಲೇ ವ್ಯಾಕಣದಾಗ.. ಇಲ್ಲಿಂದ ಸೀದಾ ಗೋಕರ್ಣಕ್ಕ ಹೋಗಿ ಅಲ್ಲಿ ಕುಲಕರ್ಣಿಅವರ ಮನ್ಯಾಗ ಶೀಕರಣಿ(ಸಿಹಿಕರಣಿ) ಉಂಡ ಬಂದರss ಅದss ವ್ಯಾಕರಣ..ಏನಪಾ ಅಂತ..
ನಿಮ್ಮ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.
ಉ: 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
ಹವ್ಯಕರು ಮನುಷ್ಯರ backside ಗೆ ಅವರ ಕನ್ನಡದಲ್ಲಿ 'ಪುಕಳಿ' ಅನ್ನುವ ಅಭ್ಯಾಸ ಇದೆ. 'ಚಡ್ಡಿ ಬಿಚ್ಚಿ ಪುಕಳಿ ಮ್ಯಾಲೆ ನಾಕ್ ಕೊಡ್ತಿ ನೋಡು. ಅಬಬ ಮಾಣಿ.' ಇದೆಲ್ಲರಿಂದಾಗಿ 'ಪು' ತುಂಬಾ important.
ಉ: 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
ಯೆಬ್ ರಾಮ್ ರವರೆ,
ತುಂಬ ನನ್ನಿಗಳು. ಪುಕಳಿ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ
ಕೊಳಂಬೆಯವರ ನುಡಿಗಂಟಿನಲ್ಲಿ ಇದರ ಅರಿತ ಹೀಗೆ ಕೊಟ್ಟಿದ್ದಾರೆ
ಪುಕಳಿ = ಪುಚ್ಚೆ, ಸ್ತ್ರೀ ಜನನೇಂದ್ರಿಯ(ಯೋನಿ), ತಿಕ, ಕುಣ್ಡೆ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
ನಾವು ತಿಕಕ್ಕೆ ಮುಕಳಿ / ಮುಕ್ಳಿ ಅಂತೀವಿ. ಪುಕಲಿ ಬಳಸಿಲ್ಲ. ಬಹುಶ ಎರಡೂ ಒಂದೇ ಪದ ಸೂಚಕ ಇರಬಹುದು.
ತಿಕ = ಕುಂಡಿ
ಸವಿತೃ
ಉ: 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
'ಪು' ಬಳಕೆ ಗೊತ್ತಾಯಿತಲ್ಲ!
ಈಗ 'ಪು' ಬಳಸಿ dubbing ಎಂಬುದಕ್ಕೆ ಸಂವಾದಿಯಾದ ಕನ್ನಡ ಪದಪುಂಜವೊಂದನ್ನು ಹೊಸೆಯಿರಿ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
ಪದಪುಂಜ ಅಂದ್ರೆ ಪದಗಳ ಗುಂಪು..
ಪು ಸೇರಿ ಪದಪುಂಜವಾಗಲ್ಲ.. ಒಂದು ಪದವಾಗ್ತದೆ!
ಉ: 'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
dubbing ಎಂಬುದಕ್ಕೆ ನಾನು ಕಂಡುಕೊಂಡ ಅನುವಾದ ಒನ್ದು ಪದಪುಂಜವೇ ಹೊರತು ಒಂದೇ ಪದವಲ್ಲ. 'ಪದಪುಂಜ'ವೇ ಬೇಕು, ಅದನ್ನೇ ಸೂಚಿಸಿ.
_________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು