22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಶಾಲೆಗೆ ಬನ್ನಿ ಮಕ್ಕಳೆ

June 1, 2012 - 12:23am
sada samartha

 

ಶಾಲೆಗೆ ಬನ್ನಿ ಮಕ್ಕಳೆ

ಬನ್ನಿರಿ ಮಕ್ಕಳೆ ಶಾಲೆಗೆ | 
ನೀವೆಲ್ಲರು ಅಕ್ಷರ ಲೋಕಕೆ ||
ಅಕ್ಕರೆ ಸ್ವಾಗತ ನಿಮಗೆ |
ನೂತನ ತರಗತಿಗಳಿಗೆ ||ಪ||

ಕಲಿಕೆಯ ಲವಲವಿಕೆಗಳು |
ಬೇಕಿದೆ ವ್ಯಕ್ತಿತ್ವದೊಳು ||
ಬೆಳವಣಿಗೆಯಲದ ಗಳಿಸಿ |
ಉಳಿಸುತ ತನ ಬೆಳಗಿಸಿರಿ ||೧||
ಬನ್ನಿರಿ ಮಕ್ಕಳೆ ಶಾಲೆಗೆ | 
ನೀವೆಲ್ಲರು ಅಕ್ಷರ ಲೋಕಕೆ ||
ಅಕ್ಕರೆ ಸ್ವಾಗತ ನಿಮಗೆ |
ನೂತನ ತರಗತಿಗಳಿಗೆ ||ಪ|

ಜ್ಞಾನದ ಅರಿವಿರಬೇಕು |
ವಿಜ್ಞಾನವ ತಿಳಿದಿರಬೇಕು ||
ಭಾಷೆಗಳೆಲ್ಲವು ಬೇಕು |
ಲೆಕ್ಕವು ಬೇಕೇಬೇಕು ||೨||
ಬನ್ನಿರಿ ಮಕ್ಕಳೆ ಶಾಲೆಗೆ | 
ನೀವೆಲ್ಲರು ಅಕ್ಷರ ಲೋಕಕೆ ||
ಅಕ್ಕರೆ ಸ್ವಾಗತ ನಿಮಗೆ |
ನೂತನ ತರಗತಿಗಳಿಗೆ ||ಪ|

ಅಂತರ ಸರಿದೂಗಿಸಲು |
ಅತಂತ್ರತೆಯನು ತೊಲಗಿಸಲು ||
ಸ್ವಾತಂತ್ರ್ಯವ ಮೊಳಗಿಸಲು |
ಜಗದಲಿ ಕಾಣಿಸಿಕೊಳಲು ||೩|| 
ಬನ್ನಿರಿ ಮಕ್ಕಳೆ ಶಾಲೆಗೆ | 
ನೀವೆಲ್ಲರು ಅಕ್ಷರ ಲೋಕಕೆ ||
ಅಕ್ಕರೆ ಸ್ವಾಗತ ನಿಮಗೆ |
ನೂತನ ತರಗತಿಗಳಿಗೆ ||ಪ|
 
                                                                                  - ಸದಾನಂದ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by makara on

ಸದಾನಂದ್ ಸರ್,
ನಿಮ್ಮ ಆತ್ಮೀಯ ಕರೆಯೋಲೆ ಚೆನ್ನಾಗಿದೆ. ಆದರೆ ಓದಿ ಜನ ಅಕ್ಷರವಂತರಷ್ಟೇ ಆಗುತ್ತಿದ್ದಾರೆ ಆದರೆ ವಿದ್ಯಾವಂತರಾಗುತ್ತಿಲ್ಲ ಅನ್ನುವುದೇ ಖೇದದ ಸಂಗತಿ. ಮುಂದೊಂದು ದಿನ ಎಲ್ಲರೂ ಅಕ್ಷರವಂತರೂ ಜೊತೆಗೆ ವಿದ್ಯಾವಂತರೂ ಆಗಲೆಂದು ಹಾರೈಸೋಣ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ಅಕ್ಷರ ಲೋಕಕೆ ಅಕ್ಕರೆಯ‌ ಸ್ವಾಗತ.ಸಕಾಲಿಕವಾಗಿ ಚೆನ್ನಾಗಿದೆ.
'ಕೇಳಿರಿ ಮಕ್ಕಳೆ' ಎಂಬ ಪದ್ಯ ಬರೆದಿದ್ದೆ.ನೀವು ಒಮ್ಮೆ ಓದಿ.
http://sampada.net/b... ‍‍‍

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sada samartha on

ಪ್ರೇಮಾರವರೆ ನಿಮ್ಮ "ಕೇಳಿರಿ ಮಕ್ಕಳೇ" ಕವನವನ್ನು ಓದಿದೆ. ಚೆನ್ನಾಗಿದೆ . - ಸದಾನಂದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sada samartha on

ನಿಮ್ಮ ಅಭಿಪ್ರಾಯ ತುಂಬಾ ಸರಿಯಾಗಿದೆ. ಧನ್ಯವಾದಗಳು - ಸದಾನಂದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sada samartha on

ನಿಮ್ಮ ಅಭಿಪ್ರಾಯ ತುಂಬಾ ಸರಿಯಾಗಿದೆ ಶ್ರೀಧರರೆ. ಧನ್ಯವಾದಗಳು - ಸದಾನಂದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.