ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
ಬಾೞೆಯ ಕರ್ಜೂರದ ಕಿ
ತ್ತೀಳೆಯ ಕಂಮರದ ರಂಜಿಪಿಮ್ಮಾವಿನ ಪೇ
ರೀಳೆಯ ನಾರಂಗದ ಕಂ
ಚೀಳೆಯ ತನಿವಣ್ಣನಿಕ್ಕೆ ಮೇಲ್ದಾದರದಿಂ
ತನಿ= ಒಳ್ಳೆಯ, ಚೆನ್ನಾದ
ತನಿವಣ್ಣು = ಒಳ್ಳೆಯ ಹಣ್ಣುಗಳು
ಕಿತ್ತೀಳೆ = ಕಿತ್ತಳೆ
ಕಂಚೀಳೆ = ?
ಕಂಮರ = ?
ಪೇರೀಳೆ = ?
ರಂಜಿಪಿಮ್ = ರಂಜಿಸಿ

- ವೈಭವ ರವರ ಬ್ಲಾಗ್
- Login or register to post comments
- 230 hits
- Email this blog

RSS:
ಪ್ರತಿಕ್ರಿಯೆಗಳು
ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
ಈ ಎಲ್ಲಾ 'ಈಳೆ'ಗಳೂ ತೊಳೆಗಳಿರುವ ಹಣ್ಣುಗಳೇ
ಕಿತ್ತೀಳೆ
ಕಂಚೀಳೆ - ಚಕ್ಕೋತವೆಂದು ತೋರುತ್ತೆ
ಪೇರೀಳೆ - ಹೇರಳೆ ಹಣ್ಣು - (ಹುಳಿ, ಕಹಿ ಮಿಶ್ರವಾದ ಈ ಹಣ್ಣು ಹಾಗೇ ತಿನ್ನುವುದಲ್ಲ- ಬದಲಿಗೆ, ಉಪ್ಪಿನಕಾಯಿ, ಗೊಜ್ಜು ಇತ್ಯಾದಿಗಳನ್ನು ಮಾಡಲು ಹೇಳಿಸಿದ ಈಳೆ)
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
ಈಳೆ ಬಗ್ಗೆ ತಿಳಿದು ನಲಿವಾಯ್ತು..
ನನ್ನಿ ಹಂಸಾನಂದಿ.
552 Ka. īḷe
552 Ka. īḷe orange. Te. īḍe a kind of orange. / Cf. Mar. īḍ Citrus aurantium. DEDS 69.
http://dsal.uchicago.edu/cgi-bin/philologic/getobject.pl?c.0:1:555.burro...
ಈಳೆ = ಕಿತ್ತೀಳೆ, ಚಕ್ಕೋತ, ಮೋಸಂಬಿ ಜಾತಿಯ ಹಣ್ಣುಗಳು.
ಹಂಸಾನಂದಿಯವರು ಹೇಳಿದಂತೆ ತೊಳೆಗಳಿರುವ ಹಣ್ಣು. ಆದರೆ ಹಲಸಲ್ಲೂ ತೊಳೆಗಳಿರುವುವು.. ಆದರೆ, ಈ ತೊಳೆ ಕಿತ್ತೀಳೆ, ಮೊಸಂಬಿಯ ತೊಳೆಯಂತವು...!!
ಈಳೆಗಳು
ಕಿತ್ತೀಳು, ಹೇರಳೆ, ಚಕ್ಕೋತ, ಮೊಸಂಬಿ, ನಿಂಬೆ, ಗಜನಿಂಬೆ,
http://en.wikipedia.org/wiki/Hesperidium
[A hesperidium (plural hesperidia) is a modified berry with a tough, leathery rind. The peel contains volatile oil glands in pits. The fleshy interior is composed of separate sections, called carpels, filled with fluid-filled vesicles that are actually specialized hair cells.]
ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
ನನ್ನಿ ಹಂಸಾನಂದಿಗಳೆ,
ನಾವು ಹಿರಳೆ ಕಾಯಿ ಚಿತ್ರಾನ್ನ ಕೂಡ ಮಾಡ್ತಿವಿ.
ಈ 'ಈಳೆ' ಬಳಸಿಕೊಂಡು ಬೇರೆ ಬೇರೆ ಹಣ್ಣುಗಳಿಗೆ ಪದಗಳನ್ನು ಮಾಡಿರುವುದು ಚೆನ್ನಾಗಿದೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
Welldone Nayan Sen !
ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
ಸಾಮಿ,
ಕನ್ನಡದಾಗೆ ಬರೆಯಿರಿ.
ನಯನ್ ಸೇನ ಅಲ್ಲ ನಯಸೇನ. ಬರಿಬೇಕಾರೆ ವಸಿ ನೋಡ್ಕಂಡ್ ಬರೆಯಿರಿ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
ಮಾಧವ್ ರವರಿಗೆ ಸುಮಾರಿ ಸಾರಿ ಮೇಯ್ಲ್ ಮಾಡಿದ್ದಾಯಿತು - ಕನ್ನಡದಲ್ಲಿ ಬರೀರಿ ಅಂತ. ಇನ್ನು ಮುಂದೆ ಪ್ರತಿಕ್ರೆಯೆ ಏನೂ ಗೋಜಿಲ್ಲದೆ ಅಳಿಸುತ್ತಿರೋದೇನೆ!
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
ನೋಡಪ್ಪ..
