ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ಜನಪದ ತೆರನಾದ ಹಾಡುಗಳು - ೧

February 25, 2008 - 7:43pm — ವೈಭವ

ಹೆಗಲ ಮ್ಯಾಲೆ ನೇಗಿಲ ಹೊತ್ಕೊಂಡು
ಹೊಂಟ್ಯಾನ ಎನಗಂಡ ಹೊಲದೆಡೆಗೆ |
ಹೊತ್ತು ಮುಳುಗೋ ಮುಂದ ಬಾರಪ್ಪ ನೀ ಮನಿಯೊಳಗ     | ಹೆಂಡತಿ ಗಂಡನಿಗೆ|

ಹೊಲದಲ್ಲಿ ಸ್ಯಾನೆ ಗೇಮೆ ಅಯ್ತೆ ಕಣಮ್ಮಿ
ಆಳು ಕಾಳು ಕಡ್ಡಿಗಳನೆಲ್ಲ ಸಮಱಿಯಲು |
ಹೊತ್ತು ಮುಳುಗುವುದು ನಾ ಏನ ಮಾಡಲಿ ಎನ್ನೊಡತಿ  | ಗಂಡ ಹೆಂಡತಿಗೆ|

ಹೊತ್ತು ಮುಳುಗಿದೆ ಮ್ಯಾಲಿ ಗುಂಡಿಗಿ ನಡುಗತಯ್ತಿ
ನೀನಿಲ್ಲದ ಮನಿ ಹೂವಿಲ್ಲದ ಗಿಡದಾಂಗ|
ನಾನು ಸೊರಗಿಹೋಗುವೆ ದಿನವೂ     | ಹೆಂಡತಿ ಗಂಡನಿಗೆ|

ಆಡಾಕ ಆಡ್ಮರಿಗಳು, ನೋಡಾಕ ಹೂದೋಟ
ಕೂಡ ಮಾತಾಡಾಕ ನೆರೆಹೊರೆಯವರು|
ಹಂಗ್ಯಾಕ ಹಲುಬುತಿ ನೀ ನನಗಾಗಿ    | ಗಂಡ ಹೆಂಡತಿಗೆ|

ಸಂಪದಿಗರೆ,
   ಇದನ್ನ ಇನ್ನು ಚೆನ್ನಾಗಿ ಬರೆಯಲು ನನಗೆ ನೆರವು ನೀಡಿ.

  • ಜನಪದ ನೇಗಿಲು ಹಳ್ಳಿ ಹಾಡು
~.~
  • ವೈಭವ ರವರ ಬ್ಲಾಗ್
  • Login or register to post comments
  • 477 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 25, 2008 - 11:10pm — ಗಣೇಶ

ಉ: ಜನಪದ ತೆರನಾದ ಹಾಡುಗಳು - ೧

ಗಣೇಶ's picture

ವ್ಹಾ.ವ್ಹಾ. ಕ್ಯಾ ಬಾತ್ ಹೈ
ಚೆನ್ನಾಗಿದೆ.
ಮುಂದುವರಿಸಿ.
(ಗಂಡ ಹೆಂಡತಿಗೆ,ಹೆಂಡತಿ ಗಂಡನಿಗೆ- ಎಂದು ಬರೀಬೇಕಾಗಿಲ್ಲ.)
ಗಣೇಶ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
February 26, 2008 - 10:09am — Sunil Jayaprakash

ಉ: ಜನಪದ ತೆರನಾದ ಹಾಡುಗಳು - ೧

Sunil Jayaprakash's picture

ಕನ್ನಡ ನೇಗಿಲ ಯೋಗಿ!! ಆಗಲು ಹೊರಟಂತಿದೆ. ಮುಂದುವರಿಯಲಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
February 26, 2008 - 10:37am — savithru

ಉ: ಜನಪದ ತೆರನಾದ ಹಾಡುಗಳು - ೧

savithru's picture

>>ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು!

>> ಓದಿ ಓದಿ ಮರುಳಾದ ಕೂಚು ಭಟ್ಟ .... ಓದದೆಯೇ ಅನ್ನ ಕೊಟ್ಟ ನಮ್ಮ ರೈತ.

ಇಂತಿ ರೈತ ಸವಿತೃ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
February 26, 2008 - 10:49am — savithru

ಉ: ಜನಪದ ತೆರನಾದ ಹಾಡುಗಳು - ೧

savithru's picture

ಕೋಟಿ ವಿದ್ಯೆಗಳಲ್ಲಿ | ಮೇಟಿ ವಿದ್ಯೆಯೇ ಮೇಲು |
ಮೇಟಿಯಿಂ ರಾಟಿ ನಡೆದುದಲ್ಲದೆ ದೇಶ | ದಾಟವೇ ಕೆಡಕು | ಸರ್ವಜ್ಞ ||

ಸವಿತೃ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
February 26, 2008 - 5:51pm — ಸಂಗನಗೌಡ

ಉ: ಜನಪದ ತೆರನಾದ ಹಾಡುಗಳು - ೧

ಸಂಗನಗೌಡ's picture

ನೂರಕ್ ನೂರು ಸರಿ....