ವಯ್ಬವೊರು ಎಶ್ಟ್ ಒಳ್ಳೇ ಕಡೆ ನಮ್ ಗಮನ ಸೆಳೆದಿದ್ರೂ...
ಈಳೇ ಒಂದು ಬಗೆ ಹಣ್ಣಿನ-ಗುಂಪು...
ಅದರ ಬಗ್ಗೆ
552 Ka. īḷe
552 Ka. īḷe orange. Te. īḍe a kind of orange. / Cf. Mar. īḍ Citrus aurantium. DEDS 69.
http://dsal.uchicago.edu/cgi-bin/philologic/getobject.pl?c.0:1:555.burro...
ಈಳೆ = ಕಿತ್ತೀಳೆ, ಚಕ್ಕೋತ, ಮೋಸಂಬಿ ಜಾತಿಯ ಹಣ್ಣುಗಳು.
ಹಂಸಾನಂದಿಯವರು ಹೇಳಿದಂತೆ ತೊಳೆಗಳಿರುವ ಹಣ್ಣು. ಆದರೆ ಹಲಸಲ್ಲೂ ತೊಳೆಗಳಿರುವುವು.. ಆದರೆ, ಈ ತೊಳೆ ಕಿತ್ತೀಳೆ, ಮೊಸಂಬಿಯ ತೊಳೆಯಂತವು...!!
ಈಳೆಗಳು
ಕಿತ್ತೀಳು, ಹೇರಳೆ, ಚಕ್ಕೋತ, ಮೊಸಂಬಿ, ನಿಂಬೆ, ಗಜನಿಂಬೆ,
http://en.wikipedia.org/wiki/Hesperidium
[A hesperidium (plural hesperidia) is a modified berry with a tough, leathery rind. The peel contains volatile oil glands in pits. The fleshy interior is composed of separate sections, called carpels, filled with fluid-filled vesicles that are actually specialized hair cells.]
ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
ಓಕೆ..ಓಕೆ..ಡಬಲ್ ಓಕೆ..
ವೆಲ್ ಡನ್ ಮಿ|| ನಯನ್ ಸೇನ್ || ಅಂದ್ರೆ ಸರೀನೆ?.....
ಅದೆಲ್ಲಾ ಯಾಕೆ ಬಿಡಿ..
)
ಅದ್ಭುತ ಕೆಲಸ ನಯನಸೇನರೆ !
ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
ಕಿತ್ತೀಳೆ ಅಲ್ಲ ಕಿತ್ತೀೞೆ. ಹೇರೀೞೆ ಕಂಚೀೞೆ. ಈ ಈೞೆ ನಿಂಬೆ ಹಣ್ಣಿನ ಜಾತಿಯ ಸೊಳೆ ಬಿಡಿಸಿ ತಿನ್ನಬಹುದಾದ ಹಣ್ಣುಗಳಿಗೆ ಇರುವ ಸಾಮಾನ್ಯ ಹೆಸರು. ಅದರಲ್ಲಿ ಕಿಱಿಯದು ಕಿತ್ತೀೞೆ. ಹಿರಿಯದು ಹೇರೀೞೆ. ಈ ಕಿತ್ತಳೆ ಹಾಗೂ ಹೇರಿಳೆಗಿಂತ ಭಿನ್ನರುಚಿಯಲ್ಲಿರುವ ಕಂಚಿಕಾಯಿ ಅಥವಾ ಹಣ್ಣೇ ಕಂಚೀೞೆ.
ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
ನನಗೆ ಗೊಂದಲವಾಗಿದೆ.
ನಾನು ಓದುತ್ತಿರುವ ಹೊತ್ತಿಗೆಯಲ್ಲಿ ಪುಟ ೭೪(University of Mysore Oriental Library Publications Kannada Series 14, http://dli.iiit.ac.in/cgi-bin/Browse/scripts/use_scripts/advnew/aui/book... ) 'ಕಿತ್ತೀಳೆ', 'ಪೇರೀಳೆ' ಅಂತಾನೆ ಇದೆ. ಕಿತ್ತೀೞೆ, ಪೇರೀೞೆ ಅಲ್ಲ.
ಈ ಹೊತ್ತಿಗೆಯ ಮುನ್ನುಡಿಯಲ್ಲಿ ಬರೆದಿರುವ ಹಾಗೆ ಈ ಹೊತ್ತಿಗೆ ಹೊರತರುವಾಗ ಅವರಿಗೆ ಗೊಂದಲವಾಗಿ( ಳ್/ೞ್, ರ್/ಱ್) ಇದು(ದರ್ಮಾಮ್ರುತಂ) ನಡುಗನ್ನಡದ ಹೊತ್ತಿನಲ್ಲಿ ಬರೆದಿರುವುದರಿಂದ ಅವರು ನಡುಗನ್ನಡದ ಕಟ್ಟಳೆಗಳನ್ನು ಪಾಲಿಸಿದ್ದಾರೆ.
ನಡುಗನ್ನಡದಲ್ಲಿ ೞ್-->ಳ್, ಱ್--ರ್ ಪೂರ್ತಿಯಾಗಿ ಬದಲಾಗಿರಲಿಲ್ಲ ಅಂತ ಈ ಮೇಲಿನ ಪದ್ಯದಿಂದ ತಿಳಿದುಕೊಳ್ಳಬಹುದು ಅನ್ಸುತ್ತೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
ಈಳೇ ಈೞೆ ಅಲ್ಲ!
ಏ ನಿಗಂಟು?
=====================================
ಮಾಯ್ಸ!