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
February 26, 2008 - 5:32pm — mahesha

ಉ: ಜನಪದ ತೆರನಾದ ಹಾಡುಗಳು - ೧

mahesha's picture

ಮುಂದುವರಿಕೆ..

ಹೊಲದಾಗೆ sun stroke ಆಗಬೋದು
ಹೊಲದಾಗೆ tracker ಉರಳಬೋದು
ಅದಕ್ಕೆ ನಂಗೆ ಸ್ಯಾನೆ ಚಿಂತೆ ನಿನ್ಮ್ಯಾಲೆ | ಹಂಡ್ರು ಗಂಡಂಗೆ | Smiling

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
February 26, 2008 - 8:33pm — ವೈಭವ

ಉ: ಜನಪದ ತೆರನಾದ ಹಾಡುಗಳು - ೧

ವೈಭವ's picture

sun stroke ಬದಲು ನೇಸರನ ಸುಡು ಅತ್ವ ಸುಡುನೇಸರ ಅಂತ ಹೇಳ್ಭೋದು
Tractor ಬದಲು ಬಂಡಿ ಬಳಸಬೋದು

ಚಾಂಗು ಮಾಯ್ಸ ಚಾಂಗು
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
February 27, 2008 - 10:39am — mahesha

ಉ: ಜನಪದ ತೆರನಾದ ಹಾಡುಗಳು - ೧

mahesha's picture

ಸರಿ...

ನೇಸರು ಸುಡುಕಾಸೆ ಸಾತ್ತೀಯಿ ಅಂತ
ಉಳ್ವಂಡಿ ಉರುಳಿ ಬಿದ್ದೀಯಿ ಅಂತ
ಎನ್ ಎದೆ ನಡಗ್ತಯ್ತೆ ನನ್ ನಲ್ಲ|| ಹೆಣ್ತಿ ಗಣ್ಡಂಗೆ || Smiling

ಉಳ್ವಂಡಿ = ಉಳ್ + ಬಂಡಿ = ಉಳ್ಳುವ ಬಂಡಿ

ಸುಡುಕು = ಸಿಡುಕು ಇದ್ದ ಹಾಗೆ ಸುಡುಕು( ಸುಡುವುದು )

ಸುಡುಕಾಸೆ = ಸುಡುಕಿನ ದೆಸೆಯಿಂದ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನುವಾದಕ ಜೋಡಿ
  • ಮುರಿದ ಮಂಚ - ಮುಲ್ಲಾ ನಸ್ರುದ್ದೀನನ ಕತೆ
  • ವಿದೇಶದಲ್ಲಿನ ವಾಸ ಹೆತ್ತವರಿಂದ ಹಾಗೂ ಬಂದು ಮಿತ್ರರಿಂದ ದೂರವಿರೋ ವನವಾಸ!!
  • ಇನ್ನಷ್ಟು ಅಪರೂಪದ ಗಾದೆಮಾತುಗಳು
  • ಸನ್ಯಾಸಿ
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
  • ಬಹು - ಭಾಷಾ - ತಮಾಷಾ!!!
  • ಚಂದ್ರ ಚೆಲ್ಲುವ ಬೆಳದಿಂಗಳು
  • ನಗುವ ನಯನ, ಮಧುರ ಮೌನ
  • ವೈಕುಂಠ ಏಕಾದಶಿ
  • ಜೀವ ಉಳಿಸಿದ ಬೋಸ್ ಹೆಡ್ ಫೋನ್ !!
  • ಸ್ನೇಹಮಿಲನ ಹಾಜರಾತಿ
  • ಒಲವಿಲ್ಲದೆ
  • ** ಹರೆಯದ ಹೊರೆ **
  • ವಿಶ್ವದ ಅತ್ಯಂತ ಬಲಿಷ್ಠ ಬಾಲಿಕೆ : ವಾರ್ಯಾ ಅಕುಲೋವಾ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • harshab
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:51am
  • savithasr
    ಉ: ನಗುವ ನಯನ, ಮಧುರ ಮೌನ
    January 8, 2009 - 10:46am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:27am
  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:10am
  • ಅರವಿಂದ್
    ಉ: ನಗುವ ನಯನ, ಮಧುರ ಮೌನ
    January 8, 2009 - 10:04am
  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:02am
  • karthik
    ಉ: ಬಹು - ಭಾಷಾ - ತಮಾಷಾ!!!
    January 8, 2009 - 9:56am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:33am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:32am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:31am
ಇನ್ನಷ್ಟು
ಈಗಿನಂತೆ 14 ಸದಸ್ಯರು ಮತ್ತು 130 ಅತಿಥಿಗಳು ಆನ್ಲೈನ್ ಇರುವರು.


ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